NLP_Assignment_1 / Kenda Sampige /article_100.txt
CoolCoder44's picture
Upload folder using huggingface_hub
7f4117a verified
raw
history blame
8.84 kB
“ಬೊಗಸೆ ತುಂಬಾ ಮಲ್ಲಿಗೆಯನ್ನಲ್ಲಮದ್ದುಗುಂಡುಗಳನ್ನೇಗರ್ಭಧರಿಸಿ ತಿರುಗುತಿದೆ”ಅಂತಹ ಪ್ರತಿಮೆಗಳನ್ನಿರಿಸುತ್ತ ಇಲ್ಲಿನ ಕಾವ್ಯ ತನ್ನೊಳಗಿನಿಂದ ತೆರೆದುಕೊಳ್ಳುವುದನ್ನೇ ವಿಶೇಷವಾಗುಳ್ಳದು, ಸುತ್ತಲಿನ ಪರಿಸರಕ್ಕಾಗಿ ಚಾಚಿಕೊಳ್ಳುವುದು ನಿಧಾನ ಜೊತೆಗೂಡಿದಂತಿದೆ.
‘ಈಗಪ್ರತಿ ದಿನವೂಉರಿಸಬೇಕು ಕಾರಿರುಳು’ಅನ್ನುವಂಥ ತಹತಹಿಕೆಯ ಮಾತು ಇಲ್ಲಿನ ಒಂದು ಬಗೆಯ ಕುದಿತಕ್ಕೆ ಸಾಕ್ಷಿಯೂ ಆಗಿದೆ ಅನಿಸುತ್ತದೆ.
“ಹಾಡಿನೊಳಗಣ ಅಗ್ನಿತಂಪುಹಿಮದ ಕಿಡಿಗಳನು ಕರಗಿಸುವಂತೆಇನ್ನೊಂದು ಮತ್ತೊಂದು ಹಾಡಿಗೆಅನುದಿನದ ಹೊಸ ಬೆಳಕು ಕತ್ತಲೆಯನೆ ಕೊಲ್ಲುವುದು”ಎನ್ನುತ್ತ ಒಂದು ತಣ್ಣನೆಯ ಭರವಸೆಯನ್ನು ಇಟ್ಟುಕೊಂಡು ಇಲ್ಲಿನ ರಚನೆ ಹಾಡಾಗ ಬಯಸುತ್ತದೆ.
(ಸುಮಿತ್‌ ಮೇತ್ರಿ)
‘ಮತ್ತೆ ಮತ್ತೆ ನಿರೀಕ್ಷೆ ಹುಟ್ಟಿಸುವ ಮಳೆಯ ಸದ್ದಿನಂತೆ ದೂರದಲ್ಲೆಲ್ಲೋ ಕರಗಿ ಕಪ್ಪುಮೋಡದ ಆಲಾಪದಂತೆ’ ಸೋಲು ಪ್ರತಿ ಸಲವಿರುವಾಗಲೂ ಕಾಯುವ, ಭರವಸೆಗೊಳ್ಳುವ ದನಿ ಕೇಳುತ್ತದೆ.
‘ಮುಖ ಕೊಂದುಮುಖ ಹುಡುಕುವ ಹಾದಿಯಲ್ಲಿಇಲ್ಲ… ಇಲ್ಲ… ಇಲ್ಲ…ನನ್ನದೆ ಮುಖದ ಹೊರತು ನನಗೇನು ಬೇಕಿಲ್ಲ’ಎನ್ನುವ ಹಟವೂ ಬೆರೆಯುತ್ತದೆ. ಒಂದಿಗೇ‘ಇಲ್ಲಿಈ ಕಿರುತರುಣನೊಬ್ಬತನ್ನದೇ ಮುಖದ ಹುಡುಕಾಟದಲ್ಲಿಅಲೆಯುತ್ತಿದ್ದಾನೆ ಮುಖ ಕೊಂದು; ಮುಖ ಹುಡುಕುವ ಹಾದಿಬೀದಿಯಲ್ಲಿ’ಎನ್ನುವ ದಿಗಿಲಾಗಿರುವ ವಾಸ್ತು ಸಂಗತಿಯೂ ಕಾಣುತ್ತದೆ.
‘ಆತ್ಮಭಾವದ ಆಚೆ ಜೀವಭಾವದ ಈಚೆ’ ಎನ್ನುವ ರಚನೆ ಕೆಲವೆಲ್ಲ ಚರ್ವಿತ ಚರ್ವಣಗಳನ್ನ ಮುಂದಿರುಸತ್ತಲೇ ಸಾಗುತ್ತದಾದರೂ“ನನ್ನಂಥ ಹಾದಿಹೋಕರ ಭರವಸೆಗೆಹೃದ್ಗತವನು ಬೈಲಿಗಿಟ್ಟೆಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿಪ್ರತಿಯೊಬ್ಬರೂ ಒಂಟಿ!’ಎನ್ನುವ ಅಖೈರು ಸತ್ಯ ಇಷ್ಟು ಬೇಗನೆ ಕೈಗೆ ಬಂತೆ ಅಚ್ಚರಿಯನ್ನುಂಟು ಮಾಡುತ್ತದೆ. ಬಹಳಷ್ಟು ಸಲ ಇಲ್ಲಿನ ಕವಿತೆ ಆಂತರ್ಯಕ್ಕೆ ಲಗ್ಗೆ ಇಟ್ಟುದೇ ಆಗಿದೆ ಅನ್ನಿಸಿತು. ಹಾಗಿರುವಾಗ ಅದು ಗುಂಗಾಗಿ ಕಾಡುತ್ತಿದೆಯಾ ಎಂತಲೂ ಗುಮಾನಿಯಾಗಿ ಕಾಡುವಂತೆ ಇಲ್ಲಿನ ಸಾಲುಗಳು ಕಾಣುತ್ತವೆ.
“ಆದರೆ,ಒಂದು ತಿಳಿದುಕೊ ಪ್ರಿಯ ಪಾರ್ಟನರ್ಎದೆಗೆ ಒದೆಯುವ ಕೂಸಿಗೆತಾಯಿ ಎಂದೂ ಹಾಲುಣಿಸುವುದನು ನಿಲ್ಲಿಸುವುದಿಲ್ಲ”ಎನ್ನುವ ಗಟ್ಟಿ ಅನಿಸುವ ಅನುಭವದ ಮಾತುಗಳೇ ಇಲ್ಲಿ ಹೆಚ್ಚು ಹೆಚ್ಚೆ ಸೆಳೆದದ್ದು ನನ್ನನ್ನು. (ಇಲ್ಲೆ ಕೆಲವೆಲ್ಲ ಗಜಲ್ ಮಾದರಿಗಳನ್ನ ಇರಿಸಿಕೊಂಡಂತೆಯೇ ಕಂಡುವು ನನಗೆ ಅದಲೆಲ ಕ್ಲೀಷೆಯಾಗಿ ಕಂಡು ಸುಮ್ಮನಾಗಿರುವೆ)
“ಧ್ಯಾನಕ್ಕೆ ಗುಹೆಬೇಕಿಲ್ಲ” ಮತ್ತೆ ಕವಿಯ ಖಾಸಾ ದನಿಯಾಗಿ ಕಾಣುತ್ತಲೂ ಇಡಿಕಿರದ ಇಮೇಜುಗಳಿಂದ ಮೂರ್ತ ಅಮೂರ್ತಗೊಳಿಸಿ ಚೆಂದಗೊಳಿಸುವ ಕೆಲಸವೇ ಆಗಿಬಿಟ್ಟಿದೆಯಾ ಅನ್ನಿಸಿತು. ಕವಿತೆ ಅಂದರೆ ಇಮೇಜ್ ಕಟ್ಟುವುದೇ ಕೆಲಸವೇ?“ಗಾಯಗಳಿಗೆ ಸಾಕ್ಷಿ ಹೇಳುವಪಾದದ ಪಡಿಯಚ್ಚಿನ ಹೆಜ್ಜೆ ಗುರುತುಗಳುಧ್ಯಾನಕ್ಕೆ ಗುಹೆ ಬೇಕಿಲ್ಲಕಟ್ಟಕಡೆಯ ಪ್ರಜೆಗೆ ತಲುಪದ ಜನತೆಯ ಕಣ್ಮಣಿಯೇಆಕ್ರಂದನದ ಮೊರೆ ಕೇಳು…ಹಸಿವಾಗದಿರಲೆಂದು ದಯಾಮಯಿ ಭಗವಂತನಲ್ಲಿ ಮೊರೆಯಿಟ್ಟೆಒಲೆಯ ಧ್ಯಾನಸ್ತ ಕೆಂಡದ ಕಿಡಿಬದುಕಿನ ಬಿದಾಯಿ ಕೊಡುವ ಘಳಿಗೆಸುಳ್ಳು ಸತ್ಯವಾಗುವ ಸತ್ಯ ಸುಳ್ಳಾಗುವಪ್ರತ್ಯಕ್ಷ ಕಂಡರೂ ತನ್ನನ್ನೇ ತಾನು ನೋಡುವಖತಾಯತಿ ಕೇಳುವ ಕಾಲ”ಈ ಬಗೆಯ ಮಾತುಗಳು ಬಲು ದೊಡ್ಡವೇ ಅನ್ನಿಸಿತು, ಗೊತ್ತಿಲ್ಲ
“ಈ ಲೋಕದ ಕಣ್ಣೀಗಹೊಸ ಕುದುರೆಗಳ ಮೇಲೆಸಾರಿ, ಗೆಲುವ ಕುದುರೆ ಮೆಲೆ*ನೆನಪಿರಲಿಈಗ ಎಲ್ಲಾ ದಾರಿಗಳೂಪುನಃ ಅಲ್ಲೇ ಬಂದು ಸೇರುತ್ತವೆಮನುಷ್ಯ ಮುಕ್ತತೆ ಏನೋ ಬಯಸುತ್ತಾನೆಆದರೆ ಯಾವತ್ತೂ ಹಾಗೆ ಬದುಕುವುದಿಲ್ಲ ಮತ್ತು ಬದುಕಲು ಬಿಡುವುದಿಲ್ಲ”
ಇಲ್ಲಿ ಪ್ರತಿ ಸಲವೂ ವ್ಯಕ್ತಿಯ ಒಳದನಿಯ ಕಡೆಗೆ ಕಿವಿಯಾಗುವ, ಮನುಷ್ಯನ ಒಳಗನ್ನ ಕೆದಕುವ ನುಡಿಗಳೇ ಕೇಳುತ್ತವೆ. ಅನೇಕ ಸಲ ಫಿಲಾಸಫಿಯಾಗಿ ಬಿಡುವ ಧಾವಂತವೂ ಕಂಡುಬಿಡುತ್ತದೆ.
“ಕವಿತೆಗಾಗಿಕರುಳಕುಡಿ ಒಂದಾಗಿ ಜಿಬುಕುವತಾಯ ಮೊಲೆಯಂತೆ”ಕಾಯುವುದು ಇಲ್ಲಿನ ಒಟ್ಟು ಹಂಬಲ. ಅವರವರಿಗೆ ಒಂದೊಂದು ಹಂಬಲ ಅನಿಸಿತು. ಬೇಂದ್ರೆ ಎಷ್ಟೇ ದೊಡ್ಡ ಕವಿ ಎನಿಸಿದರೂ ನನಗೆ ಎಷ್ಟೋ ಸಲ ಶಬ್ಧ ವ್ಯಾಮೋಹಿ, ಕವಿತಾ ವ್ಯಸನಿಯೂ ಆಗಿ ಕಂಡುದಿದ್ದೇ ಇದೆ. ಏನೂ ಮಾಡಲಾಗದು.
“ಆಖಾಡಕ್ಕೆ ಇಳಿದ ಮೇಲೆಒಂದು ಕೈ ನೋಡಿದ ಮೇಲೆಆಟದ ನಶೆ ತಲೆ ಏರಿದ ಮೇಲೆಆಟವೇ ಆ ಡಿ ಸು ತ್ತ ದೆ. . .”ಎನ್ನುವಂಥ ಬಹು ವಿಸ್ತಾರದ ಮಾತುಗಳು ಇಲ್ಲಿ ಇದ್ದಕಿದ್ದಂತೆ ಕಂಡು ಬಿಡುತ್ತವೆ.
“ಉಗುಳು ನುಂಗುತ್ತಿದ್ದೇನೆಅಂತ್ಯ ಇರುವುದು ದೇವರ ಹೆಸರಿನಲ್ಲೋಇಲ್ಲ,ಸಾವಿನ ಹೆಸರಿನಲ್ಲೋ*ಈ ಲೋಕದಲ್ಲಿಎಲ್ಲ ಭಾವನೆಗಳು ಸಾಪೇಕ್ಷ*ಬಾ . . .ಸೈರಣೆಯಿಂದಲೇನಮ್ಮನಮ್ಮ ಪಾಲಿನಏಕಾಂತದ ನೋವುಗಳನು ಹಂಚಿಕೊಳ್ಳೋಣ”ಎನ್ನುವ ಮಾತುಗಳು ಗುಚ್ಛವಾಗಿ ಸಂಕಲನದ ತುಂಬ ಅನುರಣಿಸಿವೆ ಅನಿಸಿತು. ಇಲ್ಲಿನ ರಚನೆಗಳು ಅನೇಕ ಸಲ ಬಹುದೊಡ್ಡದನ್ನು ತೆಕ್ಕೆಗೆ ಎಳೆದುಕೊಳ್ಳಲು ಹಂಬಲಿಸತೊಡಗುತ್ತವೆ. ಅದು ಭೃಮಾತ್ಮಕವೆ ಅಂತ ಅನಿಸಿಯೂ ಬಿಡುತ್ತದೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ