CoolCoder44's picture
Upload folder using huggingface_hub
94fcbe1 verified
raw
history blame
65.6 kB
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಬೆಂಗಳೂರಿನಲ್ಲಿರಲ್ಲಿ, ದೆಹಲ್ಲಿಯಲ್ಲಿರಲ್ಲಿ ನೆನೆವುದೆನ್ನ ಮನಂ ದೇವರಾಜ ಮಾರುಕಟ್ಟೆಯಂ. ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡುತ್ತಾರಂತೆ. ಈ ವಿಷಯ ಕೇಳಿಯೇ ನನ್ನ ಮನ ಮಮ್ಮಲ ಮರುಗಿತು. ಏಕೆಂದರೆ ಇದೇನು ಹುಡುಗಾಟದ ವಿಷಯವಲ್ಲ. ಈ ಮಾರ್ಕೆಟ್ ಮೈಸೂರಿನ ಹೃದಯ. ಈ ಹೃದಯದಲ್ಲಿ ನನಗೂ ಒಂದು ಪಾತ್ರವಿದೆ. ನನಗೂ ಅದಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವೊಂದಿದೆ. ಅಂತಹ ಸಂಬಂಧವನ್ನು ಕಡಿದು ಕೊಳ್ಳುವುದು ಎಂದರೆ ಸಾಮಾನ್ಯವಾದ ಮಾತಲ್ಲ. ದೇವರಾಜ ಮಾರ್ಕೆಟ್ಟಿಗೂ ನನಗೂ ಇರುವುದು ಬಾಲ್ಯದ ಗೆಳೆತನಾ ಸ್ವಾಮಿ. ಅವನು ನನ್ನ ಆಪ್ತಮಿತ್ರ ಸ್ವಾಮಿ. ಕುಮಾರವ್ಯಾಸನಿಗೆ ವೀರನಾರಾಯಣ, ಕುವೆಂಪು ಅವರಿಗೆ ಕವಿಶೈಲ್ಲ, ಪುತಿನ ಅವರಿಗೆ ಯದುನಾರಾಯಣ, ಬೇಂದ್ರೆ ಅವರಿಗೆ ಧಾರವಾಡ. ನನಗೆ ಮಾತ್ರ ದೊಡ್ಡ ಮಾರ್ಕೆಟ್. ಎಲ್ಲರೂ ಅದನ್ನು ದೇವರಾಜ ಮಾರ್ಕೆಟ್ ಎಂದೇ ಕರೆಯಲ್ಲಿ. ನಾನು ಮಾತ್ರ ಅದನ್ನು ಕರೆಯುವುದು ದೊಡ್‌ಮಾರ್ಕೆಟ್ ಎಂದೇ. ಮೈಸೂರಿನಲ್ಲಿ ಎಲದಕ್ಕೂ ಈ ಪದ ಬಳಸುವುದು ಸಾಮಾನ್ಯ. ದೊಡ್ಡದಾಗಿರುವ ಮಾರ್ಕೆಟ್‌ಗೆ ದೊಡ್‌ಮಾರ್ಕೆಟ್ ಎಂತಲೂ, ಸರ್ಕಾರಿ ಆಸ್ಪತ್ರೆಗೆ ದೊಡ್ಡಾಸ್ಪತ್ರೆ ಎಂತಲೂ, ಅತಿ ದೊಡ್ಡ ಗಣೇಶ ವಿಗ್ರಹವಿದ್ದರೆ ದೊಡ್‌ಗಣೇಶ ಎಂದೂ ಕರೆಯುವುದು ವಾಡಿಕೆ. ಬಹುಶಃ ದೊಡ್ಡೇಗೌಡರು ಎಂಬ ನಾಮಧೇಯವೂ ಈ ರೀತಿಯೇ ಬಂದಿರಬೇಕು.
ಮೈಸೂರಿನಲ್ಲಿ ದೊಡ್ಡ ಮಾರ್ಕೆಟ್ಟಿಗೂ ಒಂದು ಇತಿಹಾಸವಿದೆ. ಚಿಕ್ಕ ಮಾರುಕಟ್ಟೆಗೂ ಒಂದು ಇತಿಹಾಸವಿದೆ . ನೆಲಸಮ ಪ್ರಕ್ರಿಯೆಯೇ ಇಲ್ಲದೆ ತನ್ನಿಂತಾನೆ ಕಣ್ಮುಚ್ಚಿರುವ ವಾಣಿವಿಲಾಸ ಮಾರುಕಟ್ಟೆಗೂ ಒಂದು ಇತಿಹಾಸವಿದೆ. ಇದು ಮೈಸೂರಿನ ಹೃದಯಾ ಸ್ವಾಮಿ. ನನ್ನ ಬಾಲ್ಯದ ಗೆಳೆಯಾ ಸ್ವಾಮಿ. ನನಗೆ ಬದುಕುವ ವ್ಯವಹಾರ, ಗಣಿತದ ಲೆಕ್ಕಾಚಾರ, ಚೌಕಾಶಿಯ ವ್ಯಾಪಾರ ಎಲ ಕಲಿಸ್ದಿದೇ ಈ ಮಾರ್ಕೆಟ್ ಸ್ವಾಮಿ. ಅಂತಹ ಒಬ್ಬ ಆಪ್ತಮಿತ್ರ ಇನ್ನ್ ಎನ್ನುವುದನ್ನು ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತ್. ಮೈಸೂರಿಗೆ ಮುಂದೊಂದು ದಿನ ಹೋದಾಗ ಸಯ್ಯಾಜಿರಾವ್ ರಸ್ತೆಯಲ್ಲಿ ಓಡಾಡುವಾಗ ೧೧೦ ವರ್ಷಗಳಿಂದ ಎಷ್ಟೋ ಜನರ ಒಡನಾಟಕ್ಕೆ ಸಾಕ್ಷಿಯಾಗಿ ನಿಂತಿದ್ದ ಆ ಮಿತ್ರ ಅಲ್ಲಿರದೇ ಹೋದಾಗ, ವೇ ಮೊದಲ ರೂಪದ ರೋಮನ್ ಶೈಲ್ಲಿಯ ರಾಜಪರಂಪರೆಯ ಊರು ಎಂಬುದನ್ನು ಪದೇಪದೇ ಸಾಬೀತು ಪಡಿಸುತ್ತಾ ನಿಂತಿರುವ ಕಟ್ಟಡವನ್ನು ಕಾಣದಿದ್ದರೆ ಏನನ್ನೋ ಕಳೆದುಕೊಂಡಂತಾಗುವುದು ನಿಶ್ಚಿತ. ಏಕೆಂದರೆ ಮೈಸೂರಿನ ಹೃದಯಭಾಗವಾದ ಸಯ್ಯಾಜಿರಾವ್ ರಸ್ತೆಯ ಉದ್ದಕ್ಕೂ ಈ ಮಾರುಕಟ್ಟೆ ಮೈಚಾಚಿಕೊಂಡಿದೆ. ಎಲರ ಬದುಕಿನ ಉದಕ್ಕೂ ಒಂದ್ಲಲಾ ಒಂದು ರೀತಿಯಲ್ಲಿ ಕೈಚಾಚಿದೆ. ಒಂದು ತುದಿಯ ಗುರುಸ್ವೀಟ್ಸ್‌ನಲ್ಲಿ ಸಿಗುವ ಮೈಸೂರುಪಾಕು ಆಗಿರಬಹುದು, ಟಿಫಾನಿಸ್‌ನ ಸಮೋಸಾವೇ ಆಗಿರಬಹುದು, ಪ್ರಭಾತ್ ಬೇಕರಿಯ ಬ್ರೆಡ್ ಆಗಿರಬಹುದು. ರಾಚಯ್ಯ ಮಾರುವ ಪೆನ್ನೇ ಆಗಿರಬಹುದು, ಸಯ್ಯಾಜಿರಾವ್ ರಸ್ತೆಯ ಕಡೆಯಿಂದ ಸೆಳೆಯುತ್ತದೆ. ನಾಲ್ಕೂ ಕಡೆ ಸುತ್ತುವರೆದಿರುವ ರಸ್ತೆಗೆ ಇಳಿಯಲು ೧೫೪.೮ ಚದರ ಅಡಿ ವಿಸ್ತಾರದ ಈ ಮರುಕಟ್ಟೆ ಆರು ದ್ವಾರಗಳನ್ನು ಹೊಂದಿದೆ. ಆರೂ ದ್ವಾರಗಳೂ ಆರು ಕತೆಯನ್ನೊಳಗೊಂಡಿವೆ. ಆರೂ ದ್ವಾರದ ಚಿತ್ರ ವಿಭಿನ್ನವೇ. ಅಲ್ಲದೆ ಮಾರುಕಟ್ಟೆಯ ಪಕ್ಕದಲ್ಲೇ ಇದರೂ ಅದರ ಅವಿಭಾಜ್ಯ ಅಂಗವಾಗಿರುವ ಬೋಟಿ ಬಜಾರ್‌ನ ಮಹಿಮೆಯನ್ನು ಏನೆಂದು ಬಣ್ಣಿಸಲ್ಲಿ? ದೇವರಾಜ ಪೊಲೀಸ್ ಸ್ಟೇಷನ್ ಕಡೆಯಿಂದ ಮಾರುಕಟ್ಟೆಯನ್ನು ಪ್ರವೇಶಿಸುವವರಿಗೆ ಹೂ, ಹಣ್ಣು ಮಾರುವ ವಿಭಾಗವೇ ಅಂತ್ಯ. ಹೂ, ಹಣ್ಣು ಮಾರುವ ಕಡೆಯಿಂದ ಪ್ರವೇಶಿಸಿದರೆ, ಕೊತ್ತಂಬರಿ ಸೊಪ್ಪಿನ ಕಟ್ಟು ಮಾರುವ ಪೊಲೀಸ್ ಸ್ಟೇಷನ್ ಎಂಟ್ರಿ ಅಂತ್ಯ. ಬಹುಶಃ ಇಷ್ಟು ಅಚ್ಚುಕಟ್ಟು, ಇಷ್ಟು ಕರಾರುವಾಕ್ ವಿಂಗಡಣೆಯಾಗಿರುವ ಮಾರುಕಟ್ಟೆಯನ್ನು ನಾನು ಬೇರೆಲ್ಲೂ ನೋಡ್. ನಾನು ಮೈಸೂರಿನವನು ಎಂಬ ಕಾರಣಕ್ಕೆ ಈ ರೀತಿ ಜಂಭ ಹೊಡೆಯುತ್ತಿದ್ದೇನೆ ಎಂದು ಭಾವಿಸಬೇಡಿ, ಸಣ್ಣವಯಸ್ಸಿನಲ್ಲಿ ನಿಕ್ಕರ್ ಜೇಬಿನಲ್ಲಿ ಕೈ ಇಳಿಬಿಟ್ಟುಕೊಂಡು ಮಾರುಕಟ್ಟೆಯ ಮೂಲೆಮೂಲೆಯಲ್ಲೂ ಕುತೂಹಲದ ಕಣ್ಣುಗಳಿಂದ ಅಡ್ಡಾಡಿದವನಾಗಿರುವುದರಿಂದ ಅಂತಿಂಥ ಮಾರ್ಕೆಟ್ ಇದಲ್ಲಾ ಎಂಬ ಭಾವನೆಯೇ ನನ್ನೊಳಗೆ ಈಗಲೂ ಇದೆ. ಇದನ್ನು ಜಂಭಾ ಎಂದಾದರೂ ಕರೆಯಿರಿ, ಪೂರ್ವಗ್ರಹ ಎಂದಾದರೂ ಕರೆಯಿರಿ ನಾನು ದೇವರಾಜ ಮಾರ್ಕೆಟ್ ಪರ.
ಮರಿಮಲ್ಲಪ್ಪ ಶಾಲೆಯಲ್ಲಿ ಓದುತ್ತಿರುವಾಗ, ಒಂದು ನೋಟ್ ಬುಕ್ ಬೇಕಾದರೆ, ಟೆಕ್ಸ್ಟ್‌ಬುಕ್ ಬೇಕಾದರೆ, ಮಾರುಕಟ್ಟೆಯ ಮುಖ್ಯದ್ವಾರ ಎನ್ನಲಾಗುವ, ಚಿಕ್ಕಗಡಿಯಾರದ ಮುಂದಿರುವ ಬುಕ್ ಡಿಪೋಗೆ ಬರುವುದೇ ಒಂದು ಸಂಭ್ರಮ . ಇವೆಲ್ಲಾ ಮಾರುಕಟ್ಟೆಯ ಅವಿಭಾಜ್ಯ ಅಂಗ. ಆ ತುದಿಗೆ ಇರುವ ಫೋಟೋ ಫ್ರೇಮ್ ಅಂಗಡಿಗಳಲ್ಲಿ ಜಗಮಗಿಸುತ್ತಾ ಕುಳಿತಿರುವ ದೇವರ ಫೋಟೋಗಳನ್ನು ನೊಡುತ್ತಾ ಸಾಗಿದರೆ, ಕಳಾನಿಧಿ ಪ್ಯಾಕೆಟ್ ಕ್ಯಾಲೆಂಡರ್, ಮ್ಯಾಗಜೈನ್‌ಗಳನ್ನು ಕೈಯಲ್ಲಿ ಹೊತ್ತು ಮಾರುವವರ ದಂಡು, ವಿವಿಧ ಬ್ಯಾಗುಗಳನ್ನು ಹೆಗಲ್ಲಲೂ, ಕೈಯ್ಲಲೂ, ಮೈತುಂಬವೂ ಹೇರಿಕೊಂಡು ಮಾರುತ್ತಾ ಸುಳಿದಾಡುವವರ ಹಿಂಡು, ಹಣ್ಣುಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ರೂಪಾಯಿಗೆ ಐದೋ, ನಾಲ್ಕೋ ಎಂದು ಕೂಗುತ್ತಾ ಬೊಬ್ಬೆ ಹಾಕುವ ವ್ಯಾಪಾರಿಗಳು ಮನಸ್ಸಿಗೆ ಜಾತ್ರೆಯ ವೈಭೋಗವನ್ನು ತುಂಬುತ್ತಾರೆ. ಮಾರ್ಕೆಟ್ ಬಾಗಿಲ್ಲ್ಲಲೇ ನಮ್ಮನ್ನು ಒಂದು ಆಹ್ಲಾದಕರ ವಾತಾವರಣಕ್ಕೆ ಮಾನಸಿಕವಾಗಿ ತಯಾರು ಮಾಡಿ ಒಳಕ್ಕೆ ಕಳುಹಿಸುವ ವಿಧಾನವೇನೋ ಇದು ಎನಿಸುತ್ತದೆ. ಒಳಗೆ ಕಾಲಿಟ್ಟರೆ ಮಧ್ಯದ ಸಾಲು ಹಣ್ಣುಗಳ ಮಳಿಗೆ, ಎಡಕ್ಕೆ ಎಲೆ, ಅಡಿಕೆ,ಅಂಗಡಿಗಳ ಸಾಲು, ಜತೆಗೆ ಕುಂಕುಮ ಹರಿಶಿನ, ಗ್ರಂದಿಗೆ ಅಂಗಡಿ, ಬಲಕ್ಕೆ ತೆಂಗಿನಕಾಯಿ ಅಂಗಡಿಗಳ ಸಾಲು, ಸ್ವಲ್ಪ ಮುಂದೆ ಹೋದರೆ ಹೂವಂಗಡಿಗಳದೇ ಒಂದು ಸಾಲು, ಜೋಡಿಸಿಟ್ಟ ಬೆಲ್ಲಗಳ ಪಿಂಡಿ ,ಅಚ್ಚುಬೆಲ್ಲ, ಉಂಡೆಬೆಲ್ಲಗಳ ಅಂಗಡಿಗಳ ಸಾಲುಸಾಲು, ಕಳ್ಳೇಪುರಿ ಅಂಗಡಿಗಳ ಆಕರ್ಷಣೆ….ನಿಮಗೆ ಪೊರಕೆ ಬೇಕೆ, ಇಲ್ಲಿ ಹಿಡಿಯುವ ಬೋನು ಬೇಕೆ? ಗೋಡೆ ಸುಣ್ಣ ಬೇಕೆ? ಇಲ್ಲಿ ಎಲ್ಲಾ ಇದೆ. ಮಾರುಕಟ್ಟೆಯ ವ್ಯವಸ್ಥೆಯೇ ಎಷ್ಟು ಅಚ್ಚುಕಟ್ಟು ನೋಡಿ, ಎಷ್ಟು ಸುಸಂಗತ ಸಂಧಾನ ನೋಡಿ, ಪೂಜಾ ಸಾಮಗ್ರಿಗಳೆಲ್ಲಾ ಒಂದೇ ಕಡೆ ಸಿಗುವ ಸುವ್ಯವಸ್ಥಿತ ವಿಂಗಡಣೆಯೇ ಒಂದು ರೀತಿಯಲ್ಲಿ ಮನಸ್ಸಿಗೆ ಹಿತ ನೀಡುತ್ತದೆ.
ನಾವು ಚಿಕ್ಕವರಿದ್ದಾಗ ಮೈಸೂರಿನಲ್ಲಿ ಸುತ್ತಾಡಲು ಏನಿತ್ತು? ರಜೆ ದಿನ ಬಂದರೆ ಕಾಲಕಳೆಯಲು ಯಾವ ಫನ್‌ವರ್ಲ್ಡ್ ಇತ್ತು? ಯಾವ ಮೆಟ್ರೊ ಇತ್ತು? ಎಷ್ಟು ಮಾಲ್‌ಗಳಿದ್ದವು? ಸಂಜೆಯಾಯಿತೆಂದರೆ, ಟೌನ್‌ಹಾಲ್ ಮೈದಾನಕ್ಕೆ ಹೋಗಿ, ನಾಲ್ಕಾಣೆಗೆ ಕಳ್ಳೇಕಾಯಿ ತೆಗೆದುಕೊಂಡು, ಟೌನ್‌ಹಾಲಿನ ತುದಿಯಲ್ಲಿ ತೂಗುಹಾಕಿರುವ ಲೌಡ್‌ಸ್ಪೀಕರ್‌ನಿಂದ ಬರುವ ವಾರ್ತೆಗಳು, ಚಿತ್ರಗೀತೆಗಳನ್ನು ಕೇಳುತ್ತಾ, ಕತ್ತಲೆಯಾದ ಮೇಲೆ, ಅದೇ ಮಂಕುಕವಿದ ದೀಪದ ರಸ್ತೆಗಳ ಮೂಲಕ ಮನೆಗೆ ಮರಳುವುದು..ನಿತ್ಯದ ದಿನಚರಿಯಾಗಿರುತ್ತಿತ್ತು. ಆದರೆ ಒಂದು ಬ್ಯಾಗು ಹಿಡಿದು ಕೊಂಡು ದೇವರಾಜ ಮಾರುಕಟ್ಟೆ ಪ್ರವೇಶಿಸಿದರೆ ಸಾಕು ಒಂದು ಹೊಸ ಕಿನ್ನರಲೋಕವೇ ಅಲ್ಲಿ ತೆರೆದುಕೊಳ್ಳುತ್ತಿತ್ತು. ಅದೊಂದು ಹತ್ತುಹಲವು ಬಗೆಯ ಬದುಕುಗಳ ಮತ್ತೊಂದು ಲೋಕ. ಅಂಗಡಿ-ಮುಂಗಟ್ಟು ಇಟ್ಟವರು ಗಂಟುಮೂಟೆ ಕಟ್ಟುವುದನ್ನು ನೋಡಿಯೇ ರಾತ್ರಿ ಹೊತ್ತಾಗುತ್ತಿದೆ ಎಂಬುದನ್ನು ತಿಳಿಯಬೇಕಿತ್ತು. ಈ ಮಾರುಕಟ್ಟೆ ಎಂತೆಂಥಾ ವ್ಯವಹಾರಗಳನ್ನು ನನಗೆ ಕಲಿಸಿದೆ ಅಂತೀರಾ? ಶಾಲೆಯಲ್ಲಿ ಪಾಠ ಕಲಿತೆ, ಮಾರುಕಟ್ಟೆಯಲ್ಲಿ ಬದುಕು ಕಲಿತೆ. ಅಂತಹ ಜಗತ್ತು ಇದು.
ಮೊದಲೇ ಹೇಳಿದೆನಲ್ಲಾ..ಚಿಕ್ಕ ಗಡಿಯಾರದ ವೃತ್ತದ ಕಡೆಯಿಂದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಂತೆಯೇ ಎತ್ತರಕ್ಕೆ ಇರುವ ವಿವಿಧ ಹಣ್ಣುಗಳ ಅಂಗಡಿಗಳ ಸಾಲು ಘಮ್ ಎನ್ನುತ್ತದೆ. ನೇತು ಹಾಕಿರುವ ತಟ್ಟೆಗಳ ತಕ್ಕಡಿಯೇ ನಮ್ಮನ್ನು ಸ್ವಾಗತಿಸುತ್ತದೆ. ಬಹುಪಾಲು ಅಂಗಡಿಗಳಲ್ಲಿ ಮಲಯಾಳಿಕಾಕಾಗಳು ಕಾಣಬರುತ್ತಾರೆ. ಮುಸ್ಲೀಮರೂ, ಕನ್ನಡಿಗರೂ ಸರಿಸಮವಾಗಿದ್ದಾರೆ. ಮಲಯಾಳಿಗಳ ಕನ್ನಡವೂ ವಿಚಿತ್ರವೇ. ಇವರ ವ್ಯಾಪಾರದ ರಹಸ್ಯ ಎಷ್ಟು ಗಟ್ಟಿ ಎಂಬುದನ್ನು ಅವರನ್ನು ನೋಡಿಯೇ ತಿಳಿಯಬೇಕು. ವ್ಯಾಪಾರ ಮಾಡಲು ಬಂದವರು ಯಾರೂ ಮನಸೆಳೆಯುವ ಸೇಬನ್ನೋ, ಮೂಸಂಬಿಯನ್ನೋ, ಕಿತ್ತಳೆಯನ್ನೋ ಮುಟ್ಟುವ ಅವಕಾಶವೇ ಇರುತ್ತಿರಲ್ಲ್. ಚೌಕಾಶಿಯ ನಂತರ ಕೈ ಬೆರಳಿಂದ ಏನು ಬೇಕು ಎಂಬುದನ್ನು ತೋರಿಸಿದರೆ, ಆತ ಅದರಿಂದ ತೆಗೆದು ಕೈಗೆಟುಕದ ಎತ್ತರಕ್ಕೆ ಕಟ್ಟಿರುವ ನೇತಾಡುವ ತಕ್ಕಡಿಯ ತಟ್ಟೆಗೆ ಅದನ್ನು ಹಾಕುತ್ತಾನೆ. ಆ ತಕ್ಕಡಿಯನ್ನು ಅವನ ನೆತ್ತಿಯಿಂದ ಮೇಲಕ್ಕೆ ಬರುವ ಹಾಗೆ ಏಕೆ ಕಟ್ಟಿದ್ದಾನೆ ಎಂಬುದರ ರಹಸ್ಯ ಒಡೆದರೆ, ನಿಮಗೆ ಅವನ ವ್ಯಾಪಾರದ ಗುಟ್ಟು ಗೊತ್ತಾಗುತ್ತದೆ. ತಕ್ಕಡಿ ಸರಿಯಾಗಿ ತೂಗುವುದ್. ತೂಕದ ಬಟ್ಟು ಇಡುವ ಕಡೆ ಅವನು ಎಷ್ಟು ಗ್ರಾಂನ ಬಟ್ಟು ಇಟ್ಟಿದ್ದಾನೋ? ಈ ಅನುಮಾನ ನಮಗೆ ಕಾಡಿದರೂ ಅವನು ಏನು ತಿಳಿದುಕೊಳ್ಳುತ್ತಾನೋ ಎಂಬ ಹಿಂಜರಿಕೆಯಲ್ಲಿ ಪ್ರಶ್ನಿಸಲು ಹೋಗುವುದ್. ಅವನು ಹಾಕಿದ ಹಣ್ಣು ಕೂಡಾ ಅರ್ಧ ಕೆಟ್ಟಿರುತ್ತದೆ ಇನ್ನರ್ಧ ಚೆನ್ನಾಗಿರುತ್ತದೆ. ಅವನು ಹಣ್ಣುಗಳನ್ನು ತಕ್ಕಡಿಯಿಂದ ತೆಗೆದು ಅದ್ಯಾವ ಮಾಯದಲ್ಲಿ ಹಣ್ಣುಗಳನ್ನು ಕವರಿಗೆ ತುಂಬಿ, ನಿಮ್ಮ ಕೈಯಲ್ಲಿಡುತ್ತಾನೋ ಆ ಶಿವನೇ ಬಲ್ಲ. ಒಮ್ಮೆ ವ್ಯಾಪಾರ ಮಾಡಿದವರು ಮತ್ತೊಮ್ಮೆ ಬರುವಷ್ಟರಲ್ಲಿ ಹುಷಾರಾಗಿ ವ್ಯಾಪಾರ ಮಾಡಬೇಕಾದ ವಿದ್ಯೆಯನ್ನು ಈ ವಿಭಾಗ ನಮಗೆ ಕಲಿಸುತ್ತದೆ. ಮೈಸೂರಿನಲ್ಲೇ ಏಕೆ ಇದು ಬೆಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಮಾಮೂಲು. ಅದರ್‍ಲಲೂ ಬಸ್‌ನಿಲ್ದಾಣಗಳ ಮುಂದೆ ತಳ್ಳುಗಾಡಿಯಲ್ಲಿ ರಾಶಿ ಪೇರಿಸಿಕೊಂಡು ನಿಂತಿರುವ ಹಣ್ಣು ಮಾರಾಟಗಾರರು ಇಂತಹ ವ್ಯಾಪಾರದಲ್ಲಿ ನಿಷ್ಣಾತರು. ಕೊಳೆತ ಹಣ್ಣುಗಳನ್ನು ಮೊದಲೇ ಕವರ್‌ಗಳಲ್ಲಿ ತುಂಬಿ ಗಾಡಿಯ ಕೆಳಭಾಗದ್ಲಲೋ, ನಮ್ಮ ಕಣ್ಣಿಗೆ ಕಾಣದಂತೆಯೋ ಇಟ್ಟುಕೊಂಡಿರುತ್ತಾರೆ. ಬಸ್ ಏರುವ ತವಕದಲ್ಲಿ ವ್ಯಾಪಾರ ಮಾಡಿ, ನಾವು ಎತ್ತಿಕೊಟ್ಟ ಹಣ್ಣನ್ನೇ ಆತ ತಕ್ಕಡಿಗೆ ಹಾಕಿ ತೂಗಿರುತ್ತಾನೆ. ಕೈಯಲ್ಲಿ ಕವರಿಟ್ಟ ತಕ್ಷಣ ಅವನಿಗೆ ಹಣ ನೀಡಿ, ಚ್ರೆ ಪಡೆದು, ಜಾಗ ಖಾಲಿ ಮಾಡಿ,ಮನೆಗೆ ಬಂದಮೇಲಷ್ಟೇ ಆ ಕವರಿನ ಹೂರಣದ ಮರ್ಮ ಗೊತ್ತಾಗುವುದು. ಅದ್ಯಾವ ಕೈಚಳಕವೋ, ಕಣ್ಕಟ್ಟೋ? ಅದೇನು ವಿದ್ಯೆಯೋ? ಕ್ಷಣಮಾತ್ರದಲ್ಲಿ ನಮ್ಮನ್ನು ಆತ ಡೂಪ್ ಮಾಡಿರುತ್ತಾನೆ
*
*
*
ಮಾರುಕಟ್ಟೆಯಲ್ಲಿ ಎಲೆ ಅಡಿಕೆ ಜಗಿಯುವರಿಗಾಗಿಯೇ ಒಂದು ಪ್ರತ್ಯೇಕ ವಿಭಾಗವೇ ಇದೆ. ವೀಳ್ಯೆದೆಲೆಯನ್ನು ಅಲಂಕಾರಿಕವಾಗಿ ಜೋಡಿಸಿ ಇಟ್ಟಿರುವ ಪರಿಯನ್ನು ನೋಡಿಯೇ ಆನಂದಿಸಬೇಕು. ಹೋಲ್‌ಸೇಲ್‌ನಲ್ಲಿ ಮಾರುವವರು ದೊಡ್ಡ ಪಿಂಡಿಯನ್ನು ವೃತ್ತಾಕಾರವಾಗಿ ಜೋಡಿಸಿರುವ ರೀತಿಯೇ ಆಕರ್ಷಕ. ಸುತ್ತಮುತ್ತ ಎಲೆ ತೋಟದ ಹಳ್ಳಿಯವರು ನಿತ್ಯ ತಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಲ್ಲೇ ಕುಳಿತು ಮಾರಾಟ ಮಾಡಿ ರಾತ್ರಿ ತಮ್ಮ ಊರಿಗೆ ಹಿಂದಿರುಗುತ್ತಾರೆ. ತಂದಿರುವ ಎಲೆಯನ್ನೇ ವಿಂಗಡಿಸಿ ಮೂರು ವಿಧವಾಗಿ ಬುಟ್ಟಿಯಲ್ಲಿ ಇಟ್ಟಿರುತ್ತಾರೆ. ತರುವುದೆಲ್ಲಾ ಮೈಸೂರು ಎಲೆಯೇ. ಅದರಲ್ಲೇ ಮೂರು ವಿಧ! ಇದನ್ನು ಯಾವ ಸಸ್ಯ ಶಾಸ್ತ್ರಜ್ಞನೂ ಹೇಳಿದ್ದಲ್ಲ. ಎಲೆ ಮಾರುವಾಕೆಯದೇ ಅದರ ಪೇಟೆಂಟ್.
ಮೈಸೂರು ಎಲೆ ಎಂದರೆ ಅದರ ಸೊಗಡೇ ಬೇರೆ. ಅದರಲ್ಲಿ ಕಪ್ಪನೆಯ ಎಲೆಯದೇ ಒಂದು ಗುಂಪು. ತಿಳಿ ಹಸಿರು ಬಣ್ಣದಲ್ಲಿ ಮಿರ ಮಿರ ಮಿಂಚುತ್ತಿದ್ದರೆ ಅದೇ ಬೇರೆ ವರ್ಗ. ಅದರ ರೇಟೇ ಬೇರೆ. ಇನ್ನು ಇದೇ ಜಾತಿಯ ಎಲೆಯಲ್ಲೇ ಚಿಕ್ಕ ಚಿಕ್ಕ ಎಲೆಗಳನ್ನೇ ಬೇರೆ ಇಟ್ಟು ಚಿಗುರೆಲೆ ಎಂದು ವರ್ಗೀಕರಿಸಿ ಅದರ ರೇಟನ್ನೇ ಬೇರೆ ನಿಗದಿಪಡಿಸುತ್ತಾರೆ. ಇನ್ನು ಅಂಬಾಡಿ ಎಲೆಯದೇ ಬೇರೆ ಕತೆ. ಅಂಬಾಡಿ ಎಲೆಯನ್ನು ಬರೀ ಮದ್ರಾಸಿಗಳೇ ತಿನ್ನುತ್ತಾರೆ ಎಂಬ ಭಾವನೆ ಹೆಚ್ಚಾಗಿರುವುದರಿಂದ, ಸುತ್ತಲ ಹಳ್ಳಿಯ ಹೆಂಗಸರು ತಂದು ಮಾರುವ ಎಲೆ ಕಟ್ಟಿನಲ್ಲಿ ಅಂಬಾಡಿ ಸಿಗುವುದ್.
ಮೈಸೂರು ಎಲೆಗಿಂತ ಅಂಬಾಡಿ ಎಲೆ ಸ್ವಲ್ಪ ಅಗ್ಗ. ಮೈಸೂರಿನಲ್ಲಿ ಬಹಳ ಜನ ತಿನ್ನುವುದು ಚಿಗುರೆಲೆ ಇಲ್ಲವೇ ತಿಳಿ ಹಸಿರಿನ ಎಲೆ. ಕಪ್ಪು ಮಿಶ್ರಿತ ಹಸಿರು ಅಂದರೆ ಗಟ್ಟಿ ಹಸಿರು ಬಣ್ಣದ ವೀಳ್ಯೆದೆಲೆ ಸ್ವಲ್ಪ ಖಾರ ಜಾಸ್ತಿ. ಆದರಿಂದ ಅದನ್ನು ಮ್ಲೆಲುವವರು, ಸುದೀರ್ಘ ಕಾಲದಿಂದ ಅಡಿಕೆ ಎಲೆ ಸುಣ್ಣ ಹಾಕಿ ಹಾಕಿ ನಾಲಿಗೆ ಮಂದವಾಗಿದ್ದವರೇ ಆಗಬೇಕು. ಇಲ್ಲದಿದ್ದರೆ ಮೊದಲನೆಯ ಬಾರಿ ಈ ಎಲೆ ಬಾಯಿಗೆ ಹಾಕಿಕೊಂಡು ಅಗಿದವರು, ನಾಲಗೆ ದಪ್ಪವಾಗುತ್ತದೆ. ಮುಂದೆ ಅವರು ಆಡುವ ಮಾತು ಸ್ಪಷ್ಟವಾಗಿ ಕೇಳಬೇಕೆಂದರೆ ಸ್ವಲ್ಪ ದಿನಗಳೇ ಆಗಬೇಕಾಗುತ್ತದೆ.
ಆದರೆ ಇತ್ತೀಚೆಗೆ ಪಾನ್ ಬೀಡಾ ಹಾಕುವವರು, ಮದ್ರಾಸ್ ಎಲೆ ಹಾಕು, ಬನಾರಸಿ, ಕಲ್ಕತ್ತಾ ಎಲೆ ಹಾಕು…. ಎಂದು ತಮ್ಮ ಆಯ್ಕೆಯನ್ನು ಹೇಳುತ್ತಾರೆ. ಯಾವುದರ ರುಚಿ ಹೇಗಿರುತ್ತದೆ ಎಂಬುದು ಅವರ ನಾಲಗೆಗೆ ಚೆನ್ನಾಗಿಯೇ ಗೊತ್ತಾಗುತ್ತದೆ. ಅದೇ ರೀತಿ ಮೈಸೂರಿನ ವೀಳ್ಯೆದೆಲೆ ರುಚಿ ಬಲ್ಲವರಿಗೆ ಮತ್ಯಾವ ಎಲೆಯ ರುಚಿಯೂ ಒಗ್ಗದು. ದೇವರಾಜ ಮಾರುಕಟ್ಟೆಯಲ್ಲಿ ಎಲೆ ಮಾರುವವರ ವ್ಯಾಪಾರವೆಲ್ಲಾ ಕವಳಿಗೆ ಲೆಕ್ಕ. ಒಂದು ಕವಳಿಗೆಗೆ ಅಂದು ಒಂದೇ ರೂಪಾಯಿ. ಈಗ ಅದು ಎಂಟು ರೂಪಾಯಿ. ಒಂದು ಕವಳಿಗೆಯಲ್ಲಿ ಇಪ್ಪತ್ತು ಎಲೆಗಳು ಇರುತ್ತವೆ. ನೀವು ನಿತ್ಯ ಹೋಗುವ ಮಾಮೂಲಿ ‘ಗಿರಾಕಿ’ ಆಗಿದ್ದು, ಎಲೆ ಮಾರುವ ಅಮ್ಮನ ಪರಿಚಯಸ್ಥರಾದರೆ ಕವಳಿಗೆಯಲ್ಲಿ ಇನ್ನೆರಡು ಎಲೆ ಜಾಸ್ತಿಯೂ ಇರಬಹುದು. ಅದು ನಿಮ್ಮನ್ನು ಮೆಚ್ಚಿ ಕೊಡುವ ಕೊಸರು. ನೀವು ಹೊಸಬರಾಗಿದ್ದು, ಸಿಕ್ಕಾಪಟ್ಟೆ ಚೌಕಾಸಿ ಮಾಡಿ ವ್ಯಾಪಾರ ಮಾಡಿದರಾದರೆ, ನೀವು ಕೊಂಡು ಹೋದ ‘ಕವಳಿಗೆ’ ಕಟ್ಟಿನಲ್ಲಿ ಹದಿನೈದೇ ಎಲೆ ಇರಬಹುದು! ನಿಮಗೆ ತೋರಿಸಿದ ವೀಳ್ಯೆದೆಲೆ ಕಟ್ಟು ಬೇರೆ, ನೀವು ಮನೆಗೆ ತಂದ ಕಟ್ಟು ಬೇರೆಯೇ ಆಗಿರಬಹುದು.
ಎಲೆಯನ್ನು ಸುತ್ತಲು ದಾರ ತೆಗೆಯುವ ಕ್ಷಣದಲ್ಲಿ ಕಟ್ಟಿನ ಹಲವು ಎಲೆಗಳು ಮಾರುವವರ ತೊಡೆಯ ಕೆಳಗೆ ಕಳಚಿಕೊಳ್ಳುವ ಕಣ್ಕಟ್ಟು ವಿದ್ಯೆಯನ್ನು ಕಲಿಯುವುದು ಸ್ವಲ್ಪ ಕಷ್ಟವೇ. ಅದನ್ನು ಆ ಗದ್ದಲದಲ್ಲಿ ಕಂಡುಹಿಡಿಯುವುದೂ ಕಷ್ಟ. ಮಾರುಕಟ್ಟೆಗೆ ಹೋದಾಗ ಮನಸ್ಸು ನೂರೆಂಟು ಕವಲುಗಳಲ್ಲಿ ಚದುರಿ ಹೋಗುವುದರಿಂದ ಅಲ್ಲಿ ಮನಸ್ಸಿಗೆ ಕಡಿವಾಣ ಹಾಕುವುದು ಕಷ್ಟ. ಆದರೆ ಚಾಣಾಕ್ಷತನ ಬೇಕೆನ್ನುತ್ತದೆ ಈ ಮಾರುಕಟ್ಟೆ. ಅಲ್ಲದೆ ಅದನ್ನು ಕಲಿಸುತ್ತದೆ ಕೂಡಾ. ಈ ಮಾರುಕಟ್ಟೆ ಬದುಕನ್ನು ಕಲಿಸುತ್ತದೆ. ಬದುಕಿನ ದಾರಿಯನ್ನು ಹೇಳಿಕೊಡುತ್ತೆ. ಎಲ್ಲವನ್ನು ಎದುರಿಸಿ, ಜೀವನದಲ್ಲಿ ಮುಂದು ಬರಬೇಕು ಎನ್ನುವವರು ಈ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಲೇ ಬೇಕು. ಸುತ್ತಿಕೊಟ್ಟ ಎಲೆಯನ್ನು ಅಲ್ಲೇ ಎಣಿಸುವಂತ್. ಹಾಗೆ ಮಾಡಿದರೆ, ಮಾರುವಾಕೆಯ ಗ್ರಾಮ್ಯ ಸೊಗಡಿನ ಬೈಗುಳಗಳ ಪ್ರಹಾರವನ್ನೇ ಎದುರಿಸಬೇಕಾಗುತ್ತದೆ. ಅವಳು ಎದ್ದು, ನಿಮ್ಮ ಕೈಯಿಂದ ಎಲೆಕಟ್ಟನ್ನು ಕಿತ್ತುಕೊಂಡರೂ ಆಶ್ಚರ್ಯವ್. ಅವರ ಬಾಯಿಗಂಜಿ ಪರಾರಿಯಾಗಬೇಕಾಗುತ್ತದೆ. ಎಲೆ ಮಾರುವವವರು ಕುಳಿತುಕೊಳ್ಳುವ ರಸ್ತೆಗೆ ಅಂಟಿಕೊಂಡಂತಿರುವ ಮಳಿಗೆಗಳು ಅಡಿಕೆ ಅಂಗಡಿಗಳು. ಒಂದಕ್ಕೊಂದು ಪೂರಕ. ಅಡಿಕೆ ಅಂಗಡಿಗೆ ಹೋದರೆ, ಅಲ್ಲಿ ಅಡಕೆಯದೇ ಹಲವಾರು ವಿಧ. ಚೂರು ಅಡಿಕೆ. ಬಟ್ಲಡಿಕೆ, ಕೆಂಪು ಅಡಿಕೆ, ಕಾಯಿ ಅಡಿಕೆ, ಗೋಟಡಿಕೆ ಹೀಗೆ ನೀವು ಯಾವ ರುಚಿ ಬಲ್ಲಿರೋ ನಿಮಗೆ ಬೇಕಾದ ಆಯ್ಕೆ ಅಲ್ಲಿರುತ್ತದೆ. ಅಲ್ಲದೆ, ತಂಬಾಕುಗಳಿಗೂ ಬರವ್. ಕಡ್ಡಿಪುಡಿಗೂ ಕೊರತೆಯೆ…
*
*
*
ನನ್ನ ಗೆಳೆಯರು ಮಾರುಕಟ್ಟೆಗೆ ಹೋಗುವಾಗಲೆಲ್ಲಾ ನನ್ನನ್ನೂ ಹುಡುಕಿ ಕರೆದುಕೊಂಡು ಹೋಗುತ್ತಾರೆ. ನಾನು ವ್ಯಾಪಾರದಲ್ಲಿ ನಿಷ್ಣಾತ ಆಗಿರುವುದರಿಂದ ಸ್ನೇಹಿತರು ಹೀಗೆ ಮಾಡುತ್ತಾರೆ ಎಂದು ಯಾರಾದರೂ ತಿಳಿದರೆ ಅದು ತಪ್ಪು. ನನಗೂ ಮೊದಮೊದಲು ಹೀಗೇ ಅನಿಸಿತ್ತು. ಗೆಳೆಯರಿದ್ದರೆ ಇಂಥವರು ಇರಬೇಕು ಎಲ್ಲಿ ಹೋಗಬೇಕಾದರೂ ನನ್ನನ್ನು ಕರೆಯುತ್ತಾರೆ, ಎಂತಹ ಆತ್ಮೀಯ ಸ್ನೇಹ! ಎಂದು ಹೆಮ್ಮೆಯಿಂದ ಬೀಗಿದ್ದಿದೆ.
ಮಾರುಕಟ್ಟೆ ಒಳಗೆ, ಹೂವಿನ ಅಂಗಡಿ ಮುಂದೆ ವ್ಯಾಪಾರಕ್ಕೆ ನಿಂತಾಗ ಸ್ನೇಹಿತರ ಸ್ನೇಹದ ಗುಟ್ಟು ಬಹಿರಂಗವಾಗಿತ್ತು. ಅಲ್ಲಿ ಮಲ್ಲಿಗೆ ಹೂಗಳನ್ನು ‘ಮಾರು’ ಲೆಕ್ಕದಲ್ಲಿ ಮಾರುತ್ತಾರೆ. ನಮ್ಮ ಎರಡೂ ಕೈಗಳನ್ನು ಚಾಚಿದರೆ ಅದು ಎಷ್ಟು ಉದ್ದ ಬರುತ್ತದೋ ಅಷ್ಟುದ್ದ ಒಂದು ‘ಮಾರು’. ಮುನ್ಸಿಪಾಲಿಟಿಯವರು ಮೀಟರ್ ಲೆಕ್ಕದಲ್ಲಿ ಅಳತೆ ಮಾಡಬೇಕು ಎಂದು ಕಡ್ಡಾಯ ಮಾಡಿದ್ದರೂ, ಹೂ ಮಾರುವವರಿಗೆ ಕೈಯೇ ಮೀಟರ್. ಯಾರು ಪಾಲಿಸಬೇಕು ಸರ್ಕಾರದ ಆದೇಶ?
ಈಗ ಮಾರಿನ ಲೆಕ್ಕ ಕಣ್ಮರೆ ಆಗುತ್ತಿದೆ. ‘ಮೊಳ’ ಹಾಕುವ ಪದ್ಧತಿ ಜಾರಿಗೆ ಬಂದಿದೆ. ಹೂ ಎಷ್ಟು? ಎಂದು ಪ್ರಶ್ನಿಸಿದರೆ, ಮೊಳ ಐದು ರೂಪಾಯಿ ಎನ್ನುತ್ತಾರೆ. ಮೊಳ ಎಂದರೆ ಅರ್ಧ ಕೈ. ಅಳೆದು, ಎಳೆದು ಕಟ್ ಮಾಡುವಷ್ಟರಲ್ಲಿ ಅದು ಅಂಗೈಯಷ್ಟೇ ಉದ್ದವಾಗಿರುತ್ತದೆ. ಮಾರು ಅಳೆಯುವಾಗಲೂ ಹೂವಾಡಗಿತ್ತಿಯರು ಕಟ್ಟಿರುವ ಹೂವನ್ನು ಎಳೆದುಬಿಡುತ್ತಿದ್ದರು. ಹೀಗಾಗಿ ಒಂದು ಮಾರು ಹೂ ಅರ್ಧ ಮಾರಿಗೆ ಬಂದು ನಿಲ್ಲುತ್ತಿತ್ತು. ನನ್ನನ್ನು ಕರೆದುಕೊಂಡು ಹೋಗುತ್ತಿದ್ದ ಸ್ನೇಹಿತರು ಹೂ ವ್ಯಾಪಾರ ಮಾಡುವಾಗ, ಮಾರಿಗೆ ಇಷ್ಟು ಎಂದು ಹೇಳಿದರೆ, ಅಳತೆ ‘ನಮ್ಮ ಕೈಯಳತೆ’ ಎಂದು ವಾದಿಸುತ್ತಿದ್ದರು. ಕೆಲವರು ಒಪ್ಪುತ್ತಿದ್ದರು. ಕೆಲವರು ಬೈಗುಳಗಳ ಮಳೆಯನ್ನೇ ಹರಿಸುತ್ತಿದ್ದರು.
ಹೂ ಮಾರುವವರು ‘ನೀವೇ ಅಳ್ಕಳ್ಳಿ’ ಎಂದು ಹೇಳಿದ ತಕ್ಷಣ ನನ್ನ ಸ್ನೇಹಿತ, ‘ಇವರ ಕೈಗೆ ಹೂ ಕೊಡು’ ಎಂದು ನನ್ನನ್ನು ತೋರಿಸಿದ. ನನ್ನನ್ನು ನೋಡುತ್ತಲೇ ಹೂ ಮಾರುವವಳು, ಬೆಚ್ಚಿಬಿದ್ದು ‘ಹೂನೂ ಇಲ್ಲ, ಏನೂ ಇಲ್ಲ ಮುಂದಕ್ ನಡೀರಿ’ ಎಂದು ಬೈದು ನಿಮ್ಮಂತಹವರು ನಾಲ್ಕು ಜನ ಬಂದರೆ, ಮನೆ ಎಕ್ಕುಟ್ಟೋಗುತ್ತೆ” ಎಂದು ಗೊಣಗಿದಳು. ಮತ್ತೊಬ್ಬರ ಹತ್ತಿರವೂ ಇದೇ ತರಹದ ಮಂಗಳಾರತಿ ಆಯಿತು. ಕೆಲವರು ನಮ್ಮದೇ ಮಾರು ಆದರೆ, ಈ ರೇಟು, ನಿಮ್ಮದಾದರೆ ಡಬ್ಬಲ್ ಎಂದು ಹೇಳಿ ಸಾಗಹಾಕಿದರು. ನಾನು ಎಲ್ಲರಿಗಿಂತ ಸ್ವಲ್ಪ ಉದವಿದ್ದೆ. ನನ್ನ ಕೈಗಳೂ ಸ್ವಲ್ಪ ಲಂಭವೇ. ನಾನು ಎರಡೂ ಕೈಗಳನ್ನು ಅಗಲಿಸಿ ನಿಂತರೆ ಅದು, ಹೂ ಮಾರುವವರು ಅಳತೆ ಮಾಡಿಕೊಡುವ ಒಂದು ಮಾರು, ನನ್ನ ಕೈಲೆಕ್ಕದಲ್ಲಿ ಎರಡಾಗುತ್ತಿತ್ತು. ನನ್ನ “ಆಪ್ತ” ಸ್ನೇಹಿತರು ನನ್ನನ್ನು ಎಲ್ಲಿದ್ದರೂ ಹುಡುಕಿ ದೇವರಾಜ ಮಾರುಕಟ್ಟೆಗೆ ಕರೆದುಕೊಂಡು ಹೋಗುವ ರಹಸ್ಯ ಈಗ ನಿಮಗೆ ಗೊತ್ತಾಯಿತಲ್ಲ.!
*
*
*
ಹಬ್ಬದ ದಿನಗಳು ಬಂತೆಂದರೆ ಈ ಮಾರ್ಕೆಟ್ ತುಂಬಿ ತುಳುಕುತ್ತದೆ. ಅದು ಸಂಭ್ರಮದ ಕ್ಷಣ. ಜನ ತಳ್ಳಿಕೊಂಡೇ ಓಡಾಡುವಷ್ಟು ವಿಪರೀತದ ಜನಸಂದಣಿ. ಹೂ, ಹಣ್ಣುಗಳ ಅಂಗಡಿಗಳಿಗಂತೂ ಜನರ ಮುತ್ತಿಗೆ . ಆಗ ಮಾರಾಟಗಾರರ ಸಂಖ್ಯೆಯೂ ಹೆಚ್ಚು. ಪಚ್ಚೆಬಣ್ಣದ ತುಳಸಿಹೂ, ತುಳಸಿ ಹಾರದ ಸೊಗಸು, ಕಂತೆ ಕಂತೆಯಾಗಿ ಕೈಯಲ್ಲಿಡಿದು ಮಾರುವ ಘಮಘಮಿಸುವ ದವನ, ಮೈಸೂರು ಮಲ್ಲಿಗೆಯ ರಾಶಿರಾಶಿ, ಕೆಜಿ ಲೆಕ್ಕದಲ್ಲೂ ಲಭ್ಯ, ಮಾಲೆಯಾಗಿಯೂ ಸಿದ್ಧ. ಆ ಸಡಗರಕ್ಕೆ ಎಲ್ಲಿದೆ ಅಂತೀರಿ?
ತರಕಾರಿ ಮಾರುವವರ ಬಳಿ ವ್ಯಾಪಾರ ಮಾಡುವಾಗ ಬಹಳ ಹುಷಾರಾಗಿರಬೇಕು. ನಗರದಲ್ಲಿರುವ ವ್ಯಾಪಾರಿಗಳು, ಬೆಳೆಗಾರರಿಂದ ಖರೀದಿಸಿ ಇಲ್ಲಿ ತಂದು ಮಾರುತ್ತಾರೆ. ಅವರ ಬಳಿ ಎಲಾ ಒಂದೇ ದರ. ವ್ಯಾಪಾರವೂ ನಿಖರ. ಕೆಜಿ ಲೆಕ್ಕದಲ್ಲಿ ಹೆಚ್ಚು ಹೇಳುವುದು ಬೇರೆ. ಆದರೆ, ನೆಲದಲ್ಲಿ ಕುಳಿತು, ಕುಕ್ಕೆಯಲ್ಲಿ ಹೊತ್ತುತಂದ ತೋಟದ ತರಕಾರಿಗಳನ್ನು ಗುಡ್ಡೆ ಹಾಕಿಕೊಂಡೋ, ಇಲ್ಲವೆ ತಕ್ಕಡಿಯಲ್ಲಿ ತೂಗಿ ಸುರಿಯುವವರೋ ಬಹಳ ಡೇಂಜರಸ್. ಅವರು ಹೇಳಿದ್ದಕ್ಕೆಲ್ಲಾ ಒಪ್ಪಿ ನೀವು ತರಕಾರಿ ಕೊಂಡರೆ ಎಲ್ಲಾ ಸರಿ. ಇಲ್ಲವೇ ಅವರ ಸಿಟ್ಟು ಆಕಾಶಕ್ಕೇರುತ್ತದೆ. ನಾನೊಂದು ಬಾರಿ ಬೆಳಿಗ್ಗೆಯೇ ಮಾರುಕಟ್ಟೆಗೆ ಹೋದೆ. ಸಾಮಾನ್ಯವಾಗಿ ಒಂಬತ್ತುಗಂಟೆಯ ನಂತರವೇ ಮಾರ್ಕೆಟ್ಟಿನಲ್ಲಿ ಚಟುವಟಿಕೆ ಆರಂಭ. ಆಗ ತಾನೇ ಎಲ್ಲರೂ ಬಂದು ತಮ್ಮತಮ್ಮ ಜಗಲಿಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ತಾವು ತಂದ ವಸ್ತುಗಳನ್ನು ಹರಡಿಕೊಳ್ಳುತ್ತಿರುತ್ತಾರೆ. ಅಂಥ ಸಮಯದಲ್ಲಿ ನಾನೊಂದು ದಿನ ಅಲ್ಲಿ ವ್ಯಾಪಾರಕ್ಕೆ ನಿಂತೆ. ಹಳ್ಳಿ ಹೆಂಗಸೊಬ್ಬಳು ಆಗ ತಾನೆ ತಂದಿದ್ದ, ನಳನಳಿಸುವ ಕೊತ್ತಂಬರಿ ಸೊಪ್ಪನ್ನ್ನು ಕಟ್ಟುಕಟ್ಟಾಗಿ ಪೇರಿಸುತ್ತಿದ್ದಳು. “ಇದು ಎಷ್ಟಮ್ಮಾ” ಎಂದು ಪ್ರಶ್ನಿಸುತ್ತಲೇ ನಾನು ಬಲಗೈಯಲ್ಲಿ ಬ್ಯಾಗಿದ್ದ ಕಾರಣ ಎಡಗೈಯಿಂದ ಕಟ್ಟನ್ನು ಎತ್ತಿಕೊಂಡೆ. ತಕ್ಷಣವೇ ನನ್ನ ಮೇಲೆ ಹಾರಿ ಬಿದ್ದ ಮಹಿಳೆ “ಇನ್ನು ಬೋಣೀನೇ ಆಗಿಲ್ಲಾ, ಬೆಳ್‌ಬೆಳಗ್ಗೆ ಬಂದು ಎಡಗೈಯಿಕ್ಕ್ದಿದೀಯಾ… ನಿನ್‌ಮನೆ ಕಾಯ್ವೊಗಾ…” ಎಂದೆಲ್ಲಾ ಆರಂಭಿಸಿ, ರಂಕಲು ತೆಗೆದಳು. ಅವಳ ಬಾಯಿಯಿಂದ ನುಗ್ಗಿದ ಬಿರುಗಾಳಿಯ ಹೊಡೆತಕ್ಕೆ ನಾನು ಕೆಲ ಕಾಲ ಕಕ್ಕಾವಿಕ್ಕಿಯಾದೆ. ಪರಿಸ್ಥಿತಿಯನ್ನು ಹೇಗಾದರೂ ನಿಭಾಯಿಸಲೇ ಬೇಕಾಗಿತ್ತು. ಆಗ ನನ್ನ ಎಡಗೈಯಲ್ಲಿರುವ ಆರನೇ ಬೆರಳು ನನ್ನ ನೆರವಿಗೆ ಬಂದಿತು. ನಾನು ಎಡಗೈನಲ್ಲಿ ಸೊಪ್ಪು ಮುಟ್ಟಿದೆ ಎಂಬ ಚಿಂತೆ ಬೇಡಾ ಕಣಮ್ಮಾ..ಅದು ಅದೃಷ್ಟದ ಕೈ…ನೋಡು ನನ್ನ ಎಡಗೈಯಲ್ಲಿ ಆರುಬೆರಳಿದೆ.. ಎಂದು ಅವಳಿಗೆ ತೋರಿಸಿದಾಗ ಅವಳು ಹಸನ್ಮುಖಿಯಾದಳು. ಮತ್ತೊಮ್ಮೆ ಆರುಬೆರಳನ್ನೆ ನಿಟ್ಟಿಸಿದಳು, ಅಯ್ಯೋ ಶಿವನೆ, ಎನ್ನುತ್ತಾ.. ಕೊತ್ತಂಬರಿ ಸೊಪ್ಪನ್ನು ಉಚಿತವಾಗಿಯೇ ಬ್ಯಾಗಿಗೆ ಹಾಕಿ ಕಳುಹಿಸಿಕೊಟ್ಟಳು. ರಾತ್ರಿಯವರೆಗೆ ಅವಳ ವ್ಯಾಪಾರ ಹೇಗಾಯಿತೋ ಗೊತ್ತಿಲ್ಲ. ಮತ್ತೆ ಆ ಕಡೆ ಹೋಗಿದ್ದರೆ ಕೇಳಿ. ಹೀಗೆ ನನ್ನನ್ನು ಅಪಾಯದಿಂದ ಪಾರು ಮಾಡಿದ ಎಡಗೈಯಲ್ಲಿರುವ ಆರನೇ ಬೆರಳಿನ ಬಗ್ಗೆ ಒಂದು ಜಿಜ್ಞಾಸೆ ಇದೆ. ಶಾಲಾದಿನಗಳಲ್ಲಿ ಅದು ಸ್ನೇಹಿತರು ಚುಡಾಯಿಸುವ ಅಂಗವಾಗಬಹುದು ಎಂಬ ಕಾರಣಕ್ಕೆ ಆಪರೇಷನ್ ಮಾಡಿ ತೆಗೆದು ಬಿಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದದುಂಟು. ಮಾರ್ಕೆಟ್ಟಿನಲ್ಲಿ ಅದು ನನ್ನ ರಕ್ಷಣೆಗೆ ಧಾವಿಸಿದ ನಂತರ ಅದು ನನ್ನ ಜತೆಜತೆಯೇ ಇರಲಿ ಎಂದು ನಾನು ಖಚಿತ ನಿರ್ಧಾರಕ್ಕೆ ಬಂದೆ. ಈಗ ಹೃತಿಕ್ ರೋಷನ್ ಸಿನಿಮಾಗಳು ಬಹಳ ಬಂದು, ಅವನ ಅಭಿಮಾನಿ ವೃಂದ ಜಾಸ್ತಿಯಾದ ಮೇಲೆ, ಮತ್ತೆ ನನ್ನ ಆರನೇ ಬೆರಳಿನತ್ತ ಜನರ ಗಮನ ಹರಿದಿದೆ. ಇವರಿಗೂ ಹೃತಿಕ್‌ರೋಷನ್ ತರಹ ಆರು ಬೆರಳಿದೆ ಎಂದು ಎಲ್ಲರೂ ಹೇಳುತ್ತಾರೆ. ನ್ಯಾಯವಾಗಿ ಅವನಿಗಿಂತ ನಾನೇ ಸೀನಿಯರ್ ಅಲ್ಲವೇ? ನನ್ನ ತರಹವೇ ಅವನಿಗೂ ಆರುಬೆರಳಿದೆ ಎಂದು ಹೇಳುವುದೇ ತರವಲ್ಲವೇ?
*
*
*
ದೇವರಾಜ ಮಾರುಕಟ್ಟೆಯ ಜತೆಜತೆಯ್ಲಲೇ ಅರಳಿ, ಕಮರಿದ ಬದುಕೊಂದು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ತಳ ಊರಿ ಕಾಡುತ್ತಲೇ ಇದೆ. ಅವನು ಚನ್ನಯ್ಯ. ಅವನ ನೆನಪು ಭೂತವಾಗಿ ಕಾಡುತ್ತಿರುವುದು ಏಕೆ? ಎಂಬುದು ನನಗಂತೂ ಚಿದಂಬರ ರಹಸ್ಯ. ಅದು ಬದುಕಿನ ರಹಸ್ಯವಲ್ಲವೇ? ನನಗೂ ಅವನಿಗೂ ಯಾವ ಪರಿಚಯವೂ ಇಲ್ಲ. ಅವನನ್ನು ನಾನು ಮಾತನಾಡಿಸಿಯೂ ಇಲ್ಲ. ಅವನ ಬಳಿ ಹೋಗಿ ಅವನು ಮಾರುತ್ತಿದ್ದ ಗುಡ್ಡೆ ತರಕಾರಿಗಳ ವ್ಯಾಪಾರವನ್ನೂ ನಾನು ಎಂದೂ ಮಾಡಿದವನೂ ಅಲ್ಲ. ಆದರೆ ಅತ ಆಗಾಗ ಕಾಡುತ್ತಾನೆ. ಅವನ ಬದುಕು ಹೆಜ್ಜೆ ಹೆಜ್ಜೆಗೂ ನನ್ನ ಚಿತ್ತವನ್ನು ಕಲಕಿದ್ದಲ್ಲದೆ, ಬದುಕಿಗೆ ಯಾವ ಅರ್ಥವಿದೆ ಎಂದು ಹಲವಾರು ಬಾರಿ ನನ್ನಲ್ಲೇ ನಾನು ಚರ್ಚಿಸುವಂತಾಗಿದೆ. ಧನ್ವಂತರಿ ರಸ್ತೆಯ ಕಡೆಯಿಂದ ಮಾರುಕಟ್ಟೆ ಪ್ರವೇಶಿಸಿದರೆ, ಅಂತಹ ಒಳ್ಳೆಯ ದೃಶ್ಯವೇನೂ ಕಾಣಿಸುವುದಿಲ್ಲ. ಒಳಗೆ ಹೆಜ್ಜೆ ಇಟ್ಟು ಮೆಟ್ಟಲು ಇಳಿಯುತ್ತಿದ್ದಂತೆಯೇ, ಎಡಕ್ಕೆ ಮಾರುಕಟ್ಟೆ ಕಚೇರಿ, ಎಡಭಾಗದ ತುದಿಯಲ್ಲಿ ಒಂದು ಶೌಚಾಲಯವಿದೆ. ಶೌಚಾಲಯ ಎಲ್ಲಿದೆ ಎಂದು ಕೇಳುವ ಅವಶ್ಯಕತೆ ಯಾರಿಗೂ ಬರುವುದಿಲ್ಲ. ಏಕೆಂದರೆ ಅದರ ದುರ್ವಾಸನೆಯೇ ಅದರ ಇರುವಿಕೆಯನ್ನು ಒತ್ತಿ ಒತ್ತಿ ಸಾರುತ್ತದೆ. ಪುರುಷರು ಎಂಬ ಮಸುಕು ಮಸುಕಾದ ಬೋರ್ಡ್ ಇರುವ ಸ್ಥಳದಲ್ಲಿ ನಿಂತುಕೊಂಡು, ಅಲ್ಲಿಗೆ ಹೋಗುವವರಿಗೆ ಒಂದು ಡಬ್ಬಾದಲ್ಲಿ ನೀರು ಕೊಟ್ಟು, ಅವರಿಂದ ಒಂದು ರೂಪಾಯಿ ವಸೂಲು ಮಾಡುತ್ತಾ ನಿಂತಿರುವವನೇ ಚನ್ನಯ್ಯ, ಮತ್ತೊಂದು ತುದಿಯಲ್ಲಿ ಮಹಿಳೆಯರು ಎಂಬ ಬೋರ್ಡ್ ಇದಕಡೆ ನಿಂತಿದ್ದವಳು ಅವನ ಹೆಂಡತಿ. ಇಬ್ಬರ ವೃತ್ತಿಯೂ ಒಂದೇ. ಚನ್ನಯ್ಯ ತೆಲುಗಿನವನು. ಅವನ ಹೆಂಡತಿ ತಮಿಳಿನವಳು. ಇಬ್ಬರೂ ತಮ್ಮ ತಮ್ಮ ಮಾತೃ ಭಾಷೆಯನ್ನು ಮರೆತು, ಕನ್ನಡದಲ್ಲೇ ವ್ಯಹರಿಸುತ್ತಿದ್ದರು. ಕನ್ನಡವೇ ಅವರ ಜೀವನೋಪಾಯವಾಗಿತ್ತು. ಇಬ್ಬರದೂ ಪ್ರೇಮ ವಿವಾಹವಂತೆ, ಇಬ್ಬರೂ ಯಾವುದೋ ಊರಿನಿಂದ ವಲಸೆ ಬಂದು, ಬದುಕುವ ದಾರಿಗಾಗಿ ಮಾರುಕಟ್ಟೆಯನ್ನು ಆಶ್ರಯಿಸಿದವರು. ಗುರಿ ಒಂದೇ ಆಗಿದ್ದುದರಿಂದ ಇಬ್ಬರ ಮನಸ್ಸೂ ಒಂದಾಯಿತು. ಒಬ್ಬರಿಗೊಬ್ಬರು ಆಸರೆಯಾಗಲು ಮನಸ್ಸು ಮಾಡಿ, ಮದುವೆ ಮಾಡಿಕೊಂಡರಂತೆ. ಇಬ್ಬರೂ ಗತಿ ಇಲ್ಲದವರಾಗಿದ್ದರಿಂದ ಅದು ಮನಸ್ಸಿನ ಮದುವೆ ಆಗಿರಬಹುದು. ಒಟ್ಟಿನಲ್ಲಿ ಒಂದು ಸಂಸಾರವನ್ನು ಸಾಕುವ ಹೊಣೆಯನ್ನು ಈ ಮಾರುಕಟ್ಟೆ ಮೌನವಾಗಿಯೇ ವಹಿಸಿಕೊಂಡಿತು. ಈ ವಿಶಾಲ ಮಾರುಕಟ್ಟೆಯ ಒಡಲೊಳಗೆ ಎಷ್ಟೊಂದು ಸಂಸಾರಗಳ ತೊಟ್ಟಿಲು ತೂಗುತ್ತಿದೆಯೋ? ಎಂಥೆಂಥ ಜೀವನಕತೆಗಳು ಅಡಗಿದೆಯೋ?
ಶೌಚಾಲಯ ತೊಳೆಯುವುದರಿಂದ ದೊರಕುವ ಒಂದೊಂದು ರೂಪಾಯಿಯಲ್ಲಿ ಸಂಸಾರ ಸಾಗಿಸುವುದಾದರೂ ಹೇಗೆ? ಚನ್ನಯ್ಯನ ಫ್ಯಾಮಿಲಿ, ಶೌಚಾಲಯದ ಎದುರೇ ಒಂದು ಆಯಕಟ್ಟಿನ ಜಾಗ ನೋಡಿ, ತರಕಾರಿ ಗುಡ್ಡೆ ಹಾಕಿಕೊಂಡು ಮಾರುವ ವೃತ್ತಿಯನ್ನು ಜೊತೆ ಜೊತೆಗೇ ಆರಂಭಿಸಿತು. ಸಂಜೆಯಾದ ಮೇಲೆ ಗಂಡ- ಹೆಂಡತಿ ಇಬ್ಬರೂ ಅಕ್ಕಪಕ್ಕ ಮಬ್ಬು ಬೆಳಕಿನಲ್ಲಿ ಕೂತು, ಕೂಗಿ ಕೂಗಿ ಜನರನ್ನು ಕರೆಯುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಆದರೆ ಒಂದು ದಿನವೂ ಅವರು ಮಾರುವ ತರಕಾರಿ ಕೊಳ್ಳುವ ಮನಸ್ಸು, ಧೈರ್ಯ ಮಾಡುತ್ತಿರಲಿಲ್ಲ. ಮಾರ್ಕೆಟ್‌ನಲ್ಲಿ ಇಂತಹ ಗುಡ್ಡೆ ವ್ಯಾಪಾರಿಗಳು ಬಹಳ ಜನ ಇದಾರೆ. ಅವರ ಬಳಿ ವ್ಯಾಪಾರ ಮಾಡುವ ಜನರ ವರ್ಗವೇ ಬೇರೆ ಇದೆ. ಅಂತಹ ವ್ಯಾಪಾರ ಮಾಡುವವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಬಂಡವಾಳ ಹಾಕಿ ಹೋಲ್‌ಸೇಲ್‌ನಲ್ಲಿ ತರಕಾರಿ ಕೊಂಡು ತಂದು ಮಾರುವ ಸಾಮರ್ಥ್ಯ ಅವರಿಗೆ ಇರುವುದಿಲ್ಲ. ಅಲ್ಲಲ್ಲಿ ಬಿಸಾಡಿದ ತರಕಾರಿಗಳನ್ನು ತಂದು ಗುಡ್ಡೆಹಾಕಿಕೊಂಡು ಮಾರುತ್ತಾರೆ ಎಂಬ ಆಪಾದನೆಯೂ ಅವರ ಮೇಲಿದೆ. ಹೋಲ್‌ಸೇಲ್ ಅಂಗಡಿಗಳ ಮುಂದೆ ಬಿದ್ದಿರುವ ತರಕಾರಿ ಮೂಟೆಗಳನ್ನು ಮಾಲೀಕರಿಗೇ ಗೊತ್ತಿಲ್ಲದಂತೆ ಕೂಯ್ದು, ಅದನ್ನು ಕದ್ದುತಂದು ಮಾರುತ್ತಾರೆ ಎಂಬ ದೂರೂ ಇಂತಹ ಚಿಲ್ಲರೆ ವ್ಯಾಪಾರಿಗಳ ಮೇಲಿದೆ. ಸಣ್ಣ ಸಣ್ಣ ಹೊಟೇಲ್ ಇಟ್ಟುಕೊಂಡಿರುವವರಿಗೆ ಇಂತಹ ವ್ಯಾಪಾರ ಮಾಡುವವರಿಂದಲೇ ಹೆಚ್ಚು ಲಾಭ. ಅವರು ಗೋಣಿಚೀಲವನ್ನೇ ತಂದು ಎಲ್ಲ ತರಕಾರಿಗಳನ್ನು ತುಂಬಿಕೊಂಡು ಹೋಗಿ ಬಿಡುತ್ತಾರೆ. ಆ ಹೊಟೇಲಿನಲ್ಲಿ ತಿನ್ನುವವನು ಅದೃಷ್ಟಶಾಲಿಯಾಗಿರಬೇಕು!
ಇದೆಲ್ಲಾ ವ್ಯಾಪಾರದ ರಹಸ್ಯಗಳನ್ನು ಚನ್ನಯ್ಯ ಅರಿಯದವನೇನಲ್ಲ. ಅಲ್ಲೇ ಬಹಳ ದಿನಗಳಿಂದ ತಳ ಊರಿರುವ ಆತನಿಗೆ ಇದು ಏಕಲವ್ಯ ವಿದ್ಯೆ. ಇತರರನ್ನು ನೋಡಿ ತಾನೇ ಕಲಿತದ್ದಾಗಿರಬಹುದು. ಅದಕ್ಕೆ ಅವನು ಹೆಂಡತಿಯ ಸಹಯೋಗದೊಂದಿಗೆ ಈ ವ್ಯಾಪಾರ ಆರಂಭಿಸಿದ್ದ. ನಿತ್ಯ ಈ ವ್ಯಾಪಾರವೂ ನಡೆಯುತ್ತಿತ್ತು. ಜತೆಗೆ ಆಗಾಗ ಕೂಗಾಡುವುದು, ಬೈದಾಡುವುದು, ನಡದೇ ಇರುತ್ತಿತ್ತು. ಒಂದು ರಾತ್ರಿಯಂತೂ ಗಂಡ- ಹೆಂಡತಿ ಇಬ್ಬರೂ ಪರಸ್ಪರ ಬೈದಾಡಿಕೊಳ್ಳುತ್ತಿದ್ದರು. ಸುತ್ತ ಮುತ್ತಲ ಅಂಗಡಿಯವರು ಏನೂ ಆಗಿಯೆ ಇಲ್ಲವೇನೋ ಎಂಬಂತೆ ಅವರವರ ಪಾಡಿಗೆ ಅವರವರು ತಮ್ಮ ತಮ್ಮ ವ್ಯಾಪಾರದಲ್ಲಿ ಮಗ್ನರಾಗಿದ್ದರು. ಎಷ್ಟೊಂದು ಆರ್ತನಾದ, ಎಷ್ಟೊಂದು ನೋವು, ಯಾವ ಪರಿಯ ಹಸಿವು ಈ ಮಾರುಕಟ್ಟೆಯ ಗರ್ಭದೊಳಗೆ ಹೂತು ಹೋಗಿವೆಯೋ.
ನಾನು ಎಂದೇ ಮಾರುಕಟ್ಟೆ ಪ್ರವೇಶಿಸಿದರೂ ಮೊದಲು ಕಣ್ಣಿಗೆ ಬೀಳುತ್ತಿದ್ದುದೇ ಚನ್ನಯ್ಯ. ಅವನು ಕುಳಿತುಕೊಳ್ಳುತ್ತಿದ್ದ ಜಾಗ ಆ ರೀತಿ ಇತ್ತು. ಗೇಟಿನ ಎದುರೇ ಜಾಗ ಹಿಡಿದು ಕುಳಿತುಕೊಂಡುಬಿಡುತ್ತಿದ್ದ. ಅವನೂ, ಅವನ ಹೆಂಡತಿಯೂ ಅಕ್ಕಪಕ್ಕ ಕುಳಿತು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ನಾನು ಬೇಡವೆಂದರೂ ಆ ನೋಟದಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಒಮ್ಮೊಮ್ಮೆ ಅವರಿಬ್ಬರೂ ಜಗಳ ಆಡುತ್ತಿದ್ದ ದೃಶ್ಯ ಕಣ್ಣಿಗೆ ಬೀಳುತ್ತಿತ್ತು ಎಂದೆನಲ್ಲ, ಅಂದೂ ಹಾಗೇ ಆಯಿತು. ಅದು ರಾತ್ರಿ ೮ರ ನಂತರದ ಜಗಳ. ಉಂಡು ಮಲಗುವುದಕ್ಕೆ ಮುನ್ನ ಇರಬಹುದು. ಇಲ್ಲಾ ಉಣ್ಣುವುದಕ್ಕೆ ಮೊದಲೇ ಆಗ್ದಿದಿರಬಹುದು. ಇಬ್ಬರೂ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಬೈದಾಡಿಕೊಳ್ಳುತ್ತಿದ್ದರೆ, ಸುತ್ತ ವ್ಯಾಪಾರ ಮುಗಿಸಿದವರು, ಕೆಲಸವ್ದವರು ಶ್ರೋತೃಗಳಾಗಿ ನಿಂತು ಬೀದಿ ನಾಟಕ ನೋಡುವಂತೆ ನಿಂತಿರುತ್ತಿದ್ದರು. ಅವಳ ತಂದೆ ತಾಯಿಗಳನ್ನು ಚನ್ನಯ್ಯ ನೋಡಿಯೇ ಇರಲಿಲ್ಲ. ಅವರು ಹೇಗಿದ್ದರು ಎಂಬುದನ್ನು ಕೂಡ ಕಲ್ಪಿಸಿಕೊಂಡಿದ್ದನೋ ಇಲ್ಲವೋ, ಅವಳಿಗೂ ಅಷ್ಟೇ ಚನ್ನಯ್ಯನ ತಂದೆ ತಾಯಿ ಇರಲಿಲ್ಲ, ಕುಲಬಾಂಧವರಾರೆಂಬ ಕಲ್ಪನೆಯೂ ಇದಿರಲ್ಲಿಕ್ಕಿಲ್ಲ. ಆದರೆ ಬೈಗುಳದಲ್ಲಿ ಅವರೆಲ್ಲ ಧಾರಾಳವಾಗಿ ಬಂದು ಬಂದು ಹೋಗುತ್ತಿದ್ದರು! ಜಗಳ ಯಾರ ಮನೆಯಲಿಲ್ಲ. ಅದು ಶ್ರೀಮಂತರನ್ನೂ ಬಿಟ್ಟಿಲ್ಲ. ಬಡವರನ್ನೂ ಬಿಟ್ಟಿಲ್ಲ. ಇದು ಮನಸ್ಸುಗಳ ತಾಳಮೇಳಕ್ಕೆ ಸಂಬಂಧಪಟ್ಟ ವಿಷಯವಲ್ಲವೇ? ಹೀಗಾಗಿ ಚನ್ನಯ್ಯನ ಬದುಕಿನಲ್ಲಿ ಏಕತಾನತೆಯನ್ನು ಕಳೆಯುತ್ತಿದ್ದುದು ಜಗಳವೊಂದೇ ಅನಿಸುತ್ತದೆ. ಒಂದು ದಿನ ಇಬ್ಬರೂ ಬಡಿದಾಡಿಕೊಂಡು ಸಾಯುತ್ತಾರೇನೋ ಎನ್ನುವಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗಿದ್ದ ಜಗಳ ಎಷ್ಟು ಹೊತ್ತಾದರೂ ಬಗೆಹರಿದಿರಲಿಲ್ಲ. ನಾನೂ ಎಷ್ಟು ಹೊತ್ತು ಅಲ್ಲಿ ಇರಲು ಸಾಧ್ಯ? ತರಕಾರಿ ಮೂಟೆ ಹೊತ್ತುಕೊಂಡು ನಾನೂ ಕತ್ತಲಲ್ಲಿ ಮನೆ ಸೇರಬೇಕಲ್ಲವೇ? ಚನ್ನಯ್ಯನಿಗೂ ಅವನ ಹೆಂಡತಿಗೂ ಮನೆಯೂ ಅದೇ, ‘ಆಫೀಸೂ’ ಅದೇ, ಹೀಗಾಗಿ ಅವರು ನಿದ್ರೆ ಬರುವ ತನಕ ಜಗಳವಾಡಿ ನಂತರ ಅಲೇ ಬಿದ್ದುಕೊಳ್ಳಬಹುದು. ಆದರೆ ನನ್ನ ಕಥೆ ಅದಲ್ಲವಲ್ಲ. ಆದರೂ ಅವರ ಕಥೆ ಏನಾಯಿತು ಎಂಬ ತವಕದಲ್ಲೇ ಇಡೀ ದಿನ ಕಾದೆ. ಮರುದಿನ ರಾತ್ರಿ ಮತ್ತೆ ಮಾರ್ಕೆಟ್ಟಿಗೆ ಹೋದಾಗ ಹಿಂದಿನ ದಿನ ರಾತ್ರಿ ಏನೂ ಆಗದವರಂತೆ ಚನ್ನಯ್ಯನೂ ಅವನ ಹೆಂಡತಿಯೂ ವ್ಯಾಪಾರದಲ್ಲಿ ನಿರತರಾಗಿದ್ದುದು ನನಗೆ ಬದುಕಿನ ಹಲವು ಅಚ್ಚರಿಗಳಲ್ಲಿ ಒಂದಾಗಿತ್ತು. ವ್ಯಾಪಾರದ ಮಧ್ಯೆ ಮಧ್ಯೆ ಇಬ್ಬರೂ ಏನೋ ಮಾತನಾಡಿಕೊಳ್ಳುತ್ತಾ, ಪರಸ್ಪರ ಗಿಲ್ಲುತ್ತಾ, ಸರಸ ಬೇರೆ ನಡೆಸುತ್ತಿದ್ದುದು ನನಗೆ ಒಂದು ಚೋದ್ಯವಾಗಿಯೇ ಉಳಿದಿದೆ.
ಇವೆಲ್ಲಾ ಕ್ಷಣಿಕ ಎಂಬುದು ಆಗ ನನಗೆ ತಿಳಿದಿರಲ್ಲ. ಆರು ತಿಂಗಳ ನಂತರ ನಾನೊಂದು ದಿನ ಮಾರ್ಕೆಟ್ಟಿಗೆ ಹೋದಾಗ, ಅಲ್ಲಿ ಚೆನ್ನಯ್ಯನೊಬ್ಬನೇ ಇದ್ದ. ಅವನ ಹೆಂಡತಿ ಇರಲಿಲ್ಲ. ಅದರ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಲಿ? ಸುಮ್ಮನಾದೆ. ಎಲ್ಲೋ ಹೋಗಿರಬೇಕಲ್ಲವೇ? ಸ್ವಲ್ಪ ದಿನಗಳ ನಂತರ ಮತ್ತೆ ಹೋದಾಗ, ಅಲ್ಲಿ ಸಣ್ಣ ಮಗುವೊಂದನ್ನು ಹಿಡಿದುಕೊಂಡು ಚನ್ನಯ್ಯನ ಹೆಂಡತಿ ವ್ಯಾಪಾರದಲ್ಲಿ ನಿರತಳಾಗಿದ್ದಳು. ಮಾರ್ಕೆಟ್‌ನಲ್ಲಿ ಮುಂದಿನ ದಿನಗಳ ವ್ಯಾಪಾರಿಯೊಬ್ಬ ಜನಿಸಿದ್ದ. ಯಾರಿಗೆ ಗೊತ್ತು? ಮುಂದೆ ಅವನೇ ಅಲ್ಲಿ ಅತಿ ದೊಡ್ಡ ವ್ಯಾಪಾರಿಯಾಗಲೂಬಹುದು. ಇವೆಲ್ಲಾ ಸಹಜ ಕ್ರಿಯೆ ಎಂಬಂತೆ ಅವರಿಬ್ಬರೂ ಎಂದಿನ ವ್ಯಾಪಾರದಲ್ಲಿ ಮುಳುಗಿದ್ದರು. ಅಲ್ಲಿ ಬಾಣಂತನವಾಗಲಿ, ಬಾಣಂತಿಯ ಶುಶ್ರೂಷೆಯಾಗಲಿ ಯಾವುದೂ ಕಾಣಲಿಲ್ಲ. ನನಗೆ ಆಶ್ಚರ್ಯವಾದುದೇನೆಂದರೆ, ಮತ್ತೆ ಕೆಲದಿನಗಳಲ್ಲೇ ಅವರಿಬ್ಬರೂ ಮತ್ತೆ ಜಗಳವಾಡಲಾರಂಭಿಸಿದ್ದರು, ಸುತ್ತಲ್ಲಿನ ವ್ಯಾಪಾರಿಗಳಿಗೂ, ಓಡಾಡುವ ಜನರಿಗೂ ಬಿಟ್ಟಿ ಮನರಂಜನೆ. ಅವನು ಶೌಚಾಲಯದ ಹಿಂಭಾಗದ ರಸ್ತೆಯಲ್ಲಿರುವ ಬೋಟಿ ಬಜಾರ್‌ಗೆ ಹೋಗಿ, ಸಾಕಷ್ಟು ಸಾರಾಯಿ ಕುಡಿದೇ ಬರುತ್ತಿದ್ದ ಕಾರಣ ಜಗಳದ ಸ್ವರೂಪ ಬಯಲಾಟವಾಗಿ ಪರಿವರ್ತನೆಯಾಗಿತ್ತು. ತರಕಾರಿಯೇ ಅಲ್ಲದೆ, ಕತ್ತಿ, ಬಟ್ಟೆಬರೆ ಹೀಗೆ ಸಿಕ್ಕಸಿಕ್ಕವೆಲ್ಲವೂ ರೊಂಯ್ಯನೆ ಹಾರುತ್ತಿದ್ದವು.
ಬಹಳ ದಿನಗಳ ನಂತರ ಈ ದೇವರಾಜ ಮಾರ್ಕೆಟ್‌ನಲ್ಲಿ ಕಂಡ ದೃಶ್ಯ ನನ್ನನ್ನು ಸ್ಥಂಭೀಭೂತನನ್ನಾಗಿಸಿತು. ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ, ಚನ್ನಯ್ಯನನ್ನು ಕಂಡೆ, ಆದರೆ ಚನ್ನಯ್ಯನ ಹೆಂಡತಿ ಎಂದಿನಂತಿರಲಿಲ್ಲ. ವಿಕಾರ ರೂಪು, ಸುಟ್ಟ ಮುಖ. ನೋಡಿದರೇ ತಿಳಿಯುತ್ತಿತ್ತು, ಅವಳು ಬೆಂಕಿ ಅನಾಹುತಕ್ಕೆ ಒಳಗಾಗಿ ಪಾರಾಗಿದ್ದಾಳೆ. ಅದರೆ ಸುಟ್ಟು ಹೋದ ಅವಳ ವಿಕಾರ ರೂಪ ಮಾತ್ರ ಅವಳಿಗೆ ನಡೆದ ಘಟನೆಯನ್ನು ಮತ್ತೆಮತ್ತೆ ನೆನಪಿಸುತ್ತಿದೆ. ಅಲ್ಲೇ ಪಕ್ಕದ ಅಂಗಡಿಯವರು ಹೇಳಿದ ಪ್ರಕಾರ, ಚನ್ನಯ್ಯನ ಕುಟುಂಬದ ಕತೆ ನಿತ್ಯ ರಾಮಾಯಣ. ಚನ್ನಯ್ಯ ನಿತ್ಯ ರಾತ್ರಿ ಕುಡಿದು ಬಂದು ಹೆಂಡತಿ ಜತೆ ತಕರಾರು ತೆಗೆಯುವುದು, ಅವಳೂ ಅರಚುವುದು, ದುಡ್ಡಿಗಾಗಿ ಅವನು ಪೀಡಿಸುವುದು, ಅವಳು ಇಲ್ಲಾ ಎಂದು ರಂಪರಾಮಾಯಣ ಮಾಡುವುದು, ಅಲ್ಲಿನವರಿಗೆ ನಿತ್ಯದ ದೃಶ್ಯಗಳು. ಅವರಿಗೆ ಮೊದಮೊದಲು ಅದು ಬೇಸರ ತರುತ್ತಿದ್ದರೂ, ನಂತರ ಅದಕ್ಕೆ ಹೊಂದಿಕೊಂಡು, ಈ ದೃಶ್ಯಕ್ಕೆ ಹೆಚ್ಚಿನ ಮಹತ್ವವನ್ನೇ ನೀಡದೆ, ತಮ್ಮತಮ್ಮ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಅದೊಂದು ದಿನ ರಾತ್ರಿ ನಿತ್ಯದ ಜಗಳ ವಿಪರೀತಕ್ಕೆ ಹೋಯಿತು. ಅವಳು, ಕೂಗುತ್ತಾ, ಅರಚುತ್ತಾ, ಸೀಮೆ‌ಎಣ್ಣೆ ಡಬ್ಬ ಎತ್ತಿಕೊಂಡು ತಲೆ ಮೇಲೆ ಸುರಿದುಕೊಂಡಳು. ಕಡ್ಡಿ ಗೀರಿದಳು. ಭುಗ್ಗನೆ ಬೆಂಕಿ ಹತ್ತಿಕೊಂಡ ಮೇಲಷ್ಟೇ ಎಲ್ಲರಿಗೂ ಏನಾಗುತ್ತಿದೆ ಎಂಬುದು ಗೊತ್ತಾದದ್ದು. ಅವಳ ಕೂಗು ಆಗ ಬೇರೆ ರೀತಿಯಲ್ಲಿ ಬರಲಾರಂಭಿಸಿತು. ಚನ್ನಯ್ಯನಿಗೂ ಏರಿದ್ದ ಅಮಲು ಇಳಿದು ಅವನೂ ತನ್ನ ಹೆಂಡತಿಯನ್ನು ಬದುಕಿಸುವಂತೆ ಕೂಗಿಕೊಳ್ಳಲಾರಂಭಿಸಿದ. ದೇವರಾಜ ಮಾರ್ಕೆಟ್ಟಿಗೂ ಆಸ್ಪತ್ರೆಗೂ ಅಷ್ಟೇನೂ ದೂರವಿಲ್ಲ. ಎದುರಿಗೇ ಆಸ್ಪತ್ರೆ. ಇತರ ವ್ಯಾಪಾರಿಗಳು ಗುಂಪುಗೂಡಿ, ಅವಳ ಮೇಲೆ ಕಂಬಳಿಹಾಕಿ ಅದುಮಿ, ನೀರು ಸುರಿದು ಅವಳನ್ನು ಆಸ್ಪತ್ರೆಗೆ ಸಾಗಿಸಿದರು. ಅವಳು ಬದುಕುಳಿದಳು. ಅದರೆ ಮೊದಲಿನ ರೂಪ ಅವಳ ಬಳಿ ಉಳಿದಿರಲ್ಲ. ನಾಲ್ಕು ತಿಂಗಳ ನಂತರ ಏನೂ ಆಗೇ ಎಂಬಂತೆ ಆವಳು ಎಂದಿನಂತೆ ಬಂದು ಮತ್ತೆ ವ್ಯಾಪಾರಕ್ಕೆ ಕುಳಿತಳು. ಮಾರುಕಟ್ಟೆ ತಿಮಿಂಗಿಲವಿದ್ದಂತೆ. ಅದನ್ನೂ ನುಂಗಿ ತನ್ನ ವಹಿವಾಟನ್ನು ಮುಂದುವರೆಸಿತು. ಆರೇ ತಿಂಗಳಿಗೆ ಅವಳು ಬಸುರಿ. ಗಂಡ ಹೆಂಡತಿ ಎಂದರೆ ಹೀಗೇ ತಾನೇ? ‘ಅಮರ ಮಧುರ ಪ್ರೇಮ’ ಎಂದು ಸಿನಿಮಾ ಕವಿಗಳೂ ಹಾಡಿರುವುದು ಇದನ್ನೇ ಅಲವೇ? ಚನ್ನಯ್ಯನಿಗೆ ಕಷ್ಟಸುಖ, ದುಃಖ ದುಮ್ಮಾನ ಹೇಳಿಕೊಳ್ಳಲು ಮತ್ಯಾರು ಇದ್ದಾರೆ? ಅವಳಿಗಾದರೂ ಅಷ್ಟೇ ಅಲ್ಲವೇ? ಎಷ್ಟೇ ಬಡಿವಾರಗಳಿದ್ದರೂ ಅವರಿಬ್ಬರೂ ಅಲ್ಲೇ ಕಾಲಹಾಕಬೇಕಲ್ಲ? ಮಕ್ಕಳಿಬ್ಬರೂ ಅವರ ಪಾಡಿಗೆ ಆಟವಾಡುತ್ತಾ, ಅಲ್ಲಿ ಇಲ್ಲಿ ಓಡಾಡುತ್ತಾ ಇರುತ್ತಾರೆ. ಮಾರ್ಕೆಟ್ ಎಂಬ ಪ್ರಪಂಚವನ್ನು ಬಿಟ್ಟರೆ ಅವಕ್ಕೇನೂ ಗೊತ್ತಿಲ್ಲ. ಈ ವಿಶಾಲ ಮಾರ್ಕೆಟ್‌ನ ಹೊರಗೆ ಬೇರೆಯದೇ ಆದ ಜಗತ್ತಿದೆ ಎಂಬುದರ ಯಾವ ಅರಿವು ಇಲ್ಲದೆ ಆ ಪಿಳ್ಳೆಗಳು ಅಲ್ಲಿ ಆಟವಾಡುತ್ತಿರುತ್ತವೆ. ಈಗ ನಮ್ಮೊಂದಿಗೆ, ಮುಂದೆ ಅವಕ್ಕೆ ತೋಚಿದ್ದು ಅವು ಮಾಡಿಕೊಳ್ಳಲಿ ಎಂಬ ದಿವ್ಯ ಉದಾಸೀನದಲ್ಲಿ ಚನ್ನಯ್ಯನೂ ಅವನ ಪತ್ನಿಯೂ ಕಾಲ ಹಾಕುತ್ತಿದ್ದಾರೆ.
ಇತ್ತೀಚೆಗೆ ಬಹಳ ವರ್ಷಗಳ ಅಂತರದ ನಂತರ ಮಾರ್ಕೆಟ್ ಕಡೆ ಹೋಗಿದ್ದೆ. ಹಳೇ ನೆನಪುಗಳನ್ನು ಮತ್ತೆ ಮತ್ತೆ ಕೆದಕಿಕೊಳ್ಳಲು ನನಗೆ ಇಷ್ಟ. ಆದರೆ ಧನ್ವಂತರಿ ರಸ್ತೆಯ ಗೇಟ್‌ನಿಂದ ಮಾರ್ಕೆಟ್ ಪ್ರವೇಶಿಸಿದಾಗ ಮೊದಲಿನಂತೆ ಚನ್ನಯ್ಯನ ದರ್ಶನವಾಗಲೇ ಇಲ್ಲ. ಅವನ ಹೆಂಡತಿ ಕುಳಿತು ವ್ಯಾಪಾರ ಮಾಡುತ್ತಿದ್ದಳು. ಅದೇ ವಿಕಾರ ರೂಪು. ತಲೆಗೂದಲೆಲ್ಲಾ ಬೆಳ್ಳಗಾಗಿ ಮತ್ತಷ್ಟು ಭಯಂಕರವಾಗಿ ಕಾಣುತ್ತಿದ್ದಳು. ಮುದುಕಿಯಾಗಿ ಬಿಟ್ಟಿದ್ದಳು ಎಂಬುದು ತಿಳಿಯುತ್ತಿತ್ತು. ಬಡವರು ಬೇಗ ಮುದುಕರಾಗುತ್ತಾರೆ. ಸ್ವಲ್ಪ ಚನ್ನಯ್ಯನನ್ನೇ ಹೋಲುತ್ತಿದ್ದ ಮಗನೊಬ್ಬ ಅವಳ ಪಕ್ಕ ಕೂತು ವ್ಯಾಪಾರ ಮಾಡುತ್ತಿದ್ದ. ಈಗ ಅವಳನ್ನು ಮಾತನಾಡಿಸುವ ಧೈರ್ಯ ನನ್ನಲ್ಲಿತ್ತು. ಚನ್ನಯ್ಯನ ಬಗ್ಗೆ ವಿಚಾರಿಸಿದೆ. ಯಾವುದೇ ಭಾವನೆಗಳಿಲ್ಲದೆ, “ಅವನಾ.. ಸತ್ತೋದಾ..” ಎಂದು ರಾಗ ಎಳೆದು ಹೇಳಿದಳು. ಆ ಮಾತಿನಲ್ಲಿ ಒಂದು ಚೂರಾದರೂ ಅನುಕಂಪವಾಗಲಿ, ದುಃಖವಾಗಲಿ ಇದ್ದಂತೆ ಅನ್ನಿಸಲಿಲ್ಲ. ನನಗವಳು ಆಗ ಮತ್ತಷ್ಟು ವಿಕಾರವಾಗಿ ಕಂಡಳು. ಬಹುಶಃ ಕುಡಿದೂ ಕುಡಿದೂ ಸತ್ತು ಹೋಗಿರಬೇಕು ಎಂದು ನಾನೇ ಊಹಿಸಿಕೊಂಡೆ. ಇಲ್ಲದಿದ್ದರೆ ಚನ್ನಯ್ಯನಿಗೆ ಸಾವು ಯಾವ ರೀತಿ ಬರಲು ಸಾಧ್ಯವಿತ್ತು? ಮಾರುಕಟ್ಟೆಯಿಂದಾಚೆಗಿನ ಬದುಕನ್ನೇ ಅವನು ನೋಡಿದವನಲ್ಲವಲ್ಲ. ಮಾರ್ಕೆಟ್ ಇಂತಹ ಎಷ್ಟು ಜೀವಿಗಳನ್ನು ಕಂಡಿದೆಯೋ? ಏನೋ.
ಮಾರ್ಕೆಟ್ ನೆಲಸಮವಾದರೆ, ಚನ್ನಯ್ಯನ ಕತೆಯೂ ಅವನ ಸಂಸಾರದ ಕತೆಯೂ ಅದರೊಂದಿಗೇ ಮಣ್ಣುಗೂಡುತ್ತದೆ. ಮುಂದೆ ತಲೆ ಎತ್ತಲಿರುವ ಮಾಡ್ರನ್ ಮಾರ್ಕೆಟ್ ಕಟ್ಟಡದೊಳಗೆ ಜೀವನ ಸಾಗಿಸಲು ಚನ್ನಯ್ಯನ ಮಕ್ಕಳಿಗೆ ಅಧಿಕಾರವಿರುತ್ತದೆಯೇ? ಅಲ್ಲೇ ಉಳಿಯಲು ಅದೇನು ಪಿತ್ರಾರ್ಜಿತವೇ?
*****
ಕೃಪೆ: ಪ್ರಜಾವಾಣಿ ಹಾಗು ಪ್ರೆಸ್ ಕ್ಲಬ್ ಆಫ್ ಬೆಂಗಳೂರು
ಕೀಲಿಕರಣ ದೋಷ ತಿದ್ದುಪಡಿ: ಸೀತಾ ಶೇಖರ್
ನರಕ, ಯಮಧರ್ಮರಾಯರ ವೈಭವೋಪೇತ ಆಸ್ಥಾನ. ಮುಖ್ಯ ಪೀಠದಲ್ಲಿ ನ್ಯಾಧೀಶನಾಗಿ ಯಮರಾಯರು ಕುಳಿತಿದ್ದಾರೆ. ಅವನ ಪಕ್ಕದಲ್ಲಿ ಚಿತ್ರಗುಪ್ತರು, ಅವನೆದುರು ದೂಡ್ಡ ಒಂದು ಪುಸ್ತಕ. ಅಡ್ಜರಲ್ಲಿ ಮಾನವ ಜೀವಿಗಳ ಇಡೀ ಚರಿತ್ರೆಯೇ ಇದೆ. ಅದನ್ನು ಪರಿಶೀಲಿಸಿ, ಅದರಲ್ಲಿ […]
ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ
ಟಿಪ್ಪಣಿ *
ಹೆಸರು *
ಮಿಂಚೆ *
ಜಾಲತಾಣ
ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ.
This site uses Akismet to reduce spam. Learn how your comment data is processed.
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…