CoolCoder44's picture
Upload folder using huggingface_hub
94fcbe1 verified
raw
history blame
7.5 kB
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಇದೋ ಕಡಲು !
ಅದೋ ಮುಗಿಲು !
ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು!
ಎನಿತೆನಿತೋ ಹಗಲು ಇರುಳು
ತೆರೆಗಳ ಹೆಗಲೇರಿ ಬರಲು
ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ!
ಋತು ಋತುಗಳು ಓತು ಬಂದು
ನದೀ ಮುಖದಿ ಕೂಗಿವೆ!
ಬೆಟ್ಟ ಬೆಟ್ಟ ಬೆಂಬಳಿಸಿವೆ-
ಗುಟ್ಟನರಿಯದಂತಿವೆ;
ಘಟ್ಟವೇರಿ ಘಟ್ಟವಿಳಿದು ಹಸಿರು ಪಟ್ಟವೇರಿದೆ !
ಬಾನಿನೆದೆಯ ಭವ್ಯತೆಗಿದೋ
ಕಡಲು ಹಿಡಿದ ಕನ್ನಡಿ !
ಬೇಡ ಬೇರೆ ಮುನ್ನುಡಿ.
ಅಗೋ ಅಲ್ಲಿ !
ಉಸಿರ್ಕಟ್ಟಿ ದ್ವೀಪ ಮೇಲಕೆದ್ದಿವೆ
ನೀಲನಿದ್ದೆಗೈದಿವೆ.
ಹಾಯಿ ಬಿಚ್ಚಿ ಹಾಯಾಗಿವೆ ;
ದೋಣಿ ತೆರೆಯನೇರಿವೆ
ನೀರಿನಲ್ಲಿ ರಂಟೆ ಹೊಡೆದು ಹಡಗು ಕ್ಷಿತಿಜವನಡರಿದೆ !
ಕೊರೆದ ಹರಿದ ನೀರಘಾಯ
ಮಟಮಾಯವಾಗಿದೆ.
ಈ ಪಡುವಣ ತೀರದಲ್ಲಿ
ತೀರದಂಥ ಮೊರೆತವೊ!
ಆಖಾತವೊ ಭೂಶಿರವೊ
ತೇಲುತಿರುವ ತೆಪ್ಪವೊ
ದೇಶಾಂತರದಾಸೆವೀಚಿ ಇದರುದರದಿ ಬೆರೆತವೊ !
ತೆರ ತೆರೆಗಳು ಬಂದರದಲಿ ನೊರೆಯ ತೂರಿ ತೂರಿ
ಬರೆಯುತ್ತಿವೆ ದಿನಚರಿ!
ಅಲೆ ಅಲೆ ಅಲೆ ತೇಲಿಬರುವದಲ್ಲ ದೋಣಿ ಬಿನದ!
ಅಂಬಿಗರುಲಿ ನಿನದ;
ತುಣುಕು ಮೀನು
ಮಿಣುಕು ಮೀನು
ಅಣಕಿಸಿ ಪಾರಾದವೇನು?
ಬಿದ್ದವದೋ ಬುಟ್ಟಿಗೆ
ರಾಶಿ ರಾಶಿ ಒಟ್ಟಿಗೆ !
ಮೀಂಬುಲಿಗನ ಹಕ್ಕಿ ಕೊಕ್ಕಿನಲ್ಲಿ ಕಚ್ಚಿ ಹಾರಿತು
ಬಲೆಗೆ ಬಿದ್ದ ಮೀನು ಮಾತ್ರ ವಿಲಿವಿಲಿ ಒದ್ದಾಡಿತು !
ಬೊಕ್ಕುದಲೆಯ ಬರಿಮೈಯ
ಮಕ್ಕಳು ಮುಗಿಬಿದ್ದಿವೆ.
ಅವರ ಪಾಲಿಗಷ್ಟು ಇಷ್ಟು ಕಡಲು ಕೊಟ್ಟ ಕಾಣಿಕೆ
ಮತ್ಸ್ಯಗಂಧಿ ಯೋಜನಸುಗಂಧಿಯಾದಳೆಂಬ ವಾಡಿಕೆ !
ಮೊನ್ನೆ ಮೊನ್ನೆ ಯುದ್ಧವಾಯ್ತು ಮನುಕುಲದುದ್ದಾರಕೆ!
ಕಳೆಯಲೆಂದೆ ಬಂದಿತೆನ್ನಿ
ದೇಶ ದಿಗ್ದೇಶಗಳ
ಶಾಂತಿಯ ಬಾಯಾರಿಕೆ ;
ನೆಲ ಬಾನ್ಗಳು ಸಾಲಲಿಲ್ಲ
ಕಡಲಿಗು ಕಿಡಿ ಸಿಡಿಯಿತು
‘ಉದ್ಧರೇದಾತ್ಮನಾತ್ಮಾನಂ’
ಜಲಸುರಂಗ ಹಬ್ಬಿತು!
ಹಡಗು ಹಡಗು ಬುಡಮೇಲು
ಸುತ್ತು ತೋಪುಗಾವಲು;
ನಾಗರಿಕತೆ ಮುಗಿಲಿಗೇರಿ
ಬಾಂಬಿನ ಮಳೆಗರೆಯಿತು
ಆಗಸವೇ ಅದುರಿತು!
ಕಡಲು ದಂಡೆಗಪ್ಪಳಿಸಿತು
ಚಪ್ಪರಿಸಿತು ನಾಲಗೆ
ಈ ಯುದ್ದದ ಮದ್ದು ಗುಂಡು
ಸಾಲಬೇಕು ಅದರ ಯಾವ ಮೂಲೆಗೆ ?
ಇದೋ ಕಡಲು
ಅದೋ ಮುಗಿಲು
ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು
ಉರುಳುತ್ತಿಹ ಭೂಗೋಲದ ಆಯುಷ್ಯವು ತೀರಲು
ಅದೂ ಬೊಕ್ಕು ಬೋರಲು !
*****
ನನ್ನೆಲ್ಲ ಹಂಬಲವನೊಂದು ಬಿಂದುವಿನಲ್ಲಿ ಬಿಂಬಿಸಿಹ ಕಂಬನಿಯೆ! ಹೇಳಕೇಳದೆ ಹೊರಟು ನಿಂತಿರುವ ಅತಿಥಿಯೊಲು ಕಣ್ಣ ಹೊಸತಿಲ ದಾಟು- ತಿರಲು ನಾನಿನ್ನೇವೆ? ಉರುಳುರುಳು ಎದೆಯಲ್ಲಿ ಕುದಿವ ಕಡಲೊಂದಿರಲು, ಶೋಕವಾಹಿನಿ ಹರಿದು ಮನದ ಮಲಿನತೆ ಕಳೆದು, ಅಮೃತವಾಹಿನಿಯಾಗಿ ಚಿಮ್ಮಿ […]
ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ ತೋರಿಕೊಳ್ಳದ ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; ಅಧೋಮುಖಿಯಾದ ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ ನಮ್ಮೆಲ್ಲ ನಿತ್ಯ ರಾಮಾಯಣಗಳ […]
ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […]
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…