File size: 13,262 Bytes
7f4117a
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
byಕೆಂಡಸಂಪಿಗೆ|Mar 6, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments

ನೀರಿಗೆಂದು ಅಗೆದಾಗ ದ್ರವರೂಪದ ಚಿನ್ನ ಎನ್ನಿಸಿದ ಪೆಟ್ರೋಲ್ ಸಿಕ್ಕರೆ? ಕರ್ನಾಟಕದಲ್ಲಿ ಕಂಡಕಂಡೆಡೆ ಬೋರ್‍ವೆಲ್ ತೋಡುತ್ತಿರುವ ನೀರ್ ಸಾಬರು ಎನ್ನಿಸಿರುವ ನಜೀರ್ ಸಾಬರೂ ಕಡಿಮೆ ಆಗುತ್ತಿರುವ ನೀರಿನ ಮಟ್ಟವನ್ನು ಗಣಿಸದೆ ಬೋರ್‍ವೆಲ್ ತೋಡುವ ಕೆಲಸವನ್ನು ಇನ್ನೂ ಚುರುಕುಗೊಳಿಸಿದರೆ ನೀರಿಗೆ ಬದಲು ನಮಗೂ ಪೆಟ್ರೋಲ್ ಸಿಕ್ಕರೆ ನೀರ್‍ಸಾಬರು ಪೆಟ್ರೋಲ್ ಸಾಬ್ ಆಗಬಹುದು. ಕಾವೇರಿ ಬೇಸಿನ್‍ನಲ್ಲಿ ತೈಲ ಸಿಕ್ಕ ಸುದ್ದಿ ಆಗಾಗ್ಗೆ ಬರುತ್ತಿರುವಾಗ ಕರ್ನಾಟಕಕ್ಕೇಕೆ ಈ ದ್ರವರೂಪದ ಚಿನ್ನ ಬೇಡ? `ಬೋರ್‍ವೆಲ್’ ತೋಡುವುದು ಹೆಚ್ಚಾಗಬಹುದು.ಜೋಗಿ ಸಂಪಾದಿಸಿದ “ವೈಯೆನ್ಕೆ UNLIMITED ವಾಚಿಕೆ” ಕೃತಿಯ ಆಯ್ದ ಬರಹ ನಿಮ್ಮ ಓದಿಗೆ

byಕೆಂಡಸಂಪಿಗೆ|Mar 4, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment

ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್‌ ಪಾಷಾ ತೋರಿದ್ದಾರೆ.ಚಾಂದ್‌ ಪಾಷ ಎನ್.ಎಸ್. ಕವನ ಸಂಕಲನ “ಒದ್ದೆಗಣ್ಣಿನ ದೀಪ”ಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

byಕೆಂಡಸಂಪಿಗೆ|Mar 3, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments

ಕೊನೆಯಾಗದ ಕಷ್ಟಗಳು, ಮರೆಯಲಾಗದ ನೋವು, ಸದಾ ಉಳಿಯುವ ಚಡಪಡಿಕೆ, ಹೆದರಿಸುವ ಒಂಟಿತನ- ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣುತ್ತವೆ. ಎದೆಯೊಳಗಿನ ನೋವನ್ನು ಅಂಗೈಲಿ ಹಿಡಿದುಕೊಂಡೇ ವಿನಾಯಕ ಇಲ್ಲಿನ ಕಥೆಗಳಿಗೆ ಅಕ್ಷರ ರೂಪ ನೀಡಿರಬಹುದೇನೋ ಎಂದು ಪದೇ ಪದೇ ಅನಿಸುವಷ್ಟರಮಟ್ಟಿಗೆ ಇಲ್ಲಿನ ಕಥೆಗಳು ಸಂಕಟವನ್ನು ಉಸಿರಾಡಿದೆ. ಒಬ್ಬೊಬ್ಬರ ಬದುಕೂ ಸಂಕಟದ ಸಾಗರವೇ ಆಗಿರುತ್ತದೆ ಎಂಬುದನ್ನು ಎದೆ ಬಗೆದು ತೋರುವಂಥ ಹುಮ್ಮಸ್ಸಿನಲ್ಲಿ ವಿನಾಯಕ ಕಥೆ ಹೇಳಿದ್ದಾರೆ. ತಮ್ಮ ಪ್ರಯತ್ನದಲ್ಲಿ ತಕ್ಕಮಟ್ಟಿನ ಗೆಲುವನ್ನು ಕಂಡಿದ್ದಾರೆ.ವಿನಾಯಕ ಅರಳಸುರಳಿ ಕಥಾಸಂಕಲನ “ಮರ ಹತ್ತದ ಮೀನು”ಕ್ಕೆ ಎ.ಆರ್‌. ಮಣಿಕಾಂತ್ ಬರೆದ ಮುನ್ನುಡಿ

byಮಂಡಲಗಿರಿ ಪ್ರಸನ್ನ|Mar 1, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments

ಗಜಲ್ ಮೂಲತಃ ಮನುಷ್ಯ ಸಹಜ ಪ್ರೀತಿ, ಪ್ರೇಮ, ಪ್ರಣಯ, ವಿರಹ, ವೇದನೆ, ಏಕಾಂಗಿತನ, ನೋವು, ಹತಾಶೆ, ವಿಪ್ರಲಂಭನ, ಬೇಗುದಿ, ತಳಮಳಗಳನ್ನು ಅಭಿವ್ಯಕ್ತಿಗೊಳಿಸುವ ಕಾವ್ಯವಾದರೂ, ಅದರಾಚೆಯ ವರ್ತಮಾನದ ಸಂಗತಿಗಳನ್ನೂ ಅದು ಪ್ರತಿಧ್ವನಿಸುತ್ತದೆ. ಇಂತಹ ಹಲವು ದೃಷ್ಟಿಕೋನಗಳನ್ನಿಟ್ಟುಕೊಂಡು ಇಲ್ಲಿ ಕೆಲ ಗಜಲ್‌ಗಳು ಮೈದಾಳಿವೆ. ಅಂಬಮ್ಮ ಅವರ ಗಜಲ್‌ಗಳಲ್ಲಿ ಪ್ರೇಮ ನಿವೇದನೆ ಇದೆ, ನೋವುಂಡ ಹೃದಯಾಂತರಾಳದ ಯಾತನೆ ಇದೆ. ಜೊತೆಗೆ ಕೆಲವೆಡೆ ಚಡಪಡಿಕೆ, ಕಾತರತೆ, ಆರ್ದ್ರತೆ, ಮನದ ತಾಕಲಾಟಗಳ ತಳಮಳವೂ ಇದೆ.ಅಂಬಮ್ಮ ಪ್ರತಾಪ್‌ ಸಿಂಗ್‌ ಗಜಲ್‌ ಸಂಕಲನ “ಮೌನದೊಡಲ ಮಾತು” ಕುರಿತು ಮಂಡಲಗಿರಿ ಪ್ರಸನ್ನ ಬರಹ

byಮಹಾಬಲ ಭಟ್|Feb 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments

ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ. ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ.ಸುಧಾ ಎಂ. ಚೊಚ್ಚಲ ಕಥಾ ಸಂಕಲನ “ಅಪೂರ್ಣವಲ್ಲ” ಕುರಿತು ಮಹಾಬಲ ಭಟ್‌ ಅವರ ಬರಹ

byಕೆಂಡಸಂಪಿಗೆ|Feb 27, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment

ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ.ಪರಿಸರವಾದಿ ನಾಗೇಶ ಹೆಗಡೆಯವರ ಹೊಸ ಕೃತಿ “ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”ಯ ಒಂದು ಅಧ್ಯಾಯ ನಿಮ್ಮ ಓದಿಗೆ

byಕೆಂಡಸಂಪಿಗೆ|Feb 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments

ಅವರ ಕತೆಗಳಲ್ಲಿ ಸಂಭಾಷಣೆಗಿಂತ ನಿರೂಪಣೆಯೇ ಮುನ್ನೆಲೆಗೆ ಬರುತ್ತದೆ. ಹೀಗಾಗಿ ಕತೆಯ ಪೂರ್ಣ ಹೆಣಿಗೆ ಆಡುಮಾತಿನಲ್ಲೇ ಇರುತ್ತದೆ. ಆಡುವ ನುಡಿಯಂತೆಯೇ ಬರವಣಿಗೆಯೂ ಇರುತ್ತಾ, ನಿರೂಪಣೆಯಲ್ಲೇ ‘ಹ’ಕಾರ ‘ಅ’ಕಾರಗಳ ಅದಲು ಬದಲುಗಳೂ ಸೇರಿಕೊಂಡು ಇತರ ಸ್ಥಳೀಯ ಪದಗಳ ಬಳಕೆಯೂ ಹಾಗೇ ದಾಖಲಾಗುತ್ತದೆ. ಇದು ಕೆಲವೊಮ್ಮೆ ಭಾಷೆಯ ಬಳಕೆಯ ಬಗೆಗೆ ‘ಮಡಿವಂತಿಕೆ’ ಹೊಂದಿದ್ದು, ತಮ್ಮದೇ ಸರಿ ಕನ್ನಡ, ಇದೆಲ್ಲ ‘ಅಶುದ್ಧ’ ಕನ್ನಡ ಎಂದುಕೊಳ್ಳುವವರಿಗೆ ಇರಿಸು ಮುರಿಸು ಮಾಡಬಹುದು. ಆದರೆ ಇವು ಆಡುಕನ್ನಡದ ಒಂದು ಟಿಸಿಲು ಎಂದು ಅರಿತರೆ ಸಮಸ್ಯೆ ಅನ್ನಿಸದು.ವಿಜಯಾ ಮೋಹನ್‌ ಕಥಾ ಸಂಕಲನ “ಮೇವು”ಗೆ ಡಾ. ಸಬಿತಾ ಬನ್ನಾಡಿ ಬರೆದ ಮುನ್ನುಡಿ

byಮಾಲಾ ಮ. ಅಕ್ಕಿಶೆಟ್ಟಿ|Feb 23, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments

ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ.ಮಲ್ಲಿಕಾರ್ಜುನ್ ಶೆಲ್ಲಿಕೇರಿಯವರ “ದೀಡೆಕರೆ ಜಮೀನು” ಕಥಾ ಸಂಕಲನದ ಕುರಿತು ಮಾಲಾ ಮ. ಅಕ್ಕಿಶೆಟ್ಟಿ ಬರಹ

byಕೆಂಡಸಂಪಿಗೆ|Feb 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments

ಆ ಚುನಾವಣೆಯಲ್ಲಿ ಸಂಜಯ್ ಸರ್ಕಾರ್ ಸ್ಪರ್ಧಿಸಿದ್ದರೆ ಬಹುಮತದಿಂದ ಗೆದ್ದು ಬರುತ್ತಿದ್ದರು. ಅವರು ಆ ಕೆಲಸ ಮಾಡಲಿಲ್ಲ. ನ್ಯಾಷನಲ್ ಪಾರ್ಟಿಯೇ ಮತ್ತೆ ಅಧಿಕಾರಕ್ಕೆ ಬರುವತನಕ ಕಾದರು. ನಂತರ ಸರ್ಕಾರದ ಲೋಪಗಳನ್ನು ಎತ್ತಿ ತೋರಿದರು. ನ್ಯಾಷನಲ್ ಪಾರ್ಟಿಯ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದ್ದಂತೆ, ಸಂಜಯ್ ಸರ್ಕಾರ್ ತಮ್ಮ ಹೊಸ ಪಕ್ಷವನ್ನು ಹುಟ್ಟುಹಾಕಿದರು. ಅದಕ್ಕೆ ಮಾತೃಭೂಮಿ ಎಂದು ಹೆಸರಿಟ್ಟರು. ಸಂಜಯ್ ಸರ್ಕಾರ್ ಜತೆ ಹೋರಾಟದ ಉದ್ದಕ್ಕೂ ಜತೆಗಿದ್ದ ಚಿದಾನಂದ ಪಾಂಡೆಯನ್ನು ಪಕ್ಷದ ಅಧ್ಯಕ್ಷರೆಂದು ಘೋಷಿಸಿದರು.ನೆನ್ನೆಯಷ್ಟೇ ಬಿಡುಗಡೆಯಾದ ಜೋಗಿಯವರ ಕಾದಂಬರಿ “ಹಸ್ತಿನಾವತಿ”ಯ ಕೆಲವು ಪುಟಗಳು ನಿಮ್ಮ ಓದಿಗೆ