|
ಕನ್ನಡ ಸಾಹಿತ್ಯ.ಕಾಂ
|
|
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
|
|
“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!”
|
|
ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ!
|
|
ಒಳಿತಿದನು ಅರಿತು ಆಚರಿಪಂಗೆ
|
|
ದಿಟವೆಂದು ನಂಬುವಗೆ,
|
|
ಹಂಬಲಿಸಿ ಹರಿದೋಡುವಂಗೆ,
|
|
ಶೋಕಕೆದೆಗೊಟ್ಟವಗೆ,
|
|
ಲೋಕಹಿತಗೈವಂಗೆ
|
|
ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ!
|
|
ಹಿರಿಯಾಸೆ ಹೊದ್ದವಗೆ
|
|
ಬಿದ್ದು ಎದ್ದವಗೆ, –
|
|
ಮುಂದೋಡಿ ಹಿಂದೆ ನೋಡಿ, ಕೈಬೀಸಿ ಕರೆದು ಬೇಡಿ
|
|
ಕತ್ತೆತ್ತಿ ಮುನ್ನಡೆವ ಧೀರನೆ ಧುರೀಣ!
|
|
ಸಣ್ಣತನ ಸ್ವಾರ್ಥ ದಿಗ್ಭಂಧನವೆನುಚ್ಚಳಿಸಿ
|
|
ಎಸೆಯೊ ಪೊಸಮಸೆಯ ಬಾಣ
|
|
ಅದರಾಚೆ ನಮ್ಮ ತಾಣ,
|
|
ಸುವಿಶಾಲ ಪರಿಧಿ ಕಾಣ!
|
|
೨
|
|
ದೇಶದಿಗ್ದೇಶಗಳ ಹೊಸ ಗಾಳಿ ಬೆಳಕು
|
|
ತನುಮನವನೆಳ್ಚರಿಸಿ ಬಾಳ ತೊಳೆಯುವ ಸೆಳಕು
|
|
ಇಂದಿಂದೆ ಬೇಕು
|
|
ಬಲಗೊಳಲಿ ಬದುಕು,
|
|
ಈಸು ದಿನ ಬೆದರಿ ಬೆದರಿ, ತನ್ನಲ್ಲೆ ಮುದುರಿ ಮುದುರಿ
|
|
ಬೂದಿಯಲಿ ಉರುಳಿ ಹೊರಳಿ
|
|
ತನಿಗೆಂಡದಂತ ನರಳಿ
|
|
ಮಲಗಿರುವ ಹೆಬ್ಬಯಕೆ ಮೈಕೊಡವಿ ಮೇಲೆದ್ದು
|
|
ಮೇರುಗಿರಿ ಗೆಲ್ಗೆ!
|
|
“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!!”
|
|
*****
|
|
ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […]
|
|
– ೧ – ನಮ್ಮದೊಂದು ಮನೆ ವಿನಾ ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ ಮುಂಜಾನೆ ರಂಗವಲ್ಲಿ; ಕಿಲಿಕಿಲಿಸಿದಂತೆ ಇಡಿ ಗಲ್ಲಿ. ಹಾಲಿಗೆ ಹೊರಟಾಗ ಹೊತ್ತಾರೆ ಚಿತ್ತಾಪಹಾರಿ ಚಿತ್ತಾರ ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ […]
|
|
ಮಾಮರದ ಆಸರದಿ ಮೇಲೇರಿ ಕುಡಿಚಾಚಿ ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, ಗರಿಗೆದರಿ […]
|
|
ಬಿಟ್ಟ್ಯಾ
|
|
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
|
|
ಟಿಪ್ಸ್ ಸುತ್ತ ಮುತ್ತ
|
|
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
|
|
ಮನ್ನಿ
|
|
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
|
|
ಬುಗುರಿ
|
|
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |