CoolCoder44's picture
Upload folder using huggingface_hub
94fcbe1 verified
raw
history blame
6.51 kB
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು
ಫಳ್ಳನೆ ಮಿಂಚುವ ಮಿಂಚು
ಪ್ರಬುದ್ಧ ಮಳೆ ತೊನೆಯುತ್ತ
ಇಳೆಗೆ ಇಳಿಯುವ ಕುರುಹು
ನೆಲದ ಮೈತುಂಬ ಸಂಭ್ರಮ ಕಾತರ.
ಎಂದಿನದೇ ತೊಯ್ಯುವಿಕೆ
ಮರಳಿ ಸುರಿಯುವದೆಂದು
ಬಿಸಿಲು ಕಾರುವ ಹಸಿರು ಹೊಳಪು ಸಸಿಗಳಿಗೆಲ್ಲ
ಒನಪು ವೈಯಾರ
ಪುಳಕಿತ ಸ್ನಾನಕ್ಕಾಗಿ
ಮಮ್ಮಲ ತುಡಿಯುತ್ತಿರುವ
ಹೂ ಜಿಗ್ಗು ಮಣ್ಣು ಮೊಳೆತ ಗರಿಕೆಗಳ
ಮಿರಿಮಿರಿವ ಕಣದಲ್ಲು ಬಿರಿಬಿರಿವ ಮನದಲ್ಲು
ಸಂದಿಗೊಂದಿಗಳಲ್ಲು
ಕಚಗುಳಿಯ ಮೈ ಬೆವರು.
ಹಾಲಿನ ಹಾಡಿನ ಜತೆಗೆ ಸಂತಸದ ಹೊಗರು
ಹೂ ಬಿಲ್ಲು ಚುಂಬನದ
ಸವಿಯ ರೋಮಾಂಚನಕ್ಕಾಗಿ
ಹಸಿರುಗಳ ಒಕ್ಕೊರಲ ಜೀವಂತ ಕಾದಾಟ
ಆ ತನಕ ಆತಂಕ
ಆದರೆ
ಇನ್ನೂ ತಿಂಗಳು ತುಂಬದ ಹೊಸ
ಹೊಚ್ಚ ಸಸಿಗಳಿಗೆ ಹಸಿ ಹುಲ್ಲು ಮರಿಗಳಿಗೆ
ಹಸಿರುಗಟ್ಟುತ್ತಿರುವ
ಎಳೆ ಪಾಚಿಗರಿಗಳಿಗೆ ಮಾತ್ರ
ಎಲ್ಲವೂ ಅನಿರೀಕ್ಷಿತ
ಹೆದರುಗಟ್ಟುವ ಬೆವರು.
ಒಳಗೊಳಗೇ ನಡುಕ.
ಮಾತ್ರ ಕಣ್ಣು ಪಿಳುಕಿಸುತಿರುವ
ಚಿಗಿತ ಎಳೆ ಸಸಿಗಳಿಗೆ
ಹೊಸತೊಂದೆ ಅನುಭವದ ಬದ್ಧ ಕಾತರಿಕೆ
ಅಪ್ರಬುದ್ಧ ತಿಳುವಳಿಕೆ
ಏನೋ ಆಗಬಾರದ್ದು ಆಗಿ ಹೋಗಲಿರುವುದ
ಥರಗುಟ್ಟುವ ಮುಗಿಲು
ಮೈಮೇಲೆರಗುವುದ
ನೆನೆದೇ ಮೈ ಮುರಿ ಚೂಪು
ಕೊನೆಗೊಮ್ಮೆ
ಪುಟಪುಟಿಸಿ ಪುಳಕಿತ ಧಾರಾವರ್ಷ
ಹೂ ಎಸಳು ತಿಳು ಮೊಗ್ಗು ಚಿಗುರುಗಳ ತೊಯ್ಸುತ್ತ
ಪರಿಮಳದ ತಂಪನ್ನು ಕರಡುತ್ತ ಹರಡುತ್ತ
ಗಳಗಳಿಸಿ ಇಳಿದಾಗ
ಓರೆಕೋರೆಗಳಲ್ಲಿ ಮಡುವುಗಟ್ಟುವ ಹರುಷ
ಎಲ್ಲೆಲ್ಲು ನಿಟ್ಟುಸಿರು ತಂಪು ಸ್ಪರ್ಶ
ಮತ್ತು….. ಮತ್ತು…..
ನೆಲೆ ನಿಂತ ನೀರಿಂದ ಹೊರಗೆ ಚಿಮ್ಮುತ್ತಿರುವ
ಏನೋ ಸಹಿಸಿದೆನೆಂಬ
ಏನೋ ಸಹಿಸುವೆನೆಂಬ
ಪುಟಾಣಿ ಹಸಿರು ತಲೆಗಳ ಖುಷಿ
ಮುದ್ದು ಧಿಮಾಕು
*****
ಚೌಕಟ್ಟು ಅಡಿಗೆ ಮನೆ, ಹಾಲು, ಮಲಗುವ ಕೋಣೆ ನೀಟು ಚೌಕಟ್ಟು ಮಂಚ…ಹಾಸಿಗೆ…ಹೊದಿಕೆ. ಚಚ್ಚೌಕ ಓದುವ ಪುಸ್ತಕ ಮೇಜು ಕುರ್ಚಿ ….ಆಲೋಚನೆಯಧಾಟಿ! ಎಲ್ಲಕ್ಕೂ ಒಂದೊಂದು ಚೌಕಟ್ಟು. ಬಾಗಿಲು, ಸೂರು, ಗೋಡೆ…. ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು […]
ಇಲ್ಲಿ ಬಯಲಿದೆ, ಬರೀ ಬಯಲು. ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ ಅನಾವಶ್ಯಕ ಮಹತ್ವ. ಇಲ್ಲಿ ಇದ್ದವರು ಬಂದುಹೋದವರು ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ ಒಂದಲ್ಲಾ ಒಂದು […]
ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […]
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…