byರಾಮ್ ಪ್ರಕಾಶ್ ರೈ ಕೆ.|Sep 27, 2024|ಸರಣಿ| 0 Comments ನಾಪತ್ತೆಯಾಗಿದ್ದಾರೆ ಎಂಬ ನೋಟಿಸುಗಳು ಇನ್ನೂ ವಿಲೇವಾರಿಯಾಗದೆ ಕಚೇರಿ ಫಲಕದಲ್ಲಿ ಕುಳಿತುಕೊಂಡಿರುವುದೇ ಆ ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ. ಅವನ ಸರಹದ್ದಿನಲ್ಲಿ ಸ್ಲಮ್ಮಿನ ಭಾರವಾದ ಉಸಿರುಗಳೇ ಹೆಚ್ಚಿದ್ದರಿಂದ, ಆ ಜೀವಗಳಿಗೆ ಅಲ್ಲಿ ಬೆಲೆ ಇರುತ್ತಿರಲಿಲ್ಲ. ಮಾನವೀಯತೆಯ ಬಗ್ಗೆ ಪುಟಗಟ್ಟಲೆ ಮಾತುಗಳು ಕೇಳಿಬಂದರೂ ನಮ್ಮ ಸುತ್ತಮುತ್ತಲೇ ಇರುವ ಖಾಲಿ ಕಿಸೆಯ ಜನರ ಜೀವ-ಜೀವನ ಸದಾ ಅನಾಥವಲ್ಲವೇರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಹಿಂದಿಯ ‘ಸೆಕ್ಟರ್ -36’ ಸಿನಿಮಾದ ವಿಶ್ಲೇಷಣೆ byಕೆ. ಸತ್ಯನಾರಾಯಣ|Sep 27, 2024|ಸರಣಿ| 3 Comments ಇವರೆಲ್ಲ ಎಷ್ಟು ಸುಖವಾಗಿದ್ದಾರೆ, ಆರಾಮವಾಗಿದ್ದಾರೆ, ಯಾವುದೇ ಗೊಂದಲವಿಲ್ಲ, ತಳಮಳವಿಲ್ಲ. ಮುಖದಲ್ಲಿ ಅದೆಷ್ಟು ಜೀವಂತಿಕೆ, ಆರೋಗ್ಯ, ಉಲ್ಲಾಸ. ಯಾವುದರಲ್ಲೂ ಆತುರವಿಲ್ಲ, ಧಾವಂತವಿಲ್ಲ. ಪ್ರತಿ ಕ್ಷಣವನ್ನೂ ವಿವರವಾಗಿ, ವಿರಾಮವಾಗಿ ಅನುಭವಿಸುತ್ತಿದ್ದಾರೆ. ವಾಯುವಿಹಾರದ ಸಮಯದಲ್ಲಿ. ಟ್ರಾಮ್ ಒಳಗಡೆ ಕುಳಿತಾಗ, ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವಾಗ, ಸ್ಕೂಲ್ ಬಳಿ ಮಕ್ಕಳನ್ನು ಬಿಡಲು ಬರುವಾಗ ನೋಡಿದ್ದೇನೆ. ಎಲ್ಲರೂ ಬಿಳಿ ಬಣ್ಣದವರು, ಕೆಂಪು ಬಣ್ಣದವರು. ತುಂಬಾ ಸುಖವಾಗಿದ್ದಾರೆ, ಸಂತೃಪ್ತಿಯಿಂದಿದ್ದಾರೆ ಎಂಬ ಭಾವನೆ. ಸರಿ, ಅವರು ಸಂತೋಷವಾಗಿದ್ದರೆ, ಸುಖವಾಗಿದ್ದರೆ ನನಗೇಕೆ ಈ ರೀತಿಯ ಅಸೂಯೆ, ದ್ವೇಷ?ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ byಡಾ. ಚಂದ್ರಮತಿ ಸೋಂದಾ|Sep 27, 2024|ಸರಣಿ| 1 Comment ಮನೆಯ ಜನರೆಲ್ಲರಿಗೂ ʻಹೋಗಿ ಬರ್ತೇನೆʼ ಎನ್ನುತ್ತ ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಹೇಳುವುದು, ಅಲ್ಲಿಂದ ನಡುಮನೆಯಲ್ಲಿ ಕೆಲಹೊತ್ತು ಮಾತನಾಡುತ್ತ ನಿಲ್ಲುವುದು, ಅಲ್ಲಿಂದ ಜಗಲಿಗೆ, ಅನಂತರ ಹೆಬ್ಬಾಗಿಲಲ್ಲಿ ತುಸುಹೊತ್ತು ಮಾತನಾಡುತ್ತ ನಿಂತರೆ, ಹೊರಡಲು ಮುಂದಾದವರು ʻಇನ್ನೂ ಮಾತು ಮುಗಿದಿಲ್ವಾ?ʼ ಎಂದು ಕೇಳುತ್ತಲೇ ʻಬಂದೆʼ ಎಂದು ಬಾಯಲ್ಲಿ ಹೇಳಿದರೂ ಅಂಗಳದ ತುದಿಯಲ್ಲಿ ಒಂದು ಗಳಿಗೆಯ ಮಾತುಕತೆ. ಹೀಗೆ ಸಾಗುವ ವಿದಾಯದ ಕ್ಷಣ ನೆನಪಿಡುವಂಥದು. ಕೆಲವೊಮ್ಮೆ ಮನೆಗೆ ಬಂದ ಅಣ್ಣ-ತಮ್ಮಂದಿರು, ಅಥವಾ ಅಕ್ಕ-ತಂಗಿಯರನ್ನು ಕಳುಹಿಸಲು ಊರಬಾಗಿಲತನಕ ಹೋಗುವುದಿದೆ. ಎಲ್ಲರ ಎದುರಿನಲ್ಲಿ ಹಂಚಿಕೊಳ್ಳಲು ಆಗದ ಅದೆಷ್ಟೋ ಸಂಗತಿಗಳು ಅಲ್ಲಿ ವಿನಿಮಯಗೊಳ್ಳುತ್ತಿದ್ದವು.ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಕೊನೆಯ ಕಂತು byಗುರುಪ್ರಸಾದ್‌ ಕುರ್ತಕೋಟಿ|Sep 26, 2024|ಸರಣಿ| 0 Comments ಅದೇನು ಅದೃಷ್ಟವೋ ಕೂಡಲೇ ಉತ್ತರಿಸಿದ. ಬಾ ಅಂತ ಆಹ್ವಾನಿಸಿದ ಕೂಡ. ಪುಣ್ಯಕ್ಕೆ ಲ್ಯಾಂಡ್ ಲೈನ್‌ನಿಂದ ಕರೆ ಕೂಡ ಮಾಡಿದ. ಅವನ ಜೊತೆಗೆ ನಾನು ಬಹುಶಃ ಪ್ರಥಮ ಬಾರಿಗೆ ಮಾತಾಡಿದ್ದೆ! ನಾನು ಹುಟ್ಟುವುದಕ್ಕಿಂತ ಮೊದಲೆಯೇ ಅವನು ಭಾರತ ಬಿಟ್ಟು ಬಂದಿದ್ದ ಕಾರಣ ನಾನು ಅವನ ಜೊತೆಗೆ ಈಗಾಗಲೇ ಮಾತಾಡಬಹುದಾದ ಅವಕಾಶಗಳು ತೀರಾ ಕಡಿಮೆ ಇದ್ದವು. ಅವನು ಮಾತಾಡುವ ಶೈಲಿ ನನ್ನ ಅಪ್ಪನ ತರಹವೇ ಅನಿಸಿತು. ಬಹಳ ಖುಷಿ ಆಯ್ತು.ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೈದನೆಯ ಬರಹಗದಗ ನನ್ನ ಹೃದಯಕ್ಕೆ ಬಹು ಹತ್ತಿರದ ಊರು. ಅಲ್ಲಿ ನಾನು ಹುಟ್ಟಿದ್ದು ಅಷ್ಟೇ ಆದರೂ ಅಲ್ಲಿ ಕಳೆದ ಕೆಲವೇ ಕೆಲವು byಸುಮಾ ಸತೀಶ್|Sep 25, 2024|ಸರಣಿ| 0 Comments ಮೈಗೆ ಲೈಫ಼್ ಬಾಯ್ ಸೋಪು.‌ ಮಕಕ್ಕೆ ಮೈಸೂರು ಸ್ಯಾಂಡಲ್ ಸೋಪು.‌ ಮನೆ ಮಂದೀಗೆಲ್ಲಾ ಒಂದೆ ಸೋಪು. ಅದ್ಯಾಕೋ ಗೊತ್ತಿಲ್ಲಪ್ಪ ಮೈಸೂರು ಸ್ಯಾಂಡ್ಲು ಮಕಕ್ಕೆ ಮಾತ್ರ. ಮೈಗೆಲ್ಲ ಲೈಫ್ ಬಾಯಿ. ಮಕ ಬೆಳ್ಳಕಾದ್ರೆ ಸಾಕು ಅಂತ್ಲೋ ಏನೋ! ನಾನು ಚಿಕ್ಕೋಳಾಗಿದ್ದಾಗಿಂದ ಮದ್ವೆ ಆಗಾತಂಕ ಅದೇ ಎರ್ಡು ಸೋಪುಗಳ ರೂಡಿ ಬಂದಿತ್ತು. ಹಲ್ಲಿಗೆ ನಂಜನಗೂಡು ‌ಹಲ್ಲಿನಪುಡಿ. ಒಂದೇ ಕಿತ ಹಲ್ಲುಜ್ಜೋದು. ರಾತ್ರಿ ಉಜ್ಜೋ ಇಸ್ಯವೇ ಗೊತ್ತಿರ್ಲಿಲ್ಲ.ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಮನೆ-ಮನೆಯ ಜನಗಳ byಬಸವನಗೌಡ ಹೆಬ್ಬಳಗೆರೆ|Sep 24, 2024|ಸರಣಿ| 2 Comments ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ.ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ byರಂಜಾನ್ ದರ್ಗಾ|Sep 23, 2024|ಸರಣಿ| 0 Comments ‘ನ್ಯಾಯನಿಷ್ಠುರಿ, ಲೋಕವಿರೋಧಿ, ಶರಣನಾರಿಗೂ ಅಂಜುವವನಲ್ಲʼ ಎಂಬಂಥ ವ್ಯಕ್ತಿತ್ವ ಅವರದು. ಹೀಗೆ ಮಾತನಾಡಿದರೆ ಆಡಳಿತ ವರ್ಗಕ್ಕಾಗಲೀ ರಾಜ್ಯಶಕ್ತಿಗಾಗಲೀ ತಮ್ಮ ಬಗ್ಗೆ ಯಾವ ಭಾವನೆ ಮೂಡಬಹುದು; ಅದರಿಂದ ತಮಗೆ ಯಾವ ತೊಂದರೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಎಂದೂ ಹಾಕಿದವರಲ್ಲ. ಮನುಷ್ಯರ ಬಗ್ಗೆ ಇರುವ ಅವರ ಕಾಳಜಿಯೆ ಅಂಥದ್ದು. ಆ ಕಾಲದಲ್ಲಿ ಅವರು ಒಂದು ರೀತಿಯ ಏಕಾಂಗವೀರರಾಗಿದ್ದರು. ಸದಾ ಕ್ರಿಯಾಶೀಲವಾಗಿರುವ ಅವರ ವ್ಯಕ್ತಿತ್ವ ನನ್ನಂಥವರ ಮೇಲೆ ಆಳವಾದ ಪರಿಣಾಮ ಬೀರಿತು.ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ byಕಾರ್ತಿಕ್ ಕೃಷ್ಣ|Sep 21, 2024|ಸರಣಿ| 1 Comment ಇಸ್ರೇಲಿ ಕ್ರೀಡಾಪಟುಗಳನ್ನು ಹೇಗಾದರೂ ರಕ್ಷಿಸಬೇಕೆಂದು ಜರ್ಮನ್ ಅಧಿಕಾರಿಗಳು ಫರ್ಸ್ಟೆನ್‌ಫೆಲ್ಡ್‌ಬ್ರಕ್ ವಾಯುನೆಲೆಯಲ್ಲಿ ಒಂದು ರಕ್ಷಣಾ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದರು. ಭಯೋತ್ಪಾದಕರು ಮತ್ತು ಒತ್ತೆಯಾಳುಗಳನ್ನು ಆ ವಾಯುನೆಲೆಯಿಂದ ಹೆಲಿಕಾಪ್ಟರ್ ಮೂಲಕ ಸಾಗಿಸುವುದು ಆ ಯೋಜನೆಯ ಭಾಗವಾಗಿತ್ತು. ಆಗ ನಡೆಯಿತು ನೋಡಿ ಮತ್ತೊಂದು ದುರಂತ! ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ, ರಕ್ಷಣಾ ಪ್ರಯತ್ನವು ಕಳಪೆಯಾಗಿ ಕಾರ್ಯಗತಗೊಂಡಿತ್ತು. ಜರ್ಮನ್ ಪೊಲೀಸರು ಅಂತಹ ಕಾರ್ಯಾಚರಣೆಯನ್ನು ನಿಭಾಯಿಸಲು ಶಕ್ತರಾಗಿರಲಿಲ್ಲ.ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ byಎಚ್. ಗೋಪಾಲಕೃಷ್ಣ|Sep 20, 2024|ಸರಣಿ| 2 Comments ನಮ್ಮ ಅಪ್ಪಂಗೆ ಅವರ ಮಕ್ಕಳ ಪರಿಚಯವೇ ಇಲ್ಲ ಅಂತ ಅಮ್ಮ ಆಗಾಗ ಮನೆಗೆ ಬಂದವರೆಲ್ಲರ ಮುಂದೆ ಹೇಳುತ್ತಿದ್ದಳು. ಅಪ್ಪ ನನ್ನ ಗುರುತು ಹಿಡಿತಾನೋ ಇಲ್ಲವೋ ಅಂತ ನನ್ನ ತಲೆಗೆ ಆಗ ಹೊಳಿಬೇಕಾ..? ಅಪ್ಪ ನನ್ನನ್ನು ನೋಡಿದ್ರಾ, ಮುಂದೆ ಸರಿದೆ. ಅಪ್ಪಾ, ನಾನು ಗೋಪಿ ನಿಮ್ಮ ಕೊನೇ ಮಗ.. ಅಂತ ವಿವರಿಸಲು ಹೊರಟೆ.ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ