CoolCoder44's picture
Upload folder using huggingface_hub
94fcbe1 verified
raw
history blame
7.64 kB
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ
ಸಂಜೆಯ ಕೆಂಪು ಕರಗುವ ಹೊತ್ತು,
ಮರದ ಬೊಡ್ಡೆಗೆ ಆತು
ಕೂತಿದ್ದ ಪುಟ್ಟ ಹುಡುಗ.
ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ
ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ
ಸಂಜೆಯಾಕಾಶಕ್ಕೆ ಗೆರೆ ಬರೆದ
ಗಿರಿಶಿಖರಗಳ ನೆರಳು.
ಈ ನೆರಳುಗಳ ನಡುವೆ
ನೆರ್ಳಾಗಿ ಕೂತವನನ್ನು
‘ಯಾಕೋ ಕೂತಿದ್ದೀಯಾ?-’
ಅಂದೆ.
ಹೆದರಿ ಮೇಲೆದ್ದ. ಕಡ್ಡಿ ಕಾಲಿನ ಮೆಲೆ
ಹರುಕು ಚಿಂದಿಯ, ಜೋಲು ಮೋರೆಯ,
ಕೆದರಿದ ತಲೆಯ ಕೆಳಗೆ ಗಾಬರಿ ಕಣ್ಣು;
ಅಳು ಬೆರೆತ ಮಾತು;
‘ನಾನು ಬರಲಿಲ್ಲ, ಮನೆಯಲ್ಲಿ
ಒಡೇರು ಒದೀತಾರೆ…ಅದಕ್ಕೆ ಇಲ್ಲಿ…’
ಸುತ್ತ ಕತ್ತಲ ಕಾಡು; ಆ ಬಗ್ಗೆ
ಭಯವಿಲ್ಲ ಇವನಿಗೆ
ತಪ್ಪಿಸಿಕೊಂಡ ದನ ಬಾರದ್ದಕ್ಕೆ
ತನಗೆ ಬೀಳುವೇಟಿನ ಭಯಕ್ಕೆ
ಇಲ್ಲಿ, ಸದ್ದಿರದೆ ಕೂತಿದ್ದಾನೆ.
ದನ ಬಾರದ್ದು ಇವನ ತಪ್ಪಲ್ಲ;
ಆದರೂ ದನ ಬಾರದೆ ಇವನು
ಹಿಂದಿರುಗುವಂತಿಲ್ಲ; ಹಿಂದಿರುಗಿದನೊ
ಏಟು ತಪ್ಪುವುದಿಲ್ಲ. ಹಾಗಂತ
ದಟ್ಟ ಕಾಡಿನ ಮೇಲೆ ಕತ್ತಲೆ ಇಳಿದು
ಹಬ್ಬುವುದು ನಿಲ್ಲುವುದಿಲ್ಲ; ಕಪ್ಪೆಗಳ
ವಟ ವಟ, ಚಿಕೆಗಳ ಮಿಣ ಮಿಣ- ಯಾವುದೂ
ನಿಲ್ಲುವುದಿಲ್ಲ. ಈ ಕತ್ತಲೆಯ ಒಳಗೆಲ್ಲೊ
ಕಾದಿದ್ದಾನೆ ಒಡೆಯ.
ಕೈಯಲ್ಲಿ ಚಾವಟಿ ಹಿಡಿದು, ಹೀಗೆಯೇ
ಇಂಥ ಕಡ್ಡಿ ಕಾಲಿನ, ಜೋಲು ಮೋರೆಯ
ಹಾಲುಗಣ್ಣಿನ ಮೈಯ ಚರ್ಮ ಸುಲಿಯುತ್ತ
ಈ ದಟ್ಟ ಕಾಡಿನ ಕತ್ತಲೆಗೆ ಕೆಂಗಣ್ಣು ಹಾಯಿಸುತ್ತ.
ಕವನ ಜಿ ಎಸ್ ಶಿವರುದ್ರಪ್ಪ
ವ್ಯರ್ಥ
ಇಲ್ಲ, ನಾವೂ ನೀವೂ ಸೇರಲೇ ಇಲ್ಲ;
ಮುಖಕ್ಕೆ ಮುಖ, ಎದೆಗೆ ಎದೆ ಹತ್ತಿರ ತಂದು
ಮಾತಾಡಲೇ ಇಲ್ಲ.
ನಮ್ಮ ಮಧ್ಯೆ ಸದಾ ಗಾಳಿ, ಮಳೆ ಕೆಸರು;
ತಂತಿ ಕಂಬಗಳುರುಳಿ,
ಇದ್ದ ಸೇತುವೆ ಮುರಿದು
ಅಲ್ಲಿನ ಗಾಡಿ ಅಲ್ಲೇ
ಇಲ್ಲಿನ ಗಾಡಿ ಇಲ್ಲೇ.
ಮುಚ್ಚಿದ್ದ ಕಿಟಕಿ, ಹೊಗೆ ಹಿಡಿದ ಸೂರಿನ ಕೆಳಗೆ
ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತ,
ಗಿಡದಲ್ಲರಳುತ್ತಿದ್ದ ಮೊಗ್ಗುಗಳನ್ನು ಬಡಿದು ಕೆಡವುತ್ತ,
ತಲೆಯನ್ನು ಗಾಳಿ ಊಳಿಡುವ ಪಾಳುಗುಡಿ ಮಾಡಿ
ಹತ್ತಿದ ಹಣತೆಗಳನ್ನು ನಂದಿಸುತ್ತ
ಕತ್ತಲಲ್ಲೇ ತಡಕಾಡಿಕೊಂಡು ಕೈ ಚಾಚುತ್ತೇವೆ,
ರಾಂಗ್ ನಂಬರಿಗೆ ಟೆಲಿಫೋನು ಮಾಡಿ
ಉತ್ತರಕ್ಕೆ ಕಾಯುತ್ತ ಕೂರುತ್ತೇವೆ.
*****
೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […]
ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […]
ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ
ಟಿಪ್ಪಣಿ *
ಹೆಸರು *
ಮಿಂಚೆ *
ಜಾಲತಾಣ
ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ.
This site uses Akismet to reduce spam. Learn how your comment data is processed.
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…