File size: 6,910 Bytes
94fcbe1 |
1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 |
ಕನ್ನಡ ಸಾಹಿತ್ಯ.ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು ಚಂದ್ರ ಹಂದಿ, ಅವಳು ಗುಟುರುವುದು ನನ್ನ ಗಂಟಲಿನಿಂದ ನನ್ನ ಒಳಗೆಲ್ಲ ಬೆಳಗುವ ಹಾಗೆ ಅವಳು ಹೊಳೆಯುತ್ತ ಹೋದಂತೆ ಅಂತರಾಳದ ನನ್ನ ಕೆಸರು ಸಂಭ್ರಮಿಸಿ ಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ ನಾನು ಗಂಡು ಹಂದಿ ಮತ್ತು ಕವಿ ಅವಳು ತನ್ನ ಧವಳ ತುಟಿಗಳ ತೆರೆದು ನನ್ನನ್ನು ನುಂಗಲೆಂದು ಅಗಲಿಸಿದಾಗ ನಾನು ಅವನ್ನು ಕಚ್ಚಿಬಿಡುತ್ತೇನೆ ಆಗ ಚಂದ್ರಲೋಕದಲ್ಲಿ ಹರ್ಷೋದ್ಘಾರ. ಬಯಕೆಯ ನಿಶೆಯಲ್ಲಿ ನಾವಾಗ ತುಯ್ದಾಡುವುದು ಗುಟುರುವುದು ಗುಟುರುತ್ತಾ ಹೊಳೆಯುವುದು. (Denis Levertov(೧೯೨೩-೧೯೯೭) ಅಮೆರಿಕಾದ ಈ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರು. ನಾನು ೮೦ರ ದಶಕದಲ್ಲಿ ಬಾಸ್ಟನ್ ಟಿಪ್ಟ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದ ಈಕೆ ತಮ್ಮ ಮನೆಯಲ್ಲಿ ಯುವಕ ಯುವತಿಯರಿಗೆ ಸತ್ಯಾಗ್ರಹ ಮಾಡುವುದು ಹೇಗೆ, ಹಿಂಸೆಗೆ ಪ್ರತಿಹಿಂಸೆ ಮಾಡದಂತೆ, ಜೀವನ ಪ್ರೀತಿ ಉತ್ಸಾಹ ಕಳೆಯದಂತೆ ಬದುಕುವುದು ಹೇಗೆ, ಪೊಲೀಸರ ಬಲಾತ್ಕಾರಕ್ಕೆ ಜಗ್ಗದಂತೆ ಕೂತಲ್ಲೇ ಕೂತಿರುವುದು ಹೇಗೆ ಇತ್ಯಾದಿಗಳನ್ನು ಕಲಿಸುವ ಶಾಲೆಯನ್ನು ನಡೆಸುತ್ತಿದ್ದರು. ಯೋಗ, ಹಾಡು, ಕವಿತೆ, ಕಥನ-ಇವೇ ಸತ್ಯಾಗ್ರಹ ಶಾಲೆಯ ಪಠ್ಯಗಳು, ಅಪ್ಪಟ ಗಾಂಧಿವಾದಿಯಾದ ಇವರು ಮಾರ್ಟಿನ್ ಲ್ಯೂಥರ್ ಕಿಂಗ್‌ನ ಚಳುವಳಿಯಲ್ಲೂ ವಿಯಟ್ನಾಂ ಮೇಲಿನ ಯುದ್ಧದ ವಿರೋಧಿಯಾಗಿಯೂ ತನ್ನ ಗಂಡನ ಜೊತೆ ಸಕ್ರಿಯರಾಗಿದ್ದವರು. ಇವರು ಯಾವ ಶಾಲೆಗೂ ಹೋಗದೆ, ಯಾವ ಡಿಗ್ರಿಯನ್ನು ಪಡೆಯದೆ ಸ್ವಾಧ್ಯಾಯನಿರತರಾಗಿ ಬೆಳೆದವರು. ತನ್ನ ಅನುಭಾವಿ ಅಪ್ಪನ ಮಾರ್ಗದರ್ಶನದಲ್ಲಿ ಬೆಳೆದ ಇವರು ರಾಜಕೀಯವಾಗಿ ಕ್ರಿಯಾಶೀಲರಾದರೂ, ಅವರ ಕಾವ್ಯ ಅನುಭಾವದ ನೆಲೆಯದು- ಘೋಷಣೆಯದಲ್ಲ. ನನ್ನ ಮೇಲೆ ವೈಯಕ್ತಿಕವಾಗಿ ತುಂಬ ಪ್ರಭಾವ ಬೀರಿದವರಲ್ಲಿ ಅಪ್ಪಟವಾದ ಸಂವೇದನಾಶೀಲರಾದ ನಿರ್ಭಯರೂ ನಿರಹಂಕಾರಿಯೂ ಆದ ಇವರೊಬ್ಬರು.) ಸೂರ್ಯ ಆಗಾಗ ಹಗಲುಗಳ ನುಂಗಿ ಸುಖವಾಗಿ ಸಾಯುತ್ತಿದ್ದ ಅಥವಾ ಬದುಕುತ್ತಿದ್ದ ಆಗೊಮ್ಮೆ ಈಗೊಮ್ಮೆ ಹೆಣ್ಣುಗಳ ತುಟಿಯಲ್ಲಿ ಪಿಸುನುಸುಳುತ್ತಿದ್ದ ಅಯ್ಯೋ ಗದ್ದಲ ಭೂಮಿಯ ತುಂಬ ಮಕ್ಕಳೋ ಮಕ್ಕಳು! ***** ಪೂರ್ವ ದಿಙ್ಮಂಡಲದಿ ಪುಣ್ಯವವತರಿಸುತಿದೆ- ಪೂರ್ಣ ಚಂದ್ರೋದಯದ ರೂಪದಲ್ಲಿ; ಪೂರ್ಣತೆಯು ಸಂಪೂರ್ಣ ಸಾಕಾರಗೊಳ್ಳುತಿದೆ- ಪೌರ್ಣಿಮೆಯ ಪೂರ್ಣೇಂದು ವೇಷದಲ್ಲಿ. ಬೈಗುಗೆಂಪಿನ ಬಣ್ಣ ಕಡಲಾಳ ತಳದಿಂದ ಬುರುಬುರನೆ ಮೇಲೆದ್ದ ಗುಳ್ಳೆಯಂತೆ, ತಂಗದಿರನುದಯಿಸಿದ, ಶಾಂತಿಮತಿ ಬಿಂಬಿಸಿದ ತಪಗೊಂಡ ಮೌನವ್ರತಧಾರಿಯಂತೆ. ಹೊನ್ನ […] ಅನಂತವೆಂದರೂ ಆಕಾಶಕೊಂದು ಆಕೃತಿಯುಂಟು, ನೀಲವೆಂದರೂ ನೂರು ಬಣ್ಣದ ಲೀಲಗವಕಾಶವುಂಟು. ಭೂಮಿಯ ಮೇಲೆ ಕಾಲೂರಿ ನಡೆದಿದ್ದರೂ ಇದರ ಸ್ತರಗಳ ನಡುವೆ ಸ್ಥಿರಗೊಂಡ ಒಡನಾಟ, ನಿರಂತರ ನಂಟು. ಹಗಲೆಲ್ಲ ಹಸುರಾಗಿ, ತುಂಬು ಕೆಂಪಾಗಿ, ರೆಂಬೆ – ಕೊಂಬೆಗಳೆಲ್ಲ […] ಬಿಟ್ಟ್ಯಾ ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… ಟಿಪ್ಸ್ ಸುತ್ತ ಮುತ್ತ "ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… ಮನ್ನಿ ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… ಬುಗುರಿ ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |