: 70ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ! : ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ಇಂದು ಮಧ್ಯಾಹ್ನ ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಘಟನಾ ಸ್ಥಳದಿಂದ ಡೆತ್‌ನೋಟ್ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಕೆಲವರು ತಮೆಗ ಕಿರುಕುಳ ನೀಡುತ್ತಿದ್ದರೆಂದು ಸಲೀಲ್ ಅವರು ಆರೋಪಿಸಿದ್ದಾರೆ. :ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯ ಎಪಿಜೆ ಅಬ್ದುಲ್ ಕಲಾಂ ಮಾರ್ಗದಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪೊಲೀಸರು ಮಧ್ಯಾಹ್ನ 2.30ರ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮನೆಯಲ್ಲಿ ಸಿಕ್ಕ ಡೆತ್‌ನೋಟ್ಅನ್ನು ವಶಪಡಿಸಿಕೊಂಡಿದ್ದಾರೆ. ಕಪೂರ್ ತಮ್ಮ ೩ ಅಂತಸ್ತಿನ ಮನೆಯೊಳಗಿನ ದೇವರ ಮನೆಯಲ್ಲಿ ಕುಳಿತುಕೊಂಡು ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೆಲವರಿಂದ ಕಿರುಕುಳ ಆರೋಪ ಅವರ ಮನೆಯಲ್ಲಿ ಪೊಲೀಸರು ಡೆತ್‌ನೋಟ್ ವಶಪಡಿಸಿಕೊಂಡಿದ್ದು, ಅದರಲ್ಲಿ ಕಪೂರ್ ಕೆಲವರು ತನಗೆ ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಿದ್ದಾರೆ. ಸುದ್ದಿ ತಿಳಿದ ನಂತರ ಪೊಲೀಸರು ಡಾ.ಎಪಿಜೆ ಅಬ್ದುಲ್ ಕಲಾಂ ಲೇನ್ ಅವರ ನಿವಾಸಕ್ಕೆ ಹಾಜರಾಗಿದ್ದಾರೆ. ಸ್ಥಳದಿಂದ ವಶಪಡಿಸಿಕೊಂಡಿರುವ ಡೆತ್‌ನೋಟ್‌ನಲ್ಲಿ ಕೆಲವರ ವಿರುದ್ಧ ಕಿರುಕುಳದ ಆರೋಪಗಳನ್ನು ಮಾಡಲಾಗಿದೆ ಅಂತಾ ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. 2015ರಲ್ಲಿ ಸಲೀಲ್ ಕಪೂರ್‌ರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ () 9 ಕೋಟಿ ರೂ. ವಂಚನೆಯ ಎರಡು ಪ್ರಕರಣಗಳಲ್ಲಿ ಉತ್ತರಾಖಂಡದಲ್ಲಿ ಬಂಧಿಸಿದ್ದರು. ಇದನ್ನೂ ಓದಿ: ತಲೆಮರೆಸಿಕೊಂಡಿರುವ ಆರೋಪ! ಮೊದಲ ಪ್ರಕರಣದಲ್ಲಿ ಸತೀಂದರ್ ನಾಥ್ ಮೈರಾ ಅವರು ಸಲೀಲ್ ಕಪೂರ್ ಅವರ ಕುಟುಂಬ ಸ್ನೇಹಿತ ಪ್ರಶಾಂತ್ ಕಪೂರ್ ಅವರಿಗೆ ಹೂಡಿಕೆಗಾಗಿ 13 ಕೋಟಿ ರೂ. ಪಡೆದುಕೊಂಡಿದ್ದರಂತೆ. ಈ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಸಲೀಲ್ ಅವರು ೭ ಪೋಸ್ಟ್ ಡೇಟೆಡ್ ಚೆಕ್‌ಗಳನ್ನು ನೀಡಿದ್ದಾನೆ. ಆದರೆ ಈ ಬಗ್ಗೆ ಎಲ್ಲರಿಗೂ ಅವಮಾನವಾಯಿತು. ಪೊಲೀಸ್ ತನಿಖೆಯ ಸಮಯದಲ್ಲಿ ಸಾಕೇತ್ ನ್ಯಾಯಾಲಯವು ಸಲೀಲ್ ತಲೆಮರೆಸಿಕೊಂಡಿದ್ದಾನೆಂದು ಘೋಷಿಸಿತು. ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷೆ ಸುನೀತಾ ಬನ್ಸಾಲ್ ಎಂಬ ಮಹಿಳೆಯ ದೂರಿನ ಮೇರೆಗೆ ೨ನೇ ಪ್ರಕರಣವನ್ನು ದಾಖಲಿಸಲಾಗಿದೆ. ಸುನೀತಾ ಬನ್ಸಾಲ್ ಅವರು ಸಲೀಲ್ ವಿರುದ್ಧ 4 ಕೋಟಿ ರೂ. ವಂಚನೆ ಪ್ರಕರಣ ದಾಖಲಿಸಿದ್ದರು. ಪತ್ನಿ & ಮೂವರು ಮಕ್ಕಳ ಪ್ರತ್ಯೇಕ ವಾಸ ಮಧ್ಯಾಹ್ನ 1ಗಂಟೆ ವೇಳೆಗೆ ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಮನೆಯ ಪೂಜಾ ಕೊಠಡಿಯ ಬಳಿ ಸಲೀಲ್ ಕಪೂರ್ ರಕ್ತದಲ್ಲಿ ಮಡುವಿನಲ್ಲಿ ಬಿದ್ದಿದ್ದ ದೇಹವನ್ನು ಅವರ ಮ್ಯಾನೇಜರ್ ಮೊದಲು ನೋಡಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಪರವಾನಗಿ ಪಡೆದ ರಿವಾಲ್ವರ್‌ನಿಂದ ಕಪೂರ್ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾರಂತೆ. ಘಟನಾ ಸ್ಥಳದಿಂದ ವಶಪಡಿಸಿಕೊಂಡಿರುವ ಡೆತ್‌ನೋಟ್‌ನಲ್ಲಿ ಸಲೀಲ್ ಕಪೂರ್ ತಮ್ಮ ಮೇಲಿರುವ ಆರ್ಥಿಕ ಹೊರೆಯನ್ನು ಉಲ್ಲೇಖಿಸಿದ್ದಾರೆಂದು ಅವರು ಹೇಳಿದರು. ಕಪೂರ್ ಅವರ ಪತ್ನಿ ಮತ್ತು ಮೂವರು ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕಪೂರ್ ಅವರ ಮ್ಯಾನೇಜರ್ ಮತ್ತು ಅವರ ಕುಟುಂಬವು ಅವರೊಂದಿಗೆ ೩ ಅಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕಪೂರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆಂದು ಘೋಷಿಸಿದರು. ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ಮತ್ತು ಇತರ ತಂಡಗಳನ್ನು ಕರೆಯಲಾಗಿದೆ ಎಂದು ಅಧಿಕಾರಿ ಹೇಳಿದರು. ಸಲೀಲ್ ಅವರ ಸಂಬಂಧಿ ನತಾಶಾ ಕಪೂರ್ ಕೂಡ ಜನವರಿ 2020ರಲ್ಲಿ ಇದೇ ಮನೆಯಲ್ಲಿ ನೇಣು ಬಿಗಿದುಕೊಂಡುಮಾಡಿಕೊಂಡಿದ್ದರು. ನತಾಶಾ ಅವರು ತಮ್ಮ ಕುಟುಂಬ ಸದಸ್ಯರನ್ನು ನೋಡಿಕೊಳ್ಳುವಂತೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಆದರೆ ಈ ಕ್ರಮಕ್ಕೆ ಕಾರಣವೇನು ಎಂಬುದನ್ನು ಅವರು ವಿವರಿಸಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... |