text
stringlengths
0
61.5k
ಓಂ ಶಾಂತಿ. ಮಕ್ಕಳಿಗೆ ಯೋಗವನ್ನು ಕಲಿಸಿದೆನು. ಮತ್ತೆಲ್ಲಾ ಸೆಂಟರ್ಗಳಲ್ಲಿ ಎಲ್ಲರೂ ತಾವೇ ಕಲಿಯುತ್ತಾರೆ. ಕಲಿಸುವವರು ತಂದೆಯಾಗಿರುವುದಿಲ್ಲ. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ತಾವೇ ಕಲಿಸುತ್ತಾರೆ. ಆದರೆ ಇಲ್ಲಿ (ಮಧುಬನ)ತಂದೆಯೇ ಕುಳಿತು ಮಕ್ಕಳಿಗೆ ಕಲಿಸಿಕೊಡುತ್ತಾರೆ. ರಾತ್ರಿ-ಹಗಲಿನ ಅಂತರವಿದೆ. ಸೇವಾಸ್ಥಾನ(ಸೆಂಟರ್)ಗಳಲ್ಲಿ ಬಹಳ ಮಿತ್ರಸಂಬಂಧಿಗಳು ನೆನಪಿಗೆ ಬರುತ್ತಿರುತ್ತಾರೆ. ಆದ್ದರಿಂದ ಇಷ್ಟೊಂದು ನೆನಪು ಮಾಡಲು ಆಗುವುದಿಲ್ಲ. ಆ ಕಾರಣ ಆತ್ಮಾಭಿಮಾನಿಯಾಗುವುದು ಬಹಳ ಕಷ್ಟವಾಗುತ್ತದೆ.ಮಧುಬನದಲ್ಲಿ ನೀವು ಬಹಳಷ್ಟು ಬೇಗ ಆತ್ಮಾಭಿಮಾನಿಗಳಾಗಬೇಕು. ಆದರೆ ಅನೇಕರಿಗೆ ಏನೂ ಅರ್ಥವಾಗುವುದಿಲ್ಲ. ಶಿವತಂದೆಯು ನಮ್ಮ ಸೇವೆ ಮಾಡುತ್ತಿದ್ದಾರೆ. ನಮಗೆ ತಿಳಿಸುತ್ತಿದ್ದಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಯಾವ ತಂದೆಯು ಈ ಬ್ರಹ್ಮಾರವರಲ್ಲಿ ವಿರಾಜಮಾನನಾಗಿದ್ದಾರೆ. ಇಲ್ಲಿ ವಿರಾಜಮಾನವಾಗಿದ್ದಾರೆಂಬ ನಿಶ್ಚಯವು ಅನೇಕರಿಗೆ ಇರುವುದೇ ಇಲ್ಲ. ನಾವು ಹೇಗೆ ನಿಶ್ಚಯವಿಡುವುದು ಎಂದು ಅನ್ಯರು ಹೇಳುತ್ತಾರೆಯೋ ಅಂತಹವರು ಇಲ್ಲಿಯೂ ಸಹ ಇದ್ದಾರೆ. ಒಂದುವೇಳೆ ಪೂರ್ಣ ನಿಶ್ಚಯವಿದ್ದರೆ ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ತಮ್ಮಲ್ಲಿ ಶಕ್ತಿಯನ್ನು ತುಂಬಿಕೊಳ್ಳುತ್ತಾ ಬಹಳಷ್ಟು ಸೇವೆ ಮಾಡುತ್ತಾರೆ. ಏಕೆಂದರೆ ಇಡೀ ವಿಶ್ವವನ್ನು ಪಾವನ ಮಾಡಬೇಕಲ್ಲವೆ. ಯೋಗದಲ್ಲಿ ಕೊರತೆಯಿದ್ದರೆ ಜ್ಞಾನದಲ್ಲಿಯೂ ಕೊರತೆಯಿರುತ್ತದೆ. ಕೇಳುವುದಂತೂ ಕೇಳುತ್ತಾರೆ ಆದರೆ ಧಾರಣೆಯಾಗುವುದಿಲ್ಲ. ಒಂದುವೇಳೆ ಧಾರಣೆಮಾಡಿದರೆ ಮತ್ತೆ ಅನ್ಯರಿಗೂ ಧಾರಣೆ ಮಾಡಿಸುತ್ತಾರೆ. ತಂದೆಯು ತಿಳಿಸಿದ್ದರು- ಹೇಗೆ ಅವರು ಸಮ್ಮೇಳನ ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ. ವಿಶ್ವದಲ್ಲಿ ಶಾಂತಿಸ್ಥಾಪನೆಯಾಗಲೆಂದು ಇಚ್ಛಿಸುತ್ತಿರುತ್ತಾರೆ. ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು ಯಾವ ಪ್ರಕಾರವಾಗಿ ಸ್ಥಾಪನೆಯಾಗಿತ್ತು ಎಂಬುದೇನೂ ತಿಳಿದುಕೊಂಡಿಲ್ಲ. ಯಾವ ಪ್ರಕಾರದ ಶಾಂತಿಯಿತ್ತೋ ಅದೇ ಬೇಕಲ್ಲವೆ ಇದನ್ನಂತೂ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ವಿಶ್ವದಲ್ಲಿ ಸುಖ-ಶಾಂತಿಯ ಸ್ಥಾಪನೆಯು ಈಗಲೇ ಆಗುತ್ತಿದೆ. ತಂದೆಯು ಬಂದಿದ್ದಾರೆ ಹೇಗೆ ಈ ದಿಲ್ವಾಡಾ ಮಂದಿರವಿದೆ. ಆದಿದೇವನೂ ಇದ್ದಾರೆ. ಮತ್ತೆ ಮೇಲೆ ವಿಶ್ವದಲ್ಲಿ ಶಾಂತಿಯ ಚಿತ್ರವೂ ಇದೆ. ಎಲ್ಲಿಯೇ ಸಮ್ಮೇಳನಕ್ಕೆ ನಿಮಗೆ ನಿಮಂತ್ರಣ ನೀಡುತ್ತಾರೆಂದರೆ ನೀವು ಅವರಿಗೆ ಕೇಳಿ- ವಿಶ್ವದಲ್ಲಿ ಯಾವ ಪ್ರಕಾರದ ಶಾಂತಿಯು ಬೇಕು? ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ವಿಶ್ವದಲ್ಲಿ ಶಾಂತಿಯಿತ್ತು, ದಿಲ್ವಾಡಾ ಮಂದಿರದಲ್ಲಿ ಇದರ ಪೂರ್ಣ ನೆನಪಾರ್ಥವಿದೆ. ವಿಶ್ವದಲ್ಲಿ ಶಾಂತಿಯಿತ್ತೆಂದು ಸಾಕ್ಷ್ಯಾಧಾರವು ಬೇಕಲ್ಲವೆ. ಲಕ್ಷ್ಮೀ-ನಾರಾಯಣ ಚಿತ್ರದಿಂದ ಜನರು ತಿಳಿದುಕೊಳ್ಳುವುದಿಲ್ಲ. ಕಲ್ಲುಬುದ್ಧಿಯವರಾಗಿದ್ದಾರಲ್ಲವೆ, ಆದ್ದರಿಂದ ಅವರಿಗೆ ನೀವೇ ತಿಳಿಸಿರಿ- ವಿಶ್ವದಲ್ಲಿ ಶಾಂತಿಯ ಸಾಕ್ಷಿ ಈ ಲಕ್ಷ್ಮೀ-ನಾರಾಯಣ ಮತ್ತು ಇವರ ರಾಜಧಾನಿಯನ್ನು ತೋರಿಸಲಾಗುತ್ತದೆಯಲ್ಲವೆ. ಅದನ್ನು ಅಬುಪರ್ವತದಲ್ಲಿ ಬಂದು ನೋಡಿ, ಅದರ ಮಾದರಿಯನ್ನೇ ತಿಳಿದುಕೊಂಡಿಲ್ಲ ಅವರೇ ಕುಳಿತು ಈ ನೆನಪಾರ್ಥ ಮಂದಿರವನ್ನು ಮಾಡಿದ್ದಾರೆ ಇದಕ್ಕೆ ದಿಲ್ವಾಡಾ ಮಂದಿರವೆಂದು ಹೆಸರಿಟ್ಟಿದ್ದಾರೆ ಆದಿದೇವನನ್ನೂ ಕೂರಿಸಿದ್ದಾರೆ ಮೇಲೆ ಸ್ವರ್ಗವನ್ನೂ ತೋರಿಸಿದ್ದಾರೆ. ಹೇಗೆ ಅದು ಜಡವಾಗಿದೆಯೋ ಹಾಗೆಯೇ ನೀವು ಚೈತನ್ಯವಾಗಿದ್ದೀರಿ. ಇದಕ್ಕೆ (ಮಧುಬನ) ಚೈತನ್ಯ ದಿಲ್ವಾಲ ಮಂದಿರವೆಂದು ಹೆಸರಿನ್ನಿಡಬಹುದು. ಆದರೆ ಇದು ಎಲ್ಲರಿಗೆ ತಿಳಿದರೆ ಎಷ್ಟು ಜನರ ಗುಂಪಾಗುತ್ತದೋ ಗೊತ್ತಿಲ್ಲ! ಇದೇನೆಂದು ಮನುಷ್ಯರೇ ತಬ್ಬಿಬ್ಬಾಗುತ್ತಾರೆ. ತಿಳಿಸುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ. ಇದನ್ನು ಕೆಲವರು ಮಕ್ಕಳೂ ಸಹ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಭಲೇ ಇದೇ ಸ್ಥಾನದಲ್ಲಿ ಕುಳಿತಿದ್ದಾರೆ, ಹತ್ತಿರದಲ್ಲಿದ್ದಾರೆ ಆದರೆ ಸತ್ಯವನ್ನೇ ತಿಳಿದುಕೊಂಡಿಲ್ಲ. ಪ್ರದರ್ಶನಿಯಲ್ಲಿ ಅನೇಕ ಪ್ರಕಾರದ ಮನುಷ್ಯರು ಹೋಗುತ್ತಾರೆ. ಅನೇಕ ಮಠ-ಪಂಥಗಳಿವೆ ವೈಷ್ಣವ ಧರ್ಮದವರೂ ಇದ್ದಾರೆ ವೈಷ್ಣವ ಧರ್ಮದ ಅರ್ಥವನ್ನೇ ತಿಳಿದುಕೊಂಡಿಲ್ಲ. ಕೃಷ್ಣನ ರಾಜಧಾನಿ ಎಲ್ಲಿದೆ ಎಂದು ತಿಳಿದುಕೊಂಡೇ ಇಲ್ಲ. ಕೃಷ್ಣನ ರಾಜಧಾನಿಗೆ ಸ್ವರ್ಗ, ವೈಕುಂಠವೆಂದು ಹೇಳಲಾಗುತ್ತದೆ.
ತಂದೆಯು ತಿಳಿಸಿದ್ದರು- ನಿಮಗೆ ಎಲ್ಲಿಂದಲೇ ನಿಮಂತ್ರಣ ಸಿಗಲಿ, ಅಲ್ಲಿಗೆ ಹೋಗಿ ತಿಳಿಸಿ- ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು? ಈ ಅಬುಪರ್ವತವು ಎಲ್ಲದಕ್ಕಿಂತ ಶ್ರೇಷ್ಠಸ್ಥಾನವಾಗಿದೆ. ಏಕೆಂದರೆ ತಂದೆಯು ವಿಶ್ವದ ಸದ್ಗತಿ ಮಾಡುತ್ತಿದ್ದಾರೆ. ಅಬುಪರ್ವತದ ಮೇಲೆ ಅದರ ಮಾದರಿಯನ್ನು ನೋಡಬೇಕೆಂದರೆ ಹೋಗಿ ದಿಲ್ವಾಡಾ ಮಂದಿರವನ್ನು ನೋಡಿ, ವಿಶ್ವದಲ್ಲಿ ಶಾಂತಿಯನ್ನು ಹೇಗೆ ಸ್ಥಾಪನೆ ಮಾಡಲಾಗಿತ್ತು ಎಂಬುದರ ಮಾದರಿಯಿದೆ. ಇದನ್ನು ಕೇಳಿ ಬಹಳ ಖುಷಿಯಾಗುತ್ತಾರೆ. ಜೈನರೂ ಸಹ ಖುಷಿಯಾಗುತ್ತಾರೆ. ಈ ಪ್ರಜಾಪಿತ ಬ್ರಹ್ಮಾರವರು ನಮ್ಮ ತಂದೆ ಆದಿದೇವನಾಗಿದ್ದಾರೆ ಎಂದು ನೀವು ಹೇಳುತ್ತೀರಿ. ನೀವು ತಿಳಿಸಿದರೂ ಸಹ ಅವರು ತಿಳಿದುಕೊಳ್ಳುವುದಿಲ್ಲ. ಈ ಬ್ರಹ್ಮಾಕುಮಾರಿಯರು ಏನೂ ಹೇಳುತ್ತಾ ಗೊತ್ತಿಲ್ಲ ಎನ್ನುತ್ತಾರೆ. ಆದ್ದರಿಂದ ಈಗ ನೀವು ಮಕ್ಕಳು ಅಬುವಿನ ಬಹಳ ಮಹಿಮೆ ಮಾಡಿ ತಿಳಿಸಬೇಕು. ಅಬುಪರ್ವತವು ದೊಡ್ಡದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಬಾಂಬೆಯಲ್ಲಿಯೂ ಸಹ ನೀವು ತಿಳಿಸಬಹುದು- ಅಬುಪರ್ವತವು ಅತಿದೊಡ್ಡ ತೀರ್ಥಸ್ಥಾನವಾಗಿದೆ. ಏಕೆಂದರೆ ಪರಮಪಿತ ಪರಮಾತ್ಮನು ಅಬುವಿನಲ್ಲಿ ಬಂದು ಸ್ವರ್ಗಸ್ಥಾಪನೆ ಮಾಡಿದ್ದಾರೆ. ಇದನ್ನು ಯಾವುದೇ ಮನುಷ್ಯರು ಅರಿತುಕೊಂಡಿಲ್ಲ. ಈಗ ನಾವು ತಿಳಿದುಕೊಂಡಿದ್ದೇವೆ- ನಿಮಗಿದು ಗೊತ್ತಿಲ್ಲ ಆದ್ದರಿಂದ ನಾವು ನಿಮಗೆ ತಿಳಿಸುತ್ತೇವೆ. ವಿಶ್ವದಲ್ಲಿ ಯಾವ ಪ್ರಕಾರದ ಶಾಂತಿಯನ್ನು ಬಯಸುತ್ತೀರಿ. ಅದನ್ನು ಎಂದಾದರೂ ನೋಡಿದ್ದೀರಾ? ಎಂದು ಮೊಟ್ಟಮೊದಲಿಗೆ ನೀವು ಅವರನ್ನು ಕೇಳಿ. ವಿಶ್ವದಲ್ಲಿ ಶಾಂತಿಯು ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಒಂದೇ ಆದಿಸನಾತನ ದೇವಿ-ದೇವತಾಧರ್ಮವಿತ್ತು, ಇವರ ವಂಶಾವಳಿಯ ರಾಜ್ಯವಿತ್ತು. ನೀವು ಬಂದರೆ ಇವರ ರಾಜಧಾನಿಯ ಮಾದರಿಯನ್ನು ಅಬುಪರ್ವತದಲ್ಲಿ ನಿಮಗೆ ತೋರಿಸುತ್ತೇವೆ. ಇದಂತೂ ಹಳೆಯ ಪತಿತ ಪ್ರಪಂಚವಾಗಿದೆ. ಇದಕ್ಕೆ ಹೊಸಪ್ರಪಂಚವೆಂದಂತೂ ಹೇಳುವುದಿಲ್ಲ. ಹೊಸಪ್ರಪಂಚದ ಮಾದರಿಯಂತೂ ಅಬುವಿನಲ್ಲಿದೆ ಹೊಸ ಪ್ರಪಂಚವು ಈಗ ಸ್ಥಾಪನೆಯಾಗುತ್ತಾ ಇದೆ. ನೀವು ಮಕ್ಕಳಿಗೆ ಗೊತ್ತಿದೆ ಆದ್ದರಿಂದಲೇ ತಿಳಿಸುತ್ತೀರಿ. ಎಲ್ಲರಿಗೂ ತಿಳಿದೂ ಇಲ್ಲ, ಅವರು ತಿಳಿಸುವುದೂ ಇಲ್ಲ ಅರ್ಥವಾಗುವುದೂ ಇಲ್ಲ ಬಹಳ ಸಹಜಮಾತಾಗಿದೆ. ಮೇಲೆ ಸ್ವರ್ಗದ ರಾಜಧಾನಿಯು ನಿಂತಿದೆ. ಕೆಳಗೆ ಆದಿದೇವನು ಕುಳಿತಿದ್ದಾರೆ. ಇವರಿಗೆ ಆಡಂ ಎಂತಲೂ ಹೇಳುತ್ತಾರೆ. ಅವರು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ. ಹೀಗೆ ನೀವು ಮಹಿಮೆಯನ್ನು ತಿಳಿಸುತ್ತೀರೆಂದರೆ ಕೇಳಿ ಬಹಳ ಖುಷಿಯಾಗುತ್ತಾರೆ. ಅಂತೆಯೇ ಇದು ಬಹಳ ನಿಖರವಾಗಿದೆ. ಹೇಳಿ-ನೀವು ಕೃಷ್ಣನ ಮಹಿಮೆಯನ್ನು ಮಾಡುತ್ತೀರಿ. ಆದರೆ ನೀವು ಏನನ್ನೂ ತಿಳಿದುಕೊಂಡಿಲ್ಲ. ಕೃಷ್ಣನ ವೈಕುಂಠದ ಮಹಾರಾಜ, ವಿಶ್ವದ ಮಾಲೀಕನಾಗಿದ್ದಾನೆ. ಅದರ ಮಾದರಿಯನ್ನು ನೀವು ನೋಡಬೇಕೆಂದರೂ ನಡೆಯಿರಿ, ಅಬುಪರ್ವತದಲ್ಲಿ ನಿಮಗೆ ವೈಕುಂಠದ ಮಾದರಿಯನ್ನು ತೋರಿಸುತ್ತೇವೆ. ಹೇಗೆ ಪುರುಷೋತ್ತಮ ಸಂಗಮಯುಗದಲ್ಲಿ ರಾಜಯೋಗವನ್ನು ಕಲಿತು ವಿಶ್ವದ ಮಾಲೀಕರಾಗುತ್ತಾರೆ- ಆ ಮಾದರಿಯನ್ನೂ ತೋರಿಸುತ್ತೇವೆ. ಸಂಗಮಯುಗದ ತಪಸ್ಸನ್ನು ತೋರಿಸುತ್ತೇವೆ. ಪ್ರತ್ಯಕ್ಷಜೀವನದಲ್ಲಿ ಏನಾಗಿತ್ತೋ ಅದರ ನೆನಪಾರ್ಥವನ್ನು ತೋರಿಸುತ್ತೇವೆ. ಯಾವ ತಂದೆಯು ಲಕ್ಷ್ಮೀ-ನಾರಾಯಣರ ರಾಜ್ಯವನ್ನು ಸ್ಥಾಪನೆ ಮಾಡುವರೋ ಅವರದೂ ಚಿತ್ರವಿದೆ. ಜಗದಂಬೆಯ ಚಿತ್ರವೂ ಇದೆ. ಜಗದಂಬೆ 10-20 ಭುಜಗಳೂ ಇಲ್ಲ, ಎರಡೇ ಭುಜಗಳಿರುತ್ತವೆ. ನೀವು ಬಂದರೆ ನಿಮಗೆ ತೋರಿಸುತ್ತೇವೆ. ವೈಕುಂಠವನ್ನೂ ಅಬುವಿನಲ್ಲಿ ತೋರಿಸುತ್ತೇವೆ. ಅಬುಪರ್ವತದಲ್ಲಿಯೇ ತಂದೆಯು ಬಂದು ಇಡೀ ವಿಶ್ವವನ್ನು ಸ್ವರ್ಗವನ್ನಾಗಿ ಮಾಡಿದ್ದಾರೆ. ಸದ್ಗತಿಯನ್ನು ಕೊಟ್ಟಿದ್ದಾರೆ. ಅಬುಪರ್ವತವು ಎಲ್ಲದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಎಲ್ಲಾ ಧರ್ಮದವರ ಸದ್ಗತಿ ಮಾಡುವಂತಹ ತಂದೆಯು ಒಬ್ಬರೇ ಆಗಿದ್ದಾರೆ. ನೀವು ಬಂದರೆ ಅದರ ನೆನಪಾರ್ಥವನ್ನು ಅಬುನಲ್ಲಿ ತೋರಿಸುತ್ತೇವೆ. ನೀವು ಮಕ್ಕಳಂತೂ ಅಬುವಿನ ಮಹಿಮೆಯನ್ನು ಬಹಳಷ್ಟು ಮಾಡಬಹುದು. ಕ್ರಿಶ್ಚಿಯನ್ನರೂ ಸಹ ಭಾರತದ ಪ್ರಾಚೀನ ರಾಜಯೋಗವನ್ನು ಯಾರು ಕಲಿಸಿದರು, ಅದು ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಬಹಳ ಬಯಸುತ್ತಾರೆ. ಅವರಿಗೆ ಹೇಳಿ, ನಾವು ನಿಮಗೆ ಅಬುವಿನಲ್ಲಿ ತೋರಿಸುತ್ತೇವೆ. ವೈಕುಂಠದ ಪೂರ್ಣದೃಶ್ಯಗಳನ್ನು ಮಂದಿರದ ಮೇಲ್ಭಾಗದಲ್ಲಿ ತೋರಿಸುತ್ತಾರೆ. ನೀವು ಈ ರೀತಿ ಮಾಡಲು ಸಾಧ್ಯವಿಲ್ಲವೆಂಬುದನ್ನು ಬಹಳ ಚೆನ್ನಾಗಿ ತಿಳಿಸಬೇಕು. ಯಾತ್ರಿಕರು ಬಹಳಷ್ಟು ಸುತ್ತಾಡುತ್ತಾರೆ, ಅವರೂ ಸಹ ಬಂದು ತಿಳಿದುಕೊಳ್ಳಲಿ. ನಿಮ್ಮ ಅಬುವಿನ ಹೆಸರು ಪ್ರಸಿದ್ಧವಾಗಿಬಿಟ್ಟರೆ ಅನೇಕರು ಬರುತ್ತಾರೆ. ಅಬುಪರ್ವತವು ಬಹಳ ಹೆಸರುವಾಸಿಯಾಗಿಬಿಡುತ್ತದೆ. ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂಬುದು ಯಾರಾದರೂ ಕೇಳಿದರೆ ಅಥವಾ ಸಮ್ಮೇಳನಕ್ಕಾಗಿ ನಿಮಗೆ ನಿಮಂತ್ರಣ ಕೊಟ್ಟರೆ ಆಗ ಅಲ್ಲಿ ಕೇಳಬೇಕು. ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು, ಅದನ್ನು ತಿಳಿದುಕೊಂಡಿದ್ದೀರಾ? ವಿಶ್ವದಲ್ಲಿ ಶಾಂತಿಯು ಹೇಳಿತ್ತೆಂಬುದನ್ನು ನಡೆಯಿರಿ ನಾವು ತಿಳಿಸುತ್ತೇವೆ ಮತ್ತು ಅದರ ಎಲ್ಲಾ ಮಾದರಿಗಳನ್ನು ತೋರಿಸುತ್ತೇವೆ. ಇಂತಹ ಮಾದರಿಯು ಮತ್ತೆಲ್ಲಿಯೂ ಇಲ್ಲ. ಅಬುಪರ್ವತವು ಎಲ್ಲದಕ್ಕಿಂತ ದೊಡ್ಡದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಇಲ್ಲಿ ತಂದೆಯು ಬಂದು ವಿಶ್ವದಲ್ಲಿ ಶಾಂತಿ, ಸರ್ವರ ಸದ್ಗತಿ ಮಾಡಿದ್ದಾರೆ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಭಲೇ ದೊಡ್ಡ-ದೊಡ್ಡ ಮಹಾರಥಿಗಳು, ಮ್ಯೂಸಿಯಂ ಇತ್ಯಾದಿಗಳನ್ನು ಸಂಭಾಲನೆ ಮಾಡುವವರಿದ್ದಾರೆ. ಆದರೆ ಅನ್ಯರಿಗೆ ಸರಿಯಾದ ರೀತಿಯಲ್ಲಿ ತಿಳಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುತ್ತಾರಲ್ಲವೆ. ತಂದೆಗೆ ಎಲ್ಲವೂ ಗೊತ್ತಿದೆ, ಯಾರು ಯಾರು ಎಲ್ಲೆಲ್ಲಿಯೇ ಇರಲಿ ಎಲ್ಲರನ್ನೂ ತಿಳಿದುಕೊಂಡಿದ್ದಾರೆ. ಒಂದು ವೇಳೆ ಶರೀರವನ್ನು ಬಿಟ್ಟರೆ ಏನೂ ಪದವಿಯನ್ನು ಪಡೆಯುವುದಿಲ್ಲ. ನೆನಪಿನ ಯಾತ್ರೆಯ ಪರಿಶ್ರಮವನ್ನು ಅವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು ಪ್ರತಿನಿತ್ಯವೂ ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ- ಹೀಗೀಗೆ ತಿಳಿಸಿ ಕರೆದುಕೊಂಡು ಬನ್ನಿ. ಇಲ್ಲಂತೂ ನೆನಪಾರ್ಥವೂ ಸ್ಥಿರವಾಗಿದೆ.
ತಂದೆಯು ತಿಳಿಸುತ್ತಾರೆ- ನಾನೂ ಸಹ ಇಲ್ಲಿಯೇ ಇದ್ದೇನೆ. ಆದಿದೇವನೂ ಇಲ್ಲಿದ್ದಾರೆ, ವೈಕುಂಠವೂ ಇಲ್ಲಿಯೇ ಇದೆ. ಮುಂದೆ ಅಬುಪರ್ವತದ ಬಹಳಷ್ಟು ಮಹಿಮೆಯಾಗಿಬಿಡುತ್ತದೆ. ಹೇಗೆ ನೋಡಿ, ಕುರುಕ್ಷೇತ್ರವನ್ನು ಚೆನ್ನಾಗಿ ಮಾಡಲು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿರುತ್ತಾರೆ. ಎಷ್ಟು ಮಂದಿ ಮನುಷ್ಯರು ಹೋಗಿ ಅಲ್ಲಿ ಸೇರುತ್ತಾರೆ. ಇಷ್ಟೊಂದು ದುರ್ಗಂಧವಾಗಿಬಿಡುತ್ತದೆ. ಅದರ ಮಾತೇ ಕೇಳಬೇಡಿ. ಎಷ್ಟೊಂದು ಗುಂಪು ಸೇರುತ್ತದೆ. ಭಜನಾ ಮಂಡಳಿಯ ಒಂದು ಬಸ್ಸು ನದಿಯಲ್ಲಿ ಮುಳುಗಿಹೋಯಿತೆಂದು ಸಮಾಚಾರವು ಬಂದಿತ್ತು. ಇದೆಲ್ಲವೂ ದುಃಖವಲ್ಲವೇ! ಅಕಾಲಮೃತ್ಯವಾಗುತ್ತಾ ಇರುತ್ತದೆ. ಸತ್ಯಯುಗದಲ್ಲಂತೂ ಇಂತಹದೇನೂ ಆಗುವುದಿಲ್ಲ. ಇವೆಲ್ಲಾ ಮಾತುಗಳನ್ನು ನೀವು ತಿಳಿಸಬಹುದು. ಸಂಭಾಷಣೆ ಮಾಡುವವರು ಬಹಳ ಬುದ್ಧಿವಂತರಾಗಿರಬೇಕು. ತಂದೆಯು ಜ್ಞಾನವನ್ನು ಬುದ್ಧಿಯಲ್ಲಿ ಕೂರಿಸುತ್ತಿದ್ದಾರೆ. ಈ ಮಾತುಗಳನ್ನು ಪ್ರಪಂಚದವರು ತಿಳಿದುಕೊಳ್ಳುತ್ತಾರೆಯೇ! ನಾವು ಹೊಸ ಪ್ರಪಂಚವನ್ನು ನೋಡಿಕೊಂಡು ಬರಲು ಹೋಗುತ್ತೇವೆಂದು ಅವರು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ- ಈ ಹಳೆಯ ಪ್ರಪಂಚವು ಈಗ ಹೋಯಿತ್ತೆಂದರೆ ಹೋಯಿತು. ಇದು ಇನ್ನೂ 40 ಸಾವಿರ ವರ್ಷಗಳಿದೆಯೆಂದು ಹೇಳುತ್ತಾರೆ. ನೀವು ತಿಳಿಸುತ್ತೀರಿ- ಇಡೀ ಕಲ್ಪದ ಆಯಸ್ಸು 5000 ವರ್ಷಗಳೇ ಆಗಿದೆ. ಹಳೆಯ ಪ್ರಪಂಚದ ಮೃತ್ಯು ಸಮ್ಮುಖದಲ್ಲಿ ನಿಂತಿದೆ. ಇದಕ್ಕೆ ಘೋರ ಅಂಧಕಾರವೆಂದು ಹೇಳುತ್ತಾರೆ. ಕುಂಭಕರ್ಣನ ನಿದ್ರೆಯಲ್ಲಿ ಮಲಗಿಬಿಟ್ಟಿದ್ದಾರೆ. ಕುಂಭಕರ್ಣನು ಅರ್ಧಕಲ್ಪ ಮಲಗುತ್ತಿದ್ದನು. ಇನ್ನರ್ಧಕಲ್ಪ ಜಾಗೃತನಾಗಿರುತ್ತಿದ್ದನು. ಅಂದರೆ ನೀವು ಕುಂಭಕರ್ಣರಾಗಿದ್ದೀರಿ, ಈ ಆಟವು ಬಹಳ ಅದ್ಭುತವಾಗಿದೆ. ಈ ಮಾತುಗಳನ್ನು ಎಲ್ಲರೂ ಅರಿತುಕೊಳ್ಳುವುದಿಲ್ಲ. ಕೆಲವರಂತೂ ಕೇವಲ ಭಾವನೆಯಲ್ಲಿ ಬಂದುಬಿಡುತ್ತಾರೆ. ಇಂತಿಂತಹವರೆಲ್ಲರೂ ಹೋಗುತ್ತಿದ್ದಾರೆ ಎಂಬುದನ್ನು ಕೇಳಿ ಅವರೂ ಸಹ ಹೊರಟುಹೋಗುತ್ತಾರೆ. ನಾವು ಶಿವತಂದೆಯ ಬಳಿ ಹೋಗುತ್ತೇವೆ. ಶಿವತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಆ ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆಯೆಂದು ಅವರಿಗೆ ಹೇಳುತ್ತಾರೆ. ಮತ್ತೆ ಅವರೂ ಸಹ ಹೇಳುತ್ತಾರೆ- ಬಾಬಾ, ನಾವು ತಮ್ಮ ಮಕ್ಕಳಾಗಿದ್ದೇವೆ, ತಮ್ಮಿಂದ ಆಸ್ತಿಯನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತೇವೆ. ಇಷ್ಟು ಮಾತ್ರವಿದ್ದರೂ ದೋಣಿಯು ಪಾರಾಗುತ್ತದೆ. ಭಾವನೆಯ ಫಲ ನೋಡಿ, ಎಷ್ಟೊಂದು ಸಿಗುತ್ತದೆ. ಭಕ್ತಮಾರ್ಗದಲ್ಲಂತೂ ಅಲ್ಪಕಾಲದ ಸುಖವಿದೆ. ಇಲ್ಲಿ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಅಲ್ಲಂತೂ ಭಾವನೆಯ ಅಲ್ಪಕಾಲದ ಸುಖದ ಪ್ರಾಪ್ತಿಯು ಸಿಗುತ್ತದೆ. ಇಲ್ಲಿ ನಿಮಗೆ 21 ಜನ್ಮಗಳಿಗಾಗಿ ಭಾವನೆಯ ಫಲವು ಸಿಗುತ್ತದೆ ಬಾಕಿ ಸಾಕ್ಷಾತ್ಕಾರದಲ್ಲಿ ಏನೂ ಇಲ್ಲ. ನಮಗೂ ಸಾಕ್ಷಾತ್ಕಾರವಾಗಬೇಕೆಂದು ಕೆಲವರು ಹೇಳುತ್ತಾರೆ. ಆಗ ತಂದೆಯು ಇವರು ಏನೂ ತಿಳಿದುಕೊಂಡಿಲ್ಲವೆಂದು ತಿಳಿಯುತ್ತಾರೆ. ಸಾಕ್ಷಾತ್ಕಾರವನ್ನು ನೋಡಬೇಕೆಂದರೆ ಹೋಗಿ ನೌಧಾಭಕ್ತಿಯನ್ನು ಮಾಡಿ. ಅದರಿಂದ ಏನೂ ಸಿಗುವುದಿಲ್ಲ. ಭಲೇ ಇನ್ನೊಂದು ಜನ್ಮದಲ್ಲಿ ಚೆನ್ನಾಗಿರಬಹುದಷ್ಟೇ. ಒಳ್ಳೆಯ ಭಕ್ತರಾಗಿದ್ದರೆ ಒಳ್ಳೆಯ ಜನ್ಮ ಸಿಗುತ್ತದೆ. ಆದರೆ ಇಲ್ಲಂತ ಈ ಮಾತೇ ಭಿನ್ನವಾಗಿದೆ. ಈ ಹಳೆಯ ಪ್ರಪಂಚವು ಪರಿವರ್ತನೆಯಾಗುತ್ತಿದೆ. ತಂದೆಯು ಪ್ರಪಂಚವನ್ನು ಪರಿವರ್ತನೆ ಮಾಡುವವರಾಗಿದ್ದಾರೆ. ನೆನಪಾರ್ಥವು ನಿಂತಿದೆಯಲ್ಲವೆ. ಆದರೆ ಆ ಶೋಭೆಯಂತೂ ಕಡಿಮೆಯಾಗಿಯೇ ಬಿಡುತ್ತದೆ ಅಲ್ಲವೆ. ಇವೆಲ್ಲವೂ ವಿನಾಶಿ ವಸ್ತುಗಳಾಗಿವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಒಂದಂತೂ ತಮ್ಮ ಕಲ್ಯಾಣಕ್ಕಾಗಿ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಇದು ವಿದ್ಯಾಭ್ಯಾಸದ ಮಾತಾಗಿದೆ. ಬಾಕಿ ಮಥುರಾದಲ್ಲಿ ಮಧುಬನ, ಕೂಂಜ್ಗಲ್ಲಿ ಇತ್ಯಾದಿ ಏನು ಕುಳಿತು ಮಾಡಿದ್ದಾರೆ ಅದೇನೂ ಇಲ್ಲ. ಯಾವುದೇ ಗೋಪ-ಗೋಪಿಕೆಯರ ಆಟವೂ ಇಲ್ಲ. ಇದನ್ನು ತಿಳಿಸುವುದರಲ್ಲಿ ಬಹಳ ಪರಿಶ್ರಮಪಡಬೇಕಾಗುತ್ತದೆ. ಕುಳಿತು ಒಂದೊಂದು ಪಾಯಿಂಟನ್ನು ಚೆನ್ನಾಗಿ ತಿಳಿಸಿ. ಸಮ್ಮೇಳನದಲ್ಲಿಯೂ ಸಹ ಬಹಳ ಯೋಗಯುಕ್ತರಾಗಿರುವವರು ಬೇಕು. ಜ್ಞಾನದ ಕತ್ತಿಯಲ್ಲಿ ಯೋಗದ ಹರಿತವಿಲ್ಲವೆಂದರೆ ಬಾಣವು ಯಾರಿಗೂ ನಾಟುವುದಿಲ್ಲ. ಆದ್ದರಿಂದಲೇ ತಂದೆಯೂ ತಿಳಿಸುತ್ತಾರೆ- ಈಗ ಇನ್ನೂ ಸಮಯವಿದೆ. ಪರಮಾತ್ಮನು ಸರ್ವವ್ಯಾಪಿಯಲ್ಲವೆಂದು ಎಲ್ಲರೂ ನಂಬಿದರೆ ಈಗ ಇಲ್ಲಿ ಸಾಲು-ಸಾಲಾಗಿ ನಿಂತುಬಿಡುತ್ತದೆ. ಆದರೆ ಈಗ ಸಮಯವಿಲ್ಲ. ಒಂದು ಮಾತನ್ನು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕು. ರಾಜಯೋಗವನ್ನು ತಂದೆಯು ಕಲಿಸಿದ್ದರು. ಮತ್ತೆ ಅದನ್ನು ಈ ಸಮಯದಲ್ಲಿ ಕಲಿಸುತ್ತಿದ್ದಾರೆ. ಆ ತಂದೆಗೆ ಬದಲಾಗಿ ಯಾರು ಶ್ಯಾಮನಾಗಿದ್ದಾರೆಯೋ ಅವರ ಹೆಸರನ್ನು ಹಾಕಿಬಿಟ್ಟಿದ್ದಾರೆ. ಎಷ್ಟು ತಪ್ಪಾಗಿದೆ! ಇದರಿಂದಲೇ ನಿಮ್ಮ ದೋಣಿಯು ಮುಳುಗಿದೆ.
ಈಗ ತಂದೆಯು ತಿಳಿಸುತ್ತಾರೆ- ಈ ವಿದ್ಯೆಯು ಆದಾಯದ ಮೂಲವಾಗಿದೆ. ಸ್ವಯಂ ತಂದೆಯೇ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದಕ್ಕಾಗಿ ಓದಿಸಲು ಬರುತ್ತಾರೆ. ಇದರಲ್ಲಿ ಅವಶ್ಯವಾಗಿ ಪವಿತ್ರರೂ ಆಗಬೇಕು. ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಯಾವುದೆಲ್ಲಾ ಸೇವಾಕೇಂದ್ರಗಳಿವೆಯೋ ಎಲ್ಲಾ ಕಡೆಯೂ ನಂಬರ್ವಾರ್ ಇದ್ದಾರೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತದೆ. ಇದೇನೂ ಚಿಕ್ಕಮ್ಮನ ಮನೆಯಂತಲ್ಲ. ತಿಳಿಸಿ, ಸ್ವರ್ಗವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಆದರೆ ಅಲ್ಲಿಯ ರಾಜ್ಯವು ಹೇಗೆ ನಡೆಯುತ್ತದೆ ಮತ್ತು ದೇವತೆಗಳ ಸಮೂಹವನ್ನು ನೋಡಬೇಕೆಂದರೆ ಅಬುಪರ್ವತಕ್ಕೆ ನಡೆಯಿರಿ. ಮತ್ತೆಲ್ಲಿಯೂ ಹೀಗೆ ಛಾವಣಿ ಭಾಗದಲ್ಲಿ ರಾಜಧಾನಿಯನ್ನು ತೋರಿಸಿರುವಂತಹ ಚಿತ್ರ (ಸ್ಥಾನ) ಮತ್ತೆಲ್ಲಿಯೂ ಇಲ್ಲ. ಭಲೇ ಅಜ್ಮೀರ್ನಲ್ಲಿ ಸ್ವರ್ಗದ ಮಾದರಿಯಿದೆ ಆದರೆ ಅದು ಬೇರೆ ಮಾತಾಗಿದೆ. ಇಲ್ಲಂತೂ ಆದಿದೇವನೂ ಇದ್ದಾರಲ್ಲವೆ. ಸತ್ಯಯುಗವನ್ನು ಯಾರು ಮತ್ತು ಹೇಗೆ ಸ್ಥಾಪನೆ ಮಾಡಿದರು, ಇದು ಸರಿಯಾದ ನೆನಪಾರ್ಥವಾಗಿದೆ. ಈಗ ನಾವು ಚೈತನ್ಯ ದಿಲ್ವಾಡಾ ಎಂಬ ಹೆಸರನ್ನು ಬರೆಯಲು ಆಗುವುದಿಲ್ಲ. ಯಾವಾಗ ಮನುಷ್ಯರು ತಾವೇ ಬಂದು ಅರಿತುಕೊಳ್ಳುವರೋ ಆಗ ನೀವು ಈ ರೀತಿ ಬರೆಯಿರಿ ಎಂದು ತಾವಾಗಿಯೇ ಹೇಳುತ್ತಾರೆ. ಈಗಿನ್ನೂ ಆ ಮಾತಿಲ್ಲ. ಈಗಂತೂ ನೋಡಿ- ಸ್ವಲ್ಪ ಮಾತಿನಲ್ಲಿಯೇ ಏನೇನು ಮಾಡಿಬಿಡುತ್ತಾರೆ! ಕ್ರೋಧಿಗಳು ಅನೇಕರಿರುತ್ತಾರೆ. ದೇಹಾಭಿಮಾನವಿದೆಯಲ್ಲವೆ. ನೀವು ಮಕ್ಕಳ ವಿನಃ ಮತ್ತ್ಯಾರೂ ಆತ್ಮಾಭಿಮಾನಿಗಳಾಗಿರಲು ಸಾಧ್ಯವಿಲ್ಲ. ಪುರುಷಾರ್ಥ ಮಾಡಬೇಕಾಗಿದೆ. ಅದೃಷ್ಟದಲ್ಲಿದ್ದರೆ ಆಗುವುದೆಂದು ತಿಳಿಯಬಾರದು. ಪುರುಷಾರ್ಥಿಗಳು ಈ ರೀತಿ ಹೇಳುವುದಿಲ್ಲ. ಅವರಂತೂ ಪುರುಷಾರ್ಥವನ್ನು ಮಾಡುತ್ತಾ ಇರುತ್ತಾರೆ. ಅಂತಿಮದಲ್ಲಿ ಅನುತ್ತೀರ್ಣರಾದಾಗ ಅದೃಷ್ಟದಲ್ಲಿ ಏನಿತ್ತೋ ಅದಾಯಿತೆಂದು ಹೇಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ದೇಹೀ-ಅಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಅದೃಷ್ಟದಲ್ಲಿದ್ದರೆ ಆಗುತ್ತದೆ ಎಂದು ಎಂದಿಗೂ ಯೋಚಿಸಬಾರದು. ಬುದ್ಧಿವಂತರಾಗಬೇಕಾಗಿದೆ.
2. ಜ್ಞಾನವನ್ನು ಕೇಳಿ ಅದನ್ನು ಸ್ವರೂಪದಲ್ಲಿ ತರಬೇಕಾಗಿದೆ. ನೆನಪಿನ ಹರಿತವನ್ನು ಧಾರಣೆ ಮಾಡಿ ನಂತರ ಸೇವೆ ಮಾಡಬೇಕಾಗಿದೆ. ಎಲ್ಲರಿಗೂ ಅಬು ಮಹಾನ್ ತೀರ್ಥಸ್ಥಾನದ ಮಹಿಮೆಯನ್ನು ತಿಳಿಸಬೇಕಾಗಿದೆ.
ಏಕವ್ರತದವರಾಗಿ ಪವಿತ್ರತೆಯ ಧಾರಣೆಯ ಮುಖಾಂತರ ಆತ್ಮೀಯತೆಯಲ್ಲಿದ್ದು ಮನಸ್ಸಾ ಸೇವೆ ಮಾಡಿರಿ
ಇಂದು ಆತ್ಮೀಯ ತಂದೆ ನಾಲ್ಕಾರು ಕಡೆಯ ಆತ್ಮೀಯ ಮಕ್ಕಳ ಆತ್ಮೀಯತೆಯನ್ನು ನೋಡುತ್ತಿದ್ದರು. ಪ್ರತಿಯೊಬ್ಬ ಮಕ್ಕಳಲ್ಲಿ ಆತ್ಮೀಯತೆಯ ಹೊಳಪು ಎಷ್ಟಿದೆ? ಆತ್ಮೀಯತೆ ನಯನಗಳಿಂದ ಪ್ರತ್ಯಕ್ಷವಾಗುತ್ತದೆ. ಆತ್ಮೀಯತೆಯ ಶಕ್ತಿಯಿರುವ ಆತ್ಮ ಸದಾ ನಯನಗಳಿಂದ ಅನ್ಯರಿಗೂ ಸಹ ಆತ್ಮೀಯತೆಯ ಶಕ್ತಿಯನ್ನು ನೀಡುತ್ತಾರೆ. ಆತ್ಮೀಯತೆಯ ಮುಗುಳ್ಳಗೆ ಅನ್ಯರಿಗೂ ಸಹ ಖುಷಿಯ ಅನುಭವವನ್ನು ಮಾಡಿಸುತ್ತದೆ. ಅವರ ಚಲನೆ, ಮುಖಪುಟವು ಫರಿಸ್ಥೆಗಳ ಸಮಾನ ಡಬ್ಬಲ್ ಲೈಟ್ ರೂಪದಲ್ಲಿ ಕಾಣಿಸುತ್ತದೆ. ಈ ರೂಪದ ಆತ್ಮೀಯತೆಗೆ ಅಧಾರವಾಗಿದೆ ಪವಿತ್ರತೆ ಎಷ್ಟು-ಎಷ್ಟು ಮನ, ವಚನ, ಕರ್ಮದಲ್ಲಿ ಕಾಣಿಸುತ್ತದೆ, ಅಷ್ಟು ಆತ್ಮೀಯತೆ ಕಂಡುಬರುತ್ತದೆ. ಪವಿತ್ರತೆ ಬ್ರಾಹ್ಮಣ ಜೀವನದ ಶೃಂಗಾರವಾಗಿದೆ. ಪವಿತ್ರತೆ ಬ್ರಾಹ್ಮಣ ಜೀವನದ ಮರ್ಯಾದೆಯಾಗಿದೆ. ಆದ್ದರಿಂದ ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಪವಿತ್ರತೆಯ ಆಧಾರದಿಂದ ಕೂಡಿದ ಆತ್ಮೀಯತೆಯನ್ನು ನೋಡುತ್ತಿದ್ದರು. ಆತ್ಮೀಯತೆಯ ಶಕ್ತಿಯಿರುವ ಆತ್ಮ ಈ ಲೋಕದಲ್ಲಿ ಅಲೌಕಿಕ ಫರಿಸ್ಥೆಗಳಂತೆ ಕಾಣುತ್ತಾರೆ.
ಆದ್ದರಿಂದ ತನ್ನನ್ನು ತಾವೇ ನೋಡಿಕೊಳ್ಳಿರಿ, ಚೆಕ್ ಮಾಡಿಕೊಳ್ಳಿ-ನನ್ನ ಸಂಕಲ್ಪ, ಮಾತಿನಲ್ಲಿ ಎಷ್ಟು ಆತ್ಮೀಯತೆಯಿದೆ? ಆತ್ಮೀಯತೆಯ ಸಂಕಲ್ಪ ತನ್ನಲ್ಲಿಯೂ ಶಕ್ತಿ ತುಂಬುವಂತಹದ್ದಾಗಿದೆ ಮತ್ತು ಅನ್ಯರಿಗೂ ಶಕ್ತಿಯನ್ನು ನೀಡುತ್ತದೆ. ಇದನ್ನೇ ಬೇರೆ ಶಬ್ದಗಳಲ್ಲಿ ಹೇಳಲಾಗುತ್ತದೆ - ಆತ್ಮೀಯತೆಯ ಸಂಕಲ್ಪ ಮನಸ್ಸಾ ಸೇವೆಗೆ ನಿಮಿತ್ತವಾಗುತ್ತದೆ. ಆತ್ಮೀಯ ಮಾತು ಸ್ವಯಂಗೆ ಮತ್ತು ಅನ್ಯರಿಗೆ ಸುಖದ ಅನುಭವವನ್ನು ಮಾಡಿಸುತ್ತದೆ. ಶಾಂತಿಯ ಅನುಭವವನ್ನು ಮಾಡಿಸುತ್ತದೆ. ಒಂದು ಆತ್ಮೀಯ ಮಾತು ಅನ್ಯ ಆತ್ಮಗಳ ಜೀವನದಲ್ಲಿ ಮುಂದುವರೆಯಲ್ಲಿಕ್ಕೆ ಆಧಾರವಾಗುತ್ತದೆ. ಆತ್ಮೀಯ ಮಾತನ್ನಾಡುವವರು ವರದಾನಿ ಆತ್ಮಗಳಾಗುತ್ತಾರೆ. ಆತ್ಮೀಯ ಕರ್ಮ ಸಹಜವಾಗಿ ಸ್ವಯಂಗೆ ಕರ್ಮಯೋಗಿ ಸ್ಥಿತಿಯನ್ನು ಅನುಭವ ಮಾಡಿಸುತ್ತದೆ ಮತ್ತು ಅನ್ಯರಿಗು ಕರ್ಮಯೋಗಿಗಳಾಗುವಂತಹ ಸ್ಯಾಂಪಲ್ (ಮಾದರಿ) ಆಗುತ್ತಾರೆ. ಆದರೆ ಆತ್ಮೀಯತೆಯ ಬೀಜವಾಗಿದೆ ಪವಿತ್ರತೆ ಪವಿತ್ರತೆ ಸ್ವಪ್ನದಲ್ಲಿಯೂ ಭಂಗ ಆಗಬಾರದು, ಆಗ ಆತ್ಮೀಯತೆಯ ಶಕ್ತಿಯು ಕಂಡುಬರುತ್ತದೆ. ಪವಿತ್ರತೆ ಕೇವಲ ಬ್ರಹ್ಮಚರ್ಯ ಮಾತ್ರವಲ್ಲ, ಆದರೆ ಪ್ರತಿ ಮಾತಿನಲ್ಲಿ, ಪ್ರತಿ ಸಂಕಲ್ಪದಲ್ಲಿ, ಪ್ರತಿ ಕರ್ಮದಲ್ಲಿ ಬ್ರಹ್ಮಾಚಾರಿಗಳು. ಹೇಗೆ ಲೌಕಿಕದಲ್ಲಿ ಕೆಲವು-ಕೆಲವು ಮಕ್ಕಳ ಮುಖವು ತಂದೆಯಂತೆ ಇರುತ್ತದೆ. ಆಗ ಹೇಳುತ್ತಾರೆ ಇವರಲ್ಲಿ ಆ ತಂದೆಯು ಕಾಣುತ್ತಾರೆ. ಅದೇ ರೀತಿ ಬ್ರಹ್ಮಾಚಾರಿ ಬ್ರಾಹ್ಮಣ ಆತ್ಮಗಳ ಮುಖದಿಂದ ಆತ್ಮೀಯತೆಯ ಆಧಾರದಿಂದ ಬ್ರಹ್ಮಾತಂದೆ ಸಮಾನ ಅನುಭವವಾಗಲಿ, ಸಂಪರ್ಕದಲ್ಲಿ ಬರುವ ಆತ್ಮಗಳು ಅನುಭವ ಮಾಡಲಿ - ಇವರು ತಂದೆಯ ಸಮಾನರಾಗಿದ್ದಾರೆ. ಆದರೆ ನೂರು ಪ್ರತಿಶತ (%) ಇಲ್ಲದಿದ್ದರೂ ಸಮಯ ಅನುಸಾರ ಎಷ್ಟು ಪ್ರತಿಶತ (%) ಕಂಡುಬರುತ್ತಿದೆ? ಎಲ್ಲಿಯವರೆಗು ತಲುಪಿದ್ದೀರಾ? 75%, 80%, 90% ಎಲ್ಲಿಯವರೆಗು ಮರ ತಲುಪಿದ್ದೀರಾ? ಮುಂದೆ ಕುಳಿತಿರುವವರು ತಿಳಿಸಿ, ನೋಡಿ ಕುಳಿತುಕೊಳ್ಳಲು ಮುಂದಿನ ಲೈನ್ ಪಡೆದಿದ್ದೀರಿ, ಅದೇ ರೀತಿ ಬ್ರಹ್ಮಾಚಾರಿಗಳಾಗುವುದರಲ್ಲಿಯೂ ಮುಂದಿನ ನಂಬರ್ ಪಡೆಯುತ್ತೀರಲ್ಲವೇ! ಮುಂದಿನ ನಂಬರ್ ಪಡೆಯುತ್ತೀರಿ ತಾನೆ?
ಬಾಪ್ದಾದಾ ಪ್ರತಿ ಮಕ್ಕಳ ಪವಿತ್ರತೆಯ ಆಧಾರದ ಮೇಲೆ ಆತ್ಮೀಯತೆಯನ್ನು ನೋಡಲು ಬಯಸುತ್ತಾರೆ. ಬಾಪ್ದಾದಾರವರ ಬಳಿ ಎಲ್ಲರ ಚಾಟರ್ಂತೂ ಇದೆ. ತಿಳಿಸುವುದಿಲ್ಲ. ಆದರೆ ಚಾರ್ಟ್ ಇದೆ, ಏನೇನು ಮಾಡುತ್ತೀರಾ? ಹೇಗೆ ಮಾಡುತ್ತೀರಾ, ಎಲ್ಲರದು ಚಾರ್ಟ್ ಬಾಪ್ದಾದಾರವರ ಬಳಿ ಇದೆ. ಪವಿತ್ರತೆಯಲ್ಲಿ ಈಗಲೂ ಕೆಲವು-ಕೆಲವು ಮಕ್ಕಳಲ್ಲಿ ತುಂಬಾ ಕಡಿಮೆ % ಇದೆ. ಸಮಯದ ಅನುಸಾರ ವಿಶ್ವದ ಆತ್ಮಗಳು ನೀವು ಆತ್ಮಗಳ ಆತ್ಮೀಯತೆಯ ಉದಾಹರಣೆ ನೋಡಲು ಬಯಸುತ್ತಾರೆ. ಇದರ ಸಹಜ ಸಾಧನೆ ಆಗಿದೆ ಒಂದೇ ಒಂದು ಶಬ್ದದ ಬಗ್ಗೆ ಗಮನ ಇಡುವುದು. ಪದೇ-ಪದೇ ಈ ಒಂದು ಶಬ್ದವನ್ನು ತನಗೆ ತಾನೇ ಅಂಡರ್ಲೈನ್ ಮಾಡಿಕೊಳ್ಳುವುದು, ಆ ಒಂದು ಶಬ್ದವಾಗಿದೆ ಏಕವ್ರತಾ ಭವ ಎಲ್ಲಿ ಒಂದಿದೆ ಅಲ್ಲಿ. ಏಕಾಗ್ರತೆ ಸ್ವತಃವಾಗಿ ಬರುತ್ತದೆ. ಅಚಲ, ಅಡೋಲರು ಸ್ವತಃವಾಗಿ ಆಗುತ್ತೇವೆ. ಏಕವ್ರತ ಆಗುವುದರಿಂದ ಏಕಮತದಲ್ಲಿಯೇ ನಡೆಯುವುದು ಸಹಜವಾಗುತ್ತದೆ. ಇರುವುದೇ ಒಂದೇ ವ್ರತ, ಹಾಗಾಗೆ ಒಂದೇ ಮತದಿಂದ ಸದ್ಗತಿ ಸಹಜವಾಗುತ್ತದೆ. ಏಕರಸ ಸ್ಥಿತಿ ಸ್ವತಹವಾಗಿ ಆಗುತ್ತದೆ. ಆದ್ದರಿಂದ ಚೆಕ್ ಮಾಡಿಕೊಳ್ಳಿ - ಏಕವ್ರತ ಇದೆಯೇ? ಇಡೀ ದಿನದಲ್ಲಿ ಮನಸ್ಸು, ಬುದ್ಧಿಯಲ್ಲಿ ಏಕವ್ರತ ಇರುತ್ತದೆಯೇ? ಲೆಕ್ಕಾಚಾರದಲ್ಲಿಯೂ ಆದಿಯ ಲೆಕ್ಕಾಚಾರ ಒಂದರಿಂದ ಶುರುವಾಗುತ್ತದೆ. ಒಂದು ಬಿಂದು ಮತ್ತು ಒಂದು ಒಂದು ಶಬ್ದ, ಒಂದರ ಮುಂದೆ ಸೊನ್ನೆ ಹಾಕುತ್ತಾ ಹೋಗಿ, ಎಷ್ಟು ಹೆಚ್ಚುತ್ತಾ ಹೋಗುತ್ತದೆ. ಬೇರೆ ಏನೂ ನೆನಪಿರದಿದ್ದರೂ ಒಂದು ಶಬ್ದ ನೆನಪಿರುತ್ತದೆ ಅಲ್ಲವೇ! ಸಮಯ, ಆತ್ಮಗಳು, ನಾವು ಏಕವ್ರತಾ ಆತ್ಮಗಳನ್ನು ಕೂಗುತ್ತಿದ್ದಾರೆ. ಸಮಯದ ಕೂಗು, ಆತ್ಮಗಳ ಕೂಗು - ಹೇ ದೇವಾತ್ಮಗಳೇ ಎಂಬ ಕೂಗು ಕೇಳಿಸುವುದಿಲ್ಲವೇ? ಪ್ರಕೃತಿಯೂ ಸಹ ತಾವು ಪ್ರಕೃತಿಪತಿಯರನ್ನು ನೋಡಿ-ನೋಡಿ ಕರೆಯುತ್ತಿದೆ - ಹೇ! ಪ್ರಕೃತಿ ಪತಿ ಆತ್ಮಗಳೇ ಈಗಲೇ ಪರಿವರ್ತನೆ ಮಾಡಿ. ಇದಂತೂ ಮಧ್ಯ-ಮಧ್ಯದಲ್ಲಿ ಚಿಕ್ಕ-ಚಿಕ್ಕ ವಿಕೋಪಗಳು ಆಗುತ್ತಿರುತ್ತವೆ. ಇದರಿಂದ ಆತ್ಮಗಳಿಗೆ ಮತ್ತೆ-ಮತ್ತೆ ದುಃಖ, ಭಯಭೀತರನ್ನಾಗಿ ಮಾಡಬೇಡಿ. ನೀವು ಮುಕ್ತಿಯನ್ನು ನೀಡುವಂತಹ ಮಾಸ್ಟರ್ ಮುಕ್ತಿದಾತ ಆತ್ಮರು ಯಾವಾಗ ಈ ಎಲ್ಲಾ ಆತ್ಮರಿಗೆ - ಮುಕ್ತಿಯನ್ನು ನೀಡುತ್ತೀರಿ? ಮನಸ್ಸಿನಲ್ಲಿ ದಯೆ ಬರುವುದಿಲ್ಲವೇನು? ಸಮಾಚಾರವನ್ನು ಕೇಳಿ, ಆಗಿಹೋಯಿತೆಂದು ಸುಮ್ಮನಾಗಿಬಿಡುತ್ತೀರೇನು? ಅದ್ದರಿಂದ ಬಾಪ್ದಾದಾ ಪ್ರತಿಯೊಬ್ಬ ಮಗುವಿನ ದಯಾ ಸ್ವರೂಪವನ್ನು ನೋಡಲು ಬಯಸುತ್ತಾರೆ. ತಮ್ಮ ಹದ್ದಿನ ಮಾತನ್ನು ಬಿಟ್ಟುಬಿಡಿ. ದಯಾಹೃದಯಿಗಳಾಗಿ ಮನಸ್ಸಾ ಸೇವೆಯಲ್ಲಿ ತೊಡಗಿರಿ. ಸಕಾಶ, ಶಾಂತಿ ಆಶ್ರಯ ನೀಡಿ. ದಯಾಹೃದಯಿಗಳಾಗಿ ಅನ್ಯರಿಗೆ ಆಶ್ರಯ ಕೊಡುವುದರಲ್ಲಿ ತತ್ಪರರಾಗಿದ್ದಾರೆ, ಹದ್ದಿನ ಆಕರ್ಷಣೆಗಳಿಂದ, ಹದ್ದಿನ ಮಾತುಗಳಿಂದ ಸ್ವಯಂ ದೂರವಾಗಿರುತ್ತೀರಿ. ಶ್ರಮ ಪಡುವುದರಿಂದ ಮುಕ್ತರಾಗುತ್ತೀರಿ. ವಾಣಿಯ ಸೇವೆಯಲ್ಲಿ ಬಹಳ ಸಮಯ ನೀಡಿದ್ದೀರಿ, ಸಮಯ ಸಫಲಗೊಳಿಸಿದ್ದಿರಿ, ಸಂದೇಶ ನೀಡಿದ್ದೀರಿ. ಆತ್ಮಗಳಿಗೆ ಸಂಬಂಧ-ಸಂಪರ್ಕದಲ್ಲಿ ತಂದಿದ್ದೀರಿ. ಏನು ನಾಟಕನುಸಾರ ಮಾಡಿದ್ದೀರಿ ಅದು ಬಹಳ ಚೆನ್ನಾಗಿ ಮಾಡಿದ್ದೀರಿ. ಆದರೆ ಈಗ ವಾಣಿಯ ಜೊತೆಗೆ ಮನಸ್ಸಾ ಸೇವೆಯ ಆವಶ್ಯಕತೆ ಬಹಳ ಇದೆ. ಮತ್ತು ಈ ಮನಸ್ಸಾ ಸೇವೆಯನ್ನು ಪ್ರತಿಯೊಬ್ಬ ಹೊಸ ಮಕ್ಕಳು, ಹಳೆಯ ಮಕ್ಕಳು, ಮಹಾರಥಿಗಳು, ಕುದರೆ ಸವಾರರು, ಕಾಲಾಳುಗಳು ಎಲ್ಲರೂ ಮಾಡಬಹುದಾಗಿದೆ. ಇದನ್ನು ದೊಡ್ಡವರು ಮಾಡುತ್ತಾರೆ, ನಾವಂತೂ ಚಿಕ್ಕವರು, ನಾವು ರೋಗಿಗಳು, ನಾವು ಸಾಧನೆವುಳ್ಳವರಲ್ಲ, ಇಂತಹ ಯಾವುದೇ ಆಧಾರ ಬೇಕಾಗಿಲ್ಲ. ಮನಸ್ಸಾ ಸೇವೆಯನ್ನು ಚಿಕ್ಕ-ಚಿಕ್ಕ ಮಕ್ಕಳೂ ಸಹ ಮಾಡಬಹುದಾಗಿದೆ. ಮಕ್ಕಳೇ ಮಾಡಬಹುದಲ್ಲವೇ? (ಹೌದು) ಮನಸ್ಸಾ ಸೇವೆಯನ್ನು ಮಾಡಬಹುದಲ್ಲವೇ. ಆದ್ದರಿಂದ ಈಗ ಮಾತು ಮತ್ತು ಮನಸ್ಸಾ ಸೇವೆಯ ಸಮತೋಲನ ಇರಲಿ ಮನಸ್ಸಾ ಸೇವೆ ಮಾಡುವವರಿಗೂ ಸಹ ಬಹಳ ಲಾಭವಿದೆ. ಏಕೆ? ಯಾವ ಅತ್ಮಗಳಿಗೆ ಮನಸ್ಸಾ ಸೇವೆ ಅರ್ಥಾತ್ ಸಂಕಲ್ಪದ ಮೂಲಕ ಶಕ್ತಿ ಮತ್ತು ಸಕಾಶವನ್ನು ಕೊಡುತ್ತೀರಿ ಆ ಆತ್ಮ ತಮಗೆ ಆಶೀರ್ವಾದ ನೀಡುತ್ತದೆ. ಹಾಗೂ ತಮ್ಮ ಖಾತೆಯಲ್ಲಿ ಸ್ವಯಂನ ಪುರುಷಾರ್ಥವಂತೂ ಇದ್ದೇ ಇದೆ. ಜೊತೆಗೆ ಆಶೀರ್ವಾದದ ಖಾತೆಯು ಜಮಾ ಆಗುತ್ತವೆ. ಇದರಿಂದ ತಮ್ಮ ಜಮಾದ ಖಾತೆ ಡಬಲ್ ರೀತಿಯಲ್ಲಿ ಹೆಚ್ಚುತ್ತಾ ಹೋಗುತ್ತದೆ. ಆದುದರಿಂದ ಹೊಸ ಮಕ್ಕಳೇ ಆಗಲಿ, ಹಳೆಯ ಮಕ್ಕಳೇ ಆಗಲಿ, ಏಕೆಂದರೆ ಬಹಳ ಹೊಸ ಮಕ್ಕಳೇ ಬಂದಿದ್ದೀರಲ್ಲವೇ! ಹೊಸ ಮಕ್ಕಳು ಯಾರು ಮೊದಲನೇ ಬಾರಿಗೆ ಬಂದಿದ್ದೀರಿ, ಅವರು ಕೈ ಎತ್ತಿರಿ. ಮೊದಲನೇ ಬಾರಿ ಬಂದಿರುವ ಮಕ್ಕಳೊಂದಿಗೂ ಸಹ ಬಾಪ್ದಾದಾ ಕೇಳುತ್ತಾರೆ. ತಾವು ಆತ್ಮಗಳು ಮನಸ್ಸು ಸೇವೆಯನ್ನು ಮಾಡಬಹುದಲ್ಲವೇ? (ಬಾಪ್ದಾದಾ ಪಾಂಡವರೊಂದಿಗೆ, ಮಾತೆಯರೊಂದಿಗೆ - ನಿಮಗೂ ಸಹ ಮನಸ್ಸಾ ಸೇವೆಯನ್ನು ಮಾಡಲು ಸಾಧ್ಯವಿದೆಯೇ?) ಎಲ್ಲರೂ ಬಹಳ ಚೆನ್ನಾಗಿ ಕೈ ಎತ್ತಿದ್ದೀರಿ. ಈಗ ಬಾಪ್ದಾದಾ ಟಿ.ವಿಯಲ್ಲಿ ನೋಡುತ್ತಿರುವವರಿಗೆ ಮತ್ತು ಸಮ್ಮುಖದಲ್ಲಿ ಕೇಳುತ್ತಿರುವವರಿಗೆ, ಎಲ್ಲಾ ಮಕ್ಕಳಿಗೂ ಜವಾಬ್ದಾರಿ ಕೊಡುತ್ತಾರೆ, ಏನೆಂದರೆ ಇಡೀ ದಿನದಲ್ಲಿ ಎಷ್ಟು ಗಂಟೆಗಳು ಮನಸ್ಸು ಸೇವೆಯನ್ನು ಯಥಾರ್ಥ ರೀತಿಯಿಂದ ಮಾಡಿದಿರಿ. ಕೇವಲ ಮಾಡಿದೆವೆಂದು ಹೇಳಬಾರದು. ಯಥಾರ್ಥ ರೂಪದಲ್ಲಿ ಎಷ್ಟು ಗಂಟೆಗಳು ಮನಸ್ಸಾ ಸೇವೆಯನ್ನು ಮಾಡಿದಿರಿ? ಇದರ ಚಾರ್ಟ್ನ್ನು ಪ್ರತಿಯೊಬ್ಬರೂ ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿದೆ. ನಂತರ ಬಾಪ್ದಾದಾ ಅಚಾನಕ ಚಾರ್ಟ್ ಕೇಳುತ್ತಾರೆ. ಇವರ ದಿನಾಂಕ ತಿಳಿಸುವುದಿಲ್ಲ. ಅಚಾನಕ ಕೇಳುತ್ತಾರೆ, ನೋಡೋಣ ಜವಾಬ್ದಾರಿಯ ಕಿರೀಟ ತೊಟ್ಟುಕೊಳ್ಳುವವರೋ ಅಥವಾ ಅಲುಗಾಡುತ್ತಿರುತ್ತದೆಯೋ? ಜವಾಬ್ದಾರಿಯ ಕಿರೀಟ ತೊಟ್ಟುಕೊಳ್ಳಬೇಕಲ್ಲವೇ! ಶಿಕ್ಷಕಿಯರು ಜವಾಬ್ದಾರಿಯ ಕಿರೀಟ ತೊಟ್ಟುಕೊಂಡಿದ್ದೀರಲ್ಲವೇ! ಈಗ ಅದರಲ್ಲಿ ಇದನ್ನು ಸೇರಿಸಿಕೊಳ್ಳಿ. ಸರಿಯಲ್ಲವೇ! ಡಬ್ಬಲ್ ವಿದೇಶದವರು ಕೈ ಎತ್ತಿ. ಈ ಜವಾಬ್ದಾರಿಯ ಕಿರೀಟ ಚೆನ್ನಾಗಿದೆಯಲ್ಲವೇ? ಆದ್ದರಿಂದ ಚಾರ್ಟ್ ಇಡುತ್ತೀರಲ್ಲವೇ? ಒಳ್ಳೆಯದು ಬಾಪ್ದಾದಾ ಆಚಾನಕ್ ಒಂದು ದಿವಸ ಕೇಳುತ್ತಾರೆ, ತಮ್ಮ ತಮ್ಮ ಚಾರ್ಟ್ ಬರೆದು ಕಳುಹಿಸಿ ಎಂದು, ನಂತರ ನೋಡುತ್ತಾರೆ. ಏಕೆಂದರೆ ವರ್ತಮಾನ ಸಮಯ ಬಹಳ ಅವಶ್ಯಕತೆ ಇದೆ. ತಮ್ಮದೇ ಪರಿವಾರದ ದುಃಖವನ್ನು ಈ ನೋಡುತ್ತಿದ್ದೀರಲ್ಲವೇ! ನೋಡಬಹುದಲ್ಲವೇ? ದುಃಖಿ ಆತ್ಮಗಳಿಗೆ ಆಶ್ರಯವನ್ನು ನೀಡಿ. ಒಂದು ಹನಿಗಾಗಿ ಬಾಯಾರಿದ್ದೇವೆ ನಾವು ಎಂದು ಯಾವ ಗೀತೆ ಇದೆ, ಅದರ ಅರ್ಥ ಈಗಿನ ಸಮಯದಲ್ಲಿ ಸುಖ, ಶಾಂತಿಯ ಒಂದು ಹನಿಗೋಸ್ಕರ ಆತ್ಮಗಳು ಬಾಯಾರಿದ್ದಾರೆ ಎಂದು. ಒಂದು ಸುಖ, ಶಾಂತಿಯ ಅಮೃತದ ಹನಿ ಸಿಗುವುದರಿಂದ ಖುಷಿಯಾಗುತ್ತಾರೆ. ಬಾಪ್ದಾದಾ ಪದೇ-ಪದೇ - ತಿಳಿಸುತ್ತಾರೆ ಸಮಯ ನಿಮ್ಮನ್ನು ಕಾಯುತ್ತಿದೆ. ಬ್ರಹ್ಮಾ ತಂದೆ ನಮ್ಮ ಮನೆಯ ಬಾಗಿಲು ತೆರೆಯಲು ಕಾಯುತ್ತಿದ್ದಾರೆ. ಪ್ರಕೃತಿ ತೀವ್ರಗತಿಯಿಂದ ಸ್ವಚ್ಚ ಮಾಡಲು ಕಾಯುತ್ತಿದೆ. ಹೇ! ಫರಿಸ್ತೆಗಳೇ ಈಗ ನಿಮ್ಮ ಡಬಲ್ ಲೈಟ್ನ ಮುಖಾಂತರ ಕಾಯುವುದನ್ನು ಸಮಾಪ್ತಿ ಮಾಡಿ. ಎವರ್ರೆಡಿ ಎನ್ನುವ ಶಬ್ದವನ್ನು ಎಲ್ಲರೂ ಹೇಳುತ್ತಾರೆ, ಆದರೆ ಸಂಪನ್ನ ಮತ್ತು ಸಂಪೂರ್ಣ ಆಗುವುದರಲ್ಲಿ ಎವರ್ರೆಡಿ ಆಗಿದ್ದೀರಾ? ಶರೀರವನ್ನು ಬಿಡುವುದರಲ್ಲಿ ಮಾತ್ರ ಎವರ್ರೆಡಿ ಆಗುವುದಿಲ್ಲ, ಆದರೆ ತಂದೆಯ ಸಮಾನವಾಗಿ ಹೋಗುವುದರಲ್ಲಿ ಎವರ್ರೆಡಿ ಆಗಬೇಕಾಗಿದೆ.
ಇಲ್ಲಿ ಮಧುಬನದಲ್ಲಿ ಎಲ್ಲರೂ ಮುಂದೆ, ಮುಂದುವರೆಯುತ್ತಾರೆ, ಒಳ್ಳೆಯದು. ಸೇವೆಯನ್ನು ಚೆನ್ನಾಗಿ ಮಾಡುತ್ತೀರಿ. ಮಧುಬನದವರು ಎವರ್ರೆಡಿ ಆಗಿದ್ದೀರಾ? ಮುಗುಳ್ನಗುತ್ತಿದ್ದರು, ಭಲೇ ಮೊದಲನೆಯ ಸಾಲಿನಲ್ಲಿ ಕುಳಿತಿರುವ ಮಹಾರಥಿಗಳೇ ಎವರ್ರೆಡಿ ಆಗಿದ್ದೀರಾ? ತಂದೆಯ ಸಮಾನವಾಗುವುದರಲ್ಲಿ ಎವರ್ರೆಡಿ ಆಗಿದ್ದೀರಾ? ಈ ರೀತಿ ತಿಳಿದರೆ ಅಡ್ವಾನ್ಸ್ ಪಾರ್ಟಿಯಲ್ಲಿ ಹೋಗುತ್ತೀರಿ. ಅಡ್ವಾನ್ಸ್ ಪಾರ್ಟಿ ಬಯಸದ್ದಿದ್ದರೂ ಹೆಚ್ಚುತ್ತದೆ. ಹಾಗಾದರೆ ಇದರಲ್ಲಿ ತತ್ಪರ (ಬಿಜಿ) ಆಗುತ್ತೀರಲ್ಲವೇ! ವಾಣಿ ಮತ್ತು ಮನಸ್ಸಾ ಸೇವೆಯಲ್ಲಿ ಸಮತೋಲನ ಇದ್ದರೆ ಆಶೀರ್ವಾದ ಸಿಗುತ್ತದೆ. ಡಬ್ಬಲ್ ಖಾತೆ ಜಮಾ ಆಗುತ್ತದೆ. ಪುರುಷಾರ್ಥ ಮತ್ತು ಆಶೀರ್ವಾದದ ಸಂಕಲ್ಪ, ಮಾತು, ವಾಣಿ, ಕರ್ಮ, ಸಂಬಂಧ ಮತ್ತು ಸಂಪರ್ಕದ ಮುಖಾಂತರ ಆಶೀರ್ವಾದ ನೀಡಿ ಮತ್ತು ಆಶೀರ್ವಾದ ಪಡೆಯಿರಿ. ಒಂದೇ ವಿಚಾರ ಇರಲಿ - ಆಶೀರ್ವಾದ ನೀಡುವುದು. ಭಲೆ ನಿಮಗೆ ಶಾಪವನ್ನು ಹಾಕಲಿ ಆದರೆ ಅವರಿಗೂ ಸಹ ಆಶೀರ್ವಾದವನ್ನೇ ನೀಡಿ. ಏಕೆಂದರೆ ನೀವು ಆಶೀರ್ವಾದದ ಸಾಗರನ ಮಕ್ಕಳು ಬೇರೆಯವರು ಮುನಿಸಿಕೊಂಡರೂ ಸಹ ನೀವು ಮುನಿಸಿಕೊಳ್ಳಬೇಡಿ. ನೀವು ರಹಸ್ಯ ಯುಕ್ತರಾಗಿರಲು ಸಾಧ್ಯವೇ? ಆಗುತ್ತದೆಯೇ? ಆಗುತ್ತದೆಯೇ? ಎರಡೆನೆಯ ಸಾಲಿನಲ್ಲಿ ಕುಳಿತಿರುವವರಿಗೆ ಆಗುತ್ತದೆಯೇ? ನೋಡುತ್ತೀರಿ ಈಗ ಇನ್ನು ಹೆಚ್ಚು ಬೇಜಾರು ಪಡೆಸುತ್ತಾರೆ! ಪರೀಕ್ಷೆಗಳು ಇನ್ನೂ ಅನೇಕ ಬರಲಿದೆ. ಮಾಯೆ ಕೇಳಿಸಿಕೊಳ್ಳುತ್ತಿದೆ! ಈಗ ಪತ್ರ ತೆಗೆದುಕೊಳ್ಳಿ. ದೃಢ ಸಂಕಲ್ಪ ಮಾಡಿ ನಾನು ಆಶೀರ್ವಾದವನ್ನೇ ನೀಡಿ ಮತ್ತು ಆಶೀರ್ವಾದವನ್ನೇ ಪಡೆಯಬೇಕಾಗಿದೆ ಆಗುತ್ತದೆಯೇ? ಮಾಯೆಯು ಭಲೆ ಬೇಜಾರು ಪಡೆಸಿದರೂ ನೀವು ರಹಸ್ಯಯುಕ್ತರಾಗಿರುತ್ತೀರಲ್ಲವೇ? ಬೇಜಾರಾಗಬಾರದು ಹಾಗೂ ಬೇರೆಯವರನ್ನು ಪಡೆಸಬಾರದು - ಇದು ಒಂದೇ ಕಾರ್ಯವನ್ನು ಮಾಡಿ. ಬೇರೆಯವರು ಭಲೆ ಬೇಜಾರಾದರೂ ತಾವು ಆಗಬಾರದು. ನಾವು ಬೇಜಾರು ಮಾಡದಿದ್ದರೂ ನಾವು ಬೇಜಾರು ಆಗಬಾರದು. ಪ್ರತಿಯೊಬ್ಬರು ಈ ಜವಾಬ್ದಾರಿ ತೆಗೆದುಕೊಳ್ಳಿ. ಬೇರೆಯವರನ್ನು ನೋಡಬೇಡಿ. ಅವರು ಮಾಡುತ್ತಾರೆ, ಇವರು ಮಾಡುತ್ತಾರೆ, ನಾವು ಸಾಕ್ಷಿಯಾಗಿದ್ದು ಆಟವನ್ನು ನೋಡಬೇಕಾಗಿದೆ. ಕೇವಲ ರಹಸ್ಯಯುಕ್ತ ಆಟವನ್ನೇ ನೋಡುತ್ತೀರಾ, ಬೇಜಾರು ಪಡೆಸುವಂತಹ ಆಟವನ್ನು ಮಧ್ಯ-ಮಧ್ಯ ನೋಡಿ, ಆದರೆ ಪ್ರತಿಯೊಬ್ಬರು ತಮಗೆ ತಾವೇ ರಾಜಿ ಮಾಡಿಕೊಳ್ಳಿ.
ಹೇ! ಮಾತೆಯರೇ ಆಗುತ್ತದೆಯೇ? ಪಾಂಡವರೇ ಆಗುತ್ತದೆಯೇ? ಬಾಪ್ದಾದಾ ನಕ್ಷೆಯನ್ನು ನೋಡುತ್ತಾರೆ. ಬಾಪ್ದಾದಾರವರ ಬಳಿ ತುಂಬಾ ದೊಡ್ಡದಾದ ಟಿ.ವಿ ಇದೆ. ಪ್ರತಿಯೊಬ್ಬರನ್ನು ನೋಡಬಹುದಾಗಿದೆ. ಯಾವುದೇ ಸಮಯದಲ್ಲಿ ಯಾರೇ ಆದರೂ ಏನೇ ಮಾಡುತ್ತಿದ್ದರೂ ಬಾಪ್ದಾದಾ ನೋಡುತ್ತಾರೆ. ಆದರೆ ಏನೇನು ಮಾಡುತ್ತೀರಿ ಅದನ್ನೂ ಸಹ ನೋಡುತ್ತಾರೆ. ಮಕ್ಕಳೂ ಸಹ ಬಹಳ ಬುದ್ಧಿವಂತಿಕೆಯನ್ನು ತೋರಿಸುತ್ತಾರೆ. ಒಂದುವೇಳೆ ನಿಮ್ಮ ಚಲಾಕಿತನವನ್ನು ಬಾಪ್ದಾದಾ ಹೇಳಿದರೆ ನೀವು ಕೇಳಿ ಸ್ವಲ್ಪ ಚಿಂತಿತರಾಗುತ್ತೀರಾ! ನಿಮ್ಮನ್ನು ಏಕೆ ಚಿಂತಿತಗೊಳಿಸಲಿ. ಆದರೆ ಬಹಳ ಬುದ್ಧಿವಂತಿಕೆಯಿಂದ ಮಾಡುತ್ತೀರಿ. ಒಂದುವೇಳೆ ಬುದ್ಧಿವಂತಿಕೆಯನ್ನು ನೋಡಬೇಕೆಂದರೆ ಬ್ರಾಹ್ಮಣರಲ್ಲಿಯೇ ನೋಡಿ. ಆದರೆ ಈಗ ಯಾವುದರಲ್ಲಿ ಬುದ್ಧಿವಂತರಾಗಬೇಕಾಗಿದೆ? ಮನಸ್ಸಾ ಸೇವೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಿರಿ. ಹಿಂದೆ ಬೀಳಬೇಡಿರಿ. ಇದಕ್ಕೆ - ಸಮಯ ಸಿಗುವುದಿಲ್ಲ, ಅವಕಾಶ ಸಿಗುವುದಿಲ್ಲ, ಆರೋಗ್ಯ ಸರಿಯಿರುವುದಿಲ್ಲ, ಯಾರೂ ಕೇಳಲೇಯಿಲ್ಲ, ಇತ್ಯಾದಿ ಯಾವ ನೆಪಹೇಳಬೇಡಿ, ಎಲ್ಲರೂ ಮಾಡಬೇಕಾಗಿದೆ. ಮಕ್ಕಳು ಓಡುವ ಆಟವನ್ನು ಆಡಿದ್ದೀರಲ್ಲವೇ! ಈಗ ಮನಸ್ಸಾ ಸೇವೆಯಲ್ಲಿ ಓಡಬೇಕಾಗಿದೆ. ಒಳ್ಳೆಯದು.
ಕರ್ನಾಟಕದ ಸೇವಾಧಾರಿಯೊಂದಿಗೆ: ಕರ್ನಾಟಕದವರು ಯಾರು ಸೇವೆಯಲ್ಲಿ ಬಂದಿದ್ದೀರಿ ಎದ್ದು ನಿಲ್ಲಿರಿ. ಇಷ್ಟೊಂದು ಜನರು ಸೇವೆಯಲ್ಲಿ ಬಂದಿದ್ದೀರಾ, ಪಾರ್ಟಿಯಲ್ಲಿ ಬಂದಿರುವವರಲ್ಲ, ಸೇವಾಧಾರಿಯಾಗಿ ಬಂದಿರುವವರು. ಒಳ್ಳೆಯದು, ಇದೂ ಸಹ ಸಹಜವಾಗಿ ಶ್ರೇಷ್ಠ ಪುಣ್ಯವನ್ನು ಜಮಾ ಮಾಡಿಕೊಳ್ಳುವ ಸುವರ್ಣವಕಾಶ ಸಿಕ್ಕಿದೆ. ಭಕ್ತಿಯಲ್ಲಿ ಹೇಳಲಾಗುತ್ತದೆ, ಒಬ್ಬ ಬ್ರಾಹ್ಮಣರ ಸೇವೆಯನ್ನು ಮಾಡುವುದರಿಂದ ಬಹಳ ಪುಣ್ಯ ಪ್ರಾಪ್ತಿಯಾಗುತ್ತದೆ. ಇಲ್ಲಿ ಎಷ್ಟೊಂದು ಶ್ರೇಷ್ಠ ಸತ್ಯ ಬ್ರಾಹ್ಮಣರ ಸೇವೆಯನ್ನು ಮಾಡುತ್ತೀರಿ. ಇಂತಹ ಒಳ್ಳೆಯ ಚಾನ್ಸ್ ಸಿಗುತ್ತದೆಯಲ್ಲವೇ! ಚೆನ್ನಾಗಿದೆಯೇ, ಧಣಿವಾಯಿತೇ? ಧಣಿವಾಗಲಿಲ್ಲವೇ! ಮಜಾ ಇದೆಯೇ! ಒಂದುವೇಳೆ ಸತ್ಯ ಹೃದಯದಿಂದ ಪುಣ್ಯ ಎಂದು ತಿಳಿದು ಸೇವೆ ಮಾಡಿದರೆ ಅದರ ಪ್ರತ್ಯೇಕ ಫಲ ಧಣಿವಾಗುವುದಿಲ್ಲ, ಖುಷಿಯಾಗುತ್ತದೆ. ಈ ಪ್ರತ್ಯೇಕ ಫಲ ಪುಣ್ಯದ ಜಮಾದ ಅನುಭವ ಮಾಡಿಸುತ್ತದೆ. ಆದರೆ ಸ್ವಲ್ಪವೂ ಯಾವುದೇ ಕಾರಣದಿಂದ ಸುಸ್ತಾದರೇ ಅಥವಾ ಸ್ವಲ್ಪ ಮಾತ್ರವೂ ಅನುಭವಾದರೆ ತಿಳಿದುಕೊಳ್ಳಿ, ಸತ್ಯಹೃದಯದಿಂದ ಸೇವೆ ಮಾಡಲಿಲ್ಲ. ಸೇವೆಯೆಂದರೆ ಪ್ರತ್ಯೇಕ ಫಲ - ಮೇವಾ. ಸೇವೆ ಮಾಡುವುದಿಲ್ಲ ಆದರೆ ಫಲ ತಿನ್ನುತ್ತಾರೆ. ಆದರೆ ಕರ್ನಾಟಕದ ಸರ್ವ ಸೇವಾಧಾರಿಗಳು ತಮ್ಮ ಒಳ್ಳೆಯ ಸೇವೆಯ ಪಾತ್ರ ಮಾಡಿದಿರಿ. ಹಾಗೂ ಸೇವೆಯ ಫಲವನ್ನು ತಿಂದಿರಿ.
ಒಳ್ಳೆಯದು ಎಲ್ಲಾ ಶಿಕ್ಷಕಿಯರು ಚೆನ್ನಾಗಿದ್ದೀರಾ? ಶಿಕ್ಷಕಿಯರಿಗಂತೂ ಅನೇಕ ಬಾರಿ ತಂದೆಯ ಮಿಲನದ ಅವಕಾಶ ಸಿಗುತ್ತದೆ. ಇದೂ ಸಹ ಭಾಗ್ಯದ ಗುರುತಾಗಿದೆ. ಈಗ ಶಿಕ್ಷಕಿಯರು ಮನಸ್ಸಾ ಸೇವೆಯಲ್ಲಿ ರೇಸ್ ಮಾಡಬೇಕಾಗಿದೆ. ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಇಡೀ ದಿವಸ ಅದರಲ್ಲೇ ಕುಳಿತುಬಿಡುವುದಿಲ್ಲ. ಯಾರಾದರು ಕೋರ್ಸ್ಗೆ ಬಂದಾಗ ನಾನು ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಕಳುಹಿಸಿಬೇಡಿರಿ. ಏನಾದರೂ ಕರ್ಮಯೋಗದ ಸಮಯ ಬಂದಾಗ ನಾನು ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಹೇಳುವುದು ಸರಿಯಲ್ಲ. ಸಮತೋಲನ ಇರಬೇಕು. ಕೆಲವರಿಗೆ ಹೆಚ್ಚು ನಶೆ ಏರಿಬಿಡುತ್ತದೆಯಲ್ಲವೇ! ಈ ರೀತಿಯ ನಶೆಯನ್ನು ಏರಿಸಿಕೊಳ್ಳಬಾರದು. ಸಮತೋಲನದಲ್ಲಿ ಆಶೀರ್ವಾದ ಇದೆ. ಸಮತೋಲನೆ ಇಲ್ಲವೆಂದರೆ ಆಶೀರ್ವಾದ ಇಲ್ಲ. ಒಳ್ಳೆಯದು.
ಈಗ ಒಂದು ಸೆಕೆಂಡಿನಲ್ಲಿ ಎಲ್ಲರೂ ಮನಸ್ಸಾ ಸೇವೆಯ ಅನುಭವವನ್ನು ಮಾಡಿ. ಆತ್ಮಗಳಿಗೆ ಶಾಂತಿ ಮತ್ತು ಶಕ್ತಿಯ ದಾನವನ್ನು ನೀಡಿ. ಒಳ್ಳೆಯದು ನಾಲ್ಕೂ ಕಡೆಯ ಸರ್ವ ಶ್ರೇಷ್ಠ ಆತ್ಮೀಯತೆಯ ಅನುಭವ ಮಾಡಿಸುವಂತಹ ಆತ್ಮಗಳಿಗೆ, ಸರ್ವ ಸಂಕಲ್ಪ ಮತ್ತು ಸ್ನೇಹದಲ್ಲಿಯೂ ಸಹ ಪವಿತ್ರತೆಯ ಪಾಠವನ್ನು ಕಲಿಯುವಂತಹ ಬ್ರಹ್ಮಾಚಾರಿ ಮಕ್ಕಳಿಗೆ, ಎಲ್ಲಾ ದೃಢ ಸಂಕಲ್ಪಧಾರಿ, ಮನಸ್ಸಾ ಸೇವಾಧಾರಿ, ತೀವ್ರ ಪುರುಷಾರ್ಥಿ ಆತ್ಮಗಳಿಗೆ, ಸದಾ ಆಶೀರ್ವಾದವನ್ನು ನೀಡಿ ಮತ್ತು ಆಶೀರ್ವಾದವನ್ನು ಪಡೆಯುವಂತಹ ಪುಣ್ಯ ಆತ್ಮಗಳಿಗೆ ಬಾಪ್ದಾದಾರವರ ಹೃದಯರಾಮ ತಂದೆಯ ಅತೀ ಪ್ರೀತಿಯ ನೆನಪು ಪ್ರೀತಿ ಹಾಗೂ ನಮಸ್ತೆ.
ದಾದೀಜಿ, ಜಾನಕಿ ದಾದೀಜಿಯವರೊಂದಿಗೆ ವ್ಯಕ್ತಿಗತ ಮಿಲನ:- ಬಾಪ್ದಾದಾ ತ್ರಿಮೂರ್ತಿ ಬ್ರಹ್ಮನ ದೃಶ್ಯವನ್ನು ತೋರಿಸಿದರು. ನೀವೆಲ್ಲರೂ ನೋಡಿದಿರಲ್ಲವೇ? ಏಕೆಂದರೆ ತಂದೆ ಸಮಾನ ತಂದೆಯ ಪ್ರತಿ ಕಾರ್ಯದಲ್ಲಿ ಜೊತೆಗಾರರಲ್ಲವೇ! ಆದುದರಿಂದ ಈ ದೃಶ್ಯವನ್ನು ತೋರಿಸಲಾಯಿತು. ಬಾಪ್ದಾದಾ ನೀವಿಬ್ಬರಿಗೂ ವಿಶೇಷ ಶಕ್ತಿಗಳನ್ನು ವಿಲ್ ಮಾಡಿದ್ದಾರೆ. ವಿಲ್ ಪವರ್ನ್ನೂ ಸಹ ಕೊಟ್ಟಿದ್ದಾರೆ ಹಾಗೂ ಎಲ್ಲಾ ಶಕ್ತಿಗಳನ್ನು ವಿಲ್ ಮಾಡಿದ್ದೇವೆ ಆದುದರಿಂದ ಆ ಎಲ್ಲಾ ಶಕ್ತಿಗಳು ತಮ್ಮ ಕೆಲಸವನ್ನು ಮಾಡುತ್ತಿವೆ. ಮಾಡಿ ಮಾಡಿಸುವವರು ಮಾಡಿಸುತ್ತಿದ್ದಾರೆ ಹಾಗೂ ನಿಮಿತ್ತರಾಗಿ ಮಾಡುತ್ತಿದ್ದೀರಿ ಆ ಈ ರೀತಿ ಮಾಡಲು ಮಜಾ ಅನಿಸುತ್ತದೆಯಲ್ಲವೇ! ಮಾಡಿ ಮಾಡಿಸುವವರ ಮಾಡಿಸುತ್ತಿದ್ದಾರೆ. ಆದುದರಿಂದ ಮಾಡಿ ಮಾಡಿಸುವವರು ಮಾಡಿಸುತ್ತಿರುವ ಕಾರಣ ನೀವು ನಿಶ್ಚಿಂತರಾಗಿ ಮಾಡುತ್ತಿದ್ದೀರಿ. ಚಿಂತೆ ಇರುವುದಿಲ್ಲವಲ್ಲವೇ! - ನೀವು ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ. ಮಾಸ್ಟರ್ ಡಿಗ್ರಿಯನ್ನು ಆರ್ಥಾತ್ - ತಂದೆ ಸಮಾನ ಸ್ಥಾನವನ್ನು ಪಾಸ್ ಮಾಡಿದ್ದೀರಿ, ಕೇವಲ ಈಗ ಪುನರಾವರ್ತನೆ ಮಾಡಬೇಕು. ಪುನರಾವರ್ತನೆ ಮಾಡುವಾಗ ಕಷ್ಟವಾಗುವುದಿಲ್ಲ. ಇಲ್ಲವಾದರೆ ಮಾಸ್ಟರ್ ಡಿಗ್ರಿಯನ್ನು ಯಾರು ತೆಗೆದುಕೊಳ್ಳುತ್ತಿದ್ದರು! ಬೇರೆ ಮಾಸ್ಟರ್ ಡಿಗ್ರಿ ತೆಗೆದುಕೊಳ್ಳುವವರೂ ಸಹ ನಿಮ್ಮ ಜೊತೆಗಾರರಾಗಿರುತ್ತಾರೆ. ಜೊತಗಾರರೂ ಬೇಕಲ್ಲವೇ! ಆದರೆ ಆಗಲೇಬೇಕಾಗಿದೆ. ಅರ್ಥಾತ್ ನೀವು ತೇರ್ಗಡೆ ಆಗಿಯೇ ಇದ್ದೀರಿ. ತೇರ್ಗಡೆ ಆಗಿಲ್ಲವೇ! ಎಷ್ಟೊಂದು ಸಾರಿ ತೇರ್ಗಡೆ ಆಗಿದ್ದೀರಿ.....! ಎಷ್ಟೊಂದು ಸಾರಿ ತೇರ್ಗಡೆ ಆಗಿದ್ದೀರಿ.....! (ಅನೇಕ ಸಾರಿ) ಅನೇಕ ಸಾರಿ ಮಾಡಿರುವ ಕಾರಣ ಅದು ಆಗಿಯೇ ಇದೆ. ಒಳ್ಳೆಯದು. ಆರೋಗ್ಯವನ್ನು ಕುರಿತು ಜ್ಞಾನಪೂರ್ಣರಾಗಿರಬೇಕು. ಸ್ವಲ್ಪ ಏರು-ಪೇರು ಆಗುತ್ತದೆ. ಇದರಲ್ಲಿಯೂ ನಾಲೆಡ್ಜ್ಫುಲ್ ಆಗಬೇಕಾಗುತ್ತದೆ. ಏಕೆಂದರೆ ಇನ್ನೂ ಬಹಳ ಸೇವೆ ಮಾಡಬೇಕಾಗಿದೆ. ಹೀಗೆ ಆರೋಗ್ಯವೂ ಸಹಯೋಗ ಕೊಡುತ್ತದೆ. ಈ ರೀತಿ ಡಬಲ್ ನಾಲೆಡ್ಜ್ಫುಲ್ ಆಗಿದ್ದೀರಿ. ಒಳ್ಳೆಯದು.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಿದ್ದಾರೆ, ಓದಿಸುತ್ತಲೂ ಇದ್ದಾರೆ. ಏನು ತಿಳಿಸುತ್ತಿದ್ದಾರೆ? ಮಧುರ ಮಕ್ಕಳೇ ನಿಮಗೆ ಮೊದಲನೆಯದಾಗಿ ಧೀರ್ಘಾಯಷ್ಯ ಬೇಕು ಏಕೆಂದರೆ ನಿಮ ಅಯುಷ್ಯ ಬಹಳ ದೀರ್ಘವಾಗಿತ್ತು, 150 ವರ್ಷ ಅಯಷ್ಯವಿತ್ತು, ದೀರ್ಘಾಯಸ್ಸು ಹೇಗೆ ಸಿಗುತ್ತದೆ? ತಮೊಪ್ರಧಾನದಿಂದ ಸತೋಪ್ರಧಾನರಾಗುವುದರಿಂದ, ಯಾವಗ ನೀವು ಸತೋಪ್ರಧಾನರಾಗಿದ್ದಿರೋ ಆಗ ನಿಮ್ಮದು ಬಹಳ ದಿರ್ಘಾಯಸ್ಸಾಗಿತ್ತು, ಈಗ ನೀವು ಮೇಲೇರುತಿದ್ದೀರಿ. ನಿಮಗೆ ಗೊತ್ತಿದೆ, ನಾವು ತಮೋಪ್ರಧಾನರಾಗಿದ್ದರಿಂದ ನಮ ಆಯಸ್ಸು ಚಿಕ್ಕದಾಗಿಬಿಟ್ಟಿತು. ಆರೊಗ್ಯವು ಸರಿಯಿರಲಿಲ್ಲ, ಸಂಪೂರ್ಣ ರೊಗಿಗಳಾಗಿದ್ದೆವು. ಈ ಜೀವನ ಹಳೆಯದಾಗಿದೆ, ಹೊಸದರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಈಗ ನಿಮಗೆ ತಿಳಿದಿದೆ-ತಂದೆಯು ನಿಮಗೆ ಆಯಸ್ಸು ದೀರ್ಘವನ್ನಾಗಿ ಮಾಡಿಕೊಳ್ಳುವ ಯುಕ್ತಿಯನ್ನು ತಿಳಿಸುತ್ತಾರೆ. ಮಧುರಾತಿ ಮಧುರ ಮಕ್ಕಳೆ, ನನ್ನನ್ನು ನೆನಪು ಮಾಡುವಿರೆಂದರೆ ನೀವು ಮೊದಲು ಹೇಗೆ ಸತೋಪ್ರಧಾನರಾಗಿದ್ದಿರಿ, ದೀರ್ಘಾಯಸ್ಸುಳ್ಳವರು, ಆರೋಗ್ಯವಂತರಾಗಿದ್ದಿರೋ ಅದೇ ರೀತಿ ಪುನಃ ಆಗಿಬಿಡುವಿರಿ, ಕಡಿಮೆ ಆಯಿಸ್ಸಿದ್ದರೆ ಸಾಯುವ ಭಯವಿರುತ್ತದೆ. ನಿಮಗಂತೂ ಗ್ಯಾರಂಟಿ ಸಿಗುತ್ತದೆ - ಸತ್ಯಯುಗದಲ್ಲಿ ಹೀಗೆ ಅಕಸ್ಮಿಕವಾಗಿ ಎಂದೂ ಸಾಯುವುದಿಲ್ಲ ತಂದೆಯನ್ನು ನೆನಪು ಮಾಡುತಿದ್ದರೆ ದಿರ್ಘಾಯುಸ್ಸುವಾಗುತ್ತೇವೆ ಮತ್ತು ಎಲ್ಲ ದುಃಖಗಳು ದೂರವಾಗಿಬಿಡುತ್ತದೆ. ಯಾವುದೇ ಪ್ರಕಾರದ ದುಃಖವಿರುವದಿಲ್ಲ. ಅಂದ ಮೇಲೆ ನಿಮಗೆ ಇನ್ನೇನು ಬೇಕು. ಶ್ರೇಷ್ಠ ಪದವಿಯು ಬೇಕೆಂದು ನೀವು ಹೆಳುತ್ತೀರಿ. ಇಂತಹ ಪದವಿಯು ಸಿಗುತ್ತದೆಂದು ನಿಮಗೆ ತಿಳಿದಿರಲಿಲ್ಲ. ಈಗ ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ- ಮಕ್ಕಳೇ, ಈ ರೀತಿ ಮಾಡಿ ಎಂದು, ಗುರಿ ಉದ್ದೇಶವು ಸನ್ಮುಖದಲ್ಲಿದೆ. ನೀವು ಇಂತಹ ಪದವಿಯನ್ನು ಪಡೆಯುತ್ತಿದ್ದೀರಿ, ಇಲ್ಲಿಯೇ ದೈವಿ ಗುಣಗಳನ್ನು ಧಾರಣೆ ಮಾಡಬೇಕಾಗಿದೆ, ತಮ್ಮನ್ನು ಕೇಳಿಕೊಳ್ಳಬೇಕು- ನಮ್ಮಲ್ಲಿ ಯಾವುದೇ ಆವಗುಣಗಳಿಲ್ಲವೆ? ಅವಗುಣಗಳು ಅನೇಕ ಪ್ರಕಾರವಾಗಿವೆ. ಸಿಗರೇಟ್ ಸೇದುವುದು, ಕೊಳಕು ಪದಾರ್ಥಗಳನ್ನು ತಿನ್ನುವದು ಇದು ಅವಗುಣವಾಗಿದೆ. ಎಲ್ಲಕ್ಕಿಂತ ದೊಡ್ದ ಆವಗುಣವು ವಿಕಾರದ್ದಾಗಿದೆ. ಇದಕ್ಕೆ ಕೆಟ್ಟಚಾರಿತ್ರ್ಯವೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ವಿಕಾರಿಗಳಾಗಿಬಿಟ್ಟದ್ದೀರಿ, ಈಗ ನಿಮಗೆ ನಿರ್ವಿಕಾರಿಗಳಾಗುವ ಯುಕ್ತಿಯನ್ನು ತಿಳಿಸುತ್ತೇನೆ ಇದರಲ್ಲಿ ಈ ವಿಕಾರಗಳನ್ನು, ಅವಗುಣಗಳನ್ನು ತೆಗೆದು ಬಿಡಬೇಕಾಗಿದೆ. ಎಂದೂ ವಿಕಾರಿಗಳಾಗಬಾರದು. ಈ ಜನ್ಮದಲ್ಲಿ ಯಾರು ಸುಧಾರಣೆ ಯಾಗುವರೊ ಆ ಸುಧಾರಣೆಯು 21 ಜನ್ಮಗಳವರಗೆ ನಡೆಯುತ್ತದೆ. ಎಲ್ಲದಕ್ಕಿಂತ ಅವಶ್ಯಕ ಮಾತೆಂದರೆ ನಿರ್ವಿಕಾರಿಯಾಗುವುದು, ಜನ್ಮ-ಜನ್ಮಾಂತರದ ಹೊರೆಯು ಯಾವುದು ತಲೆಯ ಮೇಲೆ ಏರಿದೆಯೊ ಅದು ಯೋಗಬಲದಿಂದಲೇ ಇಳಿಯುತ್ತದೆ. ಮಕ್ಕಳಿಗೂ ಗೊತ್ತಿದೆ - ನಾವು ಜನ್ಮಜನ್ಮಾಂತರದಿಂದ ವಿಕಾರಿಗಳಗಿದ್ದೆವು, ಈಗ ತಂದೆಯೊಂದಿಗೆ ನಾವು ಪ್ರತಿಜ್ಞೆ ಮಾಡುತ್ತೇವೆ-ಮತ್ತೆಂದೂ ವಿಕಾರಿಗಳಾಗುವದಿಲ್ಲ. ತಂದೆಯು ಹೆಳಿದ್ದಾರೆ- ಒಂದು ವೇಳೆ ಪತಿತರಾದರೆ ಒಂದಕ್ಕೆ ನೂರರಷ್ಟು ಶಿಕ್ಷೆಯನ್ನು ಅನುಭವಿಸಬೇಕಾಗುವುದು, ಪದವಿಯೂ ಭ್ರಷ್ಟವಾಗುವುದು ಏಕೆಂದರೆ ನಿಂದನೆ ಮಾಡಿಸಿದಿರಲ್ಲವೆ! ಆಂದರೆ ಆಕಡೆ (ವಿಕಾರಿ ಮನುಷ್ಯರ ಕಡೆ) ಹೋದಿರಿ ಎಂದರ್ಥ. ಹೀಗೆ ಅನೇಕರು ಹೊರಟು ಹೋಗುತ್ತಾರೆ ಅಂದರೆ ಸೋತುಹೋಗುತ್ತಾರೆ ಈ ವಿಕಾರದ ವ್ಯಾವಹಾರವನ್ನು ಮಾಡಬಾರದೆಂದು ನಿಮಗೆ ಮೊದಲು ತಿಳಿದಿರಲಿಲ್ಲ. ಕೆಲ ಕೆಲವರು ಒಳ್ಳೆಯ ಮಕ್ಕಳಿರುತ್ತಾರೆ. ನಾವು ಬ್ರಹ್ಮಚರ್ಯದಲ್ಲಿರುತ್ತೇವೆಂದು ಹೇಳುತ್ತಾರೆ. ಸನ್ಯಾಸಿಗಳನ್ನು ನೋಡಿ ಪವಿತ್ರತೆಯು ಒಳ್ಳೆಯದೆಂದು ತಿಳಿಯುತ್ತಾರೆ. ಪವಿತ್ರರು ಮತ್ತು ಅಪವಿತ್ರರು, ಪ್ರಪಂಚದಲ್ಲಿ ಅಪವಿತ್ರರು ಬಹಳ ಇದ್ದಾರೆ. ಪಾಯಖಾನೆಗೆ ಹೋಗುವುದೂ ಸಹ ಒಂದು ರೀತಿಯ ಅಪವಿತ್ರತೆ ಆದ್ದರಿಂದ ತಕ್ಷಣ ಸ್ನಾನ ಮಾಡಬೇಕು. ಅಪವಿತ್ರತೆ ಅನೇಕ ಪ್ರಕಾರದಿರುತ್ತದೆ. ಅನ್ಯರಿಗೆ ದುಃಖ ಕೊಡುವುದು, ಹೊಡೆಯುವುದು-ಜಗಳವಾಡುವುದು ಅಪವಿತ್ರ ಕರ್ತವ್ಯವಾಗಿದೆ. ತಂದೆ ಹೇಳುತ್ತಾರೆ ಜನ್ಮ-ಜನ್ಮಾಂತರದಿಂದಲೂ ನೀವು ಪಾಪ ಮಾಡಿದ್ದೀರಿ. ಅವೆಲ್ಲ ಹವ್ಯಾಸಗಳು ಈಗ ತೆಗೆಯಬೇಕು. ಈಗ ನೀವು ಸತ್ಯ ಸತ್ಯ ಮಾಹನ್ ಆತ್ಮರಾಗಬೇಕು. ಸತ್ಯ-ಸತ್ಯ ಮಹಾನ್ ಆತ್ಮರಂತೂ ಲಕ್ಷೀ ನಾರಾಯಣರಾಗಿದ್ದಾರೆ. ಮತ್ಯಾರೂ ಇಲ್ಲಿ ಆಗಲು ಸಾಧ್ಯವಿಲ್ಲ. ಏಕೆಂದರೆ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಬಹಳ ನಿಂದನೆಯನ್ನು ಮಾಡುತ್ತಾರಲ್ಲವೆ! ನಾವೇನು ಮಾಡುತ್ತೇವೆಂದು ಅವರಿಗೆ ತಿಳಿಯುವುದೇ ಇಲ್ಲ. ಒಂದು ಗುಪ್ತ ಪಾಪವಾಗಿದೆ. ಇನ್ನೊಂದು ಪ್ರತ್ಯಕ್ಷ ಪಾಪವಾಗಿದೆ. ಇದು ತಮೋಪ್ರಧಾನ ಪ್ರಪಂಚವಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆ ನಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತಾರೆ ಆದ್ದರಿಂದ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ. ಎಲ್ಲರಿಗಿಂತ ಒಳ್ಳೆಯ ತಿಳುವಳಿಕೆ ನಿಮಗೆ ಸಿಕ್ಕಿದೆ. ಪಾವನರಾಗಬೇಕು ಮತ್ತು ಗುಣಗಳೂ ಬೇಕು. ದೇವತೆಗಳ ಮುಂದೆ ನೀವು ಮಹಿಮೆ ಮಾಡುತ್ತಾ ಬಂದಿದ್ದೀರಿ. ಈಗ ನೀವು ಅವರಂತೆ ಆಗಬೇಕು. ಮಧುರಾತಿ ಮಧುರ ಮಕ್ಕಳೇ ನೀವು ಎಷ್ಟೊಂದು ಮಧುರ ಹೂಗಳಾಗಿದ್ದಿರಿ. ನಂತರ ಮುಳ್ಳುಗಳಾದಿರಿ. ಈಗ ತಂದೆಯನ್ನು ನೆನಪು ಮಾಡಿರಿ, ಆ ನೆನಪಿನಿಂದ ನಿಮ್ಮದು ದೀರ್ಘಾಯುಸ್ಸಾಗುತ್ತದೆ, ಪಾಪಗಳೂ ಭಸ್ಮವಾಗುತ್ತದೆ. ತಲೆಯ ಮೇಲಿರುವ ಹೊರೆಯು ಹಗುರವಾಗುತ್ತದೆ. ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಏನೇನು ಅವಗುಣಗಳಿವೆಯೋ ಅವನ್ನು ತೆಗೆಯ ಬೇಕು. ಹೇಗೆ ನಾರದನ ಉದಾಹರಣೆಯಿದೆ, ನೀನು ಯೋಗ್ಯನಾಗಿರುವೆಯಾ ಎಂದು ಕೇಳಿದರು ಆಗ ನಾರದರು ಮುಖವನ್ನು ನೋಡಿಕೊಂಡಾಗ ನಾನು ಅವಶ್ಯ ಯೋಗ್ಯನಿಲ್ಲ ಎಂದು ತಿಳಿಯಿತು. ತಂದೆಗೆ ನೀವು ಮಕ್ಕಳಾಗಿದ್ದೀರಿ ಅಲ್ಲವೆ, ತಂದೆ ರಾಜನಾಗಿದ್ದರೆ ಮಕ್ಕಳು ನಶೆಯಿಂದ ಹೇಳಿಕೊಳ್ಳುತ್ತಾರಲ್ಲವೆ. ತಂದೆಯು ಬಹಳ ಸುಖ ನೀಡುವವರಾಗಿದ್ದಾರೆ. ಯಾರು ಒಳ್ಳೆಯ ಸ್ವಭಾವದ ಮಹಾರಾಜರಿರುತ್ತಾರೆ ಅವರಿಗೆ ಎಂದೂ ಕ್ರೋಧ ಬರುವುದಿಲ್ಲ. ಈಗಂತೂ ಇಳಿಯುತ್ತಾ ಹೋದಂತೆ ಎಲ್ಲರ ಕಲೆಗಳು ನಿಧಾನ ನಿಧಾನವಾಗಿ ಕಡಿಮೆಯಾಗಿವೆ. ಎಲ್ಲ ಅವಗುಣಗಳು ಪ್ರವೇಶವಾಗಿವೆ, ಕಲೆಗಳೂ ಕಡಿಮೆಯಾಗಿವೆ. ತಮೋ ಆಗುತ್ತ ಹೋಗಿದ್ದಾರೆ. ತಮೋಪ್ರಧಾನತೆಯೂ ಸಹ ಅಂತ್ಯವನ್ನು ತಲುಪಿದೆ. ಎಷ್ಟೊಂದು ದುಃಖಿಯಾಗಿದ್ದಾರೆ. ನೀವು ಎಷ್ಟೊಂದು ಸಹನೆ ಮಾಡಬೇಕಾಗುತ್ತದೆ. ಈಗ ಅವಿನಾಶಿ ಸರ್ಜನ್ ಮೂಲಕ ನಿಮ್ಮ ಚಿಕಿತ್ಸೆಯಾಗುತ್ತಿದೆ. ತಂದೆ ತಿಳಿಸುತ್ತಾರೆ - ಮಕ್ಕಳೇ, ಈ ಪಂಚ ವಿಕಾರಗಳಂತೂ ಪದೇ ಪದೇ ನಿಮ್ಮನ್ನು ಸತಾಯಿಸುತ್ತವೆ. ನೀವು ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಮಾಯೆ ನಿಮ್ಮನ್ನು ಕೆಳಗಿಳಿಸುವ ಪ್ರಯತ್ನ ಮಾಡುತ್ತದೆ. ನಿಮ್ಮ ಸ್ಥಿತಿ ಇನ್ನೂ ಶಕ್ತಿಶಾಲಿಯಾಗಬೇಕು, ಯಾವ ಮಾಯೆಯ ಬಿರುಗಾಳಿ ಅಲುಗಾಡಿಸಲು ಸಾಧ್ಯವಾಗಿರಬಾರದು. ರಾವಣನು ಯಾವುದೇ ವಸ್ತುವಲ್ಲ, ಅಥವಾ ಯಾವ ಮನುಷ್ಯನಲ್ಲ, ಪಂಚ ವಿಕಾರರೂಪಿ ರಾವಣನಿಗೆ ಮಾಯೆಯೆಂದು ಹೇಳುತ್ತಾರೆ. ಆಸುರೀ ರಾವಣ ಸಂಪ್ರದಾಯದವರು ನಿಮ್ಮನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ. ಕೊನೆಗೂ ಇವರು ಯಾರು? ಈ ಬ್ರಹ್ಮಾ ಕುಮಾರ-ಕುಮಾರಿಯರು ಏನು ಹೇಳುತ್ತಾರೆ? ಸ್ಪಷ್ಟ ರೀತಿಯಲ್ಲಿ ಯಾರೂ ತಿಳಿದುಕೊಂಡಿಲ್ಲ, ಇವರು ಬಿ.ಕೆ.ಗಳೆಂದು ಏಕೆ ಕರೆಸಿಕೊಳ್ಳುತ್ತಾರೆ, ಬ್ರಹ್ಮಾರವರು ಯಾರ ಸಂತಾನರಾಗಿದ್ದಾರೆ. ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ, ನಾವು ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈಗ ತಂದೆಯು ಕುಳಿತು ನೀವು ಮಕ್ಕಳಿಗೆ ಶಿಕ್ಷಣ ಕೊಡುತ್ತಾರೆ ಆಯುಷ್ಯವಾನ್ ಭವ, ಧನ್ವಾನ್ ಭವ..... ನಿಮ್ಮ ಎಲ್ಲಾ ಕಾಮನೆಗಳನ್ನು ಪೂರ್ಣಮಾಡುತ್ತಾರೆ ವರದಾನ ಕೊಡುತ್ತಾರೆ. ಆದರೆ ಕೇವಲ ವರದಾನದಿಂದ ಏನೂ ಕೆಲಸವಾಗುವುದಿಲ್ಲ. ಶ್ರಮಪಡಬೇಕಾಗುತ್ತದೆ. ಪ್ರತಿಯೊಂದು ಮಾತು ಅರಿತುಕೊಳ್ಳುವುದಾಗಿದೆ. ತಮಗೆ ರಾಜತಿಲಕ ಕೊಟ್ಟುಕೊಳ್ಳಲು ಅಧಿಕಾರಿಗಳಾಗಬೇಕಾಗಿದೆ. ತಂದೆಯು ಅಧಿಕಾರಿಗಳನ್ನಾಗಿ ಮಾಡುತ್ತಾರೆ. ಮಕ್ಕಳೇ ಹೀಗೆ ಹೀಗೆ ಮಾಡಿರಿ ಎಂದು ನೀವು ಮಕ್ಕಳಿಗೆ ಶಿಕ್ಷಣ ಕೊಡುತ್ತಾರೆ. ಮೊಟ್ಟ ಮೊದಲಿನ ಶಿಕ್ಷಣ ಆಗಿದೆ - ನನ್ನೊಬ್ಬನನ್ನು ನೆನಪು ಮಾಡಿ, ಮನುಷ್ಯರು ನೆನಪು ಮಾಡುವುದೇ ಇಲ್ಲ ಏಕೆಂದರೆ ಅವರಿಗೆ ಗೊತ್ತೇ ಇಲ್ಲ ಆದ್ದರಿಂದ ಅವರು ಮಾಡುವ ನೆನಪು ತಪ್ಪಾಗಿದೆ. ಈಶ್ವರ ಸರ್ವವ್ಯಾಪಿ ಎಂದು ಹೇಳುತ್ತಾರೆ ಅಂದ ಮೇಲೆ ಶಿವಬಾಬ ನನ್ನು ನೆನಪು ಹೇಗೆ ಮಾಡುತ್ತಾರೆ? ಶಿವನ ಮಂದಿರಕ್ಕೆ ಹೋಗಿ ಪೂಜೆ ಮಾಡುತ್ತಾರೆ. ನೀವು ಅವರನ್ನು ಕೇಳಿ - ಇವರ ಬಗ್ಗೆ ನಿಮಗೆ ತಿಳಿದಿದಿಯೇ? ಅದಕ್ಕೆ ಭಗವಂತನು ಸರ್ವವ್ಯಾಪಿ ಎಂದು ಹೇಳುತ್ತಾರೆ. ಪೂಜೆ ಮಾಡುತ್ತಾರೆ ಅವರಿಂದ ಕೃಪೆ ಬೇಡುತ್ತಾರೆ. ಬೇಡುತ್ತಿದ್ದರೂ ಪರಮಾತ್ಮ ಎಲ್ಲಿದ್ದಾರೆ ಎಂದರೆ ಸರ್ವವ್ಯಾಪಿ ಎಂದು ಹೇಳುತ್ತಾರೆ. ಭಕ್ತಿಯಲ್ಲಿ ಎಷ್ಟು ತಪ್ಪುಗಳನ್ನು ಮಾಡುತ್ತಾರೆ. ಆದರೂ ಭಕ್ತಿಯೆಂದರೆ ಪ್ರೀತಿ ಇದೆ. ಕೃಷ್ಣನಿಗಾಗಿ ನಿರ್ಜಲ ಉಪವಾಸ, ವ್ರತಗಳನ್ನು ಮಾಡುತ್ತಾರೆ. ನೀವಿಲ್ಲಿ ಭಗವಂತನಿಂದ ಓದುತ್ತಿದ್ದೀರಿ. ನಿಮಗೀಗ ನಗು ಬರುತ್ತದೆ. ನಾಟಕದನುಸಾರ ಭಕ್ತಿಯನ್ನು ಮಾಡುತ್ತಾ ಇಳಿಯುತ್ತಲೇ ಬಂದಿದ್ದಾರೆ. ಮೇಲಂತೂ ಏರಲು ಯಾರಿಂದಲೂ ಸಾಧ್ಯವಿಲ್ಲ.
ಈಗ ಇದು ಪುರುಷೋತ್ತಮ ಸಂಗಮ ಯುಗವಾಗಿದೆ, ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಈಗ ನೀವು ಪುರುಷೋತ್ತಮರಾಗಲು ಪುರುಷಾರ್ಥ ಮಾಡುತ್ತಿರುವಿರಿ. ಹೇಗೆ ಶಿಕ್ಷಕರು ವಿದ್ಯಾರ್ಥಿಯ ಸೇವಕರಾಗಿರುತ್ತಾರಲ್ಲವೆ, ವಿದ್ಯಾರ್ಥಿಗಳ ಸೇವೆ ಮಾಡುತ್ತಾರೆ. ಸರ್ಕಾರಿ ಸೇವಕರಾಗಿದ್ದಾರೆ, ಹಾಗೆಯೇ ತಂದೆಯೂ ಹೇಳುತ್ತಾರೆ - ನಾನು ನಿಮ್ಮ ಸೇವೆ ಮಾಡುತ್ತೇವೆ, ಓದಿಸುತ್ತೇನೆ ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ, ಶಿಕ್ಷರೂ ಆಗುತ್ತಾರೆ ಸೃಷ್ಟಿಯ ಆದಿ, ಮಧ್ಯ, ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಈ ಜ್ಞಾನವು ಮತ್ತ್ಯಾವ ಮನುಷ್ಯರಲ್ಲಿ ಇಲ್ಲ. ಯಾರೂ ಕಲಿಸಲು ಸಾಧ್ಯವುಲ್ಲ. ನಾವು ದೇವತೆಗಳಾಗಬೇಕೆಂದು ಪುರುಷಾರ್ಥ ಮಾಡುತ್ತೀರಿ. ಪ್ರಪಂಚದಲ್ಲಿ ಮನುಷ್ಯರು ಎಷ್ಟು ತಮೋ ಬುದ್ಧಿಯವರಾಗಿದ್ದಾರೆ, ಇದು ಬಹಳ ಭಯಾನಕಪ್ರಪಂಚವಾಗಿದೆ. ಮನುಷ್ಯರು ಯಾವುದನ್ನು ಮಾಡಬಾರದೋ ಅದನ್ನೇ ಮಾಡುತ್ತಾರೆ, ಎಷ್ಟೋಂದು ಕೊಲೆ, ಸುಲಿಗೆ ಮೊದಲಾದುದನ್ನು ಮಾಡುತ್ತಾರೆ. ಏನು ತಾನೇ ಮಾಡುವುದಿಲ್ಲ? 100% ತಮೋಪ್ರಧಾನರಾಗಿದ್ದಾರೆ, ಈಗ ನೀವು 100% ಸತೋಪ್ರಧಾನರಾಗುತ್ತಿದ್ದೀರಿ, ಅದಕ್ಕಾಗಿ ತಂದೆ ಯುಕ್ತಿಯನ್ನು ತಿಳಿಸಿದ್ದಾರೆ - ನೆನಪಿನ ಯಾತ್ರೆ. ನೆನಪಿನಿಂದಲೇ ವಿಕರ್ಮಗಳು ವಿನಾಶ ಆಗುತ್ತವೆ. ತಂದೆಯೊಂದಿಗೆ ಮಿಲನ ಮಾಡುತ್ತೀರಿ. ಭಗವಂತ ತಂದೆ ಹೇಗೆ ಬರುತ್ತಾರೆ ಎನ್ನುವುದನ್ನು ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ಈ ರಥದಲ್ಲಿ ಬಂದಿದ್ದಾರೆ. ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ ಇದನ್ನು ನೀವು ಧಾರಣೆ ಮಾಡಿ ಅವರಿಗೆ ತಿಳಿಸಿದಾಗ ಅವರಿಗೆ ನಾವೂ ನೇರವಾಗಿ ಕೇಳೋಣ, ತಂದೆಯ ಪರಿವಾರದಲ್ಲಿ ಹೋಗೋಣ ಎನ್ನುವ ಮನಸ್ಸಾಗುತ್ತದೆ. ಇಲ್ಲಿ ತಂದೆಯೂ ಇದ್ದಾರೆ, ತಾಯಿಯೂ ಇದ್ದಾರೆ, ಮಕ್ಕಳೂ ಇದ್ದಾರೆ. ಪರಿವಾರದಲ್ಲಿ ಬಂದುಬಿಡುತ್ತಾರೆ. ಅದಂತೂ ಆಸುರೀ ಪ್ರಪಂಚವಾಗಿದೆ ಆದ್ದರಿಂದ ಆಸುರೀ ಪರಿವಾರದಿಂದ ನೀವು ಬೇಸತ್ತು ಹೋಗುತ್ತೀರಿ. ಆ ಕಾರಣ ಉದ್ಯೋಗ ವ್ಯವಹಾರ ಬಿಟ್ಟು ತಂದೆಯ ಬಳಿ ರಿಫ್ರೆಶ್ ಆಗಲು ಬರುತ್ತೀರಿ. ಇಲ್ಲಿ ಬ್ರಾಹ್ಮಣರೇ ಇರುತ್ತಾರೆ. ಅದರಿಂದ ಈ ಪರಿವಾರದಲ್ಲಿ ಬಂದು ಕುಳಿತುಕೊಳ್ಳುತ್ತೀರಿ. ಮನೆಗೆ ಹೋದಾಗ ಇಂತಹ ಪರಿವಾರವಿರುವುದಿಲ್ಲ. ಅಲ್ಲಿ ದೇಹಧಾರಿಗಳಾಗಿಬಿಡುತ್ತಾರೆ. ವ್ಯಾಪಾರ ವ್ಯವಹಾರ ಜಂಜಾಟದಿಂದ ಬಿಡಿಸಿಕೊಂಡು ನೀವು ಇಲ್ಲಿಗೆ ಬರುತ್ತೀರಿ. ಈಗ ತಂದೆ ತಿಳಿಸುತ್ತಾರೆ - ಮಕ್ಕಳೇ, ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ. ನೀವೀಗ ಸುಗಂಧ ಭರಿತಹೂಗಳಾಗಬೇಕಗಿದೆ. ಹೂಗಳಲ್ಲಿ ಸುಗಂಧವಿರುತ್ತದೆ. ಎಲ್ಲರೂ ಅದನ್ನು ತೆಗೆದುಕೊಂಡು ಅದರ ಸುವಾಸನೆಯನ್ನು ನೋಡುತ್ತಾರೆ, ಎಕ್ಕದ ಹೂವನ್ನು ಯಾರೂ ತೆಗೆದುಕೊಳ್ಳುವುದಿಲ್ಲ, ಅಂದಾಗ ಹೂಗಳಾಗಲು ಪುರುಷಾರ್ಥ ಮಾಡಬೇಕು. ಆದ್ದರಿಂದ ಬಾಬಾರವರೂ ಸಹ ಹೂಗಳನ್ನು ತೆಗೆದುಕೊಂಡು ಬರುತ್ತಾರೆ. ಈ ಹೂವಿನ ಸಮಾನ ಆಗಬೇಕು. ಗೃಹಸ್ಥದಲ್ಲಿದ್ದು ಒಬ್ಬ ತಂದೆಯನ್ನು ನೆನಪು ಮಾಡಬೇಕು. ನಿಮಗೆ ಗೊತ್ತಿದೆ, ಈ ದೇಹದ ಸಂಬಂಧಿಗಳಂತೂ ಸಮಾಪ್ತಿಯಾಗುವವರಾಗಿದ್ದಾರೆ. ನೀವಿಲ್ಲಿ ಗುಪ್ತ ಸಂಪಾದನೆ ಮಾಡಿಕೊಳ್ಳುತ್ತಿರುವಿರಿ. ನೀವು ಶರೀರವನ್ನು ಬಿಡಬೇಕಾಗಿದೆ. ಸಂಪಾದನೆ ಮಾಡಿ ಬಹಳ ಖುಷಿಯಿಂದ ಹರ್ಷಿತ ಮುಖರಾಗಿ ಶರೀರ ಬಿಡಬೇಕು. ನಡೆದಾಡುತ್ತಾ ತಿರುಗಾಡುತಲೂ ತಂದೆಯ ನೆನಪಿನಲ್ಲಿದ್ದರೆ ನಿಮಗೆ ಎಂದೂ ಸುಸ್ತಾಗುವುದಿಲ್ಲ. ತಂದೆಯ ನೆನಪಿನಲ್ಲಿ ಅಶರೀರಿ ಆಗಿ ಎಷ್ಟೆ ಸುತ್ತಾಡಿದರೂ, ಇಲ್ಲಿಂದ ಅಬುರೋಡಿನವರೆಗೆ ನಡೆದುಕೊಂಡು ಹೋದರೂ ಸಹ ಸುಸ್ತಾಗುವುದಿಲ್ಲ. ಪಾಪಗಳು ತುಂಡಾಗುತ್ತವೆ. ಹಗುರರಾಗಿಬಿಡುತ್ತೀರಿ. ನೀವು ಮಕ್ಕಳಿಗೆ ಏಷ್ಟು ಲಾಭವಿದೆ. ಇದನ್ನು ಮತ್ತ್ಯಾರೂ ತಿಳಿಯಲಾರರು. ಇಡೀ ಪ್ರಪಂಚದ ಮನುಷ್ಯರು ಪತಿತ ಪಾವನ ತಂದೆಯೇ ಬಂದು ಪಾವನ ಮಾಡಿ ಎಂದು ಕರೆಯುತ್ತಾರೆ. ಅಂದ ಮೇಲೆ ಅವರಿಗೆ ಮಹಾತ್ಮರೆಂದು ಹೇಗೆ ಹೇಳುತ್ತೀರಿ. ಹಾಗಿರುವಾಗ ಪತಿತರಿಗೆ ತಲೆ ಬಾಗುತ್ತಾರೇನು ಪಾವನರ ಮುಂದೆಯೇ ತಲೆಬಾಗುತ್ತಾರೆ. ಕನ್ಯೆಯ ಉದಾಹರಣೆಯೂ ಇದೆ. ಯಾವಾಗ ಕನ್ಯೆಯು ವಿಕಾರಿಯಾಗುತ್ತಾಳೋ ಆಗ ಎಲ್ಲರ ಮುಂದೆ ತಲೆಬಾಗುತ್ತಾಳೆ. ನಂತರ ಹೇ ಪತಿತ ಪಾವನ ಬನ್ನಿ ಎಂದು ಕೂಗುತ್ತಾಳೆ. ಅರೆ! ಪತಿತರಾಗಿ ಪರಮಾತ್ಮನನ್ನು ಕರೆಯುವುದಾದರೂ ಎಕೆ! ಎಲ್ಲರ ಶರೀರಗಳು ವಿಕಾರದಿಂದಲೇ ರಚನೆಯಾಗಿವೆ. ಏಕೆಂದರೆ ರಾವಣನ ರಾಜ್ಯವಿದೆ. ಈಗ ನೀವು ರಾವಣನಿಂದ ಬಿಡಿಸಿಕೊಂಡು ಬಂದಿದ್ದೀರಿ. ಇದಕ್ಕೆ ಪುರುಷೋತ್ತಮ ಸಂಗಮ ಯುಗವೆಂದು ಹೇಳುತ್ತಾರೆ. ಈಗ ನೀವು ರಾಮರಾಜ್ಯಕ್ಕೆ ಹೋಗುವ ಪುರುಷಾರ್ಥ ಮಾಡುತ್ತಿದ್ದೀರಿ. ಸತ್ಯ ಯುಗವು ರಾಮರಾಜ್ಯವಾಗಿದೆ. ತ್ರೇತಾಯುಗವನ್ನು ಮಾತ್ರ ರಾಮರಾಜ್ಯವೆಂದು ಹೇಳುವುದಾದರೆ ಸೂರ್ಯವಂಶಿ ಲಕ್ಷ್ಮೀ ನಾರಾಯಣರರಾಜ್ಯ ಎಲ್ಲಿಗೆ ಹೋಯಿತು! ಈಗ ಈ ಎಲ್ಲ ಜ್ಞಾನ ನೀವು ಮಕ್ಕಳಿಗೆ ಸಿಗುತ್ತಿದೆ. ಹೊಸ ಹೊಸ ಮಕ್ಕಳು ಬರುತ್ತಾರೆ ಅವರಿಗೆ ನೀವು ಜ್ಞಾನವನ್ನು ತಿಳಿಸುತ್ತೀರಿ, ಯೋಗ್ಯರನ್ನಾಗಿ ಮಾಡುತ್ತೀರಿ ಕೆಲವರಿಗೆ ಈ ರೀತಿ ಸಂಗವು ಸಿಗುತ್ತದೆ, ಅದರಿಂದ ಯೋಗ್ಯರಾದವರೂ ಸಹ ಯೋಗ್ಯತೆ ಕಳೆದುಕೊಳ್ಳುತ್ತಾರೆ. ತಂದೆಯು ಪಾವನರನ್ನಾಗಿ ಮಾಡುತ್ತಾರೆ. ಅಂದಾಗ ಈಗ ಪತಿತರಾಗಲೇಬಾರದು. ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ಮಾಯೆ ಎಷ್ಟು ಶಕ್ತಿಶಾಲಿ ಆಗಿದೆ, ಅದು ಪತಿತರನ್ನಾಗಿ ಮಾಡುತ್ತದೆ. ಸೋಲಿಸಿಬಿಡುತ್ತದೆ. ಆಗ ಬಾಬಾ ರಕ್ಷಣೆ ಮಾಡಿ ಎಂದು ಕರೆಯುತ್ತಾರೆ. ವಾಹ! ಯುದ್ಧದ ಮೈದಾನದಲ್ಲಿ ಅನೇಕರು ಸಾವನ್ನಪ್ಪುತ್ತಾರೆ ಅಂದ ಮೇಲೆ ರಕ್ಷಣೆ ಮಾಡಲಾಗುತ್ತದೆಯೇನು! ಈ ಮಾಯೆಯ ಗುಂಡುಬಂದೂಕಿನ ಗುಂಡಿಗಿಂತಲೂ ಗಟ್ಟಿಯಾಗಿದೆ. ಕಾಮದ ಪೆಟ್ಟನ್ನು ತಿಂದರೆ ಮೇಲಿಂದ ಬೀಳುತ್ತಾರೆ. ಸತ್ಯಯುಗದಲ್ಲಿ ಎಲ್ಲರೂ ಪವಿತ್ರ, ಗೃಹಸ್ಥ ಧರ್ಮದವರಾಗಿರುತ್ತಾರೆ, ಅವರಿಗೆ ದೇವತೆಗಳೆಂದು ಹೇಳುತ್ತಾರೆ. ಈಗ ನಿಮಗೆ ಗೊತ್ತಿದೆ, ತಂದೆಯು ಹೇಗೆ ಬಂದಿದ್ದಾರೆ, ಎಲ್ಲಿರುತ್ತಾರೆ, ಹೇಗೆ ಬಂದು ರಾಜಯೋಗವನ್ನು ಕಲಿಸುತ್ತಾರೆ? ಅರ್ಜುನನ ರಥದಲ್ಲಿ ಕುಳಿತು ಜ್ಞಾನವನ್ನು ಕೊಟ್ಟರು ಎಂದು ತಿಳಿಸುತ್ತಾರೆ. ಅಂದ ಮೇಲೆ ಅವರನ್ನು ಸರ್ವವ್ಯಾಪಿಯೆಂದು ಹೇಗೆ ಹೇಳುತ್ತಾರೆ? ಸ್ವರ್ಗ ಸ್ಥಾಪನೆ ಮಾಡುವ ತಂದೆಯನ್ನೇ ಮರೆತಿದ್ದಾರೆ. ಈಗ ಸ್ವಯಂ ತಂದೆ ತಮ್ಮ ಪರಿಚಯ ಕೊಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮಹಾನ ಆತ್ಮರಾಗುವುದಕ್ಕಾಗಿ ಯಾವ ಯಾವ ಅಪವಿತ್ರ ಕೆಟ್ಟ ಚಟಗಳಿವೆ ಅವುಗಳನ್ನು ಅಳಿಸಿಹಾಕಬೇಕು. ದುಃಖ ಕೊಡುವುದು, ಹೊಡೆಯುವುದು, ಜಗಳಾಡುವುದು. . . ಇದೆಲ್ಲವೂ ಅಪವಿತ್ರ ಕರ್ತವ್ಯವಾಗಿವೆ, ಯಾವುದನ್ನು ನೀವು ಮಾಡಬಾರದು. ನಿಮಗೆ ನೀವು ರಾಜ ತಿಲಕವನ್ನು ಕೊಟ್ಟುಕೊಳ್ಳಲು ಅಧಿಕಾರಿಗಳನ್ನಾಗಿ ಮಾಡಿಕೊಳ್ಳಬೆಕು.
2. ಬುದ್ಧಿಯನ್ನು ಎಲ್ಲ ಉದ್ಯೋಗ ವ್ಯವಹಾರಗಳ ಜಂಜಾಟದಿಂದ, ದೇಹಧಾರಿಗಳಿಂದತೆಗೆದು ಸುಗಂಧಭರಿತ ಹೂಗಳಾಗಬೇಕು. ಗುಪ್ತ ಸಂಪಾದನೆ ಜಮಾ ಮಾಡಿಕೊಳ್ಳಲು ನಡೆಯುತ್ತಾ ತಿರುಗಾಡುತ್ತಾ ಅಶರೀರಿಯಾಗಿರುವ ಅಭ್ಯಾಸ ಮಾಡಬೇಕು.
ಓಂ ಶಾಂತಿ. ವಾಸ್ತವದಲ್ಲಿ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯ ಗುಡ್ಮಾರ್ನಿಂಗ್ ಎಂದು ಹೇಳಬೇಕು ಏಕೆಂದರೆ ಮಕ್ಕಳಿಗೆ ಗೊತ್ತಿದೆ, ತಂದೆಯು ಬರುವುದೇ ರಾತ್ರಿಯನ್ನು ದಿನವನ್ನಾಗಿ ಮಾಡಲು. ಇದನ್ನೂ ಲೆಕ್ಕ ಮಾಡಲಾಗುತ್ತದೆ. ಕೊನೆಗೂ ತಂದೆಯು ಯಾವ ಸಮಯದಲ್ಲಿ ಬರುತ್ತಾರೆ? ಯಾವುದೇ ತಿಥಿ-ತಾರೀಖು ಇಲ್ಲ ಆದರೆ ಯಾವುದೋ ಸಮಯದಲ್ಲಿ ಬರುತ್ತಾರೆ, ಅವಶ್ಯವಾಗಿ 12 ಗಂಟೆಯಾದ ಒಂದು ನಿಮಿಷವಾಗಿರಬಹುದು ಆಗ ತಂದೆಯು ಈ ಶರೀರದಲ್ಲಿ ಪ್ರವೇಶ ಮಾಡಿರುವರು. ಅಂದರೆ ಇದು ಬೇಹದ್ದಿನ ಹಗಲು-ರಾತ್ರಿಯ ಮಾತಾಗಿದೆ. ತಿಥಿ-ತಾರೀಖನ್ನು ತಿಳಿಸಲಾಗುವುದಿಲ್ಲ. ತಂದೆಯು ತಮ್ಮ ಮಕ್ಕಳೊಂದಿಗೇ ಹೇಳುತ್ತಾರೆ - ನಾನು ಬಂದು ರಾತ್ರಿಯನ್ನು ದಿನ, ನರಕವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ ಅಥವಾ ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡುತ್ತೇನೆ. ಇದು ಅರ್ಥವಾಗುತ್ತದೆ- ತಂದೆಯು ರಾತ್ರಿಯಲ್ಲಿಯೇ ಬರುತ್ತಾರೆಂದು ಹೇಳಲಾಗುತ್ತದೆ ಆದ್ದರಿಂದಲೇ ಶಿವರಾತ್ರಿಯೆಂದೇ ಹೇಳುತ್ತಾರಲ್ಲವೆ. ಅವರು ಬರುವುದೇ ರಾತ್ರಿಯನ್ನು ದಿನವನ್ನಾಗಿ ಮಾಡಲು. ಅವರಿಗೆ ಯಾವುದೇ ಜನ್ಮ ಪತ್ರಿಕೆಯಿದೆಯೇ? ಕೃಷ್ಣ ಜಯಂತಿಗೂ ತಿಥಿ-ತಾರೀಖು ಏನೂ ಇಲ್ಲ ಏಕೆಂದರೆ ಕೃಷ್ಣನನ್ನು ಬಹಳ ದೂರ ತೆಗೆದುಕೊಂಡು ಹೋಗಿದ್ದಾರೆ. ಇದು ಯಾರಿಗೂ ತಿಳಿದಿಲ್ಲ. ಕೃಷ್ಣನ ಜನ್ಮವು ಯಾವಾಗ ಆಯಿತು? ಸಂವತ್ಸರ, ತಿಥಿ-ತಾರೀಖು ಏನೂ ಇಲ್ಲ. ಕೇವಲ ರಾತ್ರಿಯನ್ನು ಆಚರಿಸುತ್ತಾರೆ. ವಾಸ್ತವದಲ್ಲಿ ಶಿವ ತಂದೆಯು ರಾತ್ರಿಯಲ್ಲಿ ಬರುವವರಾಗಿದ್ದಾರೆ ಆದ್ದರಿಂದ ನೀವು ಮಕ್ಕಳು ಶಿವ ತಂದೆಯ ರಾತ್ರಿಯೆಂದು ಹೇಳುತ್ತೀರಿ. ಭಾರತದಲ್ಲಿ ಶಿವರಾತ್ರಿಯನ್ನು ಆಚರಿಸುತ್ತಾರೆ, ಶಿವ ಜಯಂತಿಯೆಂದೂ ಹೇಳುತ್ತಾರೆ ಆದರೆ ವಾಸ್ತವದಲ್ಲಿ ಶಿವ ಜಯಂತಿಯೆಂದು ಹೇಳಬಾರದು ಏಕೆಂದರೆ ಅವರು ಎಂದೂ ಮರಣ ಹೊಂದುವುದಿಲ್ಲ. ಮನುಷ್ಯರು ಜನಿಸುತ್ತಾರೆ ಮತ್ತು ಸಾಯುತ್ತಾರೆ ಆದರೆ ತಂದೆಯು ಎಂದೂ ಮರಣ ಹೊಂದುವುದಿಲ್ಲ. ಆದ್ದರಿಂದ ಶಿವಜಯಂತಿಯೆಂದು ಹೇಳುವುದೂ ತಪ್ಪಾಗಿದೆ. ಶಿವರಾತ್ರಿಯೆಂದು ಹೇಳುವುದು ಸರಿಯಿದೆ. ಇದನ್ನು ಶಿವ ತಂದೆಯೇ ತಿಳಿಸುತ್ತಾರೆ, ಹೀಗೆ ಹೇಳಲು ಸಾಧ್ಯವಿಲ್ಲ. ಭಲೆ ಶಿವೋಹಂ ಎಂದು ಹೇಳುತ್ತಾರೆ ಆದರೆ ತಿಳಿಸಲು ಸಾಧ್ಯವಿಲ್ಲ, ನಾನು ಯಾವಾಗ ಬರುತ್ತೇನೆ? ಬಂದು ಏನು ಮಾಡುತ್ತೇನೆ? ಶಿವ ತಂದೆಯೇ ತಿಳಿಸುತ್ತಾರೆ- ಈಗ ಅರ್ಧಕಲ್ಪದ ರಾತ್ರಿಯು ಮುಕ್ತಾಯವಾಗಿ ದಿನವು ಆರಂಭವಾಗುತ್ತದೆ. ಈ ಗೀತಾಭಾಗವು ಪುನರಾವರ್ತನೆಯಾಗುತ್ತಿದೆ. ಮೃತ್ಯುವಿನ ಬಿರುಗಾಳಿಯೂ ಸನ್ಮುಖದಲ್ಲಿದೆ. ಪತಿತ ಪ್ರಪಂಚವೂ ಆಗಿದೆ, ಕಲಿಯುಗದ ಅಂತ್ಯವಾಗಿದೆ. ಕಷ್ಟಗಳು ಮುಂದೆ ನಿಂತಿವೆ. ಇದು ಅದೇ ಮಹಾಭಾರತ ಯುದ್ಧವೆಂದು ತಿಳಿಯುತ್ತಾರೆ. ಇದಕ್ಕಾಗಿಯೇ ಶಾಸ್ತ್ರಗಳಲ್ಲಿ ಪ್ರಾಕೃತಿಕ ವಿಕೋಪಗಳ ಮೂಲಕ ಹಳೆಯ ಪ್ರಪಂಚದ ವಿನಾಶವಾಗುವುದು ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಗೀತೆಯ ಭಗವಂತನೂ ಬಂದಿರುವರು. ಅವರು ಬರುವುದೇ ಕಲಿಯುಗದ ಅಂತ್ಯದಲ್ಲಿ. ಸತ್ಯಯುಗದಲ್ಲಿ ಮೊದಲ ರಾಜಕುಮಾರನಾಗಿದ್ದಾರೆ ಅಂದಮೇಲೆ ಅವರು ದ್ವಾಪರದಲ್ಲಿರಲು ಸಾಧ್ಯವಿಲ್ಲ. ಮನುಷ್ಯರಿಗೆ 84 ಶರೀರಗಳು ಸಿಗುತ್ತವೆ. ಪ್ರತಿಯೊಂದು ಜನ್ಮದಲ್ಲಿ ರೂಪವು ಬದಲಾಗುತ್ತದೆ. ಒಬ್ಬರದು ಇನ್ನೊಬ್ಬರಿಗೆ ಹೋಲುವುದಿಲ್ಲ. ಭಲೆ ಈಗ ಕೃಷ್ಣನ ಗಾಯನ, ಪೂಜೆ ಇದೆ ಆದರೆ ಕೃಷ್ಣನ ಅದೇ ಆಕ್ಯೂರೇಟ್ ರೂಪವು ಇಲ್ಲಿಲ್ಲ. ಅವರ ಫೋಟೊ ತೆಗೆಯಲೂ ಸಾಧ್ಯವಿಲ್ಲ. ಕೇವಲ ಹಾಗೆಯೇ ಮಣ್ಣಿನಿಂದ ಅಥವಾ ಕಾಗದದಿಂದ ಮಾಡಿ ಬಿಡುತ್ತಾರೆ. ನಿಖರವಾದ ಮುಖ ಲಕ್ಷಣಗಳನ್ನು ನೀವು ಧ್ಯಾನದಲ್ಲಿ ಹೋದಾಗಲೇ ನೋಡಬಲ್ಲಿರಿ. ಭಾವಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ. ಮೀರಾ ಕೃಷ್ಣನೊಂದಿಗೆ ನರ್ತನ ಮಾಡುತ್ತಿದ್ದಳು. ಬಹಳ ಪ್ರಸಿದ್ಧರಾಗಿದ್ದಾರೆ, ಭಕ್ತರಲ್ಲಿ ಶಿರೋಮಣಿಯೆಂದು ಗಾಯನವಿದೆ. ಕೃಷ್ಣನನ್ನು ನೆನಪು ಮಾಡುತ್ತಿದ್ದಳು ಆಗ ಕೂಡಲೇ ಅವಳಿಗೆ ಸಾಕ್ಷಾತ್ಕಾರವಾಗುತ್ತಿತ್ತು. ಕೃಷ್ಣನೊಂದಿಗೆ ಪ್ರೀತಿಯಿತ್ತು. ಸಾಕ್ಷಾತ್ಕಾರದಲ್ಲಿ ನೋಡುತ್ತಿದ್ದಳು ಆದ್ದರಿಂದ ಪವಿತ್ರವಾಗಿರಲು ಬಯಸುತ್ತಿದ್ದಳು. ತಿಳಿದಿದೆ, ಅಲ್ಲಿ ವಿಕಾರವಂತೂ ಇರುವುದಿಲ್ಲ. ಕೃಷ್ಣನೊಂದಿಗೆ ಪ್ರೀತಿಯುಂಟಾಯಿತೆಂದರೆ ಅವಶ್ಯವಾಗಿ ಪವಿತ್ರವಾಗಿರಬೇಕಾಗುತ್ತದೆ. ಪತಿತರಂತೂ ಕೃಷ್ಣನ ಜೊತೆ ಮಿಲನ ಮಾಡಲು ಸಾಧ್ಯವಿಲ್ಲ. ಮೀರಾ ಪಾವನವಾಗಿದ್ದಳು ಆದ್ದರಿಂದ ಮೀರಾಳ ಮಹಿಮೆಯಿದೆ. ಇದೆಲ್ಲಾ ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಂತೂ ಅವಳ ಅಲ್ಪಕಾಲದ ಕ್ಷಣಭಂಗುರ ಭಾವನೆಯು ಈಡೇರಿತು, ಸಾಕ್ಷಾತ್ಕಾರವಾಯಿತೆಂದರೆ ಯಾವ ಮನೋಭಾವನೆಯನ್ನು ಇಟ್ಟುಕೊಳ್ಳುವರೋ ಅದು ಅಲ್ಪಕಾಲಕ್ಕಾಗಿ ಪೂರ್ಣವಾಗುತ್ತದೆ. ಅನೇಕ ಪ್ರಕಾರದ ದೇವತೆಗಳಿದ್ದಾರೆ, ಅವರ ಸಾಕ್ಷಾತ್ಕಾರವನ್ನೂ ಬಯಸುತ್ತಾರೆ ಆದ್ದರಿಂದ ಡ್ರಾಮಾನುಸಾರ ಅವರ ಮನೋಕಾಮನೆಯು ಈಡೇರುತ್ತದೆ. ಭಕ್ತಿಮಾರ್ಗವೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ವೇದಶಾಸ್ತ್ರಗಳನ್ನು ಓದುತ್ತಾ ತಲೆ ಕೆಡಿಸಿಕೊಳ್ಳುತ್ತಿದ್ದರೂ ಸಹ ಮುಕ್ತಿ-ಜೀವನ್ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ. ಮೊದಲು ಕಾಶಿಯಲ್ಲಿ ಹೋಗಿ ಬಲಿಯಾಗುತ್ತಿದ್ದರು, ಇದರಿಂದ ಶಿವಪುರಿ ಅರ್ಥಾತ್ ಮುಕ್ತಿಯಲ್ಲಿ ಹೋಗುತ್ತೇವೆಂದು ತಿಳಿಯುತ್ತಿದ್ದರು ಆದರೆ ಹೋಗಲು ಸಾಧ್ಯವಿಲ್ಲ. ಮುಕ್ತಿಗೆ ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ, ಅವರನ್ನೇ ಮುಕ್ತಿ-ಜೀವನ್ಮುಕ್ತಿದಾತ ಎಂದು ಹೇಳಲಾಗುತ್ತದೆ. ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಜೀವನ್ಮುಕ್ತಿಯಿತ್ತು, ಜೀವನ ಬಂಧನವಿರಲಿಲ್ಲ. ಬಹಳ ಕೆಲವೇ ಮಂದಿಯಿದ್ದರು. ಈ ಸಮಯದಲ್ಲಿ ಎಷ್ಟು ಕೋಟಿ ಮನುಷ್ಯರಿದ್ದಾರೆ! ಸತ್ಯಯುಗದಲ್ಲಿ ಇಷ್ಟೂ ಇರಲಿಲ್ಲ ಅಂದಮೇಲೆ ಉಳಿದೆಲ್ಲರೂ ಆ ಸಮಯದಲ್ಲಿ ಎಲ್ಲಿದ್ದರು? ಇದೂ ಸಹ ಈಗ ನಿಮಗೆ ಅರ್ಥವಾಗಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಈಗ ನಿಮಗೆ ಸಿಗುತ್ತದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಈ ಪತಿತ ಸೃಷ್ಟಿಯ ಅಂತ್ಯವಾಗಿದೆ. ಕಲಿಯುಗವು ಇನ್ನೂ 40 ಸಾವಿರ ವರ್ಷಗಳು ನಡೆಯುವುದು ಎಂದು ಅವರು ತಿಳಿದುಕೊಳ್ಳುತ್ತಾರೆ ಆದರೆ ನೀವು ತಿಳಿದುಕೊಂಡಿದ್ದೀರಿ, ಈಗ ಕಲಿಯುಗದ ಅಂತ್ಯವಾಗಲಿದೆ ಆದ್ದರಿಂದಲೇ ತಂದೆಯು ಬಂದು ಸಂಪೂರ್ಣ ಜ್ಞಾನವನ್ನು ತಿಳಿಸುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ಅವರ ಜನ್ಮವು ಇಲ್ಲಿಯೇ ಆಗುತ್ತದೆ. ಸಂಗಮದಲ್ಲಿಯೇ ಬರುತ್ತಾರೆ ಮತ್ತು ಇದು ಅಂತ್ಯವಾಗುವ ಸೂಚನೆ ನೀಡುತ್ತಾರೆ. ವಿನಾಶದ ಸಾಕ್ಷಾತ್ಕಾರವನ್ನೂ ಮಾಡಿಸಿದ್ದಾರೆ. ಅರ್ಜುನನಿಗೂ ಸಾಕ್ಷಾತ್ಕಾರವಾಯಿತೆಂದು ತೋರಿಸಿದ್ದಾರಲ್ಲವೆ. ನೀವು ಮಕ್ಕಳಲ್ಲಿಯೂ ಅನೇಕರು ಸಾಕ್ಷಾತ್ಕಾರ ಮಾಡಿದ್ದಾರೆ. ಎಷ್ಟುಷ್ಟು ಸಮೀಪ ಬರುತ್ತೀರೋ ಅಷ್ಟು ಸ್ಪಷ್ಟವಾಗಿ ಕಾಣುವುದು. ಹೇಗೆ ಮನುಷ್ಯರು ಮನೆಯ ಸಮೀಪ ತಲುಪುವಾಗ ಎಲ್ಲಾ ಮಾತುಗಳು ನೆನಪಿಗೆ ಬರುತ್ತವೆಯಲ್ಲವೆ. ನಿಮಗೂ ಸಹ ಬಹಳ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ. ಮುಕ್ತಿಧಾಮದಲ್ಲಿ ಹೋಗಿ ನಂತರ ಜೀವನ್ಮುಕ್ತಿಯಲ್ಲಿ ಬರಬೇಕಾಗಿದೆ. ಅವಶ್ಯವಾಗಿ ಭಾರತವು ವಿಶ್ವದ ಮಾಲೀಕನಾಗಿತ್ತು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ಪ್ರತೀ 5000 ವರ್ಷಗಳ ನಂತರ ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಈಗ ಭವಿಷ್ಯ ಹೊಸ ಪ್ರಪಂಚಕ್ಕಾಗಿ ಸ್ಥಾಪನೆಯಾಗುತ್ತಿದೆ. ಸಂಗಮದಲ್ಲಿಯೇ ಸ್ಥಾಪನೆಯಾಗುತ್ತದೆ, ನೀವು ಬ್ರಾಹ್ಮಣರು ಸಂಗಮಯುಗದಲ್ಲಿದ್ದೀರಿ. ಅವರು ಶೂದ್ರರು, ನೀವು ಬ್ರಾಹ್ಮಣರಾಗಿದ್ದೀರಿ, ಇವರು ದೇವತೆಗಳಾಗಿದ್ದಾರೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಯಾವುದಕ್ಕೆ ಸಂಗಮವೆಂದು ಹೇಳಲಾಗುತ್ತದೆ ಎಂದು ಮನುಷ್ಯರು ತಿಳಿದುಕೊಂಡಿಲ್ಲ. ಇದಕ್ಕೆ ಕಲ್ಯಾಣಕಾರಿ ಸುಂದರ ಸಂಗಮಯುಗವೆಂದು ಹೇಳಲಾಗುತ್ತದೆ ಎಲ್ಲಿಂದ ಪತಿತ ಭಾರತವು ಪಾವನವಾಗುತ್ತದೆ. ತಂದೆಯು ಕಲ್ಯಾಣಕಾರಿಯಾಗಿದ್ದಾರೆ, ಭಾರತದಲ್ಲಿಯೇ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಈಗ ನಿಮ್ಮ 84 ಜನ್ಮಗಳು ಮುಕ್ತಾಯವಾಯಿತು, ನೀವೀಗ ಪತಿತರಾಗಿದ್ದೀರಿ, ಒಬ್ಬರೂ ಪಾವನರಿಲ್ಲ. ಎಲ್ಲರೂ ಭ್ರಷ್ಠಾಚಾರಿಗಳಾಗಿದ್ದಾರೆ, ವಿಕಾರದಿಂದ ಜನಿಸುತ್ತಾರೆ. ನೀವು ಶ್ರೇಷ್ಠ ದೇವಿ-ದೇವತೆಗಳಾಗಿದ್ದಿರಿ, ನಂತರ ಕ್ಷತ್ರಿಯ ವೈಶ್ಯ ಶೂದ್ರರಾದಿರಿ. ಈಗ ಬ್ರಾಹ್ಮಣರಾಗಿದ್ದೀರಿ ಮತ್ತೆ ದೇವತೆಗಳಾಗುತ್ತೀರಿ. ಅಂತ್ಯದಲ್ಲಿ ಬಂದು ಪ್ರಜಾಪಿತ ಬ್ರಹ್ಮನ ಮುಖದ ಮೂಲಕ ತಂದೆಯು ಸ್ಥಾಪನೆ ಮಾಡುತ್ತಾರೆ. ಯಾವುದರ ಸ್ಥಾಪನೆ? ಸ್ವರ್ಗದ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ನೀವಿಲ್ಲಿ ದೇವಿ-ದೇವತೆಗಳಾಗಲು, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಲು ಬಂದಿದ್ದೀರಿ. ಇದಂತೂ ನೀವು ಮಕ್ಕಳಿಗೆ ಗೊತ್ತಿದೆ, ಯಾವುದೇ ವಿಕಾರಿಗಳಿಗೆ ಇಲ್ಲಿ ಅನುಮತಿ ನೀಡಲಾಗುವುದಿಲ್ಲ. ಮೊಟ್ಟ ಮೊದಲು ಪವಿತ್ರತೆಯ ಪ್ರತಿಜ್ಞೆ ತೆಗೆದುಕೊಳ್ಳಲಾಗುತ್ತದೆ. ಒಂದು ಬಾರಿ ಪ್ರತಿಜ್ಞೆ ಮಾಡಿ ಮತ್ತೆ ಒಂದುವೇಳೆ ಉಲ್ಲಂಘನೆ ಮಾಡಿದರೆ ಒಮ್ಮೆಲೆ ರಸಾತಳದಲ್ಲಿ ಹೊರಟು ಹೋಗುತ್ತೀರಿ, ಚಂಡಾಲ ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿ ತಂದೆಯ ಮುಂದೆ ಪತಿತರೂ ಬರುವಂತಿಲ್ಲ. ಒಂದುವೇಳೆ ಬ್ರಾಹ್ಮಿಣಿಯು ಏನಾದರೂ ಕರೆ ತಂದರೂ ಅವರಮೇಲೆ ಬಹಳ ದೊಡ್ಡ ದೋಷವಾಗುತ್ತದೆ. ಇಬ್ಬರೂ ಚಂಡಾಲರಾಗಿ ಬಿಡುತ್ತಾರೆ. ಯಾರು ಪಾವನರಾಗುವುದಿಲ್ಲವೋ ಅವರಿಗೆ ಇಲ್ಲಿ ಬರಲು ಆಜ್ಞೆಯಿಲ್ಲ. ಬಂದು ವ್ಯಕ್ತಿಗತವಾಗಿ ಎಲ್ಲವನ್ನೂ ತಿಳಿದುಕೊಳ್ಳಬಹುದಾಗಿದೆ ಆದರೆ ತಂದೆಯ ಸಭೆಯಲ್ಲಿ ಬರಲು ಸಾಧ್ಯವಿಲ್ಲ. ಒಂದುವೇಳೆ ತಪ್ಪಾಗಿ ಕರೆತಂದರೆ ಅವರಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಅನೇಕರು ಬರುತ್ತಾರೆ, ಎಲ್ಲರಿಗೆ ತಿಳಿದಿರುತ್ತದೆ - ಬೇಹದ್ದಿನ ತಂದೆಯ ಬಳಿ ಹೋಗುತ್ತೇವೆ ಅಂದಮೇಲೆ ನಾವು ಪವಿತ್ರರಾಗಬೇಕಾಗಿದೆ. ಮೀರಾ ಪವಿತ್ರವಾಗಿದ್ದಳು ಆದ್ದರಿಂದ ಎಷ್ಟು ಮಾನ್ಯತೆಯಿದೆ! ಈಗ ನೀವು ಜ್ಞಾನಾಮೃತವನ್ನು ಕುಡಿಸುತ್ತೀರಿ ಆದರೂ ಸಹ ಅವರು ನಮಗೆ ವಿಷವೇ ಬೇಕೆಂದು ಹೇಳುತ್ತಾರೆ. ವಿಕಾರಕ್ಕಾಗಿ ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರ ಮಾಡುತ್ತಾರೆ! ಕೃಷ್ಣನ ಮಾತಂತೂ ಇಲ್ಲ, ಇದಂತೂ ದೊಡ್ಡ ತಪ್ಪಾಗಿದೆ, ಭಗವಂತನ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ತಂದೆಯು ತಿಳಿಸುತ್ತಾರೆ - ಭಕ್ತಿಯ ನಂತರ ಭಗವಂತನು ಫಲ ಕೊಡಲು ಬರುತ್ತಾರೆಂದು ಹೇಳುತ್ತಾರೆ ಅಂದಮೇಲೆ ಭಕ್ತಿಯು ನಿಷ್ಫಲವಾಯಿತಲ್ಲವೆ. ಆದರೆ ಏನನ್ನೂ ತಿಳಿದುಕೊಂಡಿಲ್ಲ. ಭಾರತವೇ ಸತೋಪ್ರಧಾನವಾಗಿತ್ತು, ಈಗ ತಮೋಪ್ರಧಾನವಾಗಿದೆ. ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ ಅಂದಮೇಲೆ ಪತಿತರಾದರಲ್ಲವೆ ಆದರೆ ನೀವು ನರಕವಾಸಿ ಪತಿತರಾಗಿದ್ದೀರಿ ಎಂದು ಯಾರಿಗಾದರೂ ಹೇಳಿದರೆ ಅವರಿಗೆ ಅರ್ಥವಾಗುವುದಿಲ್ಲ. ತಂದೆಯು ಯಾವಾಗ ಬುದ್ಧಿವಂತರನ್ನಾಗಿ ಮಾಡಿದ್ದರೋ ಆಗ ಸ್ವರ್ಗವಿತ್ತು, ಈಗ ಬುದ್ಧಿಹೀನರಾಗಿರುವುದರಿಂದ ಕಂಗಾಲರಾಗಿದ್ದಾರೆ. ದೇವಿ-ದೇವತೆಗಳ ರಾಜ್ಯವಿದ್ದಾಗ ಭಾರತವು ಎಷ್ಟು ಶ್ರೇಷ್ಠವಾಗಿತ್ತು! ಭಾರತವು ಸ್ವರ್ಗವಾಗಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೆಂದು ಹೇಳುತ್ತಾರೆ. ಆದರೆ ಶಾಸ್ತ್ರಗಳಲ್ಲಿ ಇಂತಿಂತಹ ಮಾತುಗಳನ್ನು ಬರೆದಿದ್ದಾರೆ ಯಾವುದರಿಂದ ಅಲ್ಲಿಯೂ ಅಸುರರಿದ್ದರೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಯಾವುದೇ ಶಾಸ್ತ್ರಗಳು ಸದ್ಗತಿಗಾಗಿ ಇರುವುದಲ್ಲ. ತಂದೆಯು ಬಂದಾಗಲೇ ಸರ್ವರ ಸದ್ಗತಿ ಮಾಡುತ್ತಾರೆ. ಇದು ರಾವಣ ರಾಜ್ಯವಾಗಿದೆ ಆದ್ದರಿಂದಲೇ ರಾಮ ರಾಜ್ಯ ಬೇಕೆಂದು ಬಯಸುತ್ತಾರೆ. ರಾವಣ ರಾಜ್ಯವು ಯಾವಾಗಿನಿಂದ ಆರಂಭವಾಗಿದೆ ಎಂಬುದನ್ನು ತಿಳಿದುಕೊಂಡಿಲ್ಲ, ಜ್ಞಾನಸಾಗರ ತಂದೆಯು ಎಲ್ಲರನ್ನೂ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಪ್ರತಿಯೊಬ್ಬ ಆತ್ಮನಿಗೆ ಅವಿನಾಶಿ ಪಾತ್ರವು ದೊರೆತಿದೆ. ಆತ್ಮವು ಶಾಂತಿಧಾಮದಿಂದ ಈ ಪೃಥ್ವಿಯ ಮೇಲೆ ಪಾತ್ರವನ್ನು ಅಭಿನಯಿಸಲು ಬರುತ್ತದೆ, ಆತ್ಮವೂ ಅವಿನಾಶಿ, ನಾಟಕವೂ ಅವಿನಾಶಿಯಾಗಿದೆ. ಅದರಲ್ಲಿ ಆತ್ಮವು ಅವಿನಾಶಿ, ಪಾತ್ರಧಾರಿಯಾಗಿದೆ, ಪರಮಧಾಮದ ನಿವಾಸಿಯಾಗಿದೆ. 84 ಜನ್ಮಗಳೆಂದು ಗಾಯನವಿದೆ, ಮನುಷ್ಯರಂತೂ 84 ಲಕ್ಷ ಜನ್ಮಗಳೆಂದು ಹೇಳಿ ಬಿಡುತ್ತಾರೆ. ಪರಮಾತ್ಮನನ್ನು ಕಲ್ಲು-ಮುಳ್ಳಿನಲ್ಲಿ ಇದ್ದಾರೆಂದು ಹೇಳಿ ಬಿಡುತ್ತಾರೆ ಅಂದಮೇಲೆ ಇದು ನಿಂದನೆಯಾಯಿತಲ್ಲವೆ. ತಂದೆಯು ಭಾರತದ ಮೇಲೆ ಉಪಕಾರ ಮಾಡಿ ಸ್ವರ್ಗವನ್ನಾಗಿ ಮಾಡುತ್ತಾರೆ. ರಾವಣನು ಬಂದು ಅಪಕಾರ ಮಾಡಿ ನರಕವನ್ನಾಗಿ ಮಾಡುತ್ತಾರೆ. ಇದು ಸುಖ-ದುಃಖದ ಆಟವಾಗಿದೆ. ಮುಳ್ಳಿನ ಕಾಡಾಗಿದೆ. ತಂದೆಯು ಬಂದು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ, ಅತಿ ದೊಡ್ಡ ಮುಳ್ಳು ಕಾಮ ವಿಕಾರವಾಗಿದೆ. ಈಗ ತಂದೆಯು ತಿಳಿಸುತ್ತಾರೆ- ನಾನು ಪಾವನರನ್ನಾಗಿ ಮಾಡಲು ಬಂದಿದ್ದೇನೆ. ಯಾರು ಪಾವನರಾಗುವರೋ ಅವರೇ ಪಾವನ ಪ್ರಪಂಚದ ಮಾಲೀಕರಾಗುವರು. ತಂದೆಯು ಸಹಜ ಯೋಗವನ್ನು ಕಲಿಸಲು ಬಂದಿದ್ದಾರೆ. ಪ್ರಿಯತಮನಾದ ನನ್ನನ್ನು ನೆನಪು ಮಾಡಿರಿ ಎಂದು ಹೇಳುತ್ತಾರೆ. ಎಲ್ಲಾ ಆತ್ಮರು ಒಬ್ಬ ಪ್ರಿಯತಮನಿಗೆ ಪ್ರಿಯತಮೆಯರಾಗಿದ್ದೇವೆ. ಅವರು ಬಂದು ಎಲ್ಲರನ್ನೂ ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ನೀವು ಪತಿತರು ಹೋಗಲು ಸಾಧ್ಯವಿಲ್ಲ ಆದ್ದರಿಂದ ನನ್ನನ್ನು ನೆನಪು ಮಾಡಿರಿ ಆಗ ತುಕ್ಕು ಬಿಟ್ಟು ಹೋಗುವುದು.
ಡ್ರಾಮಾನುಸಾರ ಸಮಯವು ಬಂದಾಗಲೇ ನಾನು ನೀವು ಮಕ್ಕಳನ್ನು ಪಾವನ ಮಾಡಲು ಬರುತ್ತೇನೆ. ಇದು ಅದೇ ಮಹಾಭಾರತ ಯುದ್ಧವಾಗಿದೆ. ಮೃತ್ಯುಲೋಕದಲ್ಲಿ ಇದು ಅಂತಿಮ ಯುದ್ಧವಾಗಿದೆ, ಅಮರಲೋಕದಲ್ಲಿ ಯುದ್ಧವಿರುವುದಿಲ್ಲ ಅಲ್ಲಿ ರಾಮ ರಾಜ್ಯವಿರುತ್ತದೆ. ಧರ್ಮಾತ್ಮರಿರುತ್ತಾರೆ, ಇಲ್ಲಿ ಪಾಪಾತ್ಮರಿದ್ದಾರೆ, ಪಾಪ ಮಾಡುತ್ತಾ ಇರುತ್ತಾರೆ. ಪುಣ್ಯಾತ್ಮರ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನಾನು ಒಂದು ಸೆಕೆಂಡಿನಲ್ಲಿ ನಿಮ್ಮನ್ನು ಏರುವ ಕಲೆಯಲ್ಲಿ ಕರೆದುಕೊಂಡು ಹೋಗುತ್ತೇನೆಂದು ತಂದೆಯು ತಿಳಿಸುತ್ತಾರೆ, ಇದರಲ್ಲಿ ಕೇವಲ ಇದೊಂದೇ ಅಂತಿಮ ಜನ್ಮವು ಹಿಡಿಸುತ್ತದೆ ಮತ್ತು ಇಳಿಯುವ ಕಲೆಯಲ್ಲಿ 84 ಜನ್ಮಗಳು ಹಿಡಿಸುತ್ತವೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಏಳುತ್ತಾ-ಕುಳಿತುಕೊಳ್ಳುತ್ತಾ ನನ್ನನ್ನು ನೆನಪು ಮಾಡಿರಿ. ಈ ಸಾಧುಗಳ ಉದ್ಧಾರ ಮಾಡಲು ನಾನೇ ಬರಬೇಕಾಗುತ್ತದೆ. ತಮೋಪ್ರಧಾನ ಬುದ್ಧಿಯ ಮನುಷ್ಯರು ಏನನ್ನು ಕೇಳುವರೋ ಅದನ್ನೇ ಸತ್ಯ, ಸತ್ಯ ಎಂದು ಹೇಳುತ್ತಾ ಇರುತ್ತಾರೆ. ಅಂಧ ಶ್ರದ್ಧಾಳುಗಳಾಗಿದ್ದಾರೆ, ಇದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ. ಗೊಂಬೆಗಳ ಪೂಜೆ ಮಾಡುತ್ತಾ ಇರುತ್ತಾರೆ, ಅವರ ಚರಿತ್ರೆಯನ್ನೇ ತಿಳಿದುಕೊಂಡಿಲ್ಲ. ಈಗ ತಂದೆಯೇ ಬಂದು ಇದೆಲ್ಲದರ ಜ್ಞಾನವನ್ನು ಕೊಡುತ್ತಾರೆ. ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ, ಅದಂತೂ ಶಾಸ್ತ್ರಗಳ ಜ್ಞಾನವಾಗಿದೆ. ಆದರೆ ಈ ಜ್ಞಾನವನ್ನು ತಂದೆಯೇ ಬಂದು ಮಕ್ಕಳಿಗೆ ತಿಳಿಸುತ್ತಾರೆ. ಪ್ರಪಂಚದಲ್ಲಿ ಪರಮಪಿತ ಪರಮಾತ್ಮನನ್ನು ಯಥಾರ್ಥವಾಗಿ ಅರಿತುಕೊಂಡಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಮನುಷ್ಯರಾಗಿಯೂ ತಂದೆಯನ್ನು ಅರಿತುಕೊಳ್ಳದಿದ್ದರೆ ಪ್ರಾಣಿಗಳಿಗಿಂತಲೂ ಕೀಳಾದರು. ತಾವು ಸರ್ವಗುಣ ಸಂಪನ್ನರು.... ಎಂದು ದೇವತೆಗಳ ಮುಂದೆ ಹೋಗಿ ಮಹಿಮೆ ಮಾಡುತ್ತಾರೆ. ವಾಸ್ತವದಲ್ಲಿ ಇಬ್ಬರೂ ಮನುಷ್ಯರೇ ಅಲ್ಲವೆ ಆದರೆ ಇದು ಮುಳ್ಳಿನ ಕಾಡಾಗಿದೆ. ತಂದೆಯು ನಿಮ್ಮನ್ನು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಾರೆ. ಭಾರತವು ಸತ್ಯ ಖಂಡವಾಗಿತ್ತು, ನಂತರ ರಾವಣನು ಬಂದು ಅಸತ್ಯಖಂಡವನ್ನಾಗಿ ಮಾಡುತ್ತಾನೆ. ಸತ್ಯಖಂಡವನ್ನಾಗಿ ಮಾಡುವವರು ಪರಮಪಿತ ಪರಮಾತ್ಮನಾಗಿದ್ದಾರೆ. ತಂದೆಯು ಬಂದು ಪರಿಚಯ ಕೊಡುತ್ತಾರೆ, ಅದರಲ್ಲಿಯೂ ಬ್ರಾಹ್ಮಣ ಮಕ್ಕಳಿಗೆ ತಿಳಿಸುತ್ತಾರೆ ನಂತರ ಈ ಜ್ಞಾನವಿರುವುದಿಲ್ಲ. ನೀವು ಮಕ್ಕಳು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಬಾಹುಬಲದಿಂದ ಎಂದೂ ಯಾರಿಗೂ ವಿಶ್ವದ ರಾಜ್ಯಭಾಗ್ಯ ಸಿಗಲು ಸಾಧ್ಯವಿಲ್ಲ. ಭಾರತವು ವಿಶ್ವದ ಮಾಲೀಕನಾಗಿತ್ತು ಅದು ಈಗ ಕಂಗಾಲಾಗಿದೆ. ಮನುಷ್ಯರ ಬುದ್ಧಿಯು ಈ ರೀತಿಯಾಗಿ ಬಿಟ್ಟಿದೆ- ಹೊರಗಡೆ ಬೋರ್ಡನ್ನೂ ನೋಡುತ್ತಾರೆ, ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಬರೆಯಲ್ಪಟ್ಟಿದೆ ಆದರೂ ಇದೊಂದು ಈಶ್ವರೀಯ ಪರಿವಾರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇಷ್ಟೊಂದು ಬಿ.ಕೆ.,ಗಳಿದ್ದಾರೆ, ಇದರಲ್ಲಿ ಅಂಧಶ್ರದ್ಧೆಯ ಮಾತಂತೂ ಇಲ್ಲ ಅಲ್ಲವೆ. ಇದು ಈಶ್ವರೀಯ ಮನೆಯಾಗಿದೆ, ಇದೂ ಸಹ ಯಾವುದೋ ಒಂದು ಸಂಸ್ಥೆಯಾಗಿದೆ ಎಂದು ತಿಳಿದುಕೊಳ್ಳುತ್ತಾರೆ, ಅರೆ! ಇದು ಪರಿವಾರವಲ್ಲವೆ. ಕುಮಾರ-ಕುಮಾರಿಯರು...... ಇದು ಮನೆಯಾಯಿತಲ್ಲವೆ. ಇಷ್ಟೊಂದು ಪ್ರದರ್ಶನಿಗಳನ್ನು ಇಡುತ್ತೀರಿ, ತಿಳಿಸುತ್ತೀರಿ ಆದರೂ ಸಹ ತಿಳಿದುಕೊಳ್ಳುವುದಿಲ್ಲ. ಯಾವಾಗ 7 ದಿನಗಳ ಕೋರ್ಸನ್ನು ಚೆನ್ನಾಗಿ ತಿಳಿದುಕೊಳ್ಳುವರೊ ಆಗಲೇ ತಂದೆಯು ಪುನಃ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆಂದು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಏರುವ ಕಲೆಯಲ್ಲಿ ಹೋಗುವುದಕ್ಕಾಗಿ ಏಳುತ್ತಾ-ಕುಳಿತುಕೊಳ್ಳುತ್ತಾ ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ತಂದೆಯ ಸಮಾನ ಎಲ್ಲರಿಗೆ ಉಪಕಾರ ಮಾಡಬೇಕಾಗಿದೆ.
2. ಜ್ಞಾನಾಮೃತವನ್ನು ಸೇವಿಸಬೇಕು ಹಾಗೂ ಕೊಡಬೇಕಾಗಿದೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
ಓಂ ಶಾಂತಿ. ವಾಸ್ತವದಲ್ಲಿ ಈ ಗೀತೆಯು ತಪ್ಪಾಗಿದೆ. ಈ ಪ್ರಪಂಚದಲ್ಲಿ ನೀವು ಏನೆಲ್ಲವನ್ನು ಕೇಳುತ್ತೀರೋ ಅದೆಲ್ಲವೂ ಅಸತ್ಯವಾಗಿದೆ. ತಂದೆಯು ತಿಳಿಸುತ್ತಾರೆ - ಹೇ ಭಾರತವಾಸಿ ಮಕ್ಕಳೇ ಎಂದು ಯಾರು ಸನ್ಮುಖದಲ್ಲಿದ್ದಾರೆಯೋ ಅವರಿಗೇ ಹೇಳುತ್ತಾರೆ. ಈಗ ನಿಮಗೆ ಅರ್ಥವಾಗಿದೆ, ಅದು ಭಕ್ತಿಮಾರ್ಗವಾಗಿದೆ. ವೇದ-ಶಾಸ್ತ್ರ, ಉಪನಿಷತ್ತು ಇತ್ಯಾದಿಗಳನ್ನು ಭಕ್ತಿಮಾರ್ಗದಲ್ಲಿ ಜನ್ಮ-ಜನ್ಮಾಂತರದಿಂದಲೂ ಬಹಳ ಓದುತ್ತಾ ಬರುತ್ತಾರೆ, ಗಂಗಾಸ್ನಾನ ಮಾಡುತ್ತಾ ಬಂದಿದ್ದಾರೆ ಅಂದಾಗ ಈ ಕುಂಭಮೇಳವು ಯಾವಾಗಿನಿಂದ ನಡೆಯುತ್ತಾ ಬಂದಿದೆ ಎಂದು ಕೇಳಿರಿ, ಇದು ಅನಾದಿಯಾಗಿದೆಯೆಂದು ಹೇಳುತ್ತಾರೆ. ಯಾವಾಗಿನಿಂದ ಮಾಡುತ್ತಾ ಬಂದಿದ್ದೀರಿ ಎಂದು ಕೇಳಿದರೆ ಅವರು ತಿಳಿಸಲು ಸಾಧ್ಯವಿಲ್ಲ. ಭಕ್ತಿಮಾರ್ಗವು ಯಾವಾಗಿನಿಂದ ಆರಂಭವಾಗುತ್ತದೆ ಎಂಬುದು ಅವರಿಗೆ ತಿಳಿದೇ ಇಲ್ಲ. ಕಲ್ಪದ ಆಯಸ್ಸನ್ನು ಉಲ್ಟಾ ಬರೆದು ಬಿಟ್ಟಿದ್ದಾರೆ. ಹೇಳುತ್ತಾರೆ - ಶಾಸ್ತ್ರಗಳಲ್ಲಿ ಬರೆಯಲ್ಪಟ್ಟಿದೆ, ಬ್ರಹ್ಮನ ದಿನ ಮತ್ತು ಬ್ರಹ್ಮನ ರಾತ್ರಿ - ಇದು ಒಂದು ಗೀತೆಯಲ್ಲಿ ಮಾತ್ರವೇ ಇದೆ. ಈಗ ತಂದೆಯು ತಿಳಿಸುತ್ತಾರೆ - ನೀವು ಬ್ರಾಹ್ಮಣರ ದಿನ ಮತ್ತು ರಾತ್ರಿ ಬೇಹದ್ದಿನದಾಗಿದೆ. ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿ. ಎರಡು ಸಮ ಭಾಗಗಳಿರಬೇಕಲ್ಲವೆ. ಅರ್ಧಕಲ್ಪದಿಂದ ಭಕ್ತಿಮಾರ್ಗವು ಆರಂಭವಾಗುತ್ತದೆ, ಇದು ಯಾರಿಗೂ ತಿಳಿದಿಲ್ಲ. ಸೋಮನಾಥನ ಮಂದಿರವು ಯಾವಾಗ ಆಯಿತು? ಮೊಟ್ಟ ಮೊದಲು ಅವ್ಯಭಿಚಾರಿ ಭಕ್ತಿಗಾಗಿ ಸೋಮನಾಥನ ಮಂದಿರವೇ ಸ್ಥಾಪಿಸಲ್ಪಟ್ಟಿತ್ತು. ನಿಮಗೆ ತಿಳಿದಿದೆ - ಅರ್ಧಕಲ್ಪ ಮುಗಿಯುತ್ತದೆ ಆಗಿನಿಂದ ಬ್ರಹ್ಮನ ರಾತ್ರಿಯು ಆರಂಭವಾಗುತ್ತದೆ. ಲಕ್ಷಾಂತರ ವರ್ಷಗಳ ಮಾತಿರಲು ಸಾಧ್ಯವಿಲ್ಲ. ಮಹಮ್ಮದ್ ಘಜೀನಿಯು ಮಂದಿರದಿಂದ ಖಜಾನೆಗಳನ್ನು ಲೂಟಿ ಮಾಡಿ ತೆಗೆದುಕೊಂಡು ಹೋದನು. ಇಲ್ಲಿಗೆ 1300-1400 ವರ್ಷಗಳಾಗಿರಬಹುದು ಎಂದು ಹೇಳುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚದೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ, ಅನ್ಯ ಧರ್ಮದವರು ಯಾರೆಲ್ಲರೂ ಬರುತ್ತಾರೆಯೋ ಅವರು ಮಧ್ಯ-ಮಧ್ಯದ ಶಾಖೆಗಳಾಗಿದ್ದಾರೆ. ಈಗ ಅವರದೂ ಸಹ ಅಂತ್ಯವಾಗಿದೆ, ತಮೋಪ್ರಧಾನವಾಗಿದೆ, ಎಷ್ಟೊಂದು ವಿಭಿನ್ನತೆಯಿದೆ. ಸೂರ್ಯವಂಶಿಯ ನಂತರ ಚಂದ್ರವಂಶಿಯರಾದರು, ಎರಡು ಕಲೆಗಳು ಕಡಿಮೆಯಾಯಿತು, ಅನಂತರ ಅನ್ಯ ವಿಭಿನ್ನ ಧರ್ಮದವರು ಬರತೊಡಗಿದರು. ಈ ಸಮಯದಲ್ಲಿ ಭಕ್ತಿಮಾರ್ಗವಿದೆ. ಜ್ಞಾನದಿಂದ ದಿನ ಮತ್ತು ಸುಖವಾಗುತ್ತದೆ. ಭಕ್ತಿಯಿಂದ ರಾತ್ರಿ ಮತ್ತು ದುಃಖವಾಗುತ್ತದೆ. ಭಕ್ತಿಯು ಪೂರ್ಣವಾದಾಗಲೇ ಜ್ಞಾನ ಸಿಗುವುದು. ಜ್ಞಾನವನ್ನು ಕೊಡುವವರು ಒಬ್ಬರೇ ಜ್ಞಾನಸಾಗರ ತಂದೆಯಾಗಿದ್ದಾರೆ. ಅವರು ಯಾವಾಗ ಬರುತ್ತಾರೆ, ಯಾವಾಗ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಈಗ ಭಕ್ತಿಯು ಎಷ್ಟು ಸಮಯ ನಡೆಯುತ್ತದೆ ಮತ್ತು ಜ್ಞಾನವು ಯಾವಾಗ ಸಿಗುತ್ತದೆಯೆಂದು ನಿಮಗೆ ತಂದೆಯು ತಿಳಿಸುತ್ತಾರೆ. ಅರ್ಧಕಲ್ಪದಿಂದ ಈ ಭಕ್ತಿಮಾರ್ಗವು ನಡೆಯುತ್ತಲೇ ಬಂದಿದೆ. ಸತ್ಯ-ತ್ರೇತಾಯುಗದಲ್ಲಿ ಈ ಭಕ್ತಿಮಾರ್ಗದ ಚಿತ್ರಗಳೇನೂ ಇರುವುದಿಲ್ಲ. ಭಕ್ತಿಯ ಅಂಶವೂ ಇರುವುದಿಲ್ಲ. ಈಗ ಕಲಿಯುಗದ ಅಂತ್ಯವಾಗಿದೆ ಆದ್ದರಿಂದ ಭಗವಂತನೇ ಬರಬೇಕಾಯಿತು, ಮಧ್ಯದಲ್ಲಿ ಯಾರಿಗೂ ಭಗವಂತನು ಸಿಗುವುದಿಲ್ಲ. ಭಗವಂತನು ಯಾವ ರೂಪದಲ್ಲಿ ಸಿಗುವರೋ ಗೊತ್ತಿಲ್ಲವೆಂದು ಹೇಳುತ್ತಾರೆ. ಗೀತೆಯ ಭಗವಂತನು ಒಂದುವೇಳೆ ಕೃಷ್ಣನಾಗಿದ್ದರೆ ಅವರು ಮತ್ತೆ ರಾಜಯೋಗವನ್ನು ಕಲಿಸಲು ಯಾವಾಗ ಬರುತ್ತಾರೆ? ಮನುಷ್ಯರಿಗೆ ಏನೂ ಗೊತ್ತಿಲ್ಲ. ಭಕ್ತಿಮಾರ್ಗವೇ ಸಂಪೂರ್ಣ ಬೇರೆಯಾಗಿದೆ, ಜ್ಞಾನವೇ ಬೇರೆಯಾಗಿದೆ. ಗೀತೆಯಲ್ಲಿ ಭಗವಾನುವಾಚ ಇದೆ. ಹೇ ಪತಿತ-ಪಾವನ ಬನ್ನಿ ಎಂದು ಹಾಡುತ್ತಾರೆ ಮತ್ತು ಇನ್ನೊಂದು ಕಡೆ ಕರೆಯುತ್ತಾ ಇರುತ್ತಾರೆ ಮತ್ತೊಂದು ಕಡೆ ಗಂಗಾಸ್ನಾನ ಮಾಡಲು ಹೋಗುತ್ತಾರೆ. ಪತಿತ-ಪಾವನ ಯಾರೆಂಬ ನಿಶ್ಚಯವು ಸ್ವಲ್ಪವೂ ಇಲ್ಲ. ನೀವು ಮಕ್ಕಳಿಗೆ ಈಗ ಜ್ಞಾನ ಸಿಕ್ಕಿದೆ. ನೀವು ತಿಳಿದುಕೊಂಡಿದ್ದೀರಿ - ನಾವೀಗ ಯೋಗಬಲದಿಂದ ಸದ್ಗತಿಯನ್ನು ಪಡೆಯುತ್ತೇವೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಅದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನಾನು ಗ್ಯಾರಂಟಿ ಕೊಡುತ್ತೇನೆ - ಪತಿತ-ಪಾವನ ತಂದೆಯೇ ತಿಳಿಸುತ್ತಾರೆ, ನಾನು 5000 ವರ್ಷಗಳ ಮೊದಲೂ ಸಹ ಇದನ್ನು ತಿಳಿಸಿದ್ದೆನು - ಹೇ ಮಕ್ಕಳೇ, ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆದು ನನ್ನನ್ನು ನೆನಪು ಮಾಡಿರಿ. ಇದು ಗೀತೆಯ ಮಹಾವಾಕ್ಯವಾಗಿದೆ ಆದರೆ ನಾನು ಗೀತೆಯನ್ನು ಯಾವಾಗ ತಿಳಿಸಿದೆನು ಎಂಬುದು ಯಾರಿಗೂ ತಿಳಿದಿಲ್ಲ. ನಾನು ತಿಳಿಸುತ್ತೇನೆ - 5000 ವರ್ಷಗಳ ಮೊದಲು ನಿಮಗೆ ಗೀತೆಯನ್ನು ತಿಳಿಸಿದ್ದೆನು, ಈ ಸಮಯದಲ್ಲಿ ಇಡೀ ಮನುಷ್ಯ ಸೃಷ್ಟಿರೂಪಿ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ನಿಮಗೂ ಸಹ ಈಗ ತಂದೆಯು ಬಂದು ಡ್ರಾಮಾದ ಆದಿ-ಮಧ್ಯ-ಅಂತ್ಯ, ಇಡೀ ಚಕ್ರದ ರಹಸ್ಯವನ್ನು ತಿಳಿಸಿದ್ದಾರೆ. ತಂದೆಯಂತೂ ಅವಶ್ಯವಾಗಿ ಅಂತ್ಯದಲ್ಲಿಯೇ ಬರುವರಲ್ಲವೇ! ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶವು ಹೇಗಾಗುತ್ತಿದೆ ಎಂಬುದು ನಿಮಗೆ ತಿಳಿದಿದೆ. ಈಗ ನಿಮ್ಮ ಬುದ್ಧಿಯಲ್ಲಿದೆ - ನಾವು ಹೊಸ ಪ್ರಪಂಚ, ಸ್ವರ್ಗದ ಮಾಲೀಕರಾಗುತ್ತೇವೆ, ಇದು ರಾಜಯೋಗವಾಗಿದೆ ಅಂದಮೇಲೆ ನಾವೇಕೆ ಪ್ರಜೆಗಳಾಗುವುದು! ನಮ್ಮ ಮಮ್ಮಾ-ಬಾಬಾರವರು ರಾಜ-ರಾಣಿಯರಾಗುತ್ತಾರೆ ಅಂದಮೇಲೆ ನಾವೂ ಸಹ ಏಕೆ ರಾಜ-ರಾಣಿಯಾಗಬಾರದು! ಮಮ್ಮಾರವರಾದರೂ ಯುವತಿಯಾಗಿದ್ದರು ಆದರೆ ಬ್ರಹ್ಮಾ ತಂದೆಯು ವೃದ್ಧನಾಗಿದ್ದಾರೆ, ಆದರೂ ಸಹ ಎಲ್ಲರಿಗಿಂತ ಚೆನ್ನಾಗಿ ಓದುತ್ತಾರಲ್ಲವೆ. ಯುವಕರು ಎಲ್ಲರಿಗಿಂತ ತೀವ್ರವಾಗಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ಎಷ್ಟು ಸಾಧ್ಯವೋ ನನ್ನನ್ನು ನೆನಪು ಮಾಡಿ, ಉಳಿದೆಲ್ಲವನ್ನು ಮರೆತು ಬಿಡಿ. ಹಳೆಯ ಪ್ರಪಂಚದಿಂದ ವೈರಾಗ್ಯವಿರಲಿ. ಹೇಗೆ ಹೊಸ ಮನೆಯು ತಯಾರಾದರೆ ಬುದ್ಧಿಯು ಅದರ ಕಡೆಯೇ ಹೋಗುತ್ತದೆಯಲ್ಲವೆ. ಅದನ್ನೇ ಕಣ್ಣುಗಳಿಂದ ನೋಡಲಾಗುತ್ತದೆ, ಇದನ್ನು ಬುದ್ಧಿಯಿಂದ ತಿಳಿದುಕೊಳ್ಳುತ್ತೀರಿ. ಅನೇಕರಿಗೆ ಸಾಕ್ಷಾತ್ಕಾರವೂ ಆಗುತ್ತದೆ, ವೈಕುಂಠ, ಪ್ಯಾರಡೈಸ್, ಸ್ವರ್ಗವೆಂದೂ ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಯಾವಾಗಲೋ ಇತ್ತಲ್ಲವೆ. ಈಗ ಇಲ್ಲ. ಈಗ ಪುನಃ ನೀವು ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ರಾಜ್ಯವನ್ನು ಕಲಿಯುತ್ತಿದ್ದೀರಿ. ಮೊಟ್ಟ ಮೊದಲು ಮುಖ್ಯ ಮಾತೇ ಇದಾಗಿದೆ – ಶಿವ ಭಗವಾನುವಾಚ. ಕೃಷ್ಣನಂತೂ ಭಗವಂತನಾಗಲು ಸಾಧ್ಯವಿಲ್ಲ, ಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಭಗವಂತನು ಜನನ-ಮರಣದಲ್ಲಿ ಬರಲು ಸಾಧ್ಯವಿಲ್ಲ. ಇದು ಬಹಳ ಸ್ಪಷ್ಟವಾಗಿದೆ, ಕೃಷ್ಣನ ಆ ರೂಪವು ಯಾವುದು ಸತ್ಯಯುಗದಲ್ಲಿತ್ತೋ ಅದು ನಂತರವಿರಲು ಸಾಧ್ಯವಿಲ್ಲ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಾಮ-ರೂಪವು ಬದಲಾಗುತ್ತಾ ಹೋಗುತ್ತದೆ. ಈ ಸಮಯದಲ್ಲಿ ಆ ಆತ್ಮನೂ ತಮೋಪ್ರಧಾನವಾಗಿದೆ. ಕೃಷ್ಣನು ದ್ವಾಪರದಲ್ಲಿದ್ದನೆಂದು ಯಾರಾದರೂ ಹೇಳಬಹುದು ಆದರೆ ಆ ರೂಪವು ದ್ವಾಪರದಲ್ಲಿರಲು ಸಾಧ್ಯವಿಲ್ಲ. ದ್ವಾಪರದಲ್ಲಿ ಪತಿತರಿಂದ ಪಾವನರನ್ನಾಗಿ ಮಾಡಲು ಬರಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದಲ್ಲಿಯೇ ಇರುತ್ತಾನೆ. ಕೃಷ್ಣನಿಗೆ ಪತಿತ-ಪಾವನನೆಂದು ಹೇಳಲು ಸಾಧ್ಯವಿಲ್ಲ. ಗೀತೆಯ ಭಗವಂತನು ಕೃಷ್ಣನಲ್ಲ, ಶಿವನಾಗಿದ್ದಾರೆ. ಅವರು ಅವಶ್ಯವಾಗಿ ಬರುತ್ತಾರೆ. ಶಿವ ಜಯಂತಿಯೂ ಇದೆ ಅಂದಮೇಲೆ ಅವಶ್ಯವಾಗಿ ಯಾವುದೋ ರಥದಲ್ಲಿ ಪ್ರವೇಶ ಮಾಡುತ್ತಾರೆ. ಅವರೇ ಸ್ವಯಂ ಹೇಳುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆ, ಅವರಿಗೆ ನಾನು ಬ್ರಹ್ಮನೆಂದು ಹೆಸರನ್ನಿಡುತ್ತೇನೆ. ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತದೆ. ಮಹಾಭಾರತ ಯುದ್ಧವು ಸನ್ಮುಖದಲ್ಲಿದೆ. ಈ ಜ್ಞಾನವನ್ನು ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕಾಗಿದೆ. ಇದು ಬುದ್ಧಿಯಲ್ಲಿ ನೆನಪಿರಲಿ - ನಾವು ವಿದ್ಯಾರ್ಥಿಗಳಾಗಿದ್ದೇವೆ, ತಂದೆಯು ಓದಿಸುತ್ತಿದ್ದಾರೆ. ಇನ್ನು ಸ್ವಲ್ಪವೇ ಸಮಯವಿದೆ ನಂತರ ತಂದೆಯು ನಮ್ಮನ್ನು ಮರಳಿ ಕರೆದುಕೊಂಡು ಹೋಗುತ್ತಾರೆ. ಯಾರು ತಮ್ಮನ್ನು ಶ್ರೇಷ್ಠರನ್ನಾಗಿ ಮಾಡಿಕೊಳ್ಳುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಆದರೆ ಮಾಯೆಯು ಒಮ್ಮೆಲೆ ತವೆಯಂತೆ ಮಾಡಿ ಬಿಡುತ್ತದೆ. ಕೆಲವು ಮಕ್ಕಳಿಗೆ ಸರ್ವೀಸಿನ ಬಹಳ ಉಮ್ಮಂಗವಿದೆ, ಚಿಕ್ಕ-ಚಿಕ್ಕ ಹಳ್ಳಿಗಳಲ್ಲಿ ಪ್ರೊಜೆಕ್ಟರ್ ತೆಗೆದುಕೊಂಡು ಹೋಗಿ ಸರ್ವೀಸ್ ಮಾಡುತ್ತಿದ್ದಾರೆ. ಅನೇಕ ಪ್ರಜೆಗಳನ್ನು ತಯಾರು ಮಾಡುತ್ತೀರೆಂದರೆ ಅವರು ಅವಶ್ಯವಾಗಿ ರಾಜರಾಗುವಿರಿ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಬೇಕಾಗಿದೆ, ಬಹಳ ಪರಿಶ್ರಮ ಪಡಬೇಕಾಗಿದೆ. ಮಾತೆಯರು ಪವಿತ್ರರಾಗುತ್ತಾರೆಂದರೆ ಪತಿಯು ಪವಿತ್ರರಾಗಿರಲು ಬಿಡುವುದಿಲ್ಲ, ಅಲ್ಲಿ ಜಗಳವೂ ನಡೆಯುತ್ತದೆ. ಸನ್ಯಾಸಿಗಳು ಸ್ವಯಂ ಪವಿತ್ರರಾಗುತ್ತಾರೆಂದರೆ ಅವರು ಸ್ತ್ರೀಯನ್ನು ಬಿಟ್ಟು ಹೊರಟು ಹೋಗುತ್ತಾರೆ ಅಂದಮೇಲೆ ತಮ್ಮ ರಚನೆಯನ್ನು ಬಿಟ್ಟು ಏಕೆ ಓಡಿ ಹೋಗುತ್ತಾರೆ! ಅವರನ್ನಂತು ಯಾರು ಏನೂ ಹೇಳುವುದಿಲ್ಲ. ಅವರು ಪವಿತ್ರರಾಗಿರಲು ಯಾರೂ ನಿರಾಕರಿಸುವುದಿಲ್ಲ. ನಾವು ಯಾರಿಗೂ ಗೃಹಸ್ಥವನ್ನು ಬಿಡುವುದಕ್ಕಾಗಿ ಹೇಳುವುದಿಲ್ಲ, ಕೇವಲ ಪವಿತ್ರರಾಗಿರಬೇಕು ಎಂದು ಹೇಳುತ್ತೇವೆ ಅಂದಮೇಲೆ ಇದನ್ನೇಕೆ ನಿರಾಕರಿಸಬೇಕು! ಆದರೆ ಇದರಲ್ಲಿ ಮಾತನಾಡುವ ಶಕ್ತಿಯಿರಬೇಕು. ಭಗವಾನುವಾಚ - ನೀವು ಪವಿತ್ರರಾದರೆ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ಇದರಲ್ಲಿ ಸ್ಥಿತಿಯು ಬಹಳ ಶಕ್ತಿಶಾಲಿಯಾಗಿರಬೇಕು. ಮೋಹವಿರಬಾರದು ಯಾವುದು ಮತ್ತೆ ನೆನಪಿಗೆ ಬರುತ್ತಾ ಇರುತ್ತದೆ. ಬುದ್ಧಿಯೋಗವು ಕುಟುಂಬದ ಕಡೆ ಹೋಗುತ್ತಾ ಇದ್ದರೆ ಅಂತಹವರು ಸರ್ವೀಸ್ ಮಾಡಲು ಯೋಗ್ಯರಾಗುವುದಿಲ್ಲ. ಇಲ್ಲಂತೂ ಬೇಹದ್ದಿನ ಸನ್ಯಾಸ ಮಾಡಬೇಕಾಗಿದೆ, ಇದು ಸ್ಮಶಾನವಾಗಿದೆ. ನಾವೀಗ ತಂದೆಯನ್ನು ನೆನಪು ಮಾಡಬೇಕಾಗಿದೆ, ಅವರೇ ಸ್ವರ್ಗದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ಈ ಬ್ರಾಹ್ಮಣ ಕುಲದಲ್ಲಿ ಯಾರು ಚೆನ್ನಾಗಿ ಸೇವೆ ಮಾಡುವರೋ ಅವರೇ ದೊಡ್ಡವರಾಗಿದ್ದಾರೆ. ಅವರಿಗೆ ಬಹಳ ಗೌರವವನ್ನಿಡಬೇಕು. ಅವರಂತೆ ಸೇವೆ ಮಾಡಬೇಕು ಆಗಲೇ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಈಗಂತೂ ತಮ್ಮ ಉನ್ನತಿಯ ಚಿಂತೆಯಿರಬೇಕು. ತಮ್ಮನ್ನು ನೋಡಿಕೊಳ್ಳಿ - ನಾವು ತಂದೆಯಿಂದ ಆಸ್ತಿಯನ್ನು ಪಡೆಯಲು ಯೋಗ್ಯರಾಗಿದ್ದೇವೆಯೇ ! ತಂದೆಯು ಪಾವನರನ್ನಾಗಿ ಮಾಡಿ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆ ಅಂದಮೇಲೆ ತಂದೆಯು ಹೇಗೆ ತಿರಸ್ಕರಿಸುತ್ತಾರೆ? ತಂದೆಯು ಎಲ್ಲರೊಂದಿಗೆ ಕೇಳಿದಾಗ ನಾವು ಮಹಾರಾಜಾ-ಮಹಾರಾಣಿಯಾಗುತ್ತೇವೆಂದು ಎಲ್ಲರೂ ಹೇಳುತ್ತಾರೆ ಆದರೆ ಅದೇರೀತಿ ಚಲನೆಯೂ ಇರಬೇಕಲ್ಲವೆ. ಕೆಲವರಂತೂ ಬಹಳ ಒಳ್ಳೆಯ ಮಕ್ಕಳಿದ್ದಾರೆ ಆದರೆ ಯಾರು ಪುರುಷಾರ್ಥವನ್ನೇ ಮಾಡುವುದಿಲ್ಲವೋ ಅವರೇನು ಪದವಿಯನ್ನು ಪಡೆಯುವರು! ಪ್ರತೀ ಮಾತಿನಲ್ಲಿ ಪುರುಷಾರ್ಥದಿಂದಲೇ ಪ್ರಾಲಬ್ಧ ಸಿಗುತ್ತದೆ. ಯಾರಾದರೂ ಕಾಯಿಲೆಗೊಳಗಾಗುತ್ತಾರೆ ಮತ್ತೆ ಅದು ಸರಿ ಹೊಂದುತ್ತಲೇ ದಿನ-ರಾತ್ರಿ ಪುರುಷಾರ್ಥದಲ್ಲಿ ತೊಡಗಿ, ವಿದ್ಯೆಯಲ್ಲಿ ಮುಂದುವರೆದು ಬಿಡುತ್ತಾರೆ. ಇಲ್ಲಿಯೂ ಸಹ ಸರ್ವೀಸಿನಲ್ಲಿ ತೊಡಗಬೇಕಾಗಿದೆ. ತಂದೆಯು ಸರ್ವೀಸಿನ ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ಪ್ರದರ್ಶನಿಯಲ್ಲಿ ತಿಳಿಸುವ ಅಭ್ಯಾಸ ಮಾಡಿರಿ.
ತಮ್ಮ ಉನ್ನತಿ ಮಾಡಿಕೊಂಡು ಜೀವನವನ್ನು ರೂಪಿಸಿಕೊಳ್ಳಿರಿ. ನಾನು ಎಷ್ಟು ಸರ್ವೀಸ್ ಮಾಡಿದೆನು, ಎಷ್ಟು ಜನರನ್ನು ತನ್ನ ಸಮಾನರನ್ನಾಗಿ ಮಾಡಿದೆನು ಎಂದು ಚಿಂತೆಯಿರಬೇಕು. ತಮ್ಮ ಸಮಾನ ಯಾರನ್ನೂ ತಯಾರು ಮಾಡದಿದ್ದರೆ ಶ್ರೇಷ್ಠ ಪದವಿಯೆಂದು ಹೇಗೆ ಹೇಳುವಿರಿ? ಅಂತಹವರು ಪ್ರಜೆಗಳಲ್ಲಿ ಹೋಗುತ್ತಾರೆ ಅಥವಾ ದಾಸ-ದಾಸಿಯಾಗುತ್ತಾರೆಂದು ತಿಳಿಯಲಾಗುತ್ತದೆ. ಬಹಳಷ್ಟು ಸೇವೆಯಿದೆ, ಈಗಿನ್ನೂ ನಿಮ್ಮದು ಚಿಕ್ಕ ವೃಕ್ಷವಾಗಿದೆ. ಶಕ್ತಿಶಾಲಿಯಾಗಿಲ್ಲ, ಬಿರುಗಾಳಿ ಬರುತ್ತಿದ್ದಂತೆಯೇ ಕಚ್ಚಾ ಇರುವವರು ಬಿದ್ದು ಹೋಗುತ್ತಾರೆ. ಮಾಯೆಯು ಬಹಳ ತೊಂದರೆ ಕೊಡುತ್ತದೆ. ಮಾಯೆಯ ಕೆಲಸವೇ ಆಗಿದೆ - ತಂದೆಯೊಂದಿಗೆ ವಿಮುಖರನ್ನಾಗಿ ಮಾಡುವುದು. ನಡೆಯುತ್ತಾ-ನಡೆಯುತ್ತಾ ಗ್ರಹಚಾರವು ಯಾವಾಗ ಇಳಿಯುತ್ತದೆಯೋ ಆಗ ನಾವಂತೂ ಈಗ ತಂದೆಯಿಂದ ಪೂರ್ಣ ಆಸ್ತಿ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ತನು-ಮನ-ಧನದಿಂದ ಪೂರ್ಣ ಸೇವೆ ಮಾಡುತ್ತಾರೆ. ಕೆಲವರಿಂದ ಮಾಯೆಯು ತಪ್ಪು ಮಾಡಿಸಿ ಬಿಡುತ್ತದೆ ನಂತರ ಶ್ರೀಮತದಂತೆ ನಡೆಯುವುದನ್ನೇ ಬಿಟ್ಟು ಬಿಡುತ್ತಾರೆ ನಂತರ ಯಾವಾಗ ಸ್ಮೃತಿಗೆ ಬರುತ್ತದೆಯೋ ಆಗ ಶ್ರೀಮತದಂತೆ ನಡೆಯುತ್ತಾರೆ. ಈ ಸಮಯದ ಪ್ರಪಂಚದಲ್ಲಿ ರಾವಣ ಸಂಪ್ರದಾಯದವರಿದ್ದಾರೆ. ಈ ದೇವತೆಗಳು ರಾಮ ಸಂಪ್ರದಾಯದವರಾಗಿದ್ದಾರೆ. ರಾವಣ ಸಂಪ್ರದಾಯದವರು ರಾಮ ಸಂಪ್ರದಾಯದವರ ಮುಂದೆ ತಲೆ ಬಾಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವು ವಿಶ್ವದ ಮಾಲೀಕರಾಗಿದ್ದೆವು, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಯಾವ ಗತಿಯಾಗಿ ಬಿಟ್ಟಿದೆ! ತಂದೆಯು ಈಗ ಎಲ್ಲರಿಂದ ಪುರುಷಾರ್ಥ ಮಾಡಿಸುತ್ತಾರೆ ಇಲ್ಲದಿದ್ದರೆ ನಾವು ಭಗವಂತನ ಶ್ರೀಮತದಂತೆ ನಡೆಯಲಿಲ್ಲವೆಂದು ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ಆದ್ದರಿಂದ ತಂದೆಯು ನಿತ್ಯವೂ ತಿಳಿಸುತ್ತಾರೆ - ಮಕ್ಕಳೇ, ತಪ್ಪು ಮಾಡಬೇಡಿ, ಸರ್ವೀಸ್ ಮಾಡುವವರನ್ನು ನೋಡುತ್ತೀರಿ. ಎಷ್ಟು ಚೆನ್ನಾಗಿ ಸರ್ವೀಸ್ ಮಾಡುತ್ತಾರೆ. ಕೆಲವರು ಫಸ್ಟ್ಗ್ರೇಡ್, ಕೆಲವರು ಸೆಕೆಂಡ್ ಗ್ರೇಡ್ನಲ್ಲಿ ಮಾಡುವವರಿದ್ದಾರೆ. ವ್ಯತ್ಯಾಸವಂತೂ ಇರುತ್ತದೆಯಲ್ಲವೆ. ತಂದೆಯು ಮಕ್ಕಳಿಗೆ ಸರಿಯಾದುದನ್ನೇ ತಿಳಿಸುತ್ತಾರಲ್ಲವೆ. ಲೌಕಿಕದಲ್ಲಿ ಕೆಲವರು ಮಕ್ಕಳನ್ನು ಹೊಡೆಯುತ್ತಾರೆ. ಇಲ್ಲಿ ಈ ಬೇಹದ್ದಿನ ತಂದೆಯಂತೂ ಪ್ರೀತಿಯಿಂದ ತಿಳಿಸುತ್ತಾರೆ - ತಮ್ಮ ಉನ್ನತಿ ಮಾಡಿಕೊಳ್ಳಿ. ಎಷ್ಟು ಸಾಧ್ಯವೋ ಪುರುಷಾರ್ಥ ಮಾಡಬೇಕು. ನಾನು 5000 ವರ್ಷಗಳ ನಂತರ ಬಂದು ಮಕ್ಕಳೊಂದಿಗೆ ಮಿಲನ ಮಾಡಿದ್ದೇನೆ. ರಾಜಯೋಗವನ್ನು ಕಲಿಸುತ್ತಿದ್ದೇನೆಂದು ತಂದೆಗೆ ಖುಷಿಯಾಗುತ್ತದೆ. ಗೀತೆಯೂ ಇದೆಯಲ್ಲವೆ - ನೀವೂ ಅವರೇ ಆಗಿದ್ದೀರಿ ಮತ್ತು ನಾವು ಅವರೇ ಕಲ್ಪದ ಮೊದಲಿನವರಾಗಿದ್ದೇವೆ. ಹಾಗೆಯೇ ತಂದೆಯು ತಿಳಿಸುತ್ತಾರೆ - ನೀವು ಮಕ್ಕಳೂ ಸಹ ಅದೇ ಕಲ್ಪದ ಹಿಂದಿನ ಮಕ್ಕಳಾಗಿದ್ದೀರಿ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸ್ವಯಂನ್ನು ಸೇವೆಗೆ ಯೋಗ್ಯನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಯೋ ಅವರಿಗೆ ಸಂಪೂರ್ಣ ಗೌರವ ಕೊಡಬೇಕಾಗಿದೆ. ತಮ್ಮ ಉನ್ನತಿಯ ಚಿಂತನೆ ಮಾಡಬೇಕಾಗಿದೆ.
2. ತನು-ಮನ-ಧನದಿಂದ ಪೂರ್ಣ ಸೇವೆ ಮಾಡಬೇಕಾಗಿದೆ. ಶ್ರೀಮತದಂತೆ ನಡೆಯಬೇಕು, ತಪ್ಪು (ಹುಡುಗಾಟಿಕೆ) ಮಾಡಬಾರದು.
ಓಂ ಶಾಂತಿ. ಮಕ್ಕಳು ಯಾರ ಮಹಿಮೆಯನ್ನು ಕೇಳಿದಿರಿ? ಬ್ರಹ್ಮನದೋ ಅಥವಾ ಸರಸ್ವತಿಯದೋ ಅಥವಾ ಶಿವನದೋ? ಯಾವಾಗ ನಿಮ್ಮನ್ನು ಬಿಟ್ಟು ಮತ್ತ್ಯಾರೂ ಇಲ್ಲವೆಂದು ಹೇಳುತ್ತಾರೆ ಅಂದಮೇಲೆ ಮತ್ತೆ ಅನ್ಯ ಯಾರ ಮಹಿಮೆಯನ್ನು ಮಾಡಲಾಗುತ್ತದೆ? ಭಲೆ ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದಾರೆ ಆದರೆ ಅವರಿಗೂ ಮೇಲೆ ಶಿವ ತಂದೆಯಿದ್ದಾರಲ್ಲವೆ. ಅವರ ವಿನಃ ಮತ್ತ್ಯಾರಿಗೂ ಮಹಿಮೆಯಿಲ್ಲ. ಈಗಂತೂ ಅನೇಕರಿಗೆ ಶಾಂತಿಯ ಪಾರಿತೋಷಕಗಳನ್ನು ಕೊಡುತ್ತಾರೆ, ಈ ಪ್ರಪಂಚದ ಸಮಾಚಾರವನ್ನೂ ಕೇಳಬೇಕು. ನಿಮಗೆ ಹೊಸ ಪ್ರಪಂಚದ ಸಮಾಚಾರವು ಬುದ್ಧಿಯಲ್ಲಿದೆ. ನಾವೀಗ ಹೊಸ ಪ್ರಪಂಚದಲ್ಲಿ ಹೋಗುತ್ತೇವೆ ಅಂದಾಗ ಒಬ್ಬ ತಂದೆಯ ವಿನಃ ಮತ್ತ್ಯಾರ ಮಹಿಮೆಯೂ ಇಲ್ಲವೆಂಬುದು ಮಕ್ಕಳಿಗೆ ಅರ್ಥವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ನೀವು ಪತಿತರನ್ನು ಪಾವನ ಮಾಡುವವನಾಗಿದ್ದೇನೆ, ನಾನು ಇಲ್ಲದಿದ್ದರೆ ನೀವು ಬ್ರಾಹ್ಮಣರೂ ಇರುವುದಿಲ್ಲ. ನೀವು ಬ್ರಾಹ್ಮಣರು ಈಗ ಕಲಿಯುತ್ತಿದ್ದೀರಿ, ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೀರಿ, ಶೂದ್ರರು ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ ಅಂದಮೇಲೆ ಬಲಿಹಾರಿಯು ಒಬ್ಬ ತಂದೆಯದಾಗಿದೆ. ಭಲೆ ಆತ್ಮಿಕ ಸೇವಾಧಾರಿಗಳೆಂದು ಬ್ರಾಹ್ಮಣರ ಗಾಯನವೂ ಇದೆ, ದೇವಿ-ದೇವತೆಗಳ ಗಾಯನವೂ ಇದೆ ಆದರೆ ಒಂದುವೇಳೆ ಶಿವ ತಂದೆಯಿಲ್ಲದಿದ್ದರೆ ಇವರಿಗೂ ಗಾಯನವು ಎಲ್ಲಿಂದ ಬಂದಿತು? ನನ್ನವರು ಒಬ್ಬ ಶಿವ ತಂದೆಯ ವಿನಃ ಯಾರೂ ಇಲ್ಲವೆಂದು ಹಾಡುತ್ತಾರೆ ಆಸ್ತಿಯೂ ಸಹ ಅವರಿಂದಲೇ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನನಗೆ ಯಾವುದೇ ಶಾಂತಿಯ ಬಹುಮಾನವು ಸಿಗುವುದಿಲ್ಲ, ನಾನಂತೂ ನಿಷ್ಕಾಮ ಸೇವಾಧಾರಿಯಾಗಿದ್ದೇನೆ, ನನಗೆ ಯಾವುದೇ ಪದಕವನ್ನು ಕೊಡುತ್ತೀರಾ! ನಾನು ಬಹುಮಾನವನ್ನೇನು ಕೊಡಲಿ. ಯಾರಾದರೂ ಚಿನ್ನದ ಪದಕವನ್ನು ಮಾಡಿಸಿಕೊಟ್ಟರೆ ಪತ್ರಿಕೆಗಳಲ್ಲಿ ಹಾಕುತ್ತಾರೆ. ನನಗಾಗಿ ಏನು ಮಾಡುವಿರಿ? ಮಕ್ಕಳೇ, ನಾನಂತೂ ತಂದೆಯಾಗಿದ್ದೇನೆ, ಪತಿತರನ್ನು ಪಾವನ ಮಾಡುವುದು ತಂದೆಯ ಕರ್ತವ್ಯವಾಗಿದೆ. ಡ್ರಾಮಾನುಸಾರ ನಾನು ಎಲ್ಲರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡಬೇಕಾಗಿದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ. ಹೇಗೆ ಜನಕನ ಹೆಸರಿದೆ ಅವರೇ ನಂತರ ಅನುಜನಕನಾದರು. ಹಾಗೆಯೇ ಇಲ್ಲಿಯೂ ಹೆಸರಿದೆ, ಹೇಗೆ ಯಾರ ಹೆಸರಾದರೂ ಲಕ್ಷ್ಮಿ ಎಂದಿರುತ್ತದೆ ಆದರೆ ಅವರು ಜೀವನ ಬಂಧನದಲ್ಲಿರುತ್ತಾರೆ ಮತ್ತು ನೀವೀಗ ಸತ್ಯ ಲಕ್ಷ್ಮಿ, ಸತ್ಯ ನಾರಾಯಣ ಆಗುತ್ತಿದ್ದೀರಿ. ಭಾರತದಲ್ಲಿಯೇ ಹೀಗೆ ಅನೇಕ ಹೆಸರುಗಳಿವೆ, ಅನ್ಯ ಧರ್ಮದವರ ಹೆಸರುಗಳು ಈ ರೀತಿ ಇರುವುದಿಲ್ಲ, ಭಾರತದಲ್ಲಿಯೇ ಏಕೆ ಇಡುತ್ತಾರೆ? ಏಕೆಂದರೆ ಇದು ದೊಡ್ಡವರ ನೆನಪಾರ್ಥವಾಗಿದೆ ಇಲ್ಲದಿದ್ದರೆ ವ್ಯತ್ಯಾಸವು ನೋಡಿ ಎಷ್ಟಿದೆ! ಇಲ್ಲಿನ ಲಕ್ಷ್ಮೀ ನಾರಾಯಣ ಎಂಬ ಹೆಸರಿನವರು ಮಂದಿರಗಳಿಗೆ ಹೋಗಿ ಸತ್ಯಯುಗೀ ಲಕ್ಷ್ಮೀನಾರಾಯಣರಿಗೆ ತಲೆ ಬಾಗುತ್ತಾರೆ, ಪೂಜೆ ಮಾಡುತ್ತಾರೆ. ಅವರಿಗೆ ಶ್ರೀಲಕ್ಷ್ಮೀ-ಶ್ರೀನಾರಾಯಣ ಎಂದು ಹೇಳುತ್ತಾರೆ ಆದರೆ ತಮಗೆ ಶ್ರೀ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಪತಿತರು ಶ್ರೇಷ್ಠರಾಗಲು ಹೇಗೆ ಸಾಧ್ಯ! ನಾವು ವಿಕಾರಿ ಪತಿತರಾಗಿದ್ದೇವೆ, ಅವರು ನಿರ್ವಿಕಾರಿ ಪಾವನರಾಗಿದ್ದಾರೆ ಎಂದು ಹೇಳುತ್ತಾರೆ. ಅವರೂ ಮನುಷ್ಯರೇ, ಅವರೂ ಸಹ ಇದ್ದು ಹೋಗಿದ್ದಾರೆ. ಇವೆಲ್ಲಾ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ, ನಿಮಗೆ ತಂದೆಯು ತಿಳಿಸುತ್ತಾರೆ ಮತ್ತು ಪ್ರತಿಯೊಂದು ಪ್ರಕಾರದ ಸಲಹೆಯನ್ನೂ ನೀಡುತ್ತಾರೆ. ಈಗ ವಿರಾಟರೂಪದ ಚಿತ್ರವೂ ಸಹ ಅವಶ್ಯವಾಗಿ ಇರಬೇಕು. ದೇವತೆಗಳೇ ಅಂತ್ಯದಲ್ಲಿ ಬಂದು ಶೂದ್ರರಾಗುತ್ತಾರೆ. ವಿಭಿನ್ನತೆಯಿದೆಯಲ್ಲವೆ. ಮತ್ತ್ಯಾರದೂ ಹೀಗೆ ವಿರಾಟರೂಪವು ಮಾಡಲ್ಪಟ್ಟಿಲ್ಲ, 84 ಜನ್ಮಗಳನ್ನು ನೀವೇ ತೆಗೆದುಕೊಳ್ಳುತ್ತೀರಿ. ಪೂಜ್ಯರು, ಪೂಜಾರಿಗಳು ನೀವೇ ಆಗುತ್ತೀರಿ. ಇಷ್ಟು ಮಂದಿ ಪೂಜಾರಿಗಳಿಗಾಗಿ ಪೂಜ್ಯರು ಬಹಳಮಂದಿ ಬೇಕಲ್ಲವೆ. ಆದ್ದರಿಂದ ಕುಳಿತು ಎಷ್ಟೊಂದು ಚಿತ್ರಗಳನ್ನು ರಚಿಸಿದ್ದಾರೆ! ಹನುಮಂತನನ್ನೂ ಪೂಜ್ಯನನ್ನಾಗಿ ಮಾಡಿಬಿಟ್ಟಿದ್ದಾರೆ ಆದ್ದರಿಂದ ವಿರಾಟ ರೂಪದ ಚಿತ್ರವು ಅವಶ್ಯಕವಾಗಿದೆ. ಲೆಕ್ಕವು ಬೇಕಲ್ಲವೆ. ಯಾವ ಲೆಕ್ಕದಿಂದ ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ಮೇಲೆ ಶಿಖೆಯನ್ನೂ ಅವಶ್ಯವಾಗಿ ತೋರಿಸಬೇಕಾಗಿದೆ. ವಿಷ್ಣುವಿನ ರೂಪವು ಸರಿಯಾಗಿದೆ ಏಕೆಂದರೆ ಪ್ರವೃತ್ತಿ ಮಾರ್ಗವಲ್ಲವೆ. ಬ್ರಾಹ್ಮಣರ ಶಿಖೆಯನ್ನೂ ಸಹ ಸ್ಪಷ್ಟ ಮಾಡಿ ತಿಳಿಸಬೇಕಾಗಿದೆ. ಚಿತ್ರಗಳನ್ನು ಇಷ್ಟು ದೊಡ್ಡದಾಗಿ ಮಾಡಿಸಬೇಕು ಅದರಲ್ಲಿ ಬರವಣಿಗೆಯೂ ಬಂದು ಬಿಡಬೇಕು. ನೀವು ಬಹಳ ಸಹಜವಾಗಿ ಇದನ್ನು ತಿಳಿಸಬಹುದು. ವಾಸ್ತವದಲ್ಲಿ ತಂದೆಗೆ ಯಾವ ಬಹುಮಾನವೂ ಸಿಗುವುದಿಲ್ಲ, ಬಹುಮಾನವು ನಿಮಗೆ ಸಿಗುತ್ತದೆ. ಪವಿತ್ರತೆ, ಸುಖ-ಶಾಂತಿಯ ರಾಜ್ಯವನ್ನು ನೀವೇ ಸ್ಥಾಪನೆ ಮಾಡುತ್ತೀರಿ. ನಾವಿದನ್ನು ಸ್ಥಾಪನೆ ಮಾಡುತ್ತಿದ್ದೇವೆ, ನಾವು ಯಾವ ಇಷ್ಟೊಂದು ಸೇವೆ ಮಾಡುತ್ತಿದ್ದೇವೆಯೋ ಅದರ ಬಹುಮಾನವಾಗಿ ವಿಶ್ವದ ರಾಜ್ಯಭಾಗ್ಯವು ನಮಗೇ ಸಿಗುತ್ತದೆ ಎಂಬುದನ್ನು ನೀವು ಯಾರಿಗಾದರೂ ತಿಳಿಸಬಹುದು. ಎಷ್ಟು ಒಳ್ಳೆಯ ತಿಳಿದುಕೊಳ್ಳುವ ಮಾತುಗಳಾಗಿವೆ ಬಾಕಿ ಇಲ್ಲಿ ಯಾರಿಗಾದರೂ ಶಾಂತಿಯ ಬಹುಮಾನವು ಏನು ಸಿಗಬಹುದು? ನೀವು ಇದನ್ನೂ ಬರೆಯಿರಿ, ನಾವು 2500 ವರ್ಷಗಳಿಗಾಗಿ ಪವಿತ್ರತೆ, ಸುಖ, ಶಾಂತಿಯನ್ನು ಶ್ರೀಮತದ ಅನುಸಾರ ಸ್ಥಾಪನೆ ಮಾಡುತ್ತಿದ್ದೇವೆ ಆದರೆ ಮಕ್ಕಳಿಗೆ ಇನ್ನೂ ಅಷ್ಟು ನಶೆಯೇರಿಲ್ಲ. ನಶೆಯು ಯಾರಿಗೆ ಇರುವುದು? ಶಿವ ತಂದೆಗೇನು? ಯಾರಿಗೆ ಪೂರ್ಣ ನಶೆಯಿರುತ್ತದೆಯೋ ಅವರು ಆ ನಶೆಯಿಂದ ತಿಳಿಸುತ್ತಾರೆ. ಮೊದಲು ಬ್ರಹ್ಮಾರವರಿಗೆ ನಶೆಯಿರುತ್ತದೆ ಆದ್ದರಿಂದ ಶಿವ ತಂದೆಯು ಫಾಲೋಫಾದರ್ ಎಂದು ಹೇಳುತ್ತಾರೆ. ನೀವೂ ಸಹ ಇಷ್ಟು ಶ್ರೇಷ್ಠ ಪುರುಷಾರ್ಥ ಮಾಡಿ ಈ ರೀತಿ ಆಗಬೇಕಾಗಿದೆ. ಈ ತಂದೆಯು ಹೇಳುತ್ತಾರೆ - ನನಗೆ ತಂದೆಯಿಂದ ಶಿಕ್ಷಣ ಸಿಗುತ್ತಿದೆ, ನೀವೂ ಸಹ ಶಿವ ತಂದೆಯನ್ನು ನೆನಪು ಮಾಡಿರಿ, ನಾನಂತೂ ಪುರುಷಾರ್ಥಿಯಾಗಿದ್ದೇನೆ. ಶಿವ ತಂದೆಯು ತಿಳಿಸುತ್ತಾರೆ - ಪಾವನರನ್ನಾಗಿ ಮಾಡುವುದೇ ನನ್ನ ಕರ್ತವ್ಯವಾಗಿದೆ ಅಂದಮೇಲೆ ಇದರಲ್ಲಿ ನನ್ನ ಮಹಿಮೆಯನ್ನೇನು ಮಾಡುತ್ತೀರಿ? ನನಗೆ ಬಹುಮಾನವನ್ನೇನು ಕೊಡುತ್ತೀರಿ? ಯಾರೂ ಸಹ ನನ್ನ ಈ ಕರ್ತವ್ಯವನ್ನು ಮಾಡಲು ಸಾಧ್ಯವಿಲ್ಲ. ಇತ್ತೀಚೆಗೆ ಅನೇಕರಿಗೆ ಶಾಂತಿಯ ಬಹುಮಾನವು ಸಿಗುತ್ತಾ ಇರುತ್ತದೆ ಅಂದಾಗ ನೀವು ಸಲಹೆ ನೀಡಬಹುದು - ತಾವು ಶಾಂತಿಯನ್ನು ಸ್ಥಾಪನೆ ಮಾಡಬಲ್ಲಿರಾ? ಶಾಂತಿ ಸ್ಥಾಪನೆ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ, ಮೊದಲು ಪವಿತ್ರತೆ ಬೇಕಾಗಿದೆ. ಶಾಂತಿಯು ಶಾಂತಿಧಾಮ ಸುಖಧಾಮದಲ್ಲಿಯೇ ಇರುತ್ತದೆ. ನಿರಾಕಾರಿ ಪ್ರಪಂಚದಲ್ಲಿ ಹಾಗೂ ಸಾಕಾರಿ ಪ್ರಪಂಚ ಸ್ವರ್ಗದಲ್ಲಿ. ಇದನ್ನೂ ಸಹ ತಿಳಿಸಬೇಕಾಗಿದೆ. ಶಾಂತಿಯನ್ನು ಸ್ಥಾಪನೆ ಮಾಡುವವರು ಯಾರು? ಬಂದು ಪಾವನ ಪ್ರಪಂಚವನ್ನು ಸ್ಥಾಪನೆ ಮಾಡಿ ಎಂದು ನೀವು ಕರೆಯುತ್ತೀರಿ. ಇದನ್ನು ಯಾರು ತಿಳಿಸುತ್ತಾರೆ? ಇಬ್ಬರು ಒಟ್ಟಿಗೆ ಇದ್ದಾರಲ್ಲವೆ. ಇಬ್ಬರ ಹೆಸರನ್ನಾದರೂ ತೆಗೆದುಕೊಳ್ಳಿ, ಒಬ್ಬರ ಹೆಸರನ್ನಾದರೂ ತೆಗೆದುಕೊಳ್ಳಿ. ತಂದೆ ರಾಜ ಮಗ ಮಂತ್ರಿ. ನೀವು ಏನು ತಿಳಿದುಕೊಳ್ಳುತ್ತೀರಿ? ಯಾರು ವಿಚಾರ ಸಾಗರ ಮಂಥನ ಮಾಡುತ್ತಾರೆ? ಶಿವ ತಂದೆಯೋ ಅಥವಾ ಬ್ರಹ್ಮನೋ? ಇಬ್ಬರು ಒಟ್ಟಿಗೆ ಇದ್ದಾರಲ್ಲವೆ. ಈ ಮಾತುಗಳು ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು. ಚಿತ್ರಗಳನ್ನು ಮಾಡಿಸಲು ಮತ್ತು ತಿಳಿಸಲು ಯಾರು ಸಲಹೆ ನೀಡುತ್ತಿದ್ದಾರೆ ಎಂಬುದು ನಿಮಗೆ ಅರ್ಥವಾಗುವುದಿಲ್ಲ. ನಾವು ಯಾವ ಆತ್ಮಿಕ ಸೇವೆ ಮಾಡುತ್ತಿದ್ದೇವೆಯೋ ಅದೂ ಸಹ ಡ್ರಾಮಾ ಅನುಸಾರವಾಗಿದೆ. ಓದುವ ಮತ್ತು ಓದಿಸುವವರು ಎಂದೂ ಗುಪ್ತವಾಗಿರಲು ಸಾಧ್ಯವಿಲ್ಲ. ಹಾ! ಬಿರುಗಾಳಿಗಳು ಅವಶ್ಯವಾಗಿ ಬರುತ್ತವೆ, ಈ ಪಂಚ ವಿಕಾರಗಳೇ ತೊಂದರೆ ಕೊಡುತ್ತವೆ. ರಾವಣ ರಾಜ್ಯದಲ್ಲಿ ಬುದ್ಧಿಯು ತಪ್ಪು ಕರ್ಮವನ್ನೇ ಮಾಡಿಸುತ್ತದೆ ಏಕೆಂದರೆ ಬುದ್ಧಿಗೆ ಬೀಗ ಬೀಳುತ್ತದೆ ಮಾಯೆಯು ಎಲ್ಲರಿಗೆ ಬೀಗ ಹಾಕಿ ಬಿಟ್ಟಿದೆ. ಜ್ಞಾನದ ಮೂರನೇ ನೇತ್ರವು ಈಗ ಸಿಕ್ಕಿದೆ.
ನೀವು ಭಾರತವಾಸಿಗಳು ಏನಾಗಿ ಬಿಟ್ಟಿದ್ದೀರಿ ಎಂಬುದನ್ನು ತಂದೆಯು ಕುಳಿತು ತಿಳಿಸುತ್ತಾರೆ. ಈ ಬ್ರಹ್ಮನೂ ಸಹ ತಿಳಿದುಕೊಳ್ಳುತ್ತಾರೆ - ನಾನು ಹೇಗಿದ್ದೆನು ಮತ್ತೆ 84 ಜನ್ಮಗಳ ನಂತರ ಏನಾಗುತ್ತೇನೆ? ಭಾರತದಲ್ಲಿ ಲಕ್ಷ್ಮೀ-ನಾರಾಯಣರದೆ 84 ಜನ್ಮಗಳೆಂದು ಎಣಿಕೆ ಮಾಡಲಾಗುತ್ತದೆ. ತಂದೆಯೂ ಸಹ ಇಲ್ಲಿಯೇ ಬಂದಿದ್ದಾರೆ. ಶಿವ ಜಯಂತಿಯೂ ಸಹ ಇಲ್ಲಿಯೇ ಆಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಪತಿತ ಶರೀರದಲ್ಲಿ ಪ್ರವೇಶ ಮಾಡಿ ಪತಿತ ಪ್ರಪಂಚದಲ್ಲಿಯೇ ಬರುತ್ತೇನೆ. ನಂಬರ್ವನ್ ಪಾವನನೇ ಮತ್ತೆ ನಂಬರ್ವನ್ ಪತಿತ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರಲ್ಲವೆ. ಸೇವಾಧಾರಿ ಮಕ್ಕಳ ಬುದ್ಧಿಯಲ್ಲಿ ಇಡೀ ದಿನ ಇದೇ ಜ್ಞಾನವಿರುತ್ತದೆ. ತಂದೆಯು ತಿಳಿಸುತ್ತಾರೆ- ಗೃಹಸ್ಥ ವ್ಯವಹಾರದಲ್ಲಿರುತ್ತಾ ಮೊದಲು ಪವಿತ್ರರಾಗಿರಿ ಮತ್ತು ತಂದೆಯನ್ನು ನೆನಪು ಮಾಡಿರಿ. ಸತ್ಸಂಗವೂ ಸಹ ಬೆಳಗ್ಗೆ ಮತ್ತು ಸಾಯಂಕಾಲ ಇರುತ್ತದೆ. ದಿನದಲ್ಲಿ ವ್ಯವಹಾರದಲ್ಲಿರುತ್ತಾರೆ, ಭಕ್ತಿ ಮಾಡುತ್ತಾರೆ. ಒಬ್ಬೊಬ್ಬರು ಒಬ್ಬೊಬ್ಬರ ಪೂಜೆ ಮಾಡುತ್ತಾರೆ. ವಾಸ್ತವದಲ್ಲಿ ಸ್ತ್ರೀಗೆ ಪತಿಯೇ ನಿಮಗೆ ಸರ್ವಸ್ವ ಎಂದು ಹೇಳುತ್ತಾರೆ. ಅಂದಮೇಲೆ ಮತ್ತೆ ಅವರು ಯಾರಿಗೂ ಪೂಜೆ ಮಾಡಬೇಕಾಗಿಲ್ಲ. ಪತಿಯನ್ನೇ ಗುರು ಈಶ್ವರನೆಂದು ತಿಳಿಯುತ್ತಾಳೆ ಆದರೆ ಇದನ್ನು ವಿಕಾರಿಗಳಿಗಾಗಿ ಹೇಳಲಾಗುವುದಿಲ್ಲ. ಪತಿಯರಿಗೂ ಪತಿ, ಗುರುಗಳಿಗೂ ಗುರು ಒಬ್ಬರೇ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ನೀವೆಲ್ಲರೂ ವಧುಗಳು, ಅವರೊಬ್ಬರೇ ವರನಾಗಿದ್ದಾರೆ. ಅವರು ಇದನ್ನು ಪತಿಗೆ ಸದ್ಗುರುವೆಂದು ತಿಳಿದುಕೊಳ್ಳುತ್ತಾರೆ. ವಾಸ್ತವದಲ್ಲಿ ತಂದೆಯು ಬಂದು ಮಾತೆಯರ ಗೌರವವನ್ನು ಹೆಚ್ಚಿಸುತ್ತಾರೆ. ಗಾಯನವಿದೆ - ಮೊದಲು ಲಕ್ಷ್ಮೀ ನಂತರ ನಾರಾಯಣ ಅಂದಮೇಲೆ ಲಕ್ಷ್ಮಿಯ ಗೌರವ ಹೆಚ್ಚಾಯಿತು. ಈಗ ನಿಮಗೆ ಸ್ವರ್ಗದ ಮಾಲೀಕರಾಗುವ ಎಷ್ಟೊಂದು ನಶೆಯಿರಬೇಕು! ಕಲ್ಪದ ಮೊದಲೂ ಸಹ ಶಿವ ಜಯಂತಿಯನ್ನು ಆಚರಿಸಿದ್ದಿರಿ. ತಂದೆಯು ಬಂದಿದ್ದರು, ಸ್ವರ್ಗದ ಸ್ಥಾಪನೆ ಮಾಡಿದ್ದರು. ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ. ನಾವೂ ಸಹ ರಾಜ್ಯವನ್ನು ತೆಗೆದುಕೊಳ್ಳುತ್ತೇವೆ ಮತ್ತು ಹಳೆಯ ಪ್ರಪಂಚದ ವಿನಾಶವೂ ಆಗಲಿದೆ, ಮತ್ತ್ಯಾರ ಬುದ್ಧಿಯಲ್ಲಿಯೂ ಈ ಮಾತುಗಳಿರಲು ಸಾಧ್ಯವಿಲ್ಲ. ಬುದ್ಧಿಯಲ್ಲಿ ಇವೆಲ್ಲಾ ಮಾತುಗಳು ಧಾರಣೆಯಿದ್ದಾಗ ಖುಷಿಯಾಗಿರುವರು. ಧೈರ್ಯ ಮತ್ತು ಶಕ್ತಿ ಬೇಕಾಗಿದೆ. ಇದರಲ್ಲಿ ಮಾತನಾಡುವ ಅಭ್ಯಾಸ ಮಾಡಿಕೊಳ್ಳಲಾಗುತ್ತದೆ, ಬಾಕಿ ಎಲ್ಲರೂ ಸಹ ಅಭ್ಯಾಸ ಮಾಡುವುದರಿಂದ ಒಳ್ಳೆಯ ವಕೀಲರಾಗಿ ಬಿಡುತ್ತಾರೆ. ನಂಬರ್ವಾರಂತೂ ಅವಶ್ಯವಾಗಿ ಇರುತ್ತಾರೆ. ಪ್ರಥಮದರ್ಜೆ, ದ್ವಿತಿಯ, ತೃತಿಯ ಹೀಗೆ ಇದ್ದೇ ಇರುತ್ತಾರೆ. ಮಕ್ಕಳ ಸ್ಥಿತಿಗಳೂ ಸಹ ಹಾಗೆಯೇ ಇವೆ. ಮಕ್ಕಳಲ್ಲಿ ಬಹಳ ಮಧುರತೆ ಬೇಕಾಗಿದೆ. ಮಧುರತೆ ಮತ್ತು ಸ್ಪಷ್ಟ ಶಬ್ಧಗಳಲ್ಲಿ ಮಾತನಾಡುವುದರಿಂದ ಪ್ರಭಾವ ಬೀರುವುದು ಅಂದಾಗ ಶಾಂತಿ ಸ್ಥಾಪನೆ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ಅವರನ್ನೇ ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನನಗೆ ಯಾವ ಬಹುಮಾನವನ್ನು ಕೊಡುತ್ತೀರಿ! ನಾನಂತೂ ನೀವು ಮಕ್ಕಳಿಗೆ ಬಹುಮಾನವನ್ನು ಕೊಡುತ್ತೇನೆ. ನೀವು ಸುಖ-ಶಾಂತಿಯನ್ನು ಸ್ಥಾಪನೆ ಮಾಡುತ್ತೀರಿ ಆದರೆ ನೀವು ಗುಪ್ತವಾಗಿದ್ದೀರಿ. ಮುಂದೆ ಹೋದಂತೆ ಪ್ರಭಾವ ಹೆಚ್ಚುತ್ತಾ ಹೋಗುವುದು. ಈ ಬಿ.ಕೆ.,ಗಳು ಬಹಳ ದೊಡ್ಡ ಕಮಾಲ್ ಮಾಡುತ್ತಾರೆಂದು ತಿಳಿದುಕೊಳ್ಳುತ್ತಾರೆ. ದಿನ-ಪ್ರತಿದಿನ ಸುಧಾರಣೆಯಾಗುತ್ತಾ ಹೋಗುತ್ತಾರೆ. ಯಾರ ಬಳಿಯಾದರೂ ಹೆಚ್ಚು ಹಣವಿದ್ದರೆ ಬಹಳ ಒಳ್ಳೊಳ್ಳೆಯ ಮಾರ್ಬಲ್ನ ಮನೆಗಳನ್ನು ಕಟ್ಟಿಸುತ್ತಾರೆ. ನೀವೂ ಸಹ ಹೆಚ್ಚು ಕಲಿಯುತ್ತಾ ಹೋಗುತ್ತೀರೆಂದರೆ ಮತ್ತೆ ಈ ಚಿತ್ರಗಳೆಲ್ಲವೂ ಬಹಳ ಆಧುನಿಕ ಮತ್ತು ಬಹಳ ಸುಂದರವಾಗಿ ತಯಾರಾಗುತ್ತಾ ಹೋಗುತ್ತವೆ. ಪ್ರತೀ ಮಾತಿನಲ್ಲಿ ಸಮಯ ಹಿಡಿಸುತ್ತದೆ, ಇದಂತೂ ಬಹಳ ದೊಡ್ಡ ಪರೀಕ್ಷೆಯಾಗಿದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ, ಮತ್ತ್ಯಾವುದರೊಂದಿಗೂ ನಮಗೆ ಸಂಬಂಧವಿಲ್ಲ. ತಮೋಪ್ರಧಾನರಿಂದ ಹೇಗೆ ಸತೋಪ್ರಧಾನರಾಗಬೇಕು ಎಂಬ ಯುಕ್ತಿಯನ್ನು ತಂದೆಯು ತಿಳಿಸುತ್ತಾರೆ. ಗೀತೆಯಲ್ಲಿಯೂ ಇದೆ - ಮನ್ಮನಾಭವ ಆದರೆ ಇದರ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಈಗ ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ. ಮಕ್ಕಳಿಗೆ ತಿಳಿದಿದೆ - ಅರ್ಧಕಲ್ಪ ಭಕ್ತಿ, ಅರ್ಧಕಲ್ಪ ಜ್ಞಾನವಿದೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯಿರುವುದಿಲ್ಲ. ಜ್ಞಾನವು ದಿನ, ಭಕ್ತಿಯು ರಾತ್ರಿಯಾಗಿದೆ. ಮನುಷ್ಯರಿಗೆ ದಿನ ಮತ್ತು ರಾತ್ರಿಯಾಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಬ್ರಹ್ಮನ ದಿನ, ಬ್ರಹ್ಮನ ರಾತ್ರಿ. ದಿನದಲ್ಲಿ ನೋಡಿ, ಲಕ್ಷ್ಮೀ-ನಾರಾಯಣರ ರಾಜಧಾನಿಯಿರುತ್ತದೆಯಲ್ಲವೆ. ಈಗ ರಾತ್ರಿಯಾಗಿದೆ, ಈ ರಹಸ್ಯವು ಎಷ್ಟು ಚೆನ್ನಾಗಿದೆ. ಬ್ರಹ್ಮನಾಗುವುದರಲ್ಲಿ 5000 ವರ್ಷಗಳು ಹಿಡಿಸುತ್ತವೆ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರಲ್ಲವೆ. ನಾವೇ ದೇವತೆಗಳಾಗುತ್ತೇವೆಂದು ನೀವು ಹೇಳುತ್ತೀರಿ, ಇದನ್ನಂತೂ ಚೆನ್ನಾಗಿ ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಸೃಷ್ಟಿಚಕ್ರವು ಬುದ್ಧಿಯಲ್ಲಿರಲಿ, ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ನೋಡಿ ಬಹಳ ಖುಷಿಯಾಗಬೇಕು. ಇದು ಗುರಿ-ಧ್ಯೇಯವಾಗಿದೆ. ನರನಿಂದ ನಾರಾಯಣನಾಗುವುದಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಅಲ್ಲಿ ಗೀತೆ ಇತ್ಯಾದಿಗಳನ್ನು ತಿಳಿಸುವುದಿಲ್ಲ. ಎಷ್ಟು ತಪ್ಪಾಗಿದೆ! ಈ ತಪ್ಪನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಮತ್ತೆಲ್ಲರೂ ವಿಷಯ ಸಾಗರದಲ್ಲಿ ಮುಳುಗುತ್ತಾ ಇರುತ್ತಾರೆ. ಅನೇಕರನ್ನು ಮಾಯೆಯು ಒಮ್ಮೆಲೆ ಕುತ್ತಿಗೆಯನ್ನು ಹಿಡಿದುಕೊಂಡು ಗುಣಿಯಲ್ಲಿ ಬೀಳಿಸುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಚರಂಡಿಯಲ್ಲಿ ಬೀಳಬೇಡಿ, ನಂತರ ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ಪಶ್ಚಾತ್ತಾಪ ಪಡಬಾರದೆಂದು ಹೇಳಿ ತಂದೆಯು ತಿಳಿಸುತ್ತಾರೆ. ಕೆಲವರಿಗಂತೂ ಬಹಳ ಚಲ ಬರುತ್ತದೆ, ಕೂಡಲೇ ಅದನ್ನು ಒಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವರು ಬಾಬಾ, ಮೊದಲೇ ನಮಗೆ ನಿಶ್ಚಿತಾರ್ಥವಾಗಿದೆ ಈಗ ಏನು ಮಾಡುವುದು? ಎಂದು ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಕಮಾಲ್ ಮಾಡಿ ತೋರಿಸಿರಿ, ಅವರಿಗೆ ಮೊದಲೇ ಹೇಳಿ ಬಿಡಿ - ನೀವು ನಂತರ ಪತಿಯ ಆಜ್ಞೆಯಂತೆ ನಡೆಯಬೇಕಾಗುವುದು. ನಾನು ಪವಿತ್ರವಾಗಿಯೇ ಇರುತ್ತೇನೆಂದು ಗ್ಯಾರಂಟಿ ಕೊಡಬೇಕಾಗುವುದು. ಇದನ್ನು ಮೊದಲೇ ಬರೆದುಕೊಡಿ - ತಾವು ಹೇಳಿದಂತೆ ನಾನು ಕೇಳುತ್ತೇನೆಂದು. ಬರೆಸಿಕೊಳ್ಳಿ ನಂತರ ಯಾವುದೇ ಏರುಪೇರಾಗುವುದಿಲ್ಲ. ಕನ್ಯೆಯಂತೂ ಬರೆಸಿಕೊಳ್ಳಲು ಸಾಧ್ಯವಿಲ್ಲ, ಕನ್ಯೆಯರಂತೂ ನಾವು ವಿವಾಹ ಮಾಡಿಕೊಳ್ಳಬಾರದೆಂದು ಪುರುಷಾರ್ಥ ಮಾಡಬೇಕು. ಕನ್ಯೆಯರು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ.
ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಏನು ತಿಳಿದುಕೊಂಡಿರಿ, ಹೇ ಪತಿತ-ಪಾವನ ಬಂದು ಪಾವನ ಮಾಡಿ ಎಂದು ಹೇಳುತ್ತೀರಿ ಅಂದಮೇಲೆ ನನ್ನದು ಇದೇ ಕೆಲಸವೇನು!! ಹೀಗೆ ತಂದೆಯು ಕೆಲವೊಮ್ಮೆ ಮಕ್ಕಳೊಂದಿಗೆ ಹಾಸ್ಯ ಮಾಡುತ್ತಾರೆ. ಬಾಬಾ, ನಾವು ಪತಿತರಾಗಿ ಬಿಟ್ಟಿದ್ದೇವೆ ಬಂದು ಪಾವನ ಮಾಡಿ ಎಂದು ನೀವು ಕರೆಯುತ್ತೀರಿ. ತಂದೆಯು ಪರದೇಶದಲ್ಲಿ ಬರುತ್ತಾರೆ. ಇದು ಪತಿತ ಪ್ರಪಂಚ ಅಲ್ಲವೆ. ನಾನು ಇವರಲ್ಲಿ ಪ್ರವೇಶ ಮಾಡಿ ಪಾವನರನ್ನಾಗಿ ಮಾಡಬೇಕಾಗಿದೆ. ಇವರು ನಂತರ ಸತ್ಯಯುಗದಲ್ಲಿ ಪಾವನ ಶರೀರವನ್ನು ತೆಗೆದುಕೊಳ್ಳುತ್ತಾರೆ ಆದರೆ ನನ್ನ ಅದೃಷ್ಟದಲ್ಲಿ ಇದೂ ಇಲ್ಲ, ನಾನಂತೂ ಪತಿತ ಶರೀರದಲ್ಲಿಯೇ ಬರಬೇಕಾಗುತ್ತದೆ. ಈ ಜ್ಞಾನವನ್ನು ಕೇಳಿ ಅನೇಕ ಮಕ್ಕಳಿಗೆ ಖುಷಿಯಾಗುತ್ತದೆ. ಇದು ಎಷ್ಟು ದೊಡ್ಡ ಜ್ಞಾನವಾಗಿದೆ! ಅಂದಮೇಲೆ ಪೂರ್ಣ ಪುರುಷಾರ್ಥವನ್ನೂ ಮಾಡಬೇಕಲ್ಲವೆ. ಒಳ್ಳೆಯ ಪುರುಷಾರ್ಥಿಗಳ ಹೆಸರನ್ನು ತಂದೆಯು ಗಾಯನ ಮಾಡುತ್ತಾರೆ. ಮನುಷ್ಯರಂತೂ ಮಜಾ ಮಾಡುತ್ತಾರೆ, ನಾವು ಇಲ್ಲಿಯೇ ಸ್ವರ್ಗದಲ್ಲಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಇಲ್ಲಂತೂ ಸಹನೆ ಮಾಡಬೇಕಾಗುತ್ತದೆ. ತಂದೆಯು ಏನಾದರೂ ತಿನ್ನಿಸಲಿ, ಕುಡಿಸಲಿ, ಎಲ್ಲಿಯಾದರೂ ಕೂರಿಸಲಿ, ಹೆಜ್ಜೆ-ಹೆಜ್ಜೆಯಂತೆ ಶ್ರೀಮತದಂತೆ ನಡೆಯಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಶಿವ ತಂದೆಯನ್ನು ನೆನಪು ಮಾಡಬೇಕು, ಬ್ರಹ್ಮಾ ತಂದೆಯನ್ನು ಫಾಲೋ ಮಾಡಬೇಕಾಗಿದೆ. ಬ್ರಹ್ಮಾ ತಂದೆಯ ಸಮಾನ ಶ್ರೇಷ್ಠ ಪುರುಷಾರ್ಥ ಮಾಡಬೇಕಾಗಿದೆ. ಈಶ್ವರೀಯ ನಶೆಯಲ್ಲಿ ಇರಬೇಕಾಗಿದೆ.
2. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ ಮತ್ತ್ಯಾವುದೇ ಮಾತಿನ ಚಿಂತೆ ಮಾಡಬಾರದು. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಬೇಕಾಗಿದೆ.
ಓಂ ಶಾಂತಿ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಹೇಗೆ 5000 ವರ್ಷಗಳ ಮೊದಲು ತಿಳಿಸಿದ್ದರೋ ಹಾಗೆಯೇ ಹಳೆಯ ಪ್ರಪಂಚದ ವಿನಾಶ ಮತ್ತು ಹೊಸ ಪ್ರಪಂಚ ಸತ್ಯಯುಗದ ಸ್ಥಾಪನೆ ಹೇಗಾಗುತ್ತದೆ ಎಂಬುದನ್ನು ಚಾಚೂ ತಪ್ಪದೆ ತಿಳಿಸುತ್ತಿದ್ದಾರೆ. ಈಗ ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ಸಂಗಮಯುಗವಾಗಿದೆ. ತಂದೆಯು ತಿಳಿಸಿದ್ದಾರೆ - ಹೊಸ ಪ್ರಪಂಚ ಸತ್ಯಯುಗದಿಂದ ಹಿಡಿದು ಈಗ ಕಲಿಯುಗದ ಅಂತ್ಯದವರೆಗೆ ಏನೇನು ಆಗುತ್ತಿದೆ! ಯಾವ-ಯಾವ ಸಾಮಗ್ರಿಯಿದೆ! ಏನೇನು ನೋಡುತ್ತೀರಿ! ಯಜ್ಞ, ತಪ, ದಾನ, ಪುಣ್ಯ ಇತ್ಯಾದಿ ಏನೇನು ಮಾಡುತ್ತಾರೆ. ಇದು ಏನೆಲ್ಲವೂ ಕಾಣುತ್ತಿದೆಯೋ ಯಾವುದೂ ಉಳಿಯುವುದಿಲ್ಲ. ಹಳೆಯ ಯಾವುದೇ ವಸ್ತು ಉಳಿಯುವುದಿಲ್ಲ. ಹೇಗೆ ಹಳೆಯ ಮನೆಯನ್ನು ಬೀಳಿಸುತ್ತಾರೆಂದರೆ ಮಾರ್ಬಲ್ ಕಲ್ಲು ಮೊದಲಾದ ಒಳ್ಳೆಯ ವಸ್ತುಗಳಿರುತ್ತವೆಯೋ ಅವನ್ನು ಇಟ್ಟುಕೊಳ್ಳುತ್ತಾರೆ, ಉಳಿದನ್ನು ಬೀಳಿಸಿ ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈ ಹಳೆಯದೆಲ್ಲವೂ ಸಮಾಪ್ತಿಯಾಗಲಿದೆ ಬಾಕಿ ಯಾವ ವೈಜ್ಞಾನಿಕ ಕಲೆಯಿದೆಯೋ ಅದು ಶಾಶ್ವತವಾಗಿರುವುದು. ಈ ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆ, ಸತ್ಯಯುಗದಿಂದ ಕಲಿಯುಗದ ಅಂತ್ಯದವರೆಗೆ ಏನೇನು ಆಗುತ್ತದೆ ಎಂಬುದೆಲ್ಲವನ್ನೂ ನೀವು ತಿಳಿದುಕೊಂಡಿದ್ದೀರಿ. ಈ ವಿಜ್ಞಾನವೂ ಸಹ ಒಂದು ವಿದ್ಯೆಯಾಗಿದೆ ಅದರಿಂದ ವಿಮಾನ, ವಿದ್ಯುತ್ ಇತ್ಯಾದಿಗಳೆಲ್ಲವೂ ಆಗಿದೆ. ಮೊದಲು ಇವು ಇರಲಿಲ್ಲ, ಈಗ ಬಂದಿವೆ. ಪ್ರಪಂಚವಂತೂ ನಡೆಯುತ್ತಿರುತ್ತದೆ, ಭಾರತವು ಅವಿನಾಶಿ ಖಂಡವಾಗಿದೆ. ಪ್ರಳಯವಂತೂ ಆಗುವುದಿಲ್ಲ. ವಿಜ್ಞಾನದಿಂದ ಈಗ ಇಷ್ಟೊಂದು ಸುಖ ಸಿಗುತ್ತದೆ, ಈ ಕಲೆಯು ಸತ್ಯಯುಗದಲ್ಲಿಯೂ ಇರುತ್ತದೆ. ಕಲಿತಿರುವ ಕಲೆಗಳು ಇನ್ನೊಂದು ಜನ್ಮದಲ್ಲಿಯೂ ಕೆಲಸಕ್ಕೆ ಬರುತ್ತದೆ. ಅಲ್ಪಸ್ವಲ್ಪ ಉಳಿದಿರುತ್ತದೆ, ಇಲ್ಲಿಯೂ ಸಹ ಭೂಕಂಪ ಆಗುತ್ತದೆಯೆಂದರೆ ಬಹು ಬೇಗನೆ ಎಲ್ಲವನ್ನು ಹೊಸದಾಗಿ ಮಾಡಿಬಿಡುತ್ತಾರೆ. ಅಲ್ಲಿ ಹೊಸ ಪ್ರಪಂಚದಲ್ಲಿ ವಿಮಾನಗಳನ್ನು ತಯಾರಿಸುವವರೂ ಇರುತ್ತಾರೆ, ಸೃಷ್ಟಿಯು ನಡೆಯುತ್ತಲೇ ಇರುತ್ತದೆ. ಇವುಗಳನ್ನು ತಯಾರಿಸುವವರೂ ಸಹ ಬರುತ್ತಾರೆ, ಅಂತ್ಯಮತಿ ಸೋ ಗತಿಯಾಗುತ್ತದೆ. ಭಲೆ ಅವರಲ್ಲಿ ಈ ಜ್ಞಾನವಿಲ್ಲ ಆದರೆ ಅವರು ಅವಶ್ಯವಾಗಿ ಬರುತ್ತಾರೆ ಮತ್ತು ಹೊಸ, ಹೊಸ ವಸ್ತುಗಳನ್ನು ತಯಾರಿಸುತ್ತಾರೆ. ಈ ವಿಚಾರಗಳು ಈಗ ನಿಮ್ಮ ಬುದ್ಧಿಯಲ್ಲಿದೆ. ಇದೆಲ್ಲವೂ ಸಮಾಪ್ತಿಯಾಗುತ್ತದೆ, ಕೇವಲ ಭಾರತ ಖಂಡವೇ ಉಳಿಯುತ್ತದೆ. ನೀವು ಯೋಧರಾಗಿದ್ದೀರಿ. ತಮಗಾಗಿ ಯೋಗಬಲದಿಂದ ಸ್ವರಾಜ್ಯದ ಸ್ಥಾಪನೆ ಮಾಡುತ್ತಿದ್ದೀರಿ. ಅಲ್ಲಿ ಎಲ್ಲವೂ ಹೊಸದಾಗಿರುವುದು, ತತ್ವಗಳೂ ಸಹ ಯಾವುದು ತಮೋಪ್ರಧಾನವಾಗಿದೆಯೋ ಅವು ಸತೋಪ್ರಧಾನವಾಗಿ ಬಿಡುತ್ತದೆ. ನೀವೂ ಸಹ ಹೊಸ ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಈಗ ಪವಿತ್ರರಾಗುತ್ತಿದ್ದೀರಿ. ನಾವು ಮಕ್ಕಳು ಇದನ್ನು ಕಲಿತು ಬಹಳ ಬುದ್ಧಿವಂತರಾಗುತ್ತೇವೆ. ಬಹಳ ಮಧುರ ಹೂಗಳಾಗುತ್ತೇವೆಂದು ನಿಮಗೆ ತಿಳಿದಿದೆ. ನೀವು ಯಾರಿಗಾದರೂ ಈ ಮಾತುಗಳನ್ನು ತಿಳಿಸುತ್ತೀರೆಂದರೆ ಅವರು ಬಹಳ ಖುಷಿಯಾಗುತ್ತಾರೆ. ಯಾರೆಷ್ಟು ಚೆನ್ನಾಗಿ ತಿಳಿಸುವರೋ ಅದರಂತೆ ಬಹಳ ಖುಷಿ ಪಡುತ್ತಾರೆ. ಇವರು ಬಹಳ ಚೆನ್ನಾಗಿ ತಿಳಿಸುತ್ತಾರೆಂದು ಹೇಳುತ್ತಾರೆ ಆದರೆ ಅಭಿಪ್ರಾಯವನ್ನು ಬರೆದುಕೊಡಲು ಹೇಳಿದಾಗ ವಿಚಾರ ಮಾಡುತ್ತೇವೆ, ಇಷ್ಟರಲ್ಲಿಯೇ ನಾವು ಹೇಗೆ ಬರೆಯುವುದು ಎಂದು ಹೇಳುತ್ತಾರೆ. ಒಂದು ಬಾರಿ ಕೇಳಿದೊಡನೆ ತಂದೆಯ ಜೊತೆ ಹೇಗೆ ಬುದ್ಧಿಯೋಗವನ್ನು ಇಡುವುದು ಎಂಬುದನ್ನು ಕಲಿಯುವುದಿಲ್ಲ. ಇಷ್ಟವಂತೂ ಆಗುತ್ತದೆ. ನೀವು ಇದನ್ನು ಅವಶ್ಯವಾಗಿ ತಿಳಿಸುತ್ತೀರಿ - ಈಗ ಹಳೆಯ ಪ್ರಪಂಚದ ವಿನಾಶವಾಗಲಿದೆ, ಪಾಪಗಳ ಹೊರೆಯು ತಲೆಯ ಮೇಲೆ ಬಹಳಷ್ಟಿದೆ, ಇದು ಪತಿತ ಪ್ರಪಂಚವಾಗಿದೆ, ಬಹಳ ಪಾಪಗಳನ್ನು ಮಾಡಿದ್ದಾರೆ, ರಾವಣ ರಾಜ್ಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದಲೇ ಪತಿತ-ಪಾವನ ತಂದೆಯನ್ನು ಕರೆಯುತ್ತಾರೆ. ಈ ಜ್ಞಾನವು ನಿಮಗೆ ಈಗ ಇದೆ. ಸತ್ಯಯುಗದಲ್ಲಿ ಇದರ ನಂತರ ತ್ರೇತಾಯುಗವು ಬರುವುದು ಎಂಬುದೇನೂ ತಿಳಿದಿರುವುದಿಲ್ಲ. ಅಲ್ಲಂತೂ ಪ್ರಾಲಬ್ಧವನ್ನು ಭೋಗಿಸುತ್ತೀರಿ.
README.md exists but content is empty. Use the Edit dataset card button to edit it.
Downloads last month
25,253
Edit dataset card