ಕನ್ನಡ ಸಾಹಿತ್ಯ.ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು ಯಾಕೆ ಸುಮ್ಮನೆ ನಾವು ಹಾದಿ ಕಾಯುತ್ತೇವೋ ಬಂದರೂ ಬಾರದ ಹಾಗೇ ಇರುವಂಥವರ! ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ ಕಣ್ಣ ಕೊನೆಯಿಂದ ಕಿಡಿ ಕಾರಿ ಚಟ ಪಟ ಸಿಡಿದು ಹೊರಟು ಹೋದವರ ಕಾಯುತ್ತೇವೆ ಯಾಕೆ? – ಹೊಡೆದುಕೊಳ್ಳುವ ಎದೆಯ ಅಂಗೈಲಿಟ್ಟುಕೊಂಡು. ಇಲ್ಲವೆ ನಿಮ್ಮಲ್ಲಿ? ಇರಲಿ ಬಿಡಿ, ಬಂದಾರು; ಸರಿ . . . ಬಂದರೆ ತಿಳಿಸುವೆ ಬಂದರೆಂದು. (ಆಚೆ ದನಿಗೇನು ಗೊತ್ತು ಬಾರದೆಯೂ ಇರಬಹುದೆಂದು) ಯಾವುದೋ ಲಾರಿಯಡಿ! . . ಟ್ರಕ್ಕಿನಡಿ! . . ಶಿವ ಶಿವಾ! ಒಲ್ಲೆ ಒಲ್ಲೆಂದು ಹೇಳುವುದಕ್ಕಾಗೇ ನೋವ ಕಾಯುತ್ತೇವೋ? ಸಾವ ಕಾಯುತ್ತೇವೋ? ಕಣ್ಣ ತುಂಬ ತುಂಬಿದ ಭಯ ಆಚೀಚೆಗೂ ಚೆಲ್ಲಿ ಹನಿ ಹನಿಯಾಗಿ ಹೆಪ್ಯ್ಪಗಟ್ಟುತದೆ ಕತ್ತಲಿನಲ್ಲಿ. ಈಗ ಮುಗಿಯುತ್ತದೆ ಕಾದು ಕೂರುವ ಹೊತ್ತು ಆಗ ಮುಗಿಯುತ್ತದೆ ಕಾದು ಕೂರುವ ಹೊತ್ತು ಇನ್ನೇನು ಮುಗಿಯುತ್ತದೆ ಕಾದು ಕೂರುವ ಹೊತ್ತು . . ಯಾರಾದರೂ ಬಂದು, ಬಾಗಿಲ ಬಡಿದು ತಿಳಿಸಿಬಿಡಲಿ! ಏನ ಕಾಯುತ್ತೇವೆ ಏಕೆ ಕಾಯುತ್ತೇವೆ ಬರುವುದನ್ನೋ . . . ಬಾರದಿರುವುದನ್ನೋ ? ತೆರೆದ ಬಾಗಿಲಿನಿಂದ ಕತ್ತಲು ನುಗ್ಗಿದ ಹಾಗೆ ಕಡೆಗೂ ಬಂದರು ಬಾರದ ಹಾಗೆ! ಕಾಯುವ ಮಾತಿನ್ನು ಮತ್ತೊಂದು ದಿನಕ್ಕೆ ಮತ್ತೊಂದು ರಾತ್ರಿಗೆ. ***** ೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […] ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ ಟಿಪ್ಪಣಿ * ಹೆಸರು * ಮಿಂಚೆ * ಜಾಲತಾಣ ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. This site uses Akismet to reduce spam. Learn how your comment data is processed. ಬಿಟ್ಟ್ಯಾ ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… ಟಿಪ್ಸ್ ಸುತ್ತ ಮುತ್ತ "ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… ಮನ್ನಿ ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… ಬುಗುರಿ ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…