CoolCoder44's picture
Upload folder using huggingface_hub
b0c2634 verified
raw
history blame
5.02 kB
ಪುದೀನ ರೈಸ್.
ಬೇಕಾಗುವ ಸಾಮಾಗ್ರಿಗಳು:
ಪುದೀನ ಸೊಪ್ಪು ½ ಕಟ್ಟು
ಕೊತ್ತಂಬರಿ ಸೊಪ್ಪು ½ ಕಟ್ಟು
ಬೆಳ್ಳುಳ್ಳಿ 3
ಶುಂಠಿ 1ಇಂಚು
ಹಸಿ ಮೆಣಸಿನಕಾಯಿ 4
ಈರುಳ್ಳಿ 1
ತೆಂಗಿನ ತುರಿ ½ ಕಪ್
ನೀರು ¼ ಕಪ್
ಇಷ್ಟನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಉಳಿದ ಸಾಮಾಗ್ರಿಗಳು:
ತುಪ್ಪ 3 ಚಮಚ
ಗೋಡಂಬಿ ಸ್ವಲ್ಪ
ಜೀರಿಗೆ 1 ಚಮಚ
ಕಾಳುಮೆಣಸು 10
ಪಲಾವ್ ಎಲೆ 1
ಲವಂಗ 4
ಸ್ಟಾರ್ ಅನೈಸ್ 1
ಚಕ್ಕೆ ಒಂದಿಂಚು
ಈರುಳ್ಳಿ 1
ಟೊಮೆಟೊ 2
ಆಲೂಗಡ್ಡೆ 1
ಹುರುಳಿ ಕಾಯಿ 5
ಬಟಾಣಿ ½ ಕಪ್
ಕ್ಯಾರೆಟ್ 1
ಬಾಸುಮತಿ ಅಕ್ಕಿ 1 ಕಪ್
ನೀರು 2 ಕಪ್
ಉಪ್ಪು ರುಚಿಗೆ ತಕ್ಕಷ್ಟು.
ತರಕಾರಿಗಳನ್ನು ಒಂದೇ ರೀತಿಯಲ್ಲಿ ಹೆಚ್ಚಿಕೊಳ್ಳಿ.
ತಯಾರಿಸುವ ವಿಧಾನ:
ಕುಕ್ಕರ್ನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಕೊಳ್ಳಿ. ಜೀರಿಗೆ, ಗೋಡಂಬಿ, ಕಾಳುಮೆಣಸು, ಪಲಾವ್ ಎಲೆ, ಲವಂಗ, ಸ್ಟಾರ್ ಅನೈಸ್, ಚಕ್ಕೆಯನ್ನು ಹಾಕಿ ತುಪ್ಪದಲ್ಲಿ ಹುರಿಯಿರಿ. ನಂತರ ಈರುಳ್ಳಿಯನ್ನು ಹಾಕಿ ಬಾಡಿಸಿ.ಟೊಮೆಟೊ ಹಾಕಿ ಬಾಡಿಸಿ. ತರಕಾರಿಗಳನ್ನು ಸೇರಿಸಿ ಮಿಶ್ರಣ ಮಾಡಿ. ರುಬ್ಬಿದ ಮಿಶ್ರಣವನ್ನು ಹಾಕಿ ಒಂದು ನಿಮಿಷ ಕೈಯಾಡಿಸಿ. ಬಾಸುಮತಿ ಅಕ್ಕಿಯನ್ನು ಹಾಕಿ ಜೊತೆಗೆ ಸೇರಿಸಿ. ನೀರು ಮತ್ತು ಉಪ್ಪು ಸೇರಿಸಿ. ಕುಕ್ಕರ್ ಮುಚ್ಚಳವನ್ನು ಮುಚ್ಚಿ. ಎರಡು ವಿಷಲ್ ಬಂದ ನಂತರ ಒಲೆ ಆರಿಸಿ.
ರುಚಿಯಾದ ಪುದೀನ ರೈಸ್ ನ್ನು ರಾಯಿತಾದೊಂದಿಗೆ ಸವಿಯಿರಿ.
2.ಹಲಸಿನ ಹಣ್ಣಿನ ಪಾಯಸ.
ಹಲಸಿನ ಹಣ್ಣಿನ ತೊಳೆ 6
ಹಾಲು ½ ಲೀಟರ್
ಬೆಲ್ಲ 1 ಕಪ್/ಸಿಹಿ ಎಷ್ಟು ಬೇಕು ಅಷ್ಟು
ತೆಂಗಿನ ತುರಿ ½ ಕಪ್
ಚೀರೋಟಿ ರವೆ 2 ಚಮಚ
ತುಪ್ಪ 5ಚಮಚ
ದ್ರಾಕ್ಷಿ 10
ಗೋಡಂಬಿ 5
ಬಾದಾಮಿ 5
ಏಲಕ್ಕಿಪುಡಿ ¼ ಚಮಚ
ನೀರು ½ ಚಮಚ
ತಯಾರಿಸುವ ವಿಧಾನ:
ದಪ್ಪನೆಯ ಬಾಣಲೆಯಲ್ಲಿ ಚೀರೋಟಿ ರವೆಯನ್ನು ಹಾಕಿ ಹುರಿದು ಕೊಳ್ಳಿ. ನಂತರ ತುಪ್ಪವನ್ನು ಹಾಕಿ ಬಿಸಿ ಮಾಡಿ ಕೊಳ್ಳಿ. ಬಾದಾಮಿ ಮತ್ತು ಗೋಡಂಬಿಯನ್ನು ಚಿಕ್ಕದಾಗಿ ಕತ್ತರಿಸಿ ಬಿಸಿಯಾದ ತುಪ್ಪದಲ್ಲಿ ಹಾಕಿ ಹುರಿದು ಕೊಳ್ಳಿ. ದ್ರಾಕ್ಷಿಯನ್ನು ಹಾಕಿ ಹುರಿಯಿರಿ. ನಂತರ ತುಪ್ಪದಿಂದ ತೆಗೆದಿಡಿ. ಅದೇ ತುಪ್ಪದಲ್ಲಿ ಚಿಕ್ಕದಾಗಿ ಒಂದೇ ಅಳತೆಯಲ್ಲಿ ಕತ್ತರಿಸಿದ ಹಲಸಿನ ಹಣ್ಣಿನ ತೊಳೆಯನ್ನು ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಹಾಲನ್ನು ಹಾಕಿ ಕೈಯಾಡಿಸುತ್ತಾ ಇರಿ. ಮಿಕ್ಸಿಯಲ್ಲಿ ಸ್ವಲ್ಪ ನೀರನ್ನು ಹಾಕಿ ತೆಂಗಿನಕಾಯಿ ತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಯುತ್ತಿರುವ ಪದಾರ್ಥಕ್ಕೆ ಸೇರಿಸಿ. ಬೆಲ್ಲವನ್ನು ಹಾಕಿ ಚನ್ನಾಗಿ ಕೈಯಾಡಿಸುತ್ತಾ ಇರಬೇಕು ಇಲ್ಲವಾದರೆ ತಳಹಿಡಿಯುತ್ತದೆ. ಕುದಿ ಬಂದ ನಂತರ ಏಲಕ್ಕಿಪುಡಿ ಮತ್ತು ಹುರಿದು ಕೊಂಡ ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಹಾಕಿ ಮಿಶ್ರಣ ಮಾಡಿ.
ಈ ಪಾಯಸವನ್ನು ಬಿಸಿಯಿರುವಾಗ ಅಥವಾ ಫ್ರೀಜ್ನಲ್ಲಿ ತಣ್ಣಗೆ ಮಾಡಿ ಸವಿಯಲು ರುಚಿಯಾಗಿರುತ್ತದೆ.
-ವೇದಾವತಿ ಹೆಚ್. ಎಸ್.