ಕನ್ನಡ ಸಾಹಿತ್ಯ.ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು ಸಿಟ್ಟೋ ಸೆಡವೋ ಹಠವೋ ಜ್ವರವೋ ತನಗೇ ತಿಳಿಯದೇ ಧುಮುಗುಡುವ ಸೂರ್ಯ, ಕರಗುವುದ ಮರೆತು ಬಿಳುಚು ಹೊಡೆದು ಹಿಂಜಿದ ಹತ್ತಿಯಂತಹ ಮೋಡಗಳು, ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ, ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ ಕಾಗೆ… ಬಿರುಬೇಸಿಗೆಯ ನಡು ಮಧ್ಯಾಹ್ನಗಳು ಸ್ತಬ್ಧ ಚಿತ್ರಗಳಂತೆ.. ಅಲ್ಲಾಡದ ಎಲೆಗಳಚಿತೆ; ಇಂಥ ಮಧ್ಯಾಹ್ನ ಪುಟ್ಟ ಬೆರಳಲಿ ಬಾಗಿಲು ತೆರೆದು ಗೇಟು ಸಂಧಿಯಲಿ ತೂರಿಕೊಂಡು ಮಗುವೊಂದು ಓಡುತಿದೆ ರಸ್ತೆಯಲಿ ಚಪ್ಪಲಿ ಕೂಡ ಹಾಕದ ಗುಲಾಬಿ ಪಾದಗಳು ಯಾವುದೋ ಕರೆಯ ಬೆನ್ನತ್ತಿದಂತೆ, ಮಗು ಎದುರು ಮನೆಯ ಬಾಗಿಲು ಬಡಿಯುತಿದೆ ಎಳೆ ಬೆರಳ ಮಾಂತ್ರಿಕ ಸ್ಪರ್ಶಕೆ ತಟ್ಟನೆ ತೆರೆದ ಬಾಗಿಲು.. ತೆಕ್ಕೆ ಬಡಿದ ಬಾಹುಗಳಲಿ ಪುಟ್ಟ ಮಗುವಿನ ಕೇಕೆ.. ಇಂಥ ಮಧ್ಯಾಹ್ನ ನನ್ನೊಳಗೆ ಬೆಂಕಿಹೂಗಳ ಅರಳಿಸಿ ತಟಸ್ಥ ನಿಂತ ಕೆಂಡಸಂಪಿಗೆ ಮರ ಧ್ಯಾನಿಸುತಿದೆ ಮಳೆಯ ಸಂಜೆಯನು, ಮಾಗಿಯ ಬೆಳಗನು, ಆಳದ ಮೌನವನು, ಅನವರತ ಕನವರಿಸುತಿದೆ ತುಕ್ಕು ಹಿಡಿದ ಗೇಟಿನ ಬಳಿ ಕೇಳಲಿರುವ ಅಂಚೆಯವನ ಕರೆಯನು. ***** ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […] ೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ ತೋರಿಕೊಳ್ಳದ ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; ಅಧೋಮುಖಿಯಾದ ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ ನಮ್ಮೆಲ್ಲ ನಿತ್ಯ ರಾಮಾಯಣಗಳ […] ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ ಟಿಪ್ಪಣಿ * ಹೆಸರು * ಮಿಂಚೆ * ಜಾಲತಾಣ ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. This site uses Akismet to reduce spam. Learn how your comment data is processed. ಬಿಟ್ಟ್ಯಾ ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… ಟಿಪ್ಸ್ ಸುತ್ತ ಮುತ್ತ "ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… ಮನ್ನಿ ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… ಬುಗುರಿ ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…