, ಗೆ ಸೆಡ್ಡು ಹೊಡೆಯಲು ಮುಂದಾದ ಬಿಎಸ್ಎನ್ಎಲ್...! ರಿಲಯನ್ಸ್ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ಸುಂಕದ ಯೋಜನೆಗಳನ್ನು ದುಬಾರಿಗೊಳಿಸಿವೆ. ರಿಲಯನ್ಸ್ ಜಿಯೋ, ಏರ್‌ಟೆಲ್ ವೊಡಾಫೋನ್ ತಮ್ಮ ಸುಂಕದ ಯೋಜನೆಗಳನ್ನು ಶೇ 11-15 ರಷ್ಟು ದುಬಾರಿಗೊಳಿಸಿವೆ. :ರಿಲಯನ್ಸ್ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ಸುಂಕದ ಯೋಜನೆಗಳನ್ನು ದುಬಾರಿಗೊಳಿಸಿವೆ. ರಿಲಯನ್ಸ್ ಜಿಯೋ, ಏರ್‌ಟೆಲ್ ವೊಡಾಫೋನ್ ತಮ್ಮ ಸುಂಕದ ಯೋಜನೆಗಳನ್ನು ಶೇ 11-15 ರಷ್ಟು ದುಬಾರಿಗೊಳಿಸಿವೆ.ಖಾಸಗಿ ಕಂಪನಿಗಳು ರೀಚಾರ್ಜ್ ದರವನ್ನು ಹೆಚ್ಚಿಸಿದ ನಂತರ, ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದೆ ವೇಳೆ ಈ ನಿರ್ಧಾರದಿಂದಾಗಿ ಬಿಎಸ್ಎನ್ಎಲ್ ಅನುಕೂಲಕರವಾಗಿದೆ. - ಮತ್ತು ತಮ್ಮ ಯೋಜನೆಗಳ ದರಗಳನ್ನು ಹೆಚ್ಚಿಸಿದ ತಕ್ಷಣ, ಜನರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲು ಪ್ರಾರಂಭಿಸಿದರು. , ನಂತಹ ಹ್ಯಾಶ್‌ಟ್ಯಾಗ್‌ಗಳು ಈಗ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ.ಖಾಸಗಿ ಕಂಪನಿಗಳ ಸುಂಕವನ್ನು ಹೆಚ್ಚಿಸಿದ ನಂತರ, ನ ಹೊಸ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಅಗ್ಗದ ಯೋಜನೆಗಳಿಗಾಗಿ ಜನರು ನತ್ತ ಮುಖ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಾಧ್ಯಮಗಳ ವರದಿ ಪ್ರಕಾರ, ಜುಲೈ 3-4 ರಿಂದ ಸುಮಾರು 25 ಲಕ್ಷ ಹೊಸ ಬಳಕೆದಾರರು ಗೆ ಸೇರಿದ್ದಾರೆ. ಅಗ್ಗದ ರೀಚಾರ್ಜ್ ಯೋಜನೆಗಳಿಗಾಗಿ ಜನರು ತಮ್ಮ ಸಂಖ್ಯೆಯನ್ನು ಗೆ ಪೋರ್ಟ್ ಮಾಡುತ್ತಿದ್ದಾರೆ. ಸಹ ಸುಮಾರು 2.5 ಮಿಲಿಯನ್ ಹೊಸ ಸಂಪರ್ಕಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.ಇನ್ನೊಂದೆಡೆಗೆ ಜಿಯೋ-ಏರ್‌ಟೆಲ್‌ನೊಂದಿಗೆ ಸ್ಪರ್ಧಿಸಲು ಟಾಟಾದ ಬೆಂಬಲವನ್ನು ಪಡೆಯುತ್ತದೆ.ಒಂದೆಡೆ, ಜಿಯೋ-ಏರ್‌ಟೆಲ್ ಯೋಜನೆಗಳನ್ನು ದುಬಾರಿಗೊಳಿಸಿದರೆ, ಮತ್ತೊಂದೆಡೆ, ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಟಾಟಾದೊಂದಿಗೆ ಕೈಜೋಡಿಸಿದೆ.ಭಾರತದಲ್ಲಿ 4G ನೆಟ್‌ವರ್ಕ್ ಅನ್ನು ಸುಧಾರಿಸುವ ಟಾಟಾದ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅಂದರೆ ಟಿಸಿಎಸ್ ಮತ್ತು ಬಿಎಸ್‌ಎನ್‌ಎಲ್ ನಡುವೆ 15,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದಕ್ಕೆ ಅನುಗುಣವಾಗಿ 5ಜಿ ನೆಟ್‌ವರ್ಕ್‌ಗೆ ತಳಹದಿಯನ್ನು ರೂಪಿಸಲಾಗುವುದು.ಟಾಟಾದ ಮತ್ತು ಒಟ್ಟಾಗಿ ಭಾರತದ ಸುಮಾರು 1000 ಹಳ್ಳಿಗಳಿಗೆ 4G ಇಂಟರ್ನೆಟ್ ಸೇವೆಯನ್ನು ಹೊರತರಲಿದೆ. ಇದರಿಂದಾಗಿ ಹಳ್ಳಿಗಳ ಜನರು ಕೂಡ ವೇಗದ ಇಂಟರ್ನೆಟ್ ಸೇವೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, ಜಿಯೋ ಮತ್ತು ಏರ್‌ಟೆಲ್‌ನಂತಹ ಟೆಲಿಕಾಂ ಕಂಪನಿಗಳು 4G ನೆಟ್‌ವರ್ಕ್‌ನಲ್ಲಿ ಪ್ರಾಬಲ್ಯ ಹೊಂದಿವೆ, ಆದರೆ ನ ಈ ಒಪ್ಪಂದವು ಈಗ ಖಾಸಗಿ ಕಂಪನಿಗಳಲ್ಲಿ ಭೀತಿಯನ್ನು ಹುಟ್ಟಿಸಿದೆ. ಗಾಗಿ ಸರ್ಕಾರ ಸಿದ್ಧಪಡಿಸಿದ ಯೋಜನೆ ಪ್ರಸ್ತುತ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಪ್ರಾಬಲ್ಯ ಹೊಂದಿದೆ. ಈ ಓಟದಲ್ಲಿ ಬಿಎಸ್‌ಎನ್‌ಎಲ್ ಹಿಂದುಳಿದಿದೆ, ಆದರೆ ಈಗ ಅದನ್ನು ಬಲಪಡಿಸಲು ಸರ್ಕಾರವೂ ಯೋಜನೆ ರೂಪಿಸಿದೆ. ಬಿಎಸ್‌ಎನ್‌ಎಸ್‌ನ 4ಜಿ ನೆಟ್‌ವರ್ಕ್ ಅನ್ನು ಶೀಘ್ರವಾಗಿ ವಿಸ್ತರಿಸಲಾಗುವುದು ಇದಕ್ಕೆ ಪೂರಕವಾಗಿ ಸರ್ಕಾರಿ ಟೆಲಿಕಾಂ ಕಂಪನಿ ಅನ್ನು ನೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ, ಒಂದುವೇಳೆ ಹಾಗಾದಲ್ಲಿ ಜೊತೆ ವಿಲೀನದಿಂದಾಗಿ ಜನರು ಉತ್ತಮ ಸೇವೆಗಳನ್ನು ಪಡೆಯುತ್ತಾರೆ. ಮೂಲಸೌಕರ್ಯವು ಮೊದಲಿಗಿಂತ ಬಲವಾಗಿರುತ್ತದೆ. ಆದರೆ, ವಿಲೀನದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಹೀಗಾದರೆ ಬಿಎಸ್‌ಎನ್‌ಎಲ್‌ಗೆ ಲಾಭವಾಗಲಿದೆ. ಮತ್ತು ಆದಷ್ಟು ಬೇಗ 4G ಮತ್ತು 5G ಸೇವೆಗಳನ್ನು ಪ್ರಾರಂಭಿಸಲಿವೆ ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಈ ಸೇವೆಗಳೊಂದಿಗೆ, ಸರ್ಕಾರಿ ಟೆಲಿಕಾಂ ಕಂಪನಿಗಳಲ್ಲಿ ತ್ವರಿತ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮತ್ತು ಆದಷ್ಟು ಬೇಗ 4G ಮತ್ತು 5G ಸೇವೆಗಳನ್ನು ಪ್ರಾರಂಭಿಸಲಿವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನ ಅಗ್ಗದ ಯೋಜನೆ ರಿಲಯನ್ಸ್ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಕಂಪನಿಗಳು ತಮ್ಮ ಬೆಲೆಯನ್ನು 11% ರಿಂದ 25% ರಷ್ಟು ಹೆಚ್ಚಿಸಿವೆ. ಏರ್‌ಟೆಲ್ ಮತ್ತು ವೊಡಾಫೋನ್‌ನ ಅಗ್ಗದ 28 ದಿನಗಳ ಯೋಜನೆ ಈಗ 199 ರೂ.ಗೆ ತಲುಪಿದೆ. ಆದರೆ ಜಿಯೋದ 28 ದಿನಗಳ ಅಗ್ಗದ ಯೋಜನೆ 189 ರೂ. ನ ಇದೇ ರೀತಿಯ ಯೋಜನೆ ಕೇವಲ 108 ರೂಗಳಿಗೆ ಲಭ್ಯವಿದೆ. ಖಾಸಗಿ ಕಂಪನಿಗಳಿಗೆ ಹೋಲಿಸಿದರೆ, ಯೋಜನೆಗಳು ತುಂಬಾ ಅಗ್ಗದ ಮತ್ತು ಕೈಗೆಟುಕುವ ದರದಲ್ಲಿ ಸಿಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... |