NLP_Assignment_1 / Kenda Sampige /article_110.txt
CoolCoder44's picture
Upload folder using huggingface_hub
7f4117a verified
raw
history blame
3.88 kB
ನಮ್ಮ ಸ್ವಂತಿಕೆಯ ಅರಿವು ಮೂಡಿಸುವ ಪುಸ್ತಕ ನಾವಿಬ್ಬರೇ ಗುಬ್ಬಿ. ಸುಮಾರು 35 ಕವನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಕಲಿಯುವುದನ್ನು, ಕಲಿಯಬೇಕಾದದ್ದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ವಿಕ್ರಮ್ ಬಿ. ಕೆ. ಇಲ್ಲಿನ ಬರಹದ ಒಂದೊಂದು ಸಾಲು ಸುದೀರ್ಘವಾಗಿ ಓದಿಸಿಕೊಂಡಿತು… ವಿಭಿನ್ನ ವಿಚಾರಗಳು, ವೈಚಾರಿಕತೆಯ ನೋಟ, ಕಂಡುಂಡದ್ದನ್ನು ಬರಹದಲ್ಲಿ ಕಟ್ಟಿಕೊಟ್ಟಿರುವ ಧಾಟಿ. ಅದರಿಂದಾಚೆಗೂ ಗುಬ್ಬಿಯ ಒಳಗಿನ ಭಾವ ಓದುಗರನ್ನು ಪ್ರತಿ ಕ್ಷಣ ಮಂತ್ರಮುಗ್ಧರನ್ನಾಗಿ ಮಾಡುವುದಂತೂ ನಿಜ. ಪ್ರತಿ ಪದಗಳು ಜೀವ ತುಂಬಿ ಬಂದಂತೆ ಓದುಗ ಸಹೃದಯರ ಉಸಿರಲ್ಲಿ ಬೆರೆತು ಹೋಗಿವೆ.
(ವಿಕ್ರಮ್‌ ಬಿ.ಕೆ.)
ಸಾರ್ಥಕತೆಯ ಸಂತೃಪ್ತಿಯನ್ನು ಮೂಡಿಸುವ ಕವಿತೆಗಳು ಸಫಲತೆಯ ಸಂದೇಶವನ್ನು ಸಹಜವಾಗೇ ಚಿತ್ರಿಸಿವೆ. ಹೇಳಬೇಕಾದದ್ದು ದೀರ್ಘವಿದ್ದರೂ ಸುಲಲಿತವಾಗಿ ನಾಲ್ಕಾರೂ ಸಾಲುಗಳಲ್ಲಿ ಕಟ್ಟಿಕೊಟ್ಟಿರುವುದೇ ಸೋಜಿಗ. ಹೃದಯದ ಭಾವ ತಣಿಯುವಂತೆ, ಮೊದಲ ತೊದಲ ಮಾತು ತುಡಿಯುವಂತೆ, ಎಲ್ಲ ಪದ್ಯಗಳು ಬರೆಯಲ್ಪಟ್ಟಿವೆ.
ಪದ್ಯಗಳ ಅನಂತತೆ ಎಂಬುದು ಜ್ಞಾನವನ್ನು ಧ್ಯಾನಿಸುವತ್ತ ಸಾಗಿದಂತೆ ಓದುಗರಿಗೆ ಇದು ಮೊದಲ ಕವನಸಂಕಲನವೆಂದು ಎಲ್ಲಿಯೂ ಅನಿಸಲಿಕ್ಕಿಲ್ಲ.
ಅಕ್ಕ, ಜೋಗತಿ ಮಂಜಮ್ಮ, ಪದವಿ, ಅವ್ವ, ಮಗು, ಸಮಾನಳು ಮುಂತಾದ ಕವಿತೆಗಳು ಜೀವ-ಭಾವ ತುಂಬಿ ಮಹಿಳೆಯರ ಜೀವನದ ಬಗ್ಗೆ ಚಿತ್ರಿಸಿವೆ. ಮುಂತಾಗಿ ನನಗಾರು ಸಾಟಿ, ತಮಟೆ, ಕಣ್ಣಾಮುಚ್ಚೆ ಕಾಡೆ ‘ಗೋಡೆ’ ಬೆಂಗಳೂರಿನ ಮಗ ಸಂಭಾಷಣೆಯೇ ಇಲ್ಲದಂತೆ ಕಾಡುವುದಂತೂ ಸಹಜ. ಪುಸ್ತಕ ಓದಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ, ಆದರೆ ಅವು ನಮ್ಮಲ್ಲಿ ಹುಟ್ಟುಹಾಕಿದ ಪ್ರಶ್ನೆಗಳನ್ನು, ಭಾವಗಳನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕಾಯಿತು… ಇಡೀ ಕವನ ಸಂಕಲನವೇ ಸಶಕ್ತವಾಗಿರುವುದರಿಂದ ಆ ಈ ಕವನವಷ್ಟೇ ಚೆನ್ನಾಗಿದೆಯೆಂದು ಎನ್ನಲಾಗುವುದಿಲ್ಲ. ಹಾಗಾಗಿ ವಿಕ್ರಮ ಅವರ ಮುಂದಿನ ಪುಸ್ತಕದ ನಿರೀಕ್ಷೆಯಲ್ಲಿದ್ದೇನೆ.
ತೇಜ ಎಸ್. ಬಿ. ಚನ್ನಪಟ್ಟಣದವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿ. ಎ ಐಚ್ಚಿಕ ಕನ್ನಡ ವ್ಯಾಸಂಗ ಮಾಡುತ್ತಿದ್ದಾರೆ. ಓದು-ಬರಹದಲ್ಲಿ ಆಸಕ್ತಿ ಹೊಂದಿದ್ದಾರೆ.