byರಾಮ್ ಪ್ರಕಾಶ್ ರೈ ಕೆ.|Feb 17, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment ಜನಸಾಮಾನ್ಯರು ಇಂದಿಗೂ ನಿಗೂಢವೆಂದು ಭಾವಿಸುವ ಶಂಕರ್ ನಾಗ್ ಸಾವಿನ ಸುತ್ತ ಹುಟ್ಟಿಕೊಂಡ ಅನೂಹ್ಯ ಪ್ರಶ್ನೆಗಳಿಗೆ ವಿವಿಧ ದೃಷ್ಟಿಕೋನಗಳ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ವರುಷಗಳಿಗನುಗುಣವಾಗಿ ಜೋಡಿಸಲ್ಪಟ್ಟ ಶಂಕರ್ ನಾಗ್ ಚಿತ್ರಗಳು, ಅವುಗಳ ಹಿಂದಿರುವ ಕಹಾನಿ, ಪ್ರಮುಖ ಹಾಡುಗಳು, ಅನಂತ್ ನಾಗ್, ರಮೇಶ್ ಭಟ್ ಆದಿಯಾಗಿ ವಿವಿಧ ನಟರೊಂದಿಗಿನ ಕೆಲಸಗಳು ಹಾಗೂ ಬಾಂಧವ್ಯ ಹೀಗೆ ಅನೇಕ ಮಾಹಿತಿಗಳು ದಾಖಲಾಗಿರುವ ಪರಿಯೇ ಈ ಪುಸ್ತಕದ ಹೈಲೈಟು.ಸತೀಶ ಬಳೆಗಾರ ಬರೆದ ‘ಶಂಕರ ನಾಗ್ The Legend’ ಕೃತಿಯ ಕುರಿತು ರಾಮ್‌ ಪ್ರಕಾಶ್‌ ರೈ ಬರಹ byಕೆಂಡಸಂಪಿಗೆ|Feb 16, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ, ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸಮಾಡುತ್ತದೆ. ಹೀಗಾಗಿ ಇಲ್ಲಿನ ಸ್ಮೃತಿಚಿತ್ರಗಳು ರೋಚಕವಾದ ಅನುಭವವನ್ನು ಮಂಡಿಸಿ ಓದುಗರನ್ನು ರಂಜಿಸುವುದಕ್ಕೆ ಉತ್ಸುಕವಾಗುವುದಿಲ್ಲ. ಎಲ್ಲ ಭಾಗದ ಜೀವನದಲ್ಲಿರುವ ವಿಷಾದಕರ ದುರಂತಗಳನ್ನು ದಾಖಲಿಸುತ್ತವೆ. ಜನರ ಹಸಿವು ಬಡತನ ದುಡಿಮೆ ಹೋರಾಟ ಜೀವಂತಿಕೆಗಳನ್ನು ತಾಳ್ಮೆಯಿಂದ ಘನತೆಯಿಂದ ಕಾಣಿಸುತ್ತವೆ.ಡಾ. ಲಕ್ಷ್ಮಣ ವಿ.ಎ. ಬರಹಗಳ ಸಂಕಲನ “ಮಿಲ್ಟ್ರಿ ಟ್ರಂಕು”ಕ್ಕೆ ರಹಮತ್‌ ತರೀಕೆರೆ ಬರೆದ ಮುನ್ನುಡಿ byರಾಘವೇಂದ್ರ ಈ. ಹೊರಬೈಲು|Feb 15, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments ಇಲ್ಲಿನ ಕಥೆಗಳಲ್ಲಿ ಬರುವ ‘ಪರಸು, ತೇಜು ಮತ್ತು ಸಂಜು ಪಾತ್ರಗಳು ಒಂದು ಹೊಸ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಇವರೆಲ್ಲಾ ಬದುಕಿನ ಹೊಸ ಸಮಸ್ಯೆಯೊಂದರ ಪ್ರತಿರೂಪದಂತೆ ನಿಲ್ಲುತ್ತಾರೆ. ಮುಗಿಲ ದುಃಖ ಮತ್ತು ಹುಚ್ಚು ಕಥೆಗಳು ತುಂಬಾ ಭಾವನಾತ್ಮಕವಾಗಿವೆ. ನಿಮ್ಮ ಮನೆಯ ಪಕ್ಕದವರ ಕಥೆಯಷ್ಟೆ ಆಪ್ತವಾಗಿ ಬಂದಿದೆ. ಆಧುನಿಕ ಕಾಲದ ಅನಾಥ ಬದುಕನ್ನು ಈ ಎರಡು ಕಥೆಗಳು ತೆರೆದಿಡುತ್ತವೆ.ಸದಾಶಿವ ಸೊರಟೂರು ಅವರ ಅರ್ಧ ಮಳೆ ಅರ್ಧ ಬಿಸಿಲು ಕಥಾ ಸಂಕಲನದ ಕುರಿತು ರಾಘವೇಂದ್ರ ಈ. ಹೊರಬೈಲು ಬರಹ byಡಾ. ಸುಭಾಷ್ ಪಟ್ಟಾಜೆ|Feb 14, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments “ನೋಡಿ ಅವ ಎದ್ದೇ ಬಿಟ್ಟ. ನಾನಿನ್ನು ಕೂತಿರಲು ಸಾಧ್ಯವೇ ಇಲ್ಲ” ಎಂಬ ಸಾಲು ಅಥವಾ ಧ್ವನಿಯು ಏನೆಂದರಿಯದೆ ಏಕೆಂದರಿಯದೆ ಕಚ್ಚಾಡುವ ಮಂದಿಯ ತವಕ, ತಲ್ಲಣ ಮತ್ತು ದಮನಕಾರಿ ಮನೋವೃತ್ತಿಯನ್ನು ಬಯಲಿಗೆಳೆಯುತ್ತದೆ. ಈ ಕಾವ್ಯಕ್ಕೆ ಮನುಷ್ಯರ ಮನಸ್ಸಿನ ಮೂಲ ರಾಗ ಭಾವಗಳ ಕುರಿತು ವಿವಿಧ ನೆಲೆಗಳಲ್ಲಿ ಚಿಂತನೆಗೊಳಪಡಿಸುವ ಧ್ವನಿ ಪ್ರಾಪ್ತವಾಗಿದೆ. ಇಂಗ್ಲೆಂಡಿನಿಂದ ತಂದ ಮಿರಮಿರ ಮಿಂಚುವ ಸ್ವಚ್ಛ ಬೂಟುಗಳು ಊರಿನ ಕೊಳೆತ ಸಸ್ಯಾವಳಿಯ, ನೊಣ ಹಾರುವ ಗಲೀಜು ಬೀದಿಗೆ ಹೊಂದಲಾರದ ಪರಿಸ್ಥಿತಿಯು ಹಳ್ಳಿ ನಗರಗಳ ನಡುವಿನ ಬಿರುಕನ್ನು ಒಂದೇ ಮಾತಿನಲ್ಲಿ ವಿವರಿಸುತ್ತದೆ.ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ ಕೃತಿಯ ಕುರಿತು ಡಾ. ಸುಭಾಷ್‌ ಪಟ್ಟಾಜೆ ಬರಹ byವಿಶ್ವ ದೊಡ್ಡಬಳ್ಳಾಪುರ|Feb 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments ಇಲ್ಲಿ ಲೇಖಕ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ನಮ್ಮನ್ನು ಇಂತಹ ಪುಟ್ಟ ಕೀಟಗಳ ಸಂಸಾರ, ಸಮುದಾಯದೊಳು ಕರೆದೋಯ್ದು ನಾವೂ ಅವುಗಳಲ್ಲಿ ‘ಒಬ್ಬರು’ ಎಂಬ ಭಾವನೆಯನ್ನು ಬಿತ್ತಿ, ಅವುಗಳ ಜೀವನದ ಭಾಗವಾಗಿಸಿ, ಜಂಜಾಟದ ಜೋಕಾಲಿಯಲ್ಲಿ ನಮ್ಮನ್ನ ಜೀಕಿಸುತ್ತಾ ಅಲ್ಲಿನ ಅಚ್ಚರಿಗಳ ‘ಅರ್ಥ’ ಮಾಡಿಸುತ್ತಾರೆ, ವಾಸ್ತವದ ಅರಿವು ಮೂಡಿಸುತ್ತಾರೆ. ಒಂದು ರೀತಿಯಲ್ಲಿ ವಿಸ್ಮಯಕರ ವಿಷಯದ ವಿವರಗಳನ್ನು ಕಲ್ಪನೆಯ ಚಿತ್ರ ಮಂದಿರದಲ್ಲಿ ಕತೆಯ ಮೂಲಕ ಅನಾವರಣಗೊಳಿಸಿದಂತೆ.ಡಾ. ಕೆ.ಎನ್. ಗಣೇಶಯ್ಯ ಬರೆದ “ಹಾತೆ-ಜತೆ-ಕತೆ” ಕೃತಿಯ ಕುರಿತು ವಿಶ್ವ ದೊಡ್ಡಬಳ್ಳಾಪುರ ಬರಹ byಕೆಂಡಸಂಪಿಗೆ|Feb 11, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments ಜಗತ್ತಿನಲ್ಲಿ ಮೂಡಿದ ಎಲ್ಲ ವಿಪ್ಲವಗಳಿಗೆ ಪ್ರತಿಸ್ಪಂದಿಸುತ್ತಾ ಬಂದ ಜಾಗತಿಕ ಸಿನಿಮಾ ಇಪ್ಪತ್ತೊಂದನೆಯ ಶತಮಾನದ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಈ ನಲವತ್ತು ಸಿನಿಮಾಗಳು ದಾಖಲಿಸುತ್ತವೆ. ಹಾಗಾಗಿ ಈ ಲೇಖನಗಳು ಒಂದು ಸಾರ್ಥಕ ಪ್ರಯತ್ನ ಎಂದು ನನ್ನ ಅನಿಸಿಕೆ. ಹೀಗೆ ಹೇಳುತ್ತಲೇ ಕಳೆದೆರಡು ದಶಕಗಳಲ್ಲಿ ಜಾಗತಿಕ ಸಿನಿಮಾಗಳಲ್ಲಿ ಮೂಡಿಬಂದ ಹೊಸಾ ಶೈಲಿಯಾದ ʻಸ್ಲೋ ಸಿನಿಮಾ ಚಳುವಳಿʼಯ ಒಂದೆರಡು ಕೃತಿಗಳನ್ನು ಪರಿಚಯಿಸಿದ್ದರೆ ಸಾಂದರ್ಭಿಕವಾಗಿ ಇನ್ನಷ್ಟು ಉಪಯುಕ್ತತೆ ಬರುತ್ತಿತ್ತೇನೋ. ಹಾಲಿವುಡ್ ಉದ್ದಿಮೆಯ ಜನಪ್ರಿಯ ಸಿದ್ಧಸೂತ್ರಕ್ಕೆ ಪರ್ಯಾಯವಾಗಿ ಮೂಡಿಬಂದದ್ದೇ ʻಸ್ಲೋ ಸಿನಿಮಾ ಚಳುವಳಿʼ.ಎ.ಎನ್. ಪ್ರಸನ್ನರವರ ಆಯ್ದ ಜಾಗತಿಕ ಸಿನಿಮಾಗಳ ಕುರಿತ ಲೇಖನಗಳ ಸಂಕಲನ “ಸಿನಿ ಲೋಕ 21”ಕ್ಕೆ ಗಿರೀಶ್‌ ಕಾಸರವಳ್ಳಿ ಬರೆದ ಮುನ್ನುಡಿ byಸುಮಾವೀಣಾ|Feb 10, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….!ಕೆ.ವಿ. ತಿರುಮಲೇಶರ “ಅನೇಕ” ಕಾದಂಬರಿಯ ಕುರಿತು ಸುಮಾವೀಣಾ ಬರಹ byಮಂಜಯ್ಯ ದೇವರಮನಿ, ಸಂಗಾಪುರ|Feb 7, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments ಮುಗ್ಧ ಮಗು ಸಚ್ಚಿದಾನಂದನನ್ನು ಭವಿಷ್ಯದ ಪೀಠಾಧಿಪತಿಯನ್ನಾಗಿ ಮಾಡಬೇಕೆನ್ನುವ ತಂದೆ- ತಾಯಿಗಳ ಆಸೆ, ಅಧಿಕಾರ ಲಾಲಸೆ, ಆಶ್ರಮದಲ್ಲಿನ ಅನೈತಿಕ ಚಟುವಟಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಪರಿ, ದೇವರ ಸನ್ನಿಧಾನ, ದೇವರ ಸೇವೆ ಮುಗ್ಧ ಮಗುವಿನ ಕಣ್ಣಲ್ಲಿ ಕಾಣುತ್ತವೆ. ಸಮಾಜವನ್ನು ತಿದ್ದುವ, ಆದರ್ಶ ವಟುಗಳನ್ನು ಬೆಳೆಸುವ ಸನ್ನಿಧಾನಗಳೇ ದುರ್ಮಾರ್ಗ ಹಿಡಿದಿರುವುದು ‘ದೇವರ ಮಗು’ ಕತೆಯಲ್ಲಿ ವ್ಯಕ್ತವಾಗಿದೆ. ‘ಮುಳ್ಳು’ ಕಥೆಯಲ್ಲಿ ಬಶೀರನ ಮನಸ್ಸಿನ ತೊಳಲಾಟವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ.ದಯಾನಂದ ಅವರ ಕಥಾ ಸಂಕಲನ “ಬುದ್ಧನ ಕಿವಿ”ಯ ಕುರಿತು ಮಂಜಯ್ಯ ದೇವರಮನಿ ಬರಹ byಕೆಂಡಸಂಪಿಗೆ|Feb 6, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು. ನಿನ್ನೆಯ ಹತ್ಯಾಕಾಂಡದ ಆರಂಭವನ್ನು ನೋಡಿದರೆ, ಬಹುಶಃ ಯಾದವ ಮುಖ್ಯರಲ್ಲಿ ಯಾರೂ ಬದುಕಿರಲಾರರು. ನಗರದಲ್ಲಿ, ಅರಮನೆಯಲ್ಲಿ ನನಗಿಂತ ಮುದುಕರಾದ ಕೆಲವರಿರಬಹುದು. ಈಗ ನಾನು ಮಾಡಬೇಕಾದ ಮಹತ್ವದ ಕರ‍್ಯ ಯಾವುದೂ ಇಲ್ಲ, ಸಾಧಿಸಬೇಕಾದ ಯಾವ ಆದರ್ಶವೂ ಇಲ್ಲ. ಅಂಥ ಶಕ್ತಿ, ಉತ್ಸಾಹಗಳೂ ದೇಹದಲ್ಲಿ ಉಳಿದಿಲ್ಲ.ಸು. ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿ “ಶ್ರೀಕೃಷ್ಣ”ದ ಕೆಲವು ಪುಟಗಳು ನಿಮ್ಮ ಓದಿಗೆ