CoolCoder44 commited on
Commit
2e70779
1 Parent(s): b0c2634

Upload folder using huggingface_hub

Browse files
This view is limited to 50 files because it contains too many changes.   See raw diff
Files changed (50) hide show
  1. Prajavani/'ಅವನು' ಒಬ್ಬ ಮೂರ್ಖ ಅನಂತಕುಮಾರ‌ ಹೆಗಡೆ ಮಾತಿಗೆ ಸಿದ್ದರಾಮಯ್ಯ ತಿರುಗೇಟು.txt +5 -0
  2. Prajavani/'ಆನಂದಕಂದ ಪ್ರಶಸ್ತಿ' ಪುರಸ್ಕೃತ ಸಾಹಿತಿ ಗುರುಲಿಂಗ ಕಾಪಸೆ ಇನ್ನಿಲ್ಲ.txt +5 -0
  3. Prajavani/'ಆರ್ಕ್ಟಿಕ್‌'ನಲ್ಲಿ ರಾಮನ್‌ ಸಂಸ್ಥೆ ಅಧ್ಯಯನ.txt +6 -0
  4. Prajavani/'ಇಂಡಿ'ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತ್ಯಾಚಾರ, ವ್ಯಾಪಕ ಭ್ರಷ್ಟಾಚಾರ ಪೂನಾವಾಲಾ.txt +10 -0
  5. Prajavani/'ಇಂಡಿಯಾ' ಜಯಭೇರಿ ಬಿಜೆಪಿ ವಿರುದ್ಧದ ಆಕ್ರೋಶ ಸ್ಪಷ್ಟವಾಗಿದೆ ಡಿ.ಕೆ.ಶಿವಕುಮಾರ್.txt +5 -0
  6. Prajavani/'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಮಿತಿ ರದ್ದು ಸಿದ್ದರಾಮಯ್ಯ.txt +6 -0
  7. Prajavani/'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಪ್ರಿಯಾಂಕ್ ಹೇಳಿದ್ದೇನು.txt +4 -0
  8. Prajavani/'ಇಂಡಿಯಾ' ಮೈತ್ರಿಕೂಟವು ಜಾತ್ಯತೀತತೆಯನ್ನು ನಗೆಪಾಟಲಾಗಿಸುತ್ತಿದೆ ದೇವೇಗೌಡ.txt +15 -0
  9. Prajavani/'ಇಂಡಿಯಾ' ಸರ್ಕಾರ ಬಂದರೆ ಹಣ ವದಂತಿ; IPPB ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು.txt +8 -0
  10. Prajavani/'ಇರುವುದಾದರೆ ಸರಿಯಾಗಿ ಇರಿ, ಇಲ್ಲ ಹೊರಡಿ'; ಶಾಸಕ ಹೆಬ್ಬಾರಗೆ ಕುಟುಕಿದ ರೂಪಾಲಿ.txt +4 -0
  11. Prajavani/'ಗ್ಯಾರಂಟಿಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ' ಕಿಡಿ ಹಚ್ಚಿದ HDK ಹೇಳಿಕೆ.txt +19 -0
  12. Prajavani/'ಗ್ಯಾರಂಟಿ’ಗೆ ₹11 ಸಾವಿರ ಕೋಟಿ ಅನುದಾನ ವಾಪಸ್‌ಗೆ ಪಟ್ಟು.txt +8 -0
  13. Prajavani/'ಡಿ.ಕೆ.ಸುರೇಶ ಅವರನ್ನು ಕೊಲ್ಲಿ' ಎಂಬ ಈಶ್ವರಪ್ಪ ಹೇಳಿಕೆಗೆ ಮುತಾಲಿಕ್ ಸಮರ್ಥನೆ.txt +4 -0
  14. Prajavani/'ಡಿಕೆಶಿ ಗೂಂಡಾ..ED ಅರ್ಧ ಸೆಟ್ಲ್‌ಮೆಂಟ್ ಮಾಡಿದೆ, ಇನ್ನರ್ಧ ಮಾಡಲಿದೆ'– ಈಶ್ವರಪ್ಪ.txt +6 -0
  15. Prajavani/'ನನ್ನ ಮಣ್ಣು ನನ್ನ ದೇಶ' ಕಾರ್ಯಕ್ರಮಕ್ಕೆ ತೆರಳಿದ ರಾಜ್ಯ ತಂಡ.txt +5 -0
  16. Prajavani/'ನಿಸಾರ್‌' ಉಪಗ್ರಹ ಮುಂದಿನ ವರ್ಷ ಉಡಾವಣೆ.txt +7 -0
  17. Prajavani/'ನೀಲಗಿರಿ' ಕುರಿತ ಸಂವಾದ, ಛಾಯಾಚಿತ್ರ ಪ್ರದರ್ಶನ ನೀಲಿ ಬೆಟ್ಟಗಳನ್ನು ನೋಡಬನ್ನಿ!.txt +7 -0
  18. Prajavani/'ಪ್ರಜಾವಾಣಿ' ವರದಿ ಪರಿಣಾಮ ಕೊನೆಗೂ‘ತಬರ’ನ ಜಮೀನಿಗೆ ಕೊಳವೆಬಾವಿ!.txt +5 -0
  19. Prajavani/'ಬಟ್ಟೆ ಬಿಚ್ಚುವಾಗ ನಗುತ್ತಿರಬೇಕು ಎಂದು ಸತಾಯಿಸುತ್ತಿದ್ದ ಪ್ರಜ್ವಲ್ ರೇವಣ್ಣ'.txt +7 -0
  20. Prajavani/'ಬಲಿಜ ಸಮುದಾಯಕ್ಕೆ ಪೀಠದ ಚಿಂತನೆ'.txt +8 -0
  21. Prajavani/'ಬಸವರಾಜನ್‌ ದಂಪತಿಯ ಕೊಳಕು ರಾಜಕೀಯ'.txt +10 -0
  22. Prajavani/'ಮಾನ, ಮರ್ಯಾದೆ, ರಾಮ' ಪರಿಷತ್‌ನಲ್ಲಿ ವಾಕ್ಸಮರ.txt +9 -0
  23. Prajavani/'ಮಾನವ- ಆನೆ ಸಂಘರ್ಷ’ ಸಮ್ಮೇಳನ 12ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ.txt +6 -0
  24. Prajavani/'ಮುಡಾ’ ಹಗರಣ ಸಿಬಿಐ ತನಿಖೆಗೆ ಎನ್. ರವಿಕುಮಾರ್‌ ಆಗ್ರಹ.txt +5 -0
  25. Prajavani/'ಮೈದಾನ್' ಸಿನಿಮಾ ಪ್ರದರ್ಶನ ನಿರ್ಬಂಧದ ಆದೇಶಕ್ಕೆ ಹೈಕೋರ್ಟ್ ತಡೆ.txt +8 -0
  26. Prajavani/'ಮೈಸೂರು ಚಲೋ' ಸಮಾರೋಪ ಇಂದು ಮುಖ್ಯಮಂತ್ರಿ ತವರಲ್ಲಿ ವಿಪಕ್ಷಗಳ ರಣಕಹಳೆಗೆ ಸಜ್ಜು.txt +7 -0
  27. Prajavani/'ಮೋದಿ ವರ್ಸಸ್‌ ಖರ್ಗೆ' ಪರಿಣಾಮ ಬೀರಲಿದೆ ಸತೀಶ ಜಾರಕಿಹೊಳಿ.txt +6 -0
  28. Prajavani/'ಯಡಿಯೂರಪ್ಪ ಬಂಧನ ಬೇಡ' ಹಿಂದಿನ ಮಧ್ಯಂತರ ಆದೇಶ ವಿಸ್ತರಿಸಿದ ಹೈಕೋರ್ಟ್.txt +5 -0
  29. Prajavani/'ಯುವ ನಿಧಿ' ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ.txt +4 -0
  30. Prajavani/'ರಾಜಭವನ ವಿರುದ್ಧ ‘ಸರ್ಕಾರಿ’ ಹೋರಾಟ'.txt +10 -0
  31. Prajavani/'ರಾಮ್‌ಸರ್‌' ಪಟ್ಟಿಗೆ ಅಂಕಸಮುದ್ರ ತಾಣ, ಮಾಗಡಿ ಕೆರೆ, ಅಘನಾಶಿನಿ ಅಳಿವೆ....txt +8 -0
  32. Prajavani/'ರೇರಾ' ಅಧ್ಯಕ್ಷ ಹುದ್ದೆ ಶೀಘ್ರ ಭರ್ತಿ ಹೈಕೋರ್ಟ್‌ಗೆ ಸರ್ಕಾರದ ಹೇಳಿಕೆ.txt +6 -0
  33. Prajavani/'ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ' 2024 ಪ್ರಶಸ್ತಿ ಪ್ರಕಟ.txt +8 -0
  34. Prajavani/'ವಿಶೇಷಾತಿಥ್ಯ' ಬಹಿರಂಗಕ್ಕೆ ದರ್ಶನ್ ಆತ್ಮೀಯತೆಗಾಗಿ ರೌಡಿ ಗುಂಪುಗಳ ಪೈಪೋಟಿ ಕಾರಣ.txt +8 -0
  35. Prajavani/'ಶಾರ್ಪ್‌ ಶೂಟರ್‌’ ಕೂಡ ವನ್ಯಜೀವಿ ಮಂಡಳಿ ಸದಸ್ಯ ಅರಣ್ಯ ಅಧಿಕಾರಿಗಳಿಂದಲೇ ಆಕ್ಷೇಪ.txt +7 -0
  36. Prajavani/'ಸಾಲರಾಮಯ್ಯನ ಸೋಗಲಾಡಿ' ಬಜೆಟ್ ವಿರೋಧ ಪಕ್ಷದ ನಾಯಕ ಆರ್‌. ಅಶೋಕ.txt +9 -0
  37. Prajavani/'ಸಾವರ್ಕರ್‌' ಗಾಯನಕ್ಕೆ ವಿದ್ಯಾರ್ಥಿನಿಯರು ಪ್ರಾಂಶುಪಾಲರ ವಿರುದ್ಧ ವರದಿ ಸಲ್ಲಿಕೆ.txt +12 -0
  38. Prajavani/'ಸಿಂಹ' ಸೈಡ್ ಸರಿಸಿ BJP ಟಿಕೆಟ್ ಗಿಟ್ಟಿಸಿದ ಸ್ಟೈಲಿಶ್ ಯದುವೀರ್‌ ಹಿನ್ನೆಲೆ ಏನು.txt +4 -0
  39. Prajavani/1.09 ಕೋಟಿ ಪಹಣಿಗೆ ಆಧಾರ್ ಲಿಂಕ್ ಹಲವು ಜಿಲ್ಲೆಗಳಲ್ಲಿ ರೈತರ ನಿರಾಸಕ್ತಿ.txt +39 -0
  40. Prajavani/1.29 ಲಕ್ಷ ಮನೆ ಪೂರ್ಣಗೊಳಿಸಲು ಆರ್ಥಿಕ ನೆರವು ಸಿದ್ದರಾಮಯ್ಯ.txt +8 -0
  41. Prajavani/1.50 ಕೋಟಿ ಸದಸ್ಯತ್ವವೆಂದು ಬಿಜೆಪಿಯಿಂದ ಪುಂಗಿ ರಮೇಶ್ ಬಾಬು.txt +4 -0
  42. Prajavani/1.80 ಲಕ್ಷ ಕ್ಯುಸೆಕ್‌ ನೀರು ಹೊರಬಿದ್ದರೂ ಆತಂಕ ಇಲ್ಲ ವಿಜಯನಗರ ಜಿಲ್ಲಾಧಿಕಾರಿ.txt +4 -0
  43. Prajavani/10 ಪಾಲಿಕೆ ನೌಕರರಿಂದ ಸೆ.5ರಿಂದ ಕೆಲಸ ಸ್ಥಗಿತ ಸರ್ಕಾರಕ್ಕೆ ಎಚ್ಚರಿಕೆ.txt +6 -0
  44. Prajavani/10 ಮ.ನ.ಪಾ.ಗಳಲ್ಲಿ ₹2 ಸಾವಿರ ಕೋಟಿ ಕಾಮಗಾರಿ ಸಚಿವ ಸಂಪುಟ ಒಪ್ಪಿಗೆ.txt +11 -0
  45. Prajavani/10 ವರ್ಷಕ್ಕೊಮ್ಮೆ ಖಾಸಗಿ ಶಾಲಾ ಮಾನ್ಯತೆ ನವೀಕರಣ.txt +5 -0
  46. Prajavani/10 ಸಂಘ-ಸಂಸ್ಥೆಗಳಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ.txt +4 -0
  47. Prajavani/10 ಸಂಘ-ಸಂಸ್ಥೆಗಳಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ.txt +4 -0
  48. Prajavani/10 ಸಾವಿರ ಮರಗಳ ಸರದಾರ ರಾಯಚೂರಿನ ಈ ಈರಣ್ಣ.txt +2 -0
  49. Prajavani/10 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಸಚಿವ ಮಧು ಬಂಗಾರಪ್ಪ.txt +11 -0
  50. Prajavani/1000 ಎಕರೆಯಲ್ಲಿ ‘ಕೆಎಚ್ಐಆರ್‌ ಸಿಟಿ’ ಎಂ.ಬಿ.ಪಾಟೀಲ.txt +7 -0
Prajavani/'ಅವನು' ಒಬ್ಬ ಮೂರ್ಖ ಅನಂತಕುಮಾರ‌ ಹೆಗಡೆ ಮಾತಿಗೆ ಸಿದ್ದರಾಮಯ್ಯ ತಿರುಗೇಟು.txt ADDED
@@ -0,0 +1,5 @@
 
 
 
 
 
 
1
+ ಸಂಗೊಳ್ಳಿ (ಬೆಳಗಾವಿ ‌ಜಿಲ್ಲೆ): ಅವನೊಬ್ಬ ಮೂರ್ಖ, ದೇಶಪ್ರೇಮ ಎಂದು ಏನೇನೋ ಮಾತನಾಡುತ್ತಾನೆ. ದೇಶದಲ್ಲಿ ಎಲ್ಲೆಲ್ಲಿ ಅತಿಕ್ರಮಿಸಿದ ಮಸೀದಿ‌ ಇವೆಯೋ ಅವುಗಳನ್ನೆಲ್ಲ ಒಡೆದು ದೇವಸ್ಥಾನ ಕಟ್ಟುತ್ತೇವೆ ಎನ್ನುತ್ತಾನೆ. ಮೂರ್ಖ; ಮೊದಲು ದೇಶದ‌ ಇತಿಹಾಸ ತಿಳಿದುಕೊ' ಎಂದೂ‌ ಸಿದ್ದರಾಮಯ್ಯ ಯಾರ ಹೆಸರು ಹೇಳದೆಯೇ ಟೀಕಿಸಿದರು.
2
+ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಮುದಾಯ ಭವನ, ಭೋಜನಾಲಯ ಹಾಗೂ ಶಿಲ್ಪವನಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
3
+ 'ಎಲ್ಲ ಜಾತಿಯವರನ್ನೂ, ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣಬೇಕು. ನಾವೆಲ್ಲರೂ ಭಾರತೀಯರು. ಸಮಾನವಾಗಿ ಬಾಳಬೇಕು.‌ ಆಗಮಾತ್ರ ಈ ದೇಶದ ಸಾರ್ವಭೌಮತ್ವ ಉಳಿಯುತ್ತದೆ' ಎಂದು ಕಿವಿಮಾತು ಹೇಳಿದರು.
4
+ 'ನಾವೆಲ್ಲ ಸಂಗೊಳ್ಳಿ‌ ರಾಯಣ್ಣ ಆಗಲು ಸಾಧ್ಯವಿಲ್ಲ. ಆದರೆ ಅವನ ಆದರ್ಶಗಳನ್ನು ರೂಢಿಸಿಕೊಳ್ಳಬಹುದು' ಎಂದೂ ಸಲಹೆ‌ ನೀಡಿದರು.
5
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಆನಂದಕಂದ ಪ್ರಶಸ್ತಿ' ಪುರಸ್ಕೃತ ಸಾಹಿತಿ ಗುರುಲಿಂಗ ಕಾಪಸೆ ಇನ್ನಿಲ್ಲ.txt ADDED
@@ -0,0 +1,5 @@
 
 
 
 
 
 
1
+ ಧಾರವಾಡ: ಸಾಹಿತಿ ಗುರುಲಿಂಗ ಕಾಪಸೆ (96) ಅವರು ಮಂಗಳವಾರ ತಡರಾತ್ರಿ ನಗರದ ನಿರ್ಮಲಾ ಆಸ್ಪತ್ರೆಯಲ್ಲಿ ನಿಧನರಾದರು.
2
+ ನಗರದ ಸಪ್ತಾಪೂರದ ದುರ್ಗಾ ಕಾಲೊನಿಯ ಅವರ ಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
3
+ ಗುರುಲಿಂಗ ಕಾಪಸೆ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಿ.ಕೆ.ಲೋಣಿಯಲ್ಲಿ 1928 ಏಪ್ರಿಲ್‌ 2ರಂದು ಜನಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ. ‘ಹಲಸಂಗಿ ಗೆಳೆಯರು’, ‘ಅಕ್ಕಮಹಾದೇವಿ’, ‘ಅರವಿಂದರು’, ’ಬಸವೇಶ್ವರ’, ಶಾಲ್ಮಲೆಯಿಂದ ಗೋದಾವರಿಯವರೆಗೆ (ಪ್ರವಾಸ ಕಥನ) ಮೊದಲಾದ ಕೃತಿಗಳನ್ನು ರಚಿಸಿದ್ಧಾರೆ.
4
+ ‘ವರದರಾಜ ಆದ್ಯ ಪ್ರಶಸ್ತಿ’, ‘ಆನಂದಕಂದ ಪ್ರಶಸ್ತಿ’, ’ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ’ ಮೊದಲಾದ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
5
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಆರ್ಕ್ಟಿಕ್‌'ನಲ್ಲಿ ರಾಮನ್‌ ಸಂಸ್ಥೆ ಅಧ್ಯಯನ.txt ADDED
@@ -0,0 +1,6 @@
 
 
 
 
 
 
 
1
+ ಬೆಂಗಳೂರು: 'ಆರ್ಕ್ಟಿಕ್‌' ಪ್ರದೇಶದಲ್ಲಿ ಆರಂಭವಾಗಿರುವ ಚಳಿಗಾಲದ ಸಂಶೋಧನಾ ಅಭಿಯಾನದಲ್ಲಿ ಬೆಂಗಳೂರಿನ ರಾಮನ್‌ ಸಂಶೋಧನಾ ಸಂಸ್ಥೆಯ (ಆರ್‌ಆರ್‌ಐ) ವಿಜ್ಞಾನಿಗಳ ಮೊದಲ ತಂಡ ಭಾಗವಹಿಸಿದೆ. ವಿಶ್ವದ ಉಗಮದ ಕುರುಹುಗಳನ್ನು ಪತ್ತೆ ಮಾಡುವುದರಿಂದ ಹಿಡಿದು, ಆಧುನಿಕ ಕಾಲದ ಹವಾಮಾನ ಬದಲಾವಣೆ ಪರಿಣಾಮಗಳೂ ಸೇರಿ ಹಲವು ವಿಷಯಗಳ ಬಗ್ಗೆ ಈ ತಂಡ ಸಂಶೋಧನೆ ಕೈಗೊಳ್ಳಲಿದೆ.
2
+ ಭೂಮಿಯ ಉತ್ತರ ಧ್ರುವ ಪ್ರದೇಶ ‘ಆರ್ಕ್ಟಿಕ್‌’ನಲ್ಲಿ ಭಾರತ ತನ್ನದೇ ಆದ ಸಂಶೋಧನಾ ಕೇಂದ್ರವನ್ನು ಹೊಂದಿದ್ದು, ಇದನ್ನು ಹಿಮಾದ್ರಿ ಎಂದು ಕರೆಯಲಾಗುತ್ತದೆ. 2008 ರಿಂದ ಇದು ಕಾರ್ಯ ನಿರ್ವಹಿಸುತ್ತಿದೆ.
3
+ ಈ ಬಾರಿ ಭಾರತೀಯ ತಂಡದ ನೇತೃತ್ವವನ್ನು ಆರ್‌ಆರ್‌ಐನ ಎಲೆಕ್ಟ್ರಾನಿಕ್ಸ್‌ ಎಂಜನಿಯರಿಂಗ್‌ ಗ್ರೂಪ್ ವಿಭಾಗದ ಗಿರೀಶ್‌ ಬಿ.ಎಸ್ ವಹಿಸಿದ್ದಾರೆ. ಖಗೋಳವಿಜ್ಞಾನ, ಹವಾಮಾನ ಬದಲಾವಣೆ, ವಾತಾವರಣ ವಿಜ್ಞಾನ ಸೇರಿ ಹಲವು ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.
4
+ ಭಾರತೀಯ ವಿಜ್ಞಾನಿಗಳು ಇದೇ ಮೊದಲ ಬಾರಿ ಆರ್ಕ್ಟಿಕ್‌ನ ಸ್ವಾಲ್ಬರ್ಡ್‌ನಲ್ಲಿ ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸಲಿದ್ದಾರೆ. ಈ ಅಧ್ಯಯನದಿಂದ ಖಗೋಳ ವಿಜ್ಞಾನಿಗಳು ಖಗೋಳ ಮಾಪನ ಕಾರ್ಯವನ್ನು ಅತ್ಯಂತ ಕರಾರುವಾಕ್ಕಾಗಿ ನಡೆಸಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕಡಿಮೆ ತರಂಗಾಂತರದ ದೂರದರ್ಶಕವನ್ನು ಸ್ಥಾಪಿಸುವ ಸಾಧ್ಯತೆಯೂ ಇದೆ ಎಂದು ಆರ್‌ಆರ್‌ಐ ತಿಳಿಸಿದೆ.
5
+ ಮೊದಲ ತಂಡ ತನ್ನ ಕಾರ್ಯವನ್ನು ಮಂಗಳವಾರ ಆರಂಭಿಸಿದ್ದು, ಜನವರಿ 15 ರವರೆಗೆ ಕಾರ್ಯ ನಿರ್ವಹಿಸಲಿದೆ. ಈ ಕಾರ್ಯಕ್ಕೆ ಭೂವಿಜ್ಞಾನಗಳ ಸಚಿವಾಲಯ ಅನುದಾನ ನೀಡಿದ್ದು, ಗೋವಾದಲ್ಲಿರುವ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ ನೋಡಲ್‌ ಏಜೆನ್ಸಿಯಾಗಿದೆ.
6
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಇಂಡಿ'ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತ್ಯಾಚಾರ, ವ್ಯಾಪಕ ಭ್ರಷ್ಟಾಚಾರ ಪೂನಾವಾಲಾ.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಬೆಂಗಳೂರು:‘ ‘ಇಂಡಿ’ ಒಕ್ಕೂಟ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ತುಟಿ ಬಿಚ್ಚುತ್ತಿಲ್ಲ. ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ ಅವರು ಆರೋಪಿಸಿದರು.
2
+ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮಬಂಗಾಳದಲ್ಲಿ ಇತ್ತೀಚೆಗೆ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವಿರಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಅಕ್ರಮಗಳ ಆರೋಪಗಳ ಬಗ್ಗೆ ಮೌನವಹಿಸಿದ್ದಾರೆ ಎಂದು ಹರಿಹಾಯ್ದರು.
3
+ ಕರ್ನಾಟಕದ್ದು ಡಬಲ್‌ ಟ್ರಬಲ್‌ ಸರ್ಕಾರ. ಇಲ್ಲಿ ಕಟಾಕಟ್‌ ಲೂಟ್‌, ಝೂಟ್‌ ಸರ್ಕಾರ ವಿದೆ. ರಾಹುಲ್‌ಗಾಂಧಿಯ ಕಟಾಕಟ್‌ ಲೂಟ್‌ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ್ದಾರೆ. ಮುಡಾ ನಿವೇಶ ಹಂಚಿಕೆಯಲ್ಲಿ ನಡೆದಿರುವ ಅಕ್ರಮದಲ್ಲಿ ₹5 ಸಾವಿರ ಕೋಟಿಯಷ್ಟು ಹಗರಣ ನಡೆದಿದೆ ಎಂದು ಪೂನಾವಾಲಾ ಆರೋಪಿಸಿದರು. 
4
+ ಲೂಟಿ ಮತ್ತು ಸುಳ್ಳು ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿವಾಗಿ ದಿವಾಳಿಯಾಗಿದೆ. ಇದಕ್ಕಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಜನರ ಮೇಲೆ ನ್ಯಾಯ ಸಮ್ಮತವಲ್ಲದ ಜಝಿಯಾ ತೆರಿಗೆ ಹಾಕಲು ಮುಂದಾಗಿದೆ. ಪೆಟ್ರೋಲ್‌, ಡೀಸೆಲ್‌, ವಿದ್ಯುತ್‌, ಬಸ್‌ ಪ್ರಯಾಣ ದರ, ನೀರಿನ ದರ, ಸಿನಿಮಾ ಟಿಕೆಟ್ ಸೇರಿ ಎಲ್ಲೆಡೆ ಹೆಚ್ಚುವರಿ ತೆರಿಗೆ ವಿಧಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ಎಸ್‌ಸಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಸುಮಾರು ₹25 ಸಾವಿರ ಕೋಟಿ ಹಣವನ್ನು ಬೇರೆಡೆಗೆ ವರ್ಗಾಯಿಸಿ ಲೂಟಿ ಮಾಡಲಾಗಿದೆ ಎಂದು ದೂರಿದರು.
5
+ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1,200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್‌ ನಾಯಕರು ಮಾತನಾಡುತ್ತಿಲ್ಲ. ನ್ಯಾಯ ಕೊಡುವ ಬಗ್ಗೆ ಮಾತನಾಡುವ ರಾಹುಲ್‌ಗಾಂಧಿ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
6
+ ಪಶ್ಚಿಮ ಬಂಗಾಲದಲ್ಲಿ ಪ್ರಾಯೋಜಿತ ಹಿಂಸೆ
7
+ ಆ.14 ರ ಮಧ್ಯರಾತ್ರಿ ಮಹಿಳಾ ಪ್ರತಿಭಟನಾಕಾರರು, ವೈದ್ಯರ ಮೇಲೆ ಟಿಎಂಸಿ ಪ್ರಾಯೋಜಿತ ಗೂಂಡಾಗಳಿಂದ ಹಲ್ಲೆ ನಡೆದಿದೆ. ಗೂಂಡಾಗಳು ಆಸ್ಪತ್ರೆ ಮೇಲೆ ದಾಳಿ ಮಾಡಿದ್ದೂ ಅಲ್ಲದೇ, ಮಹಿಳಾ ವೈದ್ಯರಿಗೆ ಬೆದರಿಕೆ ಹಾಕಿದ್ದಾರೆ. ಸಾಕ್ಷ್ಯ ನಾಶಕ್ಕಾಗಿಯೇ ವೈದ್ಯಕೀಯ ಕಾಲೇಜಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಶೆಹಜಾದ್‌ ಪೂನಾವಾಲಾ ದೂರಿದರು.
8
+ ಪಶ್ಚಿಮಬಂಗಾಳದ ನಿರ್ಭಯಾ ದುರ್ಘಟನೆ ಎಂದು ಕರೆಯಲ್ಪಡುತ್ತಿರುವ ಈ ಪ್ರಕರಣದಲ್ಲಿ ಟೆಎಂಸಿ ಆರೋಪಿಗಳಿಗೆ ವ್ಯವಸ್ಥಿತವಾಗಿ ಸಹಾಯ ಮಾಡುತ್ತಿದೆ. ಪಶ್ಚಿಮಬಂಗಾಲದಲ್ಲಿ ಈಗ ಕೇವಲ ಬಲತ್ಕಾರಿಗಳು ಮಾತ್ರ ಸುರಕ್ಷಿತರು. ಕೋಲ್ಕತ್ತಾವು ಸಿಟಿ ಆಫ್‌ ಜಾಯ್‌ ಆಗಿ ಉಳಿದಿಲ್ಲ, ಆತಂಕ ಭಯದ ನಗರವಾ��ಿದೆ ಎಂದು ಹೇಳಿದರು.
9
+ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಹುಲ್‌ ಗಾಂಧಿ ಒಂದು ಟ್ವೀಟ್‌ ಮಾಡಿದ್ದು ಬಿಟ್ಟರೆ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆ ಕೇಳುವ ಧೈರ್ಯ ತೋರಿಸಿಲ್ಲ. ಮಮತಾ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ ಎಂದು ದೂರಿದರು.
10
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಇಂಡಿಯಾ' ಜಯಭೇರಿ ಬಿಜೆಪಿ ವಿರುದ್ಧದ ಆಕ್ರೋಶ ಸ್ಪಷ್ಟವಾಗಿದೆ ಡಿ.ಕೆ.ಶಿವಕುಮಾರ್.txt ADDED
@@ -0,0 +1,5 @@
 
 
 
 
 
 
1
+ ಬೆಂಗಳೂರು: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟವು 10 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಬಿಜೆಪಿ ಕೇವಲ ಎರಡರಲ್ಲಿ ಮಾತ್ರ ಗೆದ್ದಿದೆ.
2
+ ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, 'ಎಲ್ಲ ಏಳು ರಾಜ್ಯಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧದ ಜನರ ಆಕ್ರೋಶವು ಉಪಚುನಾವಣೆಯಲ್ಲಿ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. 'ಇಂಡಿಯಾ' ಮೈತ್ರಿಕೂಟಕ್ಕೆ ಜನರ ಬೆಂಬಲ ದಿನದಿಂದ ದಿನಕ್ಕೆ ವರ್ಧಿಸುತ್ತಿದೆ' ಎಂದು ಹೇಳಿದ್ದಾರೆ.
3
+ 'ದೇಶದಾದ್ಯಂತ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ನಮ್ಮ 'ಇಂಡಿಯಾ' ಮೈತ್ರಿಕೂಟದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದು ಮತ್ತಷ್ಟು ಹುರುಪನ್ನು ನೀಡಿದೆ' ಎಂದು ಹೇಳಿದ್ದಾರೆ.
4
+ ಲೋಕಸಭಾ ಚುನಾವಣೆಯ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಕಂಡಿದೆ. ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ತಲಾ ನಾಲ್ಕು ಮತ್ತು ಎಎಪಿ, ಡಿಎಂಕೆ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
5
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಮಿತಿ ರದ್ದು ಸಿದ್ದರಾಮಯ್ಯ.txt ADDED
@@ -0,0 +1,6 @@
 
 
 
 
 
 
 
1
+ ಬೆಂಗಳೂರು: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದರೆ 'ಮೀಸಲಾತಿಗೆ ಇರುವ ಮಿತಿ'ಯನ್ನು ಕಿತ್ತೆಸೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
2
+ ಜಾರ್ಖಂ‌ಡ್‌ನಲ್ಲಿ 'ಭಾರತ ಜೋಡೊ ನ್ಯಾಯ ಯಾತ್ರೆ' ವೇಳೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣವನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ, ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ.
3
+ ರಾಹುಲ್ ಗಾಂಧಿ ಅವರ ಭಾಷಣದ ವಿಡಿಯೊ ಹಂಚಿಕೊಂಡಿರುವ ಸಿದ್ದರಾಮಯ್ಯ, 'ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡುವ ಮೊದಲ ಕೆಲಸವೇ 'ಮೀಸಲಾತಿಗೆ ಇರುವ ಮಿತಿ'ಯನ್ನು ಕಿತ್ತೆಸೆಯುವುದು. ಗುಡ್ಡಗಾಡುಗಳಲ್ಲಿ ಕಲ್ಲಿದ್ದಲು ಹೊರುವ ಜಾಗದಲ್ಲಿ ಕಾಣುವ ಆದಿವಾಸಿಗಳು ವಿಶ್ವವಿದ್ಯಾಲಯಗಳ, ಕೋರ್ಟ್‌ಗಳ, ಆಸ್ಪತ್ರೆಗಳ ಉನ್ನತ ಹುದ್ದೆಗಳಲ್ಲಿ ಕಾಣುವುದಿಲ್ಲ. ಅಗತ್ಯ ಪ್ರಮಾಣದ ಮೀಸಲಾತಿ ಸಿಗದಿರುವುದೂ ಇದಕ್ಕೆ ಕಾರಣ. ದೇಶದ ಆದಿವಾಸಿಗಳು, ದಲಿತರು, ಹಿಂದುಳಿದ ಸಮುದಾಯದ ಜನರ ಜೊತೆ ನಾವಿದ್ದೇವೆ, ಕಾಂಗ್ರೆಸ್ ಪಕ್ಷವಿದೆ. ಭಾರತದ ಪ್ರಜೆ ಪ್ರಜೆಗೂ ಘನತೆಯ ಬದುಕು ನಮ್ಮ ಗ್ಯಾರಂಟಿ' ಎಂದು ಹೇಳಿದ್ದಾರೆ.
4
+ ಶೇಕಡ 50ರ ಮೀಸಲಾತಿ ಮಿತಿ ರದ್ದು: ರಾಹುಲ್
5
+ ಲೋಕಸಭಾ ಚುನಾವಣೆಯ ನಂತರ ‘ಇಂಡಿಯಾ’ ಮೈತ್ರಿಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ರಾಷ್ಟ್ರದಾದ್ಯಂತ ಜಾತಿ ಗಣತಿ ನಡೆಸಲಾಗುತ್ತದೆ ಮತ್ತು ಮೀಸಲಾತಿಗೆ ಇರುವ ಶೇಕಡ 50ರ ಮಿತಿಯನ್ನು ತೆಗೆಯಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭರವಸೆ ನೀಡಿದ್ದಾರೆ.
6
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಪ್ರಿಯಾಂಕ್ ಹೇಳಿದ್ದೇನು.txt ADDED
@@ -0,0 +1,4 @@
 
 
 
 
 
1
+ ಕಲಬುರಗಿ: 'ಪ್ರಧಾನಿ, ಉಪಪ್ರಧಾನ ಮಂತ್ರಿ ಯಾರಾಗಬೇಕು ಎಂಬ ವಿಚಾರ ಬಂದಾಗ ಆ ಸಮಾಜದ ನಾಯಕರಿಗೆ ಜಾತಿಯ ಲೇಪನ ಹಚ್ಚುವುದು ತಪ್ಪು. ಅವರೂ ಸಮರ್ಥರಲ್ಲವಾ? ಆ ಸಮುದಾಯದಲ್ಲಿನವರ (ಪರಿಶಿಷ್ಟ ಜಾತಿ) ದಕ್ಷತೆ ನೋಡುವುದಿಲ್ಲವಾ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಪಟ್ಟಕ್ಕೆ ಸಮರ್ಥರು ಎಂಬುದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
2
+ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಪ್ರಸ್ತಾವನೆ ಕುರಿತು ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, 'ನರೇಂದ್ರ ಮೋದಿ ಅವರಿಗೆ ಸ್ಥಾನ ಮಾನ ಕೊಡಬೇಕಾದರೆ ಅವರ ಜಾತಿ ಕೇಳಲಿಲ್ಲ. ಅವರು ಎಷ್ಟು ಸಮರ್ಥರು ಎನ್ನುವುದನ್ನು ಕಳೆದ ಹತ್ತು ವರ್ಷಗಳಿಂದ ನೋಡುತ್ತಿದ್ದೇವೆ' ಎಂದರು.
3
+ 'ನಮ್ಮ ಮುಂದೆ ಇರುವುದು ಆದಷ್ಟು ಹೆಚ್ಚು ಸಂಸದರನ್ನು ಗೆಲ್ಲಿಸಿ ಕಳುಹಿಸುವಂತಹದ್ದು. ಯಾರು ಪ್ರಧಾನಿ, ಯಾರು ಉಪ ಪ್ರಧಾನಿ ಎಂಬ ಸವಾಲು ನಮ್ಮ ಮುಂದೆ ಇಲ್ಲ. ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ 200ರಿಂದ 250 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಮೈತ್ರಿಕೂಟದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ತಿಗೆ ಕಳುಹಿಸುವುದು ಮುಖ್ಯ ಗುರಿ' ಎಂದು ಹೇಳಿದರು.
4
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಇಂಡಿಯಾ' ಮೈತ್ರಿಕೂಟವು ಜಾತ್ಯತೀತತೆಯನ್ನು ನಗೆಪಾಟಲಾಗಿಸುತ್ತಿದೆ ದೇವೇಗೌಡ.txt ADDED
@@ -0,0 +1,15 @@
 
 
 
 
 
 
 
 
 
 
 
 
 
 
 
 
1
+ ಬೆಂಗಳೂರು: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ', ಜಾತ್ಯತೀತತೆಯನ್ನು ನಗೆಪಾಟಲಾಗಿಸಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಶನಿವಾರ ಕಿಡಿಕಾರಿದ್ದಾರೆ.
2
+ ಜಾತ್ಯತೀತ ಜನತಾದಳ (ಜೆಡಿಎಸ್‌) ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಕಾಂಗ್ರೆಸ್‌ ಮಾಡುತ್ತಿರುವ ಆರೋಪದ ಕುರಿತು ಅವರು ಮಾತನಾಡಿದ್ದಾರೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಡಿಎಂಕೆ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
3
+ ದೇವೇಗೌಡ ಅವರು, ಟಿಎಂಸಿ ನಾಯಕಿಯೂ ಆಗಿರುವ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿದ್ದರು. ಅದೇ ರೀತಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ತಂದೆ ಮಾಜಿ ಸಿಎಂ ಎಂ.ಕರುಣಾನಿಧಿ ಅವರು ಆರು ವರ್ಷಗಳ ಕಾಲ ಬಿಜೆಪಿಯೊಂದಿಗೆ ಇದ್ದರು. ಅವರ ಅಳಿಯ ಆಗಿನ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು ಎಂದು ನೆನಪಿಸಿದ್ದಾರೆ.
4
+ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜೆಡಿಎಸ್‌ ಹಿರಿಯ ನಾಯಕ, 'ನಾವು ಸಾಕಷ್ಟು ದೃಷ್ಟಾಂತಗಳನ್ನು ಉಲ್ಲೇಖಿಸಬಲ್ಲೆವು. ಈ ದೇಶದಲ್ಲಿ ಜಾತ್ಯತೀತತೆ ಬಗ್ಗೆ ಯಾರಾದರೂ ಮಾತನಾಡಿದರೆ, ಜನರು ಅದನ್ನು ತಮಾಷೆ ಎಂದುಕೊಳ್ಳುತ್ತಾರೆ. ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ಕೈಜೋಡಿಸಿದ್ದರು. ಆಗ ಕಾಂಗ್ರೆಸ್‌ ಸದಸ್ಯರು ಮಹಾರಾಷ್ಟ್ರದಲ್ಲಿ ಸಭಾಪತಿಯಾಗಿದ್ದರು. ಇಂತಹ ಸಾಕಷ್ಟು ವಿಚಾರಗಳನ್ನು ನಾನು ಹೇಳಬಲ್ಲೆ. ಈ ಬೆಳವಣಿಗೆಗಳು 'ಜಾತ್ಯತೀತತೆ'ಯ ನಿಜವಾದ ಅರ್ಥಕ್ಕೆ ಸರಿಹೊಂದುವುದಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
5
+ ಮೋದಿ ಬಗ್ಗೆ ಮೆಚ್ಚುಗೆಮೂರನೇ ಬಾರಿಗೆ ಬಹುಮತದ ನಿರೀಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕುರಿತು ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
6
+ ಮೋದಿ ಅವರು ವಾಜಪೇಯಿಗಿಂತ ಭಿನ್ನ ವ್ಯಕ್ತಿತ್ವದವರು. ವಾಯಪೇಯಿ ನಾಯಕತ್ವದಲ್ಲಿ ಬಿಜೆಪಿಯು ಲೋಕಸಭೆಯಲ್ಲಿ 180ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರಲಿಲ್ಲ. ಆದರೆ, ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನ ಜಯಿಸಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು 350ಕ್ಕಿಂತ ಹೆಚ್ಚು ಕಡೆ ಗೆಲುವು ಸಾಧಿಸಿದ್ದಾರೆ. ಇದೀಗ ಮೋದಿ ಅವರು, ಎನ್‌ಡಿಎ ಮೈತ್ರಿಕೂಟವು 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಗುರಿ ಹಾಕಿಕೊಂಡಿದ್ದಾರೆ. ಮೋದಿ ನಾಯಕತ್ವವನ್ನು ಭಾರತ ಮಾತ್ರವಲ್ಲ, ಬೇರೆ ದೇಶಗಳೂ ಗುರುತಿಸುತ್ತಿವೆ ಎಂದು ದೇವೇಗೌಡ ಹೇಳಿದ್ದಾರೆ.
7
+ 'ಭಾರತದಲ್ಲಿ ಆಗಲಿ ಅಥವಾ ಹೊರಗೇ ಆಗಲಿ. ಮೋದಿಯವನ್ನು ಗುರುತಿಸುವಂತಹ ವಾತಾವರಣ ನಿರ್ಮಾಣವಾಗಿದೆ. ವಿರೋಧ ಪಕ್ಷಗಳ ನಾಯಕರು ಸ್ಪಷ್ಟವಾದ ನ��ಲುವು ಹೊಂದಿಲ್ಲ. ಅವರು ಮೋದಿ ವಿರುದ್ಧ  ಜನರ ಗಮನ ಸೆಳೆಯುವುದಕ್ಕಾಗಿ ಅಪ್ರಸ್ತುತ ವಿಚಾರಗಳನ್ನು ಮಾತನಾಡುತ್ತಾರೆ. ಆದರೆ, ಜನರು ಅವರನ್ನೆಲ್ಲ ಗಂಭೀರವಾಗಿ ಪರಿಗಣಿಸುವುದಿಲ್ಲ' ಎಂದು ಟೀಕಿಸಿದ್ದಾರೆ.
8
+ ಮುಂದುವರಿದು, ಮೋದಿ ಇಂದು ಅತಿದೊಡ್ಡ ನಾಯಕರಾಗಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿರೋಧ ಪಕ್ಷಗಳಿಗೆ ಸಲಹೆ ನೀಡಿದ್ದಾರೆ.
9
+ 'ಕಾಂಗ್ರೆಸ್‌ ಬಗ್ಗೆ ಮಾತನಾಡುವುದೇ ವ್ಯರ್ಥ'ದೇಶದಲ್ಲಿ ನಿರಂಕುಶ ಆಡಳಿತವಿದೆ. ಬಡವರು ಮತ್ತು ಅರ್ಹರ ಬದಲಿಗೆ ಬಂಡವಾಳಶಾಹಿಗಳಿಗಷ್ಟೇ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್‌ ಕಳೆದ 10 ವರ್ಷಗಳಿಂದ ಆರೋಪ ಮಾಡುತ್ತಿದೆ ಎಂದಿರುವ ಮಾಜಿ ಪ್ರಧಾನಿ, ಕಾಂಗ್ರೆಸ್‌ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆ ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ  ಎಷ್ಟು ಸ್ಥಾನಗಳನ್ನು ನಿರೀಕ್ಷಿಸುತ್ತಿದೆ ಎಂದು ಕೇಳಿದ್ದಾರೆ.
10
+ ಜೆಡಿಎಸ್‌ನ ಜಾತ್ಯತೀತತೆ ಕುರಿತು ಪ್ರಶ್ನೆ ಮಾಡುವ ಕಾಂಗ್ರೆಸ್‌ ಎಷ್ಟು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂಬುದನ್ನು ತಿಳಿಯಲು ಬಯಸುತ್ತೇನೆ. ಕಾಂಗ್ರೆಸ್‌ ಸರ್ಕಾರ ಇರುವುದು ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಾತ್ರ ಎಂದಿದ್ದಾರೆ.
11
+ 'ಕಳೆದ ಎರಡು ಅವಧಿಯಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷದ ಸ್ಥಾನ ಪಡೆಯುವುದಕ್ಕೂ ಅವರಿಗೆ (ಕಾಂಗ್ರೆಸ್‌ಗೆ) ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಬಗ್ಗೆ ಮಾತನಾಡುವುದೇ ವ್ಯರ್ಥ' ಎಂದು ಉಲ್ಲೇಖಿಸಿದ್ದಾರೆ.
12
+ 'ಸ್ಪರ್ಧೆ ಬಗ್ಗೆ ಕುಮಾರಸ್ವಾಮಿ ತೀರ್ಮಾನ'ಲೋಕಸಭೆ ಚುನಾವಣೆಗೂ ಕರ್ನಾಟಕದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಸೀಟು ಹಂಚಿಕೆ ಸೂತ್ರದ ಕುರಿತು ಮಾತನಾಡಿರುವ ಅವರು, ನಮ್ಮ ಪಕ್ಷ ಯಾವುದೇ ಷರತ್ತು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
13
+ ತಮ್ಮ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅಥವಾ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ, ಪರಿಸ್ಥಿತಿ ನೋಡಿಕೊಂಡು ಅದನ್ನು ತಮ್ಮ ಮಗ ನಿರ್ಧರಿಸುತ್ತಾರೆ ಎಂದಿದ್ದಾರೆ.
14
+ 'ನಾಳೆ ಏನಾಗಲಿದೆ ಎಂಬುದನ್ನು ಹೇಳಲಾರೆ. ಅವರೇ (ಕುಮಾರಸ್ವಾಮಿ) ಪಕ್ಷದ ನಾಯಕರಾಗಿದ್ದಾರೆ. ಅವರ ನಾಯಕತ್ವ ಪ್ರಶ್ನಾತೀತವಾದದ್ದು. ಹಾಗಾಗಿ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿದ ನಂತರ ಅವರೇ ತೀರ್ಮಾನ ಮಾಡಲಿದ್ದಾರೆ' ಎಂದು ವಿವರಿಸಿದ್ದಾರೆ.
15
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಇಂಡಿಯಾ' ಸರ್ಕಾರ ಬಂದರೆ ಹಣ ವದಂತಿ; IPPB ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು.txt ADDED
@@ -0,0 +1,8 @@
 
 
 
 
 
 
 
 
 
1
+ ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಅಂಚೆ ಕಚೇರಿಯಲ್ಲಿರುವ ಮಹಿಳೆಯರ ಖಾತೆಗೆ ₹ 8,500 ಜಮಾ ಆಗಲಿದೆ’ ಎಂಬ ವದಂತಿ ಹರಡಿದ್ದರಿಂದಾಗಿ, ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ‘ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಡಿಜಿಟಲ್ ಖಾತೆ’ ತೆರೆಯಲು ಸಾವಿರಾರು ಮಹಿಳೆಯರು ಬುಧವಾರ ಜಮಾಯಿಸಿದ್ದರು.
2
+ ‘ಐಪಿಪಿಬಿ ಖಾತೆ ತೆರೆದರೆ ಈ ಖಾತೆಗೆ ಹಣ ಹಾಕಲಾಗುತ್ತದೆ ಎಂಬ ವದಂತಿ ಹಬ್ಬಿರುವುದರಿಂದ ಗುಂಪು ಗುಂಪಾಗಿ ಗ್ರಾಹಕರು ಐಪಿಪಿಬಿ ಖಾತೆ ತೆರೆಯಲು ಜಿಪಿಒ ಪ್ರಧಾನ ಕಚೇರಿಗೆ ಬರುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು, ಅಂಚೆ ಇಲಾಖೆಯಿಂದ ಈ ಖಾತೆಗೆ ಯಾವುದೇ ರೀತಿಯ ಹಣ ಜಮೆ ಆಗುವುದಿಲ್ಲ’ ಎಂಬ ಫಲಕಗಳನ್ನು ಜಿಪಿಒ ಕಚೇರಿಯ ಆವರಣದಲ್ಲಿ ಹಾಕಲಾಗಿದೆ. ಜಿಪಿಒ ಮುಂಭಾಗದಲ್ಲಿ ಸಾವಿರಾರು ಮಹಿಳೆಯರು ಬಂದ ಕಾರಣ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.
3
+ ‘ಮೇ 31ರವರೆಗೆ ಮಾತ್ರ ಐಪಿಪಿಬಿ ಖಾತೆ ತೆರೆಯಲು ಅವಕಾಶ ಇದೆಯಂತೆ. ಆದಷ್ಟು ಬೇಗ ಖಾತೆ ತೆರೆಯಲು ಪ್ರಧಾನ ಅಂಚೆ ಕಚೇರಿಗೆ ಬಂದಿರುವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದೇ ಖಾತೆಗೆ ₹8,500 ಜಮೆ ಆಗಲಿದೆಯಂತೆ’ ಎಂದು ಚಲ್ಲಘಟ್ಟದ ಫಾತೀಮಾ ಲಿಯಾಖತ್‌ ಅಲಿ ತಿಳಿಸಿದರು.
4
+ ‘ಪ್ರತಿದಿನ ಮುಂಜಾನೆಯೇ ಕಚೇರಿ ಮುಂಭಾಗದಲ್ಲಿ ಬಂದು ಸರತಿಯಲ್ಲಿ ನಿಂತು, ಟೋಕನ್‌ಗಳನ್ನು ಪಡೆದು ಐಪಿಪಿಬಿ ಖಾತೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಈ ಸುಳ್ಳು ಸುದ್ದಿಯನ್ನು ನಂಬಿದ ಮಹಿಳೆಯರು ಅಂಚೆ ಕಚೇರಿಗಳ ಎದುರು ಜಮಾಯಿಸಿದ್ದಾರೆ. ಇದು ಸುಳ್ಳು ಸುದ್ದಿ ನಂಬಬೇಡಿ ಎಂದು ತಿಳಿಸಿ, ಕಚೇರಿಯ ಆವರಣದಲ್ಲಿ ಜಾಗೃತಿ ಫಲಕವನ್ನೂ ಹಾಕಿದ್ದೇವೆ. ಆದರೂ ಮಹಿಳೆಯರು ನಮ್ಮ ಮಾತು ಕೇಳುತ್ತಿಲ್ಲ’ ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.
5
+ ‘ಎರಡು ವರ್ಷಗಳ ಹಿಂದೆಯೇ ಐಪಿಪಿಬಿ ಯೋಜನೆ ಪರಿಚಯಿಸಿದ್ದೇವೆ. ಇದು ಉಳಿತಾಯ ಖಾತೆಯಾಗಿದ್ದು, ₹200 ಪಾವತಿಸಿ ಯಾರು ಬೇಕಾದರೂ ಖಾತೆ ತೆರೆಯಬಹುದು. ಆದರೆ, ವದಂತಿಯಿಂದಾಗಿ ನಿತ್ಯ ನೂರಾರು ಮಹಿಳೆಯರು ಅಂಚೆ ಕಚೇರಿಗೆ ಬರುತ್ತಿದ್ದಾರೆ. ಪ್ರತಿ ದಿನ ಕನಿಷ್ಠ 1 ಸಾವಿರ ಟೋಕನ್‌ ವಿತರಣೆ ಮಾಡಿ ಖಾತೆ ತೆರೆಯಲಾಗುತ್ತಿದೆ. ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.
6
+ ‘ಮೇ 6ರಿಂದ ಮೇ 29ರವರೆಗೆ ಬೆಂಗಳೂರಿನ ಜಿಪಿಒದಲ್ಲಿ 8,604 ಖಾತೆಗಳನ್ನು ತೆರೆಯಲಾಗಿದೆ. ಇದಕ್ಕಾಗಿ ವಿಶೇಷವಾಗಿ 15 ಕೌಂಟರ್‌ಗಳನ್ನು ತೆರೆಯಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
7
+ ‘ನಗರದ ಯಾವುದೇ ಅಂಚೆ ಕಚೇರಿಗೆ ಹೋದರು ಐಪಿಪಿಬಿ ಖಾತೆಯನ್ನು ತೆರೆಯುವ ಅವಕಾಶವಿದೆ. ಆದ್ದರಿಂದ, ಮಹಿಳೆಯರು ತಮ್ಮ ಅಕ್ಕ–ಪಕ್ಕದ ಅಂಚೆ ���ಚೇರಿಗಳಲ್ಲೇ ಈ ಖಾತೆಗಳನ್ನು ಮಾಡಿಸಿಕೊಳ್ಳಬೇಕು’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
8
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಇರುವುದಾದರೆ ಸರಿಯಾಗಿ ಇರಿ, ಇಲ್ಲ ಹೊರಡಿ'; ಶಾಸಕ ಹೆಬ್ಬಾರಗೆ ಕುಟುಕಿದ ರೂಪಾಲಿ.txt ADDED
@@ -0,0 +1,4 @@
 
 
 
 
 
1
+ ಯಲ್ಲಾಪುರ: 'ಬೇಕಾದಾಗ ಬರುವುದು, ಬೇಡ ಅನಿಸಿದಾಗ ಬಿಟ್ಟುಕೊಂಡು ಹೋಗುವವರನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಸರಿಯಾಗಿ ಇರುವವರು ಇರಲಿ. ಇಲ್ಲಾ ಅಂದರೆ ಹೊರಡಲಿ' ಎನ್ನುವ ಮೂಲಕ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಪರೋಕ್ಷವಾಗಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಕುಟುಕಿದ್ದಾರೆ.
2
+ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಬುಧವಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
3
+ 'ಪಕ್ಷ ಅವರಿಗೆ ಏನೆಲ್ಲ ಕೊಟ್ಟಿದೆ. ಬೇಸರವಿದ್ದರೆ ಪಕ್ಷದ ವೇದಿಕೆಯಲ್ಲಿ ಮಾತಾಡಲಿ' ಎಂದ ಅವರು, 'ಬಿಜೆಪಿಯ ಒಬ್ಬ ಶಾಸಕರು ಇಲ್ಲಿ ಇಲ್ಲ. ಕಾಂಗ್ರೆಸ್‌ಗೆ ಹೋಗುತ್ತಾರೆ. ಎನ್ನಲಾಗುತ್ತಿದೆ. ಅವರ ಹೆಸರು ಹೇಳುವುದನ್ನು ಬಿಟ್ಟುಬಿಡಿ' ಎಂದರು.
4
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಗ್ಯಾರಂಟಿಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ' ಕಿಡಿ ಹಚ್ಚಿದ HDK ಹೇಳಿಕೆ.txt ADDED
@@ -0,0 +1,19 @@
 
 
 
 
 
 
 
 
 
 
 
 
 
 
 
 
 
 
 
 
1
+ ‘ಗ್ಯಾರಂಟಿಗಳಿಂದ ಹಳ್ಳಿಗಳ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ’ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಹಲವರು ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆಯರು ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ
2
+ ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ಹಾದಿ ತಪ್ಪಿದ್ದಾರೆ ಎಂದು ಕುಮಾರಣ್ಣ ಹೇಳಿಕೆ ನೀಡಿದ್ದಾರೆ. ನೀವು ದಾರಿ ತಪ್ಪಿ ಎಷ್ಟು ವರ್ಷವಾಯಿತು? ಎಲ್ಲಿ ಓಡಾಡಿಕೊಂಡಿದ್ದೀರಿ ಇನ್ನೂ ಒಂದ್ಕಡೆ ಸೇರಿಕೊಂಡಿಲ್ಲವಲ್ಲ? -ಪ್ರಕಾಶ್‌ ರಾಜ್‌ ಚಿತ್ರ ನಟ
3
+ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ದಾರಿ ತಪ್ಪಿದ್ದಾರೆ. ಹೀಗಾಗಿ ಅವರು ಉಳಿದವರೂ ದಾರಿ ತಪ್ಪಿದ್ದಾಗಿ ಹೇಳಿಕೆ ನೀಡಿದ್ದಾರೆ
4
+ -ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ
5
+ ‘ಕ್ಲಬ್‌ಗೆ ಹೋಗುವ ಮಹಿಳೆಯರಿಗೆ ‘ಗ್ಯಾರಂಟಿ’ ಯೋಜನೆಗಳನ್ನು ನೀಡುತ್ತಿಲ್ಲ. ದುಡಿಯುವ ಮಹಿಳೆಯರಿಗೆ ನೀಡುತ್ತಿದ್ದೇವೆ. ದುಡಿಯುವ ವರ್ಗದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದಿರುವುದು ಖಂಡನೀಯ.
6
+ -ಕೃಷ್ಣ ಬೈರೇಗೌಡ ಕಂದಾಯ ಸಚಿವ
7
+ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲರಾಗುವುದನ್ನು ಕಂಡು ಸಹಿಸಿಕೊಳ್ಳಲಾಗದ ಎಚ್‌.ಡಿ. ಕುಮಾರಸ್ವಾಮಿ ಹಳ್ಳಿಯ ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ
8
+ -ರಣದೀಪ್‌ ಸಿಂಗ್‌ ಸುರ್ಜೇವಾಲಾ ಕಾಂಗ್ರೆಸ್‌ ಉಸ್ತುವಾರಿ
9
+ ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ಬೇರೆ ಬೇರೆ ಅರ್ಥಗಳಲ್ಲಿ ಉಲ್ಲೇಖಿಸಿ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಕ್ಷಮೆಯಾಚಿಸುವ ಮೂಲಕ ಘನತೆಯನ್ನು ಉಳಿಸಿಕೊಳ್ಳಬೇಕು
10
+ -ಮುಖ್ಯಮಂತ್ರಿ ಚಂದ್ರು ರಾಜ್ಯಾಧ್ಯಕ್ಷ ಆಮ್ ಆದ್ಮಿ ಪಾರ್ಟಿ
11
+ ಹೆಣ್ಣುಮಕ್ಕಳ ಕುರಿತ ಮನಃಸ್ಥಿತಿ ಬಯಲಾಗಿದೆ: ಸಿದ್ದರಾಮಯ್ಯ
12
+ ಮಡಿಕೇರಿ: ‘ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಿಕ್ಕು ತಪ್ಪಿದ್ದಾರೆ ಎನ್ನುವ ಮೂಲಕ ಎಚ್‌.ಡಿ. ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳ ಬಗ್ಗೆ ಅವರಿಗಿರುವ ಭಾವನೆಯನ್ನು ಹೊರ ಹಾಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ‘ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ? ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಮನಃಸ್ಥಿತಿ ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಭಾವನೆ ಈಗಲಾದರೂ ಅರ್ಥವಾಯಿತಾ?  ಆ ರೀತಿ ಮಾತನಾಡಿದರೆ ಜನರು ಸಹಿಸಿಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು. ದಂಗೆ ಏಳಬಹುದು: ‘ಪ್ರಜಾಧ್ವನ�� –2’ ಸಮಾವೇಶದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ನನಗೆ ಕುಮಾರಸ್ವಾಮಿಯವರ ಕ್ಷಮೆ ಬೇಕಿಲ್ಲ. ಇಡೀ ಮನುಕುಲಕ್ಕೆ ಅಪಮಾನ ಮಾಡಿದ ಅವರನ್ನು ತಮ್ಮ ಜೊತೆಗೆ ಸೇರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸ್ಮೃತಿ ಇರಾನಿ ನಿರ್ಮಲಾ ಸೀತಾರಾಮನ್ ಖುದ್ದು ಹೇಳಿಕೆ ನೀಡಬೇಕು’ ಎಂದು ಒತ್ತಾಯಿಸಿದರು. ‘ಕುಮಾರಸ್ವಾಮಿ ಹೇಳಿಕೆ ವಿರೋಧಿಸಿ ಹೆಣ್ಣುಮಕ್ಕಳು ದಂಗೆ ಏಳುವ ಪರಿಸ್ಥಿತಿ ಬರಬಹುದು. ನಾನು ಹೋರಾಟವನ್ನು ತಡೆಯುವುದಿಲ್ಲ. ಆದರೆ ಹೋರಾಟ ಗೌರವಯುತವಾಗಿರಬೇಕು’ ಎಂದು ಹೇಳಿದರು.
13
+ ಹತಾಶೆಯಿಂದ ಕಾಂಗ್ರೆಸ್‌ ಹೇಳಿಕೆ ತಿರುಚಿದೆ ಎಚ್‌ಡಿಕೆ
14
+ ಬೆಂಗಳೂರು: ‘ಗ್ಯಾರಂಟಿಗಳ ಹೆಸರಿನಲ್ಲಿ ಮಹಿಳೆಯರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ನಾನು ಹೇಳಿದ್ದೆ. ಆದರೆ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್‌ ಪಕ್ಷದವರು ಅದನ್ನು ತಿರುಚಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ದೂರಿದರು. ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು ‘ಮಹಿಳೆಯರನ್ನು ಅವಮಾನಿಸುವಂತಹ ಮಾತನ್ನು ನಾನು ಹೇಳಿಯೇ ಇಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಮುಗ್ಧ ಜನರು ಮಹಿಳೆಯರನ್ನು ದಾರಿ ತಪ್ಪಿಸಲಾಗುತ್ತಿದೆ. ಎಚ್ಚರಿಕೆಯಿಂದ ಇರಿ ಎಂಬುದು ನನ್ನ ಮಾತು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಅದಕ್ಕಾಗಿ ನನ್ನ ಹೇಳಿಕೆಯನ್ನು ತಿರುಚಿ ಲಾಭ ಪಡೆಯಲು ಹೊರಟಿದ್ದಾರೆ’ ಎಂದರು. ‘ನಾನಾಗಲಿ ನನ್ನ ಕುಟುಂಬವಾಗಲಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಡೆದುಕೊಳ್ಳುವುದೂ ಇಲ್ಲ. ಕಷ್ಟ ಹೇಳಿಕೊಂಡು ಬರುವ ಮಹಿಳೆಯರಿಗೆ ನೆರವಾಗಿದ್ದೇನೆ. ಅಧಿಕಾರದಲ್ಲಿದ್ದಾಗ ಮಹಿಳೆಯರ ಪರವಾದ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ’ ಎಂದು ಹೇಳಿದರು. ‘ಮಹಿಳೆಯರ ಕೂಗಿಗೆ ಸ್ಪಂದಿಸಿ ಸಾರಾಯಿ ಲಾಟರಿ ನಿಷೇಧಿಸಿದ್ದೇನೆ. ಇದು ಮಹಿಳೆಯರಿಗೆ ನಾನು ನೀಡಿದ ಗೌರವ. ಯಾವತ್ತೂ ಮಹಿಳೆಯರಿಗೆ ಅವಮಾನ ಆಗುವಂತೆ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದೇ ತಪ್ಪಾಗಿ ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ತಪ್ಪು ಹೊರಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.
15
+ ಎಚ್‌ಡಿಕೆ ವಿರುದ್ಧ ಗೋಬ್ಯಾಕ್‌ ಚಳವಳಿ
16
+ ಮಂಡ್ಯ: ‘ಜೆಡಿಎಸ್‌– ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್‌ ಮಹಿಳಾ ಘಟಕದ ಕಾರ್ಯಕರ್ತೆಯರು ನಗರದ ಜೆ.ಸಿ.ವೃತ್ತದಲ್ಲಿ ಭಾನುವಾರ ‘ಗೋಬ್ಯಾಕ್‌ ಕುಮಾರಸ್ವಾಮಿ’ ಚಳವಳಿ ನಡೆಸಿದರು. ‘ಮಹಿಳೆಯರ ವಿರುದ್ಧ ಮಾತನಾಡಿರುವ ಅವರು ಕ್ಷೇತ್ರಕ್ಕೆ ಕಾಲಿಡಬಾರದು’ ಎಂದು ಎಚ್ಚರಿಕೆ ನೀಡಿದರು. ‘ಹಿಂದೆಯೂ ಅವರು ಹಲವು ಬಾರಿ ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಸುಮಲತಾ ವಿರುದ್ಧ ಕೆಟ್ಟದಾಗಿ ಮಾತನಾಡಿದ ಕಾರಣದಿಂದ ಅವರ ಪುತ್ರ ಸೋಲಬೇಕಾಯಿತು. ಬೆಳಗಾವಿಯ ರೈತ ಮಹಿಳೆಯನ್ನು ‘ಇಷ್ಟು ದಿನ ಎಲ್ಲಿ ಮಲಗಿದ್ದೆಯಮ್ಮ’ ಎಂದು ಪ್ರಶ್ನಿಸಿದ್ದರು. ಇದು ಅವರ ಮನಃಸ್ಥಿತಿಯನ್ನು ತೋರಿಸುತ್ತದೆ. ಕೂಡಲೇ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.
17
+ ಜನವಾದಿ ಮಹಿಳಾ ಸಂಘಟನೆ ಆಕ್ರೋಶ
18
+ ‘ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂದು ಮಾಜಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ. ‘ಚುನಾವಣೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಮಾತನಾಡುವ ಭರಾಟೆಯಲ್ಲಿ ನಾಲಿಗೆ ಹರಿಬಿಟ್ಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಹಿಳೆಯರ ಕುರಿತು ಕನಿಷ್ಠ ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು ರಾಜ್ಯದ ಮಹಿಳೆಯರಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು’ ಎಂದು ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
19
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಗ್ಯಾರಂಟಿ’ಗೆ ₹11 ಸಾವಿರ ಕೋಟಿ ಅನುದಾನ ವಾಪಸ್‌ಗೆ ಪಟ್ಟು.txt ADDED
@@ -0,0 +1,8 @@
 
 
 
 
 
 
 
 
 
1
+ ಬೆಂಗಳೂರು: ಪರಿಶಿಷ್ಟ ಜಾತಿ  ಹಾಗೂ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಇರುವ ವಿಶೇಷ ಘಟಕ ಯೋಜನೆ ಅನುದಾನದಲ್ಲಿ (ಎಸ್‌ಸಿಎಸ್‌ಪಿ–ಟಿಎಸ್‌ಪಿ) ₹11 ಸಾವಿರ ಕೋಟಿಯನ್ನು ಕಳೆದ ವರ್ಷ ಐದು ಗ್ಯಾರಂಟಿಗಳ ಜಾರಿಗೆ ಬಳಕೆ ಮಾಡಿಕೊಳ್ಳಲಾಗಿದ್ದು, ಆ ಅನುದಾನವನ್ನು ವಾಪಸ್‌ ನೀಡುವಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
2
+ ಮಾದಿಗ ದಂಡೋರ ಸಮಿತಿ ರಾಜ್ಯ ಅಧ್ಯಕ್ಷ ಪಾವಗಡ ಶ್ರೀರಾಮ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಒಕ್ಕೂಟದ ಸಭೆಯಲ್ಲಿ ರಾಜ್ಯದಲ್ಲಿ ನಿರಂತರ ಹೋರಾಟ, ಧರಣಿ ನಡೆಸುವ ನಿರ್ಣಯವನ್ನೂ ಅಂಗೀಕರಿಸಲಾಯಿತು.
3
+ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಭಾಗಗಳ ಹೋರಾಟಗಾರರು, ‘ತಕ್ಷಣವೇ ಅನುದಾನ ವಾಪಸ್ ನೀಡದಿದ್ದರೆ, 1 ಲಕ್ಷ ಮಂದಿ ಸೇರಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ‘ವಿಶೇಷ ಘಟಕ ಯೋಜನೆಗೆ ಮೀಸಲಿಟ್ಟ ಹಣದ ದುರುಪಯೋಗ ಹೆಚ್ಚಾಗಿದೆ. ನಿಗದಿತ ಉದ್ದೇಶಕ್ಕೆ ಹಣ ವಿನಿಯೋಗಿಸದ ಅಧಿಕಾರಿಗಳ ವಿರುದ್ಧ ಕ್ರಮವನ್ನೂ ತೆಗೆದುಕೊಂಡಿಲ್ಲ’ ಎಂದು ದೂರಿದರು.
4
+ ಸಭೆ ಉದ್ಘಾಟಿಸಿದ ಶ್ರೀರಾಮ್‌ ಮಾತನಾಡಿ, ‘2024–25ನೇ ಸಾಲಿನ ಬಜೆಟ್‌ ಮಂಡಿಸಲಾಗಿದ್ದು ಈ ಬಾರಿಯೂ ಎಸ್‌.ಸಿ/ಎಸ್‌.ಟಿ ಸಮುದಾಯದ ವಿಶೇಷ ಘಟಕ ಯೋಜನೆ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಸಂಚು ನಡೆದಿದೆಯೇ ಎಂಬ ಆತಂಕ ಮೂಡಿಸಿದೆ’ ಎಂದು ಹೇಳಿದರು.
5
+ ‘ಸಮುದಾಯಕ್ಕೆ ಅನ್ಯಾಯವಾಗಿದ್ದರೂ ಎಸ್‌ಸಿ, ಎಸ್‌ಟಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ ಯಾವುದೇ ಶಾಸಕರೂ ಪ್ರಶ್ನೆ ಮಾಡುತ್ತಿಲ್ಲ. ಸಚಿವ ಸಂಪುಟ ಸಭೆಯಲ್ಲೂ ಸಮುದಾಯದ ಪರ ಮಾತನಾಡುತ್ತಿಲ್ಲ. ಸಾಮಾಜಿಕ ನ್ಯಾಯ ಕಲ್ಪಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ದ್ರೋಹ ಎಸಗುತ್ತಿದೆ’ ಎಂದು ಹೇಳಿದರು.‌
6
+ ಆರ್‌ಪಿಐ ರಾಜ್ಯ ಮುಖಂಡ ಜಿ.ಸಿ.ವೆಂಕಟರಮಣಪ್ಪ ಮಾತನಾಡಿ, ‘ದುಂಡು ಮೇಜಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ವಿಧಾನಸೌಧಕ್ಕೆ ತಲುಪಬೇಕು. ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿದರೆ ಮಾತ್ರ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯ’ ಎಂದು ಹೇಳಿದರು.
7
+ ಮೀಸಲು ಕ್ಷೇತ್ರದಿಂದ ಗೆದ್ದ ಶಾಸಕರು ಸಮುದಾಯದ ಹಿತವನ್ನು ರಕ್ಷಿಸಲು ಮುಂದಾಗದಿದ್ದರೆ ಅವರ ವಿರುದ್ಧ ಹೋರಾಟ ನಡೆಸುತ್ತೇವೆ –ಪಾವಗಡ ಶ್ರೀರಾಮ್‌ ರಾಜ್ಯ ಅಧ್ಯಕ್ಷ ಮಾದಿಗ ದಂಡೋರ ಸಮಿತಿ
8
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಡಿ.ಕೆ.ಸುರೇಶ ಅವರನ್ನು ಕೊಲ್ಲಿ' ಎಂಬ ಈಶ್ವರಪ್ಪ ಹೇಳಿಕೆಗೆ ಮುತಾಲಿಕ್ ಸಮರ್ಥನೆ.txt ADDED
@@ -0,0 +1,4 @@
 
 
 
 
 
1
+ ಹುಬ್ಬಳ್ಳಿ: ದೇಶ ವಿಭಜಿಸುವ ಬಗ್ಗೆ ಹೇಳಿಕೆ ನೀಡಿದ ಸಂಸದ ಡಿ.ಕೆ. ಸುರೇಶ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಈಶ್ವರಪ್ಪ ಹೇಳಿರುವುದರಲ್ಲಿ ತಪ್ಪಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸಮರ್ಥಿಸಿಕೊಂಡರು.
2
+ ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಡಿ.ಕೆ. ಸುರೇಶ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದು, ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.
3
+ ದೇಶ ಒಡೆಯೋ ಮಾತು ಬರಬಾರದು. ದೇಶ ಒಡೆಯೋ ಮಾತು ಸರಿ ಅಲ್ಲ. ಇದು ದೇಶದ್ರೋಹಿ ಕೃತ್ಯ ಎಂದು ಹೇಳಿದರು.
4
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಡಿಕೆಶಿ ಗೂಂಡಾ..ED ಅರ್ಧ ಸೆಟ್ಲ್‌ಮೆಂಟ್ ಮಾಡಿದೆ, ಇನ್ನರ್ಧ ಮಾಡಲಿದೆ'– ಈಶ್ವರಪ್ಪ.txt ADDED
@@ -0,0 +1,6 @@
 
 
 
 
 
 
 
1
+ ಮೈಸೂರು: ‘ನನಗೆ ಸೆಟ್ಲ್‌ಮೆಂಟ್ ಮಾಡುತ್ತೇನೆ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಬ್ಬ ಗೂಂಡಾ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡದ್ದಾರೆ.
2
+ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಸೆಟ್ಲ್‌ಮೆಂಟ್‌ ಮಾಡುತ್ತೇನೆ ಎಂದರೆ ಏನರ್ಥ? ಸಿನಿಮಾದಲ್ಲಿ ಹೇಳುವಂತೆ ಡೈಲಾಗ್‌ ಹೇಳಿದ್ದಾರೆ’ ಎಂದರು.
3
+ ‘ನಾನು ಡಿಸಿಎಂ ಸಹೋದರ ಮತ್ತು ಸಂಸದ ಎಂಬ ದುರಹಂಕಾರದಲ್ಲಿ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದರು. ಕೂಡಲೇ ಅವರಿಗೆ ನೋಟಿಸ್ ನೀಡಿ ಬಂಧಿಸಬೇಕಿತ್ತು. ಆದರೆ, ನನಗೆ ನೋಟಿಸ್ ಕೊಟ್ಟಿದ್ದಾರೆ. ಶಿವಕುಮಾರ್‌ ಅವರು ನನ್ನ ವಿರುದ್ಧ ಗೂಂಡಾಗಳು ಬಳಸುವಂತಹ ಪದ ಪ್ರಯೋಗಿಸಿದ್ದಾರೆ. ಅರ್ಧ ಸೆಟ್ಲ್‌ಮೆಂಟ್ ಮಾಡಿದ್ದೇನೆ, ಪೂರ್ಣ ಮಾಡುತ್ತೇನೆ ಎಂದಿದ್ದಾರೆ’ ಎಂದರು.
4
+ ‘ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರಿದ್ದರೆ ನಾನು ರಾಜಕಾರಣದಲ್ಲಿ ಇರುತ್ತಿರಲಿಲ್ಲ. ಅವರಿಗೆ ಅರ್ಧ ಸೆಟ್ಲ್‌ಮೆಂಟ್ ಈಗಾಗಲೇ ಆಗಿದ್ದು, ಜಾರಿ ನಿರ್ದೇಶನಾಲಯ ಮಾಡಿದೆ. ಇನ್ನರ್ಧ ಶೀಘ್ರದಲ್ಲೇ ಆಗುತ್ತದೆ. ಜಾಮೀನಿನ ಮೇಲೆ ಹೊರಗಿರುವ ಅವರು, ಮತ್ತೆ ಜೈಲಿಗೆ ಹೋಗೇ ಹೋಗುತ್ತಾರೆ. ಆಗ ಪೂರ್ಣ ಸೆಟ್ಲ್‌ಮೆಂಟ್ ಆಗುತ್ತದೆ’ ಎಂದು ಗುಡುಗಿದರು.
5
+ ‘ರಾಜ್ಯ ಕಾಂಗ್ರೆಸ್‌ ಸರ್ಕಾರ ಬದುಕಿಲ್ಲ’ ಎಂದು ಟೀಕಿಸಿದರು.
6
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ನನ್ನ ಮಣ್ಣು ನನ್ನ ದೇಶ' ಕಾರ್ಯಕ್ರಮಕ್ಕೆ ತೆರಳಿದ ರಾಜ್ಯ ತಂಡ.txt ADDED
@@ -0,0 +1,5 @@
 
 
 
 
 
 
1
+ ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮಕ್ಕೆ ಬಿಜೆಪಿ ಪ್ರತಿನಿಧಿಗಳು ನಗರದ ಬೈಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಭಾನುವಾರ ಸಂಜೆ ತೆರಳಿದರು.
2
+ ರಾಜ್ಯದ ವಿವಿಧ ಪುಣ್ಯಕ್ಷೇತ್ರಗಳೂ ಸೇರಿ ವಿವಿಧೆಡೆಯಿಂದ ಸಂಗ್ರಹಿಸಿರುವ ಮಣ್ಣಿನ ಅಮೃತ ಕಲಶಗಳೊಂದಿಗೆ ಪ್ರತಿನಿಧಿಗಳು ತೆರಳಿದರು.
3
+ ಕೇಂದ್ರದ ಸಚಿವ ರಾಜೀವ್ ಚಂದ್ರಶೇಖರ್‌, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ರೈತಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭಾಗವಹಿಸಿ ದೆಹಲಿಗೆ ತೆರಳುವ ಪ್ರತಿನಿಧಿಗಳಿಗೆ ಶುಭ ಹಾರೈಸಿದರು. 
4
+ ಪ್ರತಿನಿಧಿಗಳು, ಹುತಾತ್ಮರ ಗೌರವಾರ್ಥ ದೆಹಲಿಯ ಕರ್ತವ್ಯಪಥದಲ್ಲಿ ನಿರ್ಮಾಣವಾಗುವ ಅಮೃತ ಉದ್ಯಾನದ ಸ್ಥಳಕ್ಕೆ ನಮ್ಮ ರಾಜ್ಯದಿಂದ ಸಂಗ್ರಹಿಸಿದ ಮಣ್ಣಿನ ಅಮೃತ ಕಳಶವನ್ನು ಇದೇ 30 ರಂದು ‌ತಲುಪಿಸುವರು. ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ  ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ನಡೆದಿದ್ದು, ಪ್ರತಿ ಮನೆ, ಧಾರ್ಮಿಕ ಕೇಂದ್ರಗಳು, ವೀರಯೋಧರ ಮನೆ, ಸ್ವಾತಂತ್ರ್ಯ ಹೋರಾಟಗಾರರ ಮನೆ, ಮಹಾಪುರುಷರ ಸ್ಮಾರಕ ಸ್ಥಳ ಸಾಧು ಸಂತರ ಮಠಗಳಿಗೆ ಪುಣ್ಯ ಮಣ್ಣನ್ನು ಸಂಗ್ರಹಿಸಲಾಗಿತ್ತು. ಅಮೃತವನದಲ್ಲಿ ಮಣ್ಣನ್ನು ವಿಲೀನಗೊಳಿಸಲಾಗುವುದು ಎಂದು ಮುಖಂಡರು ತಿಳಿಸಿದರು. ದೆಹಲಿಯಲ್ಲಿ ಇದೇ 31 ರಂದು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಲಿದ್ದಾರೆ. 
5
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ನಿಸಾರ್‌' ಉಪಗ್ರಹ ಮುಂದಿನ ವರ್ಷ ಉಡಾವಣೆ.txt ADDED
@@ -0,0 +1,7 @@
 
 
 
 
 
 
 
 
1
+ ಬೆಂಗಳೂರು: ನಾಸಾ–ಇಸ್ರೊ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸಿಂಥೆಟಿಕ್‌ ಅಪರ್ಚರ್‌ ರೆಡಾರ್‌ (ನಿಸಾರ್) ಉಪಗ್ರಹವನ್ನು 2024 ರಲ್ಲಿ ಉಡಾವಣೆ ಮಾಡಲಾಗುವುದು ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.
2
+ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ನಾಸಾದ ನಿಸಾರ್ ಯೋಜನೆಯ ವ್ಯವಸ್ಥಾಪಕ ಫಿಲ್‌ ಬರೆಲಾ ಅವರು, ಮುಂದಿನ ವರ್ಷದ ಮೊದಲ ಮೂರು ತಿಂಗಳೊಳಗೆ ಉಪಗ್ರಹದ ಉಡಾವಣೆ ಸಾಧ್ಯ. ಜನವರಿಗೆ ಮೊದಲೇ ಉಡಾವಣೆಗೊಳ್ಳುವ ಸಾಧ್ಯತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಕಂಪನವೂ ಸೇರಿ ಕೆಲವು ಪ್ರಮುಖ ಪರೀಕ್ಷೆಗಳು ಬಾಕಿ ಉಳಿದಿವೆ ಎಂದು ಇಸ್ರೊ ಹೇಳಿದೆ ಎಂದರು.
3
+ ಜಿಎಸ್‌ಎಲ್‌ವಿ ಮಾರ್ಕ್‌–2 ರಾಕೆಟ್‌ ಮೂಲಕ ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿದೆ. ಈ ಉಪಗ್ರಹವು ಮೂರು ವರ್ಷ ಕಾರ್ಯ ನಿರ್ವಹಿಸಲಿದ್ದು, ಭೂಭಾಗ, ಹಿಮ ಆವೃತ ಪ್ರದೇಶಗಳ ಮೇಲ್ಮೈಯ ಬದಲಾವಣೆಗಳನ್ನು ಪ್ರತಿ 12 ದಿನಗಳಿಗೊಮ್ಮೆ ಸಮೀಕ್ಷೆ ಮಾಡಲಿದೆ. ಉಪಗ್ರಹ ಕಾರ್ಯಾರಂಭ ಮಾಡಿದ 90 ದಿನಗಳ ಬಳಿಕ ಸಮೀಕ್ಷೆಯನ್ನು ಆರಂಭಿಸುತ್ತದೆ.
4
+ ‘ಬಾಕಿ ಉಳಿದಿರುವ ಪ್ರಮುಖ ಪರೀಕ್ಷೆಗಳ ಪೈಕಿ ಕಂಪನ ಪರೀಕ್ಷೆ ಈಗ ನಡೆದಿದೆ. ಕಾರ್ಯಕ್ಷಮತೆಯ ಪರೀಕ್ಷೆಗಳ ಸರಣಿ ನಡೆಸಬೇಕಾಗಿದೆ. ಬ್ಯಾಟರಿ ಮತ್ತು ಸಿಮ್ಯುಲೇಷನ್‌ ಪರೀಕ್ಷೆ ನಡೆಸಲಾಗಿದ್ದು, ಈ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುವ ಕ್ಷಮತೆ ಸಾಧಿಸಿದೆ’ ಎಂದು ಬರೇಲಾ ತಿಳಿಸಿದ್ದಾರೆ.
5
+ ನಾಸಾದ ಜೆಟ್‌ ಪ್ರೊಪೆಲ್ಷನ್‌ ಲ್ಯಾಬೊರೇಟರಿಯ ನಿರ್ದೇಶಕಿ ಡಾ.ಲೂರಿ ಲೆಶಿನ್‌ ಮಾತನಾಡಿ, ನಿಸಾರ್‌ ಯೋಜನೆಯು ಈ ಸರಣಿಯಲ್ಲಿ ಈ ಹಿಂದೆ ಹಾರಿ ಬಿಟ್ಟ ಉಪಗ್ರಹಗಳಿಗಿಂತಲೂ ಉತ್ತಮವಾದುದು. ಈ ಸಾಧನವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಭೂಮಿಯಲ್ಲಿ ಆಗುವ ಬದಲಾವಣೆಗಳನ್ನು ಬಹು ವರ್ಷಗಳ ಕಾಲಮಾಪಕದಲ್ಲಿ ಗಮನಿಸಬಹುದು ಎಂದು ಹೇಳಿದರು.
6
+ ನಿಸಾರ್‌ ಉಪಗ್ರಹ ಭೂಮಿಯ ಕೆಳಹಂತದ ಕಕ್ಷೆಯಲ್ಲಿ ನೆಲೆ ನಿಂತು ಭೂಮಿಯನ್ನು ಗಮನಿಸುತ್ತದೆ. ಇಡೀ ಭೂಮಿಯ ನಕ್ಷೆಯನ್ನು 12 ದಿನಗಳಲ್ಲಿ ರೂಪಿಸಿ, ಭೂ ವ್ಯವಸ್ಥೆ, ಹಿಮ ಪ್ರದೇಶ, ಸಸ್ಯ ಸಂಪತ್ತು, ಸಮುದ್ರದ ನೀರಿನ ಮಟ್ಟ ಏರಿಕೆ, ಅಂತರ್ಜಲ, ಎಲ್ಲ ಬಗೆಯ ನೈಸರ್ಗಿಕ ದುರಂತಗಳ ನಿಯಮಿತ ದತ್ತಾಂಶವನ್ನು ಪ್ರಾದೇಶಿಕವಾಗಿ ಮತ್ತು ತಾತ್ಕಾಲಿಕವಾಗಿ ಒದಗಿಸುವ ಕಾರ್ಯ ನಿರ್ವಹಿಸುತ್ತದೆ.
7
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ನೀಲಗಿರಿ' ಕುರಿತ ಸಂವಾದ, ಛಾಯಾಚಿತ್ರ ಪ್ರದರ್ಶನ ನೀಲಿ ಬೆಟ್ಟಗಳನ್ನು ನೋಡಬನ್ನಿ!.txt ADDED
@@ -0,0 +1,7 @@
 
 
 
 
 
 
 
 
1
+ ಬೆಂಗಳೂರು: ನೀಲಗಿರಿಯ ನಿಸರ್ಗದ ಮಡಿಲಲ್ಲಿ ಪವಡಿಸಿರುವ ಊಟಿಗೆ ನೀವು ಹೋಗಿ ಬಂದಿರಬಹುದು. ಆದರೆ, ಅಲ್ಲಿಯ ನೈಜ ಸೌಂದರ್ಯವನ್ನು ನೀವು ಆಸ್ವಾದಿಸಿದ್ದೀರಾ? ಈ ಗಿರಿಶ್ರೇಣಿಯ ಮೂಲನಿವಾಸಿಗಳ ಕುರಿತು ನಿಮಗೆ ಗೊತ್ತಾ? ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಗಿರಿಧಾಮದ ಚರಿತ್ರೆಯನ್ನು ತಿಳಿದುಕೊಂಡಿದ್ದೀರಾ? ಹೋಗಲಿ, ನೀಲಗಿರಿಯ ಜೇನ್ನೊಣಗಳನ್ನು ಕಂಡಿದ್ದೀರಾ?
2
+ ಪಶ್ಚಿಮಘಟ್ಟ ಶ್ರೇಣಿಯ ‘ನೀಲಗಿರಿ’ ಕುರಿತ ನಿಮ್ಮೆಲ್ಲ ಕುತೂಹಲವನ್ನು ತಣಿಸುವಂತಹ ಕಾರ್ಯಕ್ರಮವನ್ನು ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಫೆ. 23ರಿಂದ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ‘ನೀಲಗಿರಿಯ ನೀಲಿ ಬೆಟ್ಟಗಳು’ ನಿಮಗೆ ಬೆಂಗಳೂರಿನಲ್ಲಿಯೇ ಗೋಚರಿಸಲಿವೆ!
3
+ ತೋಡರು, ಶೋಲಾ ನಾಯಕರು, ಇರುಂಬರು, ಕುರುಬರು, ಕೋಟ ಮತ್ತು ಕಣಿ ಜನಾಂಗದವರ ಬೀಡಾಗಿದ್ದ ನೀಲಗಿರಿಯಲ್ಲಿ ಊಟಿ ನಗರವನ್ನು ಅಷ್ಟು ದೊಡ್ಡದಾಗಿ ಬೆಳೆಸಿದವರು ಮದ್ರಾಸ್ ಪ್ರಾಂತ್ಯದ ಅಂದಿನ ಗವರ್ನರ್ ಆಗಿದ್ದ ಜಾನ್ ಸುಲಿವನ್. ಸಮುದ್ರ ಮಟ್ಟದಿಂದ ಸುಮಾರು 7,350 ಅಡಿ ಎತ್ತರದಲ್ಲಿರುವ ಈ ಪ್ರದೇಶ ಅರ್ಧ ಚಂದ್ರಕಾರದಲ್ಲಿದ್ದು, ಇಲ್ಲಿ ಸುಲಿವನ್ 1823ರಲ್ಲಿ ಹಿಲ್‌ ಸ್ಟೇಷನ್‌ (ಗಿರಿಧಾಮ) ಸ್ಥಾಪಿಸಿದರು.
4
+ ಊಟಿಯ ಅಂದವನ್ನು ಹೆಚ್ಚಿಸಿದ ಸೇಂಟ್ ಸ್ಟೀಫನ್ ಚರ್ಚ್, ಹೋಲಿ ಟ್ರಿನಿಟಿ ಚರ್ಚ್, ಸೇಕ್ರೆಡ್ ಹಾರ್ಟ್ ಚರ್ಚ್, ಸೇಂಟ್ ಥೆರೇಸಾ ಚರ್ಚ್, ಸೇಂಟ್ ಮೇರಿಸ್ ಚರ್ಚ್‌ ಕಟ್ಟಿದರು. ಇಂಗ್ಲಿಷ್ ಮಿಷನರಿಗಳನ್ನು ಸ್ಥಾಪಿಸಿ ಸ್ಥಳೀಯರಿಗೂ ಒಳ್ಳೆಯ ವಿದ್ಯಾಭ್ಯಾಸ ಸಿಗುವಂತೆ ನೋಡಿಕೊಂಡರು. ಸರ್‌ ಫೆಡ್ರಿಕ್‌ ಪ್ರೈಸ್‌, ನೀಲಗಿರಿಯ ಈ ‘ಕಂದ’ನ ಚರಿತ್ರೆಯನ್ನು ಸೊಗಸಾಗಿ ನಿರೂಪಿಸಿದ್ದಾರೆ.
5
+ ಇಂತಹ ನೀಲಗಿರಿಯ ನೀಲಿ ಬೆಟ್ಟಗಳ ಕಥೆಗಳನ್ನು ಹೇಳುವ ಕಾರ್ಯಕ್ರಮ ಫೆ. 23ರಂದು ಸಂಜೆ 7ಕ್ಕೆ ನಡೆಯಲಿದೆ. ಪ್ರೊ. ಶಾರದಾ ಶ್ರೀನಿವಾಸನ್‌, ಅಲ್ಲಿನ ಸಂಸ್ಕೃತಿ, ಚಿನ್ನಾಭರಣ, ಲೋಹದ ಪಾತ್ರೆ, ಹೂವು ಮತ್ತು ಸಸ್ಯಗಳ ಲೋಕವನ್ನು ಕೇಳುಗರ ಮುಂದೆ ತೆರೆದಿಡಲಿದ್ದಾರೆ. ಅಲ್ಲಿಯೇ ಕ್ಷೇತ್ರಕಾರ್ಯ ಮಾಡಿರುವ ತರುಣ್‌ ಛಬ್ರಾ ಅವರು ಅಲ್ಲಿಯ ಮೂಲನಿವಾಸಿಗಳ ಕುರಿತು ಮಾತನಾಡಲಿದ್ದಾರೆ. ನೀಲಗಿರಿಯ ಜೇನು ಕುರುಬ ಸಮುದಾಯದ ಜಾನಕಿಯಮ್ಮ ಮತ್ತು ಪಿ.ಚಂದ್ರನ್‌ ಅವರೊಂದಿಗೆ ರಂಜನಿ ಪ್ರಸಾದ್‌ ಮತ್ತು ಫೈಸಲ್‌ ರೆಹಮಾನ್‌ ಅವರು ಸಂವಾದ ನಡೆಸಲಿದ್ದಾರೆ. ಸಮುದಾಯದ ಚಟುವಟಿಕೆಗಳು ಮತ್ತು ಜೇನು ಸಂಗ್ರಹದ ವಿಧಾನಗಳ ಮೇಲೆ ಅವರು ಬೆಳಕು ಚೆಲ್ಲಲಿದ್ದಾರೆ.
6
+ ನೀಲಗಿರಿ ಬೆಟ್ಟಗಳ ಕುರಿತು ಫೆ. 23ರಿಂದ 26ರವರೆಗೆ ಚಿತ್ರ ‍ಪ್ರದರ್ಶನವನ್ನೂ ಏರ್ಪಡಿಸಲಾಗಿದ್ದು, 300ಕ್ಕೂ ಅಧಿಕ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಈ ಚಿತ್ರಗಳು ನೀಲಗಿರಿ ಬೆಟ್ಟಗಳ ಚರಿತ್ರೆ, ಸಸ್ಯಸಿರಿ ಹಾಗೂ ಅಲ್ಲಿನ ಪ್ರಾಕೃತಿಕ ಸೌಂದರ್ಯ ಲೋಕದಲ್ಲಿ ಸುತ್ತಾಡಿಸಲಿವೆ. ವಸಾಹ��ು ಕಾಲದ ಛಾಯಾಗ್ರಾಹಕರು ತೆಗೆದ ಅತ್ಯಪೂರ್ವ ಚಿತ್ರಗಳು ಪ್ರದರ್ಶನದಲ್ಲಿ ಇರಲಿವೆ. ಇದೇ ಅವಧಿಯಲ್ಲಿ ‘ನೀಲಗಿರಿಯ ಜೋನ್ನೊಣಗಳು’ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ನೀಲಗಿರಿಯ ನಿಸರ್ಗದತ್ತವಾದ ಜೇನು, ಆ ಜೇನನ್ನು ಸಂಗ್ರಹಿಸಿ ತರುವ ಕುರುಬ ಸಮುದಾಯದ ಜಗತ್ತು ನೋಡುಗರ ಮುಂದೆ ಅನಾವರಣಗೊಳ್ಳಲಿದೆ ಎಂದು ಬಿಐಸಿ ಪ್ರಕಟಣೆ ತಿಳಿಸಿದೆ.
7
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಪ್ರಜಾವಾಣಿ' ವರದಿ ಪರಿಣಾಮ ಕೊನೆಗೂ‘ತಬರ’ನ ಜಮೀನಿಗೆ ಕೊಳವೆಬಾವಿ!.txt ADDED
@@ -0,0 +1,5 @@
 
 
 
 
 
 
1
+ ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ‘ಪದ್ಮಶ್ರೀ’ ಪುರಸ್ಕೃತ ತಮಟೆ ಕಲಾವಿದ ಮುನಿವೆಂಕಟಪ್ಪ ಅವರ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆಬಾವಿ ಕೊರೆಯಲು ಭೂಗರ್ಭ ವಿಜ್ಞಾನಿಗಳು ಭಾನುವಾರ ಸೂಕ್ತ ಜಾಗ (ಪಾಯಿಂಟ್) ಗುರುತಿಸಿದರು. 
2
+ ಆದಿ ಜಾಂಬವ ನಿಗಮ ಕಳೆದ ವರ್ಷ ಮುನಿವೆಂಕಟಪ್ಪ ಅವರಿಗೆ ಕೊಳವೆಬಾವಿ ಮಂಜೂರು ಮಾಡಿತ್ತು. ಆದರೆ ಒಂದೂವರೆ ವರ್ಷವಾದರೂ ಅವರಿಗೆ ಈ ಸೌಲಭ್ಯ ದೊರೆತಿರಲಿಲ್ಲ. ಈ ಹಿರಿಯ ಕಲಾವಿದ ನಿಗಮದ ಕಚೇರಿಗೆ ಅಲೆಯುತ್ತಲೇ ಇದ್ದರು. ಈ ಬಗ್ಗೆ ಗಂಗಾ ಕಲ್ಯಾಣಕ್ಕೆ ‘ತಬರ’ನಾದ ಕಲಾವಿದ ಎಂದು ಭಾನುವಾರ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. 
3
+ ವರದಿಯಿಂದ ಎಚ್ಚೆತ್ತುಕೊಂಡ ಆದಿ ಜಾಂಬವ ನಿಗಮದ ಅಧಿಕಾರಿಗಳು ಭಾನುವಾರ ಬೆಳಗ್ಗೆಯೇ ಮುನಿವೆಂಕಟಪ್ಪ ಅವರ ಮನೆಗೆ ಧಾವಿಸಿ ಮಾಹಿತಿ ಪಡೆದರು. ಮಧ್ಯಾಹ್ನದ ವೇಳೆಗೆ ಭೂಗರ್ಭ ವಿಜ್ಞಾನಿಗಳನ್ನು ಕರೆಯಿಸಿ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಲು ಸೂಕ್ತ ಜಾಗ  (ಪಾಯಿಂಟ್) ಗುರುತಿಸಿದರು.
4
+ ‘ಭಾನುವಾರ ರಾತ್ರಿ ಅಥವಾ ಸೋಮವಾರ ಕೊಳವೆಬಾವಿ ಕೊರೆಸಲು ಲಾರಿ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಮುನಿವೆಂಕಟಪ್ಪ ಅವರ ಪುತ್ರ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.
5
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಬಟ್ಟೆ ಬಿಚ್ಚುವಾಗ ನಗುತ್ತಿರಬೇಕು ಎಂದು ಸತಾಯಿಸುತ್ತಿದ್ದ ಪ್ರಜ್ವಲ್ ರೇವಣ್ಣ'.txt ADDED
@@ -0,0 +1,7 @@
 
 
 
 
 
 
 
 
1
+ ಬೆಂಗಳೂರು: ‘ಆಗಾಗ್ಗೆ ನನಗೆ ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ ಮಾಡಿ ಬೆದರಿಕೆ ಒಡ್ಡಿ ಬಟ್ಟೆ ಬಿಚ್ಚುವಂತೆ ಹೇಳುತ್ತಿದ್ದರು. ನಿನ್ನ ಗುಪ್ತಾಂಗ ತೋರಿಸು ಎಂದು ಒತ್ತಾಯಿಸುತ್ತಿದ್ದರು. ಈ ಸಮಯದಲ್ಲಿ ನೀನು ನಗುತ್ತಿರಬೇಕು ಎಂದು ಹೇಳಿ ಸತಾಯಿಸುತ್ತಿದ್ದರು...’
2
+ ಅತ್ಯಾಚಾರದ ಆರೋಪದಡಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಸಂತ್ರಸ್ತ ಮಹಿಳೆ ದಾಖಲಿಸಿರುವ ಮೂರನೇ ಪ್ರಕರಣದಲ್ಲಿ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ಈ ವಿವರವನ್ನು ದಾಖಲಿಸಲಾಗಿದೆ. ಹಲವಾರು ಆಘಾತಕಾರಿ ಅಂಶಗಳನ್ನು ಒಳಗೊಂಡ 1,691 ಪುಟಗಳ ಮತ್ತು 120 ಸಾಕ್ಷ್ಯಗಳ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
3
+ ಪಟ್ಟಿಯಲ್ಲಿ ಏನಿದೆ?: ‘2019–2024ರ ಅವಧಿಯಲ್ಲಿ ಪ್ರಜ್ವಲ್‌ ಲೋಕಸಭಾ ಸದಸ್ಯರಾಗಿದ್ದರು. ಆಗ ಅವರು ತಮ್ಮ ಅಜ್ಜ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಹಾಸನ ಟೌನ್‌ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹಂಚಿಕೆಯಾಗಿದ್ದ ರೇಸ್‌ ಕೋರ್ಸ್‌ ರಸ್ತೆಯಲ್ಲಿನ ಎಂ.ಪಿ. ವಸತಿ ಗೃಹವನ್ನು ತಮ್ಮ ಗೃಹ ಕಚೇರಿಯಾಗಿ ಬಳಸುತ್ತಿದ್ದರು. 2020ರ ಜನವರಿ–ಫೆಬ್ರುವರಿ ಮಧ್ಯದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಆ ಸಮಯದಲ್ಲಿ ಅವರು ನನ್ನನ್ನು ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ನನ್ನ ದೇಹದ ಎಲ್ಲ ಭಾಗಗಳನ್ನೂ ಮುಟ್ಟಿದ್ದರು. ಬಟ್ಟೆ ಬಿಚ್ಚಲು ಹೇಳಿದ್ದರು. ನಿರಾಕರಿಸಿದರೆ ನನ್ನ ಬಳಿ ಇರುವ ಗನ್‌ನಿಂದ ನಿನ್ನ ಗಂಡನನ್ನು ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿ ವಿಡಿಯೊ ರೆಕಾರ್ಡ್‌ ಮಾಡಿಕೊಂಡಿದ್ದರು...
4
+ ‘ಹೊಳೆನರಸೀಪುರದಲ್ಲಿರುವ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಅವರ ಚೆನ್ನಾಂಬಿಕ ಹೆಸರಿನ ನಿವಾಸಕ್ಕೆ 2020ರ ಒಂದು ಮಧ್ಯಾಹ್ನ 12.30ರ ಸಮಯದಲ್ಲಿ ನನ್ನನ್ನು ಕರೆಸಿಕೊಂಡಿದ್ದ ಪ್ರಜ್ವಲ್‌, ಮೂರನೇ ಮಹಡಿಯ ಕೊಠಡಿಯಲ್ಲಿ ನನ್ನ ಮೇಲೆ ಬಲಾತ್ಕಾರ ಮಾಡಿರುತ್ತಾರೆ. ಈ ಕೃತ್ಯವನ್ನು ತಮ್ಮ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿರುತ್ತಾರೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ವಿಡಿಯೊಗಳನ್ನು ಬಹಿರಂಗ ಮಾಡಿ ನಿನ್ನ ಗಂಡ ಮತ್ತು ಮಕ್ಕಳಿಗೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿರುತ್ತಾರೆ...
5
+ ‘ಪ್ರಜ್ವಲ್‌ ತಮ್ಮ ಕಾಮತೃಷೆ ತೀರಿಸಿಕೊಳ್ಳಲು ನನ್ನ ಮೇಲೆ 2023ರ ಡಿಸೆಂಬರ್‌ವರೆಗೂ ಈ ರೀತಿ ಹಲವಾರು ಬಾರಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ. ಅವರೊಬ್ಬ ಜವಾಬ್ದಾರಿಯುತ ಸಂಸದನಾಗಿ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದವರು. ಆರ್ಥಿಕವಾಗಿ ಪ್ರಾಬಲ್ಯ ಉಳ್ಳವರು. ಇಂತಹವರ ಬಳಿ ನಾನು ಕೆಲಸವೊಂದಕ್ಕೆ ಶಿಫಾರಸು ಪಡೆಯಲು ಹೋದಾಗ ನನ್ನನ್ನು ಬೆದರಿಸಿ ನನ್ನ ಇಚ್ಛೆಗೆ ವಿರುದ್ಧವಾಗಿ ಹೀಗೆಲ್ಲಾ ನಡ��ದುಕೊಂಡಿರುತ್ತಾರೆ’ ಎಂದು ತಿಳಿಸಲಾಗಿದೆ.
6
+ ‘ತನಿಖೆಯ ಕಾಲದಲ್ಲಿ ಸಂಗ್ರಹಿಸಿದ ತಾಂತ್ರಿಕ ವರದಿಗಳು, ತಜ್ಞರ ಪರೀಕ್ಷಾ ವರದಿಗಳಿಂದ ಆರೋಪಿಯು ಭಾರತೀಯ ದಂಡ ಸಂಹಿತೆ–1860ರ ಕಲಂ 376 (2) (ಎನ್‌), 506, 354, (ಎ), (1) (II) 354 (ಬಿ), 354 (ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66 (ಇ) ಅನುಸಾರ ಆರೋಪಿಯು ಅಪರಾಧ ಎಸಗಿರುವುದು ದೃಢಪಟ್ಟಿದೆ’ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.
7
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಬಲಿಜ ಸಮುದಾಯಕ್ಕೆ ಪೀಠದ ಚಿಂತನೆ'.txt ADDED
@@ -0,0 +1,8 @@
 
 
 
 
 
 
 
 
 
1
+ ಬೆಂಗಳೂರು: ದಕ್ಷಿಣ ಭಾರತದ ಬಲಿಜ ಸಮುದಾಯದ ಗುರುಪೀಠವನ್ನು ಹಂಪಿಯಲ್ಲಿ ಸ್ಥಾಪಿಸಲು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಚಿಂತನೆ ನಡೆಸಿದೆ.
2
+ ದಕ್ಷಿಣ ಭಾರತ ಬಲಿಜ ಬಂಧುಗಳ ಮಹಾಸಂಗಮ ಸಭೆ ಶನಿವಾರ ನಡೆಯಿತು. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
3
+ ‘ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಬಲಿಜ ಸಮುದಾಯದ ಮುಖಂಡರು ತಮ್ಮ ರಾಜ್ಯಗಳಲ್ಲಿ ಸಮುದಾಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಹಂಚಿಕೊಂಡರು. ದಕ್ಷಿಣ ಭಾರತದಲ್ಲಿ ಬಲಿಜ ಸಮುದಾಯವು ರಾಜಕೀಯವಾಗಿ ಅಸ್ಥಿರವಾಗಿದ್ದು, ಅವರೆಲ್ಲರನ್ನು ಒಂದುಗೂಡಿಸುವುದು ಸಭೆಯ ಮುಖ್ಯ ಉದ್ದೇಶವಾಗಿತ್ತು’ ಎಂದು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಅಧ್ಯಕ್ಷ ಮುನಿಕೃಷ್ಣ ತಿಳಿಸಿದರು.
4
+ ‘ರಾಜ್ಯದಲ್ಲಿ ಬಲಿಜ ಸಮುದಾಯಕ್ಕೆ ಪೂರ್ಣಪ್ರಮಾಣದ 2ಎ ಮೀಸಲಾತಿ ಕಲ್ಪಿಸಬೇಕು. ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯನ 108 ಅಡಿಯ ಪ್ರತಿಮೆಯನ್ನು ರಾಜ್ಯದಲ್ಲಿ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹಿಂದಿನಿಂದಲೂ ಬಲಿಜ ಸಮುದಾಯಕ್ಕೆ ರಾಜಕೀಯವಾಗಿ ಅನ್ಯಾಯ ಮಾಡಲಾಗಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುವ ಕೆಲಸ ಮಾಡಲಾಗುತ್ತಿದೆ. ಆದ್ದರಿಂದ, ಎಲ್ಲ ರಾಜಕೀಯ ಪಕ್ಷಗಳು ಬಲಿಜರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
5
+ ಸಮುದಾಯದ ಮುಖಂಡ ಲಕ್ಷ್ಮೀಶ್ರೀನಿವಾಸ್, ‘ಸ್ವಾಮಿ ವಿವೇಕಾನಂದರು, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಸೇರಿದಂತೆ ಅನೇಕ ಮಹನೀಯರು ಬಲಿಜ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಲಿಜ ಸಮುದಾಯಕ್ಕೆ ಸೇರಿದ ವ್ಯಕ್ತಿಯೇ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
6
+ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ‘ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದ 2ಎ ಮೀಸಲಾತಿ ಕಲ್ಪಿಸಬೇಕೆಂದು ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಭರವಸೆ ನೀಡಿದರು. ಖಜಾಂಚಿ ನಾಗರಾಜ ಭಾಗವಹಿಸಿದ್ದರು.
7
+ ‘22 ಪ್ರಕರಣಗಳಿಂದಾಗಿ ಶಾಸಕನಾದೆ!’ ‘ನನ್ನ ಮೇಲೆ 22 ಪ್ರಕರಣಗಳು ದಾಖಲಾಗಿರುವ ಕಾರಣ ಇಂದು ಶಾಸಕನಾಗಿದ್ದೇನೆ. 50 ಪ್ರಕರಣಗಳು ದಾಖಲಾಗಿದ್ದರೇ ಏನಾಗುತ್ತಿದ್ದೆನೊ. ನೀವೇ ಯೋಚಿಸಿ’ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ‘ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಎಲ್ಲದಕ್ಕೂ ತಯಾರಾಗಬೇಕು. ಎಷ್ಟೇ ಪ್ರಕರಣಗಳು ದಾಖಲಾದಾರೂ ಅದನ್ನು ಎದುರಿಸಬೇಕು. ಯಾವುದಕ್ಕೂ ಹೆದರದೆ ಮುಂದೆ ಸಾಗಿದರೆ ಮಾತ್ರ ಜೀವನದಲ್ಲಿ ಯಶಸ್ವಿ ಆಗಬಹುದು’ ಎಂದರು.
8
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಬಸವರಾಜನ್‌ ದಂಪತಿಯ ಕೊಳಕು ರಾಜಕೀಯ'.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಬೆಂಗಳೂರು: ‘ಮಿಸ್ಟರ್‌ ಅಂಡ್‌ ಮಿಸೆಸ್‌ ಬಸವರಾಜನ್‌ ಅವರ ಕ್ರಿಮಿನಲ್‌ ಪಿತೂರಿಯ ಭಾಗವಾಗಿ ಶಿವಮೂರ್ತಿ ಶರಣರು ಪೋಕ್ಸೊ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಹೀನಾಯ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುವಂತಾಗಿದೆ. ಮಾಜಿ ಶಾಸಕ ಮತ್ತು ಮಠದ ಮಾಜಿ ಆಡಳಿತಾಧಿಕಾರಿಯೂ ಆದ ಎಸ್‌.ಕೆ.ಬಸವರಾಜನ್‌ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯೂ ಆದ ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ಅವರ ಕೊಳಕು ರಾಜಕೀಯದ ಪರಿಣಾಮ ಶರಣರು ಮಲಿನ ವ್ಯಾಜ್ಯಗಳಲ್ಲಿ ಸಿಲುಕಿ ಒದ್ದಾಡುವಂತಾಗಿದೆ‘ ಎಂದು ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
2
+ ಜಾಮೀನು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
3
+ ವಿಚಾರಣೆ ವೇಳೆ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು ಸುದೀರ್ಘ ವಾದ ಮಂಡಿಸಿ, ‘ಇಬ್ಬರು ಸಂತ್ರಸ್ತ ಬಾಲಕಿಯರು ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವ ಮುನ್ನ ಸರಿಸುಮಾರು ಒಂದು ತಿಂಗಳ ಕಾಲ ಎಸ್‌.ಕೆ.ಬಸವರಾಜನ್‌ ಮತ್ತು ಸೌಭಾಗ್ಯ ಬಸವರಾಜನ್‌ ವಶದಲ್ಲಿ ಅವರ ಮನೆಯಲ್ಲೇ ತಂಗಿದ್ದರು. ತದನಂತರ ಚಿತ್ರದುರ್ಗದಿಂದ ದೂರದ ಮೈಸೂರಿಗೆ ತೆರಳಿ ಒಡನಾಡಿ ಎಂಬ ಸಂಸ್ಥೆಯ ಆಶ್ರಯ ಪಡೆದು ದೂರು ದಾಖಲಿಸಿದರು. ಇದರ ಹಿಂದೆ ಸಾಕಷ್ಟು ಪೂರ್ವನಿಯೋಜಿತ ಪಿತೂರಿ ಅಡಗಿದೆ‘ ಎಂದರು.
4
+ ‘ಸಂತ್ರಸ್ತ ಬಾಲಕಿಯರು ಮಠದ ಆವರಣದಲ್ಲಿನ ಹಾಸ್ಟೆಲ್‌ನಲ್ಲೇ ಇದ್ದರಾದರೂ ಅದಕ್ಕೆ ಸೂಕ್ತ ಮಹಿಳಾ ವಾರ್ಡನ್‌ ಇದ್ದರು. ಸ್ವಾಮೀಜಿ ಹದಿನೈದು ದಿನಕ್ಕೋ ಅಥವಾ ತಿಂಗಳಿಗೆ ಒಮ್ಮೆಯೋ ಬಾಲಕಿಯರಿಗೆ ಇಂಗ್ಲಿಷ್‌ ಮತ್ತು ಸಂಸ್ಕೃತದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆಗಾಗ್ಗೆ ಮಕ್ಕಳಿಗೆ ಚಾಕೊಲೆಟ್‌, ಮೂಸಂಬಿ ಮತ್ತು ದ್ರಾಕ್ಷಿಹಣ್ಣು ಕೊಟ್ಟು ತಮ್ಮ ಪ್ರೇಮ ಮೆರೆಯುತ್ತಿದ್ದರು. ಎಲ್ಲ ಮಕ್ಕಳೂ ಅವರನ್ನು ಅಪ್ಪಾಜಿ ಎಂದೇ ಸಂಬೋಧಿಸುತ್ತಿದ್ದವು. ಅವರೊಬ್ಬ ಬುದ್ಧಿವಂತ, ಯೋಗ್ಯ ಸ್ವಾಮೀಜಿಯಾಗಿ ನಡೆದುಕೊಳ್ಳುತ್ತಿದ್ದರು‘ ಎಂದು ಪ್ರತಿಪಾದಿಸಿದರು.
5
+ ‘ಇಬ್ಬರೂ ಬಾಲಕಿಯರು ಚಿತ್ರದುರ್ಗದಿಂದ 2022ರ ಜುಲೈ 24ರಂದು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಬೆಂಗಳೂರಿಗೆ ಬಂದು ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪೊಲೀಸರೆದುರು ನಮಗೆ ಅನ್ಯಾಯವಾಗಿದೆ ಎಂದು ವ್ಯಥೆ ತೋಡಿಕೊಂಡರು. ಮರುದಿವಸವೇ ಮಿಸ್ಟರ್ ಅಂಡ್‌ ಮಿಸೆಸ್‌ ಬಸವರಾಜನ್‌ ಬೆಂಗಳೂರಿಗೆ ಬಂದು ಮಕ್ಕಳನ್ನು ತಮ್ಮೊಟ್ಟಿಗೆ ಕರೆದೊಯ್ದರು. ಕರೆದೊಯ್ಯುವಾಗ ಇವರಿಗೆ ಅನ್ಯಾಯವಾಗಿದೆ. ನ್ಯಾಯ ಸಿಗುವತನಕ ವಿರಮಿಸುವುದಿಲ್ಲ ಎಂದು ಗುಡುಗಿದರು. ಆದರೆ, ಆಗಿದ್ದ ಅನ್ಯಾಯವೇನು ಎಂಬುದನ್��ೇ ಹೇಳಲಿಲ್ಲ‘ ಎಂದು ನಾಗೇಶ್‌ ವಿವರಿಸಿದರು.
6
+ ‘ಒಂದು ತಿಂಗಳು ಪೂರೈಸಿದ ನಂತರ ಮೈಸೂರಿಗೆ ತೆರಳಿ ಒಡನಾಡಿ ಎಂಬ ಸಂಸ್ಥೆಯ ಆಶ್ರಯದಲ್ಲಿ ಮಕ್ಕಳಿಂದ ದೂರು ದಾಖಲಿಸಿದರು. ಆದರೆ, ವೈದ್ಯಕೀಯ ಪರೀಕ್ಷೆಯಲ್ಲಿ ಮಕ್ಕಳ ಮೇಲೆ ಉದ್ರೇಕಿತ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬುದು ಸಾಬೀತಾಗಿದೆ. ಈ ಮಕ್ಕಳೇನೂ ಅಶಿಕ್ಷಿತ ಅಥವಾ ಗಾಂವಟಿ ಅಲ್ಲ. ಮುರುಘಾಮಠದ ಬೃಹತ್‌ ವಿದ್ಯಾಸಂಸ್ಥೆಗೆ ಮಸಿ ಬಳಿಯಲೆಂದೇ ಇಂತಹ ಸುಳ್ಳು ಪ್ರಕರಣವನ್ನು ಸ್ವಾಮೀಜಿ ವಿರುದ್ಧ ಹೆಣೆಯಲಾಗಿದೆ. ಪೋಕ್ಸೊ, ಎಸ್ಸಿ–ಎಸ್ಟಿ ದೌ‌ರ್ಜನ್ಯ ತಡೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ, ಬಾಲನ್ಯಾಯ ಅಪರಾಧಗಳಡಿ ಗುರುತರ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗಿದೆ‘ ಎಂದು ನಾಗೇಶ್‌ ಸಾದ್ಯಂತವಾಗಿ ನ್ಯಾಯಪೀಠಕ್ಕೆ ವಿವರಿಸಿದರು.
7
+ ‘ಬಸವರಾಜನ್‌ ದಂಪತಿ ವಿರುದ್ಧ ಪಿತೂರಿಯ ಭಾಗವಾಗಿ ಪ್ರತಿದೂರು ದಾಖಲಾಗಿರುವುದನ್ನು ನ್ಯಾಯಪೀಠ ಗಮನಿಸಬೇಕು‘ ಎಂದೂ ಕೋರಿದರು. ಕೋರ್ಟ್‌ ಕಲಾಪದ ಅವಧಿ ಮುಕ್ತಾಯಗೊಂಡ ಕಾರಣ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಲಾಗಿದೆ.
8
+ ಪ್ರಕರಣವೇನು?: ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 
9
+ ‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಬೃಹನ್ಮಠದಲ್ಲಿ ಬಂಧಿಸಿದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
10
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಮಾನ, ಮರ್ಯಾದೆ, ರಾಮ' ಪರಿಷತ್‌ನಲ್ಲಿ ವಾಕ್ಸಮರ.txt ADDED
@@ -0,0 +1,9 @@
 
 
 
 
 
 
 
 
 
 
1
+ ಬೆಂಗಳೂರು: ‘ರಾಜ್ಯದ ತೆರಿಗೆ‌ ಪಾಲಿನ ಹಣ ನೀಡದಿರುವ ಕೇಂದ್ರ ಸರ್ಕಾರಕ್ಕೆ ಮಾನ, ಮಾರ್ಯಾದೆ ಇಲ್ಲ’, ‘ರಾಮನನ್ನು ಇವರೇನು ಗುತ್ತಿಗೆ ಪಡೆದುಕೊಂಡಿದ್ದಾರಾ?’ ಎಂದು ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಚುಚ್ಚಿದ್ದು ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
2
+ ಜಟಾಪಟಿ ತಾರಕಕ್ಕೇರಿ ಅಸಾಂವಿಧಾನಿಕ ಪದಗಳು ಬಳಕೆಯಾಗುತ್ತಿದ್ದಂತೆಯೇ ಸಿಡಿಮಿಡಿಗೊಂಡ ಸಭಾಪತಿ ಬಸವರಾಜ ಹೊರಟ್ಟಿ, ‘ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ’ ಎಂದು ಬಿಜೆಪಿಯ ಕೇಶವಪ್ರಸಾದ್ ಅವರಿಗೆ ಎಚ್ಚರಿಕೆ ನೀಡಿದರು. ವಾಕ್ಸಮರ ನಿಯಂತ್ರಣಕ್ಕೆ ಬಾರದಿದ್ದಾಗ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.
3
+ ಮಾತಿನುದ್ದಕ್ಕೂ ಬಿಜೆಪಿ ವಿರುದ್ದ ಟೀಕೆ ಮಾಡಿದ ವೆಂಕಟೇಶ್‌, ‘ಈಗ ಜೆಡಿಎಸ್ ಜೊತೆ ಸೇರಿಕೊಂಡಿದ್ದೀರಾ. ಮುಂದೆ ವಾಷ್ ಔಟ್ ಆಗುತ್ತೀರಾ’ ಎಂದು ಛೇಡಿಸಿದರು. ಅದಕ್ಕೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತಕ ಎನ್‌. ರವಿಕುಮಾರ್‌, ವೈ.ಎ. ನಾರಾಯಣಸ್ವಾಮಿ, ಭಾರತಿ ಶೆಟ್ಟಿ ಸೇರಿದಂತೆ ಬಿಜೆಪಿ ಸದಸ್ಯರು, ‘ಜೆಡಿಎಸ್ ಅಷ್ಟೇ ಅಲ್ಲ, ಎಲ್ಲರೂ ನಿಮ್ಮ ‘ಇಂಡಿಯಾ’ ಬಿಟ್ಟು ನಮ್ಮ ಜೊತೆ ಬರುತ್ತಿದ್ದಾರೆ’ ಎಂದರು. 
4
+ ಆಗ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ‘ನಾವು ಸಂವಿಧಾನಬದ್ಧ ರಾಜಕೀಯ ಮಾಡುತ್ತಿದ್ದೇವೆ. ನಿಮ್ಮಂತೆ ನಾವೂ ಇ.ಡಿ, ಐ.ಟಿ ಬಳಸುತ್ತಿದ್ದರೆ ಇನ್ನೂ ಬೆಳೆಯುತ್ತಿದ್ದೆವು. ನಾವು ವಾಷಿಂಗ್ ಮಷೀನ್‌ನಂತೆ ಕ್ಲೀನ್ ಮಾಡುವವರು. ಬಿಟ್ಟು ಹೋದವರೆಲ್ಲ ಮುಂದೆ ಮರಳಿ ಬರುತ್ತಾರೆ’ ಎಂದು ತಿರುಗೇಟು ನೀಡಿದರು.
5
+ ಅದಕ್ಕೆ ಕೇಶವಪ್ರಸಾದ್‌, ‘ಹರಿಪ್ರಸಾದ್ ಇಷ್ಟಬಂದಂತೆ ಮಾತನಾಡುತ್ತಾರೆ. ರೌಡಿ ರೀತಿ ನಡೆದುಕೊಂಡು ಸದನದ ಗೌರವ ಕಾಪಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಹರಿಪ್ರಸಾದ್, ‘ನಾನಲ್ಲ ನೀವು ಗೂಂಡಾಥರ ಆಡಿ ಮಾನ, ಮರ್ಯಾದೆ ಕಳೆಯುತ್ತೀರಿ’ ಎಂದು ಕಿಡಿಕಾರಿದರು. ಸದಸ್ಯರ ನಡೆಗೆ ಸಭಾಪತಿಯವರು ಗರಂ ಆದರು.
6
+ ‘ಮಂತ್ರಿಯಾಗುವ ಕನಸು ಈಡೇರಿಲ್ಲ ಎಂಬುದು ನಮಗೆ ಗೊತ್ತಿದೆ. ಈ ಬಗ್ಗೆ ವಿಷಾದವಿದೆ’ ಎಂದು ಬಿಜೆಪಿ ಸದಸ್ಯರು ಕೆಣಕಿದಾಗ, ‘ಮಂತ್ರಿ ಆಗುವುದಕ್ಕೆ ನಾನು ಬಂದಿಲ್ಲ. ಆ ಅಜೆಂಡಾ ಇಟ್ಟುಕೊಂಡಿಲ್ಲ. ನಾನು ಹಲವರನ್ನು ಮಂತ್ರಿ ಮಾಡಿದ್ದೇನೆ’ ಎಂದು ಹರಿಪ್ರಸಾದ್‌ ಹೇಳಿದರು. ಅದಕ್ಕೆ ಕೋಟ, ‘ಮಂತ್ರಿಯಾಗುವ ನಿಮ್ಮ ಸಾಮರ್ಥ್ಯ ಜನ ಮತ್ತು ವಿರೋಧ ಪಕ್ಷಕ್ಕೆ ಗೊತ್ತಿದೆ. ಆದರೆ, ಆಡಳಿತ ಪಕ್ಷಕ್ಕೆ ಇಲ್ಲ’ ಎಂದು ಕಿಚಾಯಿಸಿದರು.
7
+ ‘ಇವರು (ಬಿಜೆಪಿ) ರಾಮನನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರೆಯೇ’ ಎಂದು ಯು.ಬಿ. ವೆಂಕಟೇಶ್ ಪ್ರಶ್ನಿಸುತ್ತಿದ್ದಂತೆಯೇ, ಎನ್‌. ರವಿಕುಮಾರ್, ‘ಗುತ್ತಿಗೆ ಪಡೆದುಕೊಂಡಿದ್ದೇವೆಂದು ಎಲ್ಲಿ ಹೇಳಿದ್ದೇವೆ’ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಹರಿಪ್ರಸಾದ್, ‘ಅಯೋಧ್ಯೆಯು ಶ���ರೀರಾಮನ ಜನ್ಮಭೂಮಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಬಗ್ಗೆ ಹೋರಾಟ ನಡೆಸಿದ್ದ ಎಲ್.ಕೆ. ಅಡ್ವಾಣಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ’ ಎಂದರು‌. ಅದಕ್ಕೆ ರವಿಕುಮಾರ್, ‘ಸುಪ್ರೀಂ ಕೋರ್ಟ್ ತೀರ್ಪು ಮತ್ತೊಮ್ಮೆ ಓದಿ. ಅಯೋಧ್ಯೆಯೇ ಶ್ರೀರಾಮನ ಜನ್ಮಸ್ಥಳ ಎಂದು ಐವರು ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ’ ಎಂದರು.
8
+ ಇದು ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಆಗ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
9
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಮಾನವ- ಆನೆ ಸಂಘರ್ಷ’ ಸಮ್ಮೇಳನ 12ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ.txt ADDED
@@ -0,0 +1,6 @@
 
 
 
 
 
 
 
1
+ ಬೆಂಗಳೂರು: ‘ವಿಶ್ವ ಆನೆ ದಿನವಾದ ಇದೇ 12ರಂದು ‘ಮಾನವ- ಆನೆ ಸಂಘರ್ಷ’ ಅಂತರರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅಮೆರಿಕ, ಜರ್ಮನಿ, ಜಪಾನ್, ಇಂಗ್ಲೆಂಡ್‌ ಸೇರಿದಂತೆ 11 ದೇಶಗಳ 17ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವಿವಿಧ ರಾಜ್ಯಗಳ 660 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
2
+ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೃಷಿ ವಿಶ್ವವಿದ್ಯಾಲಯದ ಗಾಂಧೀ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ, ಆನೆಗಳು ಮತ್ತು ಇತರ ವನ್ಯಜೀವಿಗಳು ನಾಡಿಗೆ ಬಾರದಂತೆ ಬೇರೆ ಬೇರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಯಾವ ತಂತ್ರಗಾರಿಕೆ, ಪದ್ಧತಿ ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಚಿಂತನ ಮಂಥನ ನಡೆಯಲಿದೆ’ ಎಂದರು.
3
+ ‘ರಾಜ್ಯದಲ್ಲಿ 6,395 ಆನೆಗಳಿದ್ದು, ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. 563 ಹುಲಿಗಳನ್ನು ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಅದಕ್ಕೆ ಪೂರಕವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆಗಳು ನಾಡಿಗೆ ಬರುತ್ತಿವೆ. ಆನೆ ಮತ್ತು ಮಾನವ ಸಂಘರ್ಷ ತಗ್ಗಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ’ ಎಂದರು.
4
+ ‘ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 25 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.
5
+ ‘ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 283 ಆನೆಗಳು ಮೃತಪಟ್ಟಿವೆ. ಆನೆಗಳ ರಕ್ಷಣೆ ಮತ್ತು ಆನೆಗಳಿಂದ ಜೀವಹಾನಿ ಮತ್ತು ಬೆಳೆ ಹಾನಿ ತಪ್ಪಿಸಲು ಆನೆ ಕಂದಕ ನಿರ್ಮಾಣ, ತೂಗಾಡುವ ಸೌರ ವಿದ್ಯುತ್ ತಂತಿಗಳು, ಸೌರ ಬೇಲಿ ಅಳವಡಿಕೆಯಂಥ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈವರೆಗೆ 332.62 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, 3,426 ಕಿ.ಮೀ ಸೌರ ಬೇಲಿ ಅಳವಡಿಸಲಾಗಿದೆ. 2,420 ಕಿ.ಮೀ. ಆನೆ ನಿಗ್ರಹ ಕಂದಕ (ಇಟಿಪಿ– ಎಲಿಫೆಂಟ್ ಫ್ರೂಫ್ ಟ್ರಂಚಸ್) ನಿರ್ಮಿಸಲಾಗಿದೆ’ ಎಂದು ಖಂಡ್ರೆ ವಿವರಿಸಿದರು.
6
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಮುಡಾ’ ಹಗರಣ ಸಿಬಿಐ ತನಿಖೆಗೆ ಎನ್. ರವಿಕುಮಾರ್‌ ಆಗ್ರಹ.txt ADDED
@@ -0,0 +1,5 @@
 
 
 
 
 
 
1
+ ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್‌ ಒತ್ತಾಯಿಸಿದರು.
2
+ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ತಮ್ಮ ನಿವೇಶನಗಳಿಗೂ ಸಂಚಕಾರ ಬರಬಹುದು ಎಂಬ ಭಯ ಅವರನ್ನು ಕಾಡುತ್ತಿರಬಹುದು’ ಎಂದರು. 
3
+ ದಸರಾ ಮಹೋತ್ಸವ ಉದ್ಘಾಟಿಸಿದ ಸಾಹಿತಿ ಹಂಪ ನಾಗರಾಜಯ್ಯ ಅವರು ಸಾಹಿತ್ಯ, ದಸರಾ, ಮೈಸೂರು ರಾಜರ ಸಾಧನೆಗಳ ಕುರಿತು ಮಾತನಾಡಬೇಕಿತ್ತು. ಆದರೆ, ಅವರು  ಸಿದ್ದರಾಮಯ್ಯ ಹಾಗೂ ಸರ್ಕಾರದ ಹೊಗಳುಭಟರಂತೆ ಭಾಷಣ ಮಾಡಿದ್ದಾರೆ. ಇದು ದಸರಾ ಇತಿಹಾಸಕ್ಕೇ ಕಪ್ಪುಚುಕ್ಕಿ ಎಂದು ಟೀಕಿಸಿದರು.
4
+ ಸ್ವಾತಂತ್ರ್ಯಕ್ಕಾಗಿ ಹೋರಾಡಿ 28 ವರ್ಷ ಜೈಲುವಾಸ ಅನುಭವಿಸಿದ ಸಾವರ್ಕರ್‌ ಅವರ ಕುರಿತು ಟೀಕಿಸಿದ ಸಚಿವ ದಿನೇಶ್‌ ಗುಂಡೂರಾವ್‌ ಕ್ಷಮೆ ಯಾಚಿಸಬೇಕು. ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
5
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಮೈದಾನ್' ಸಿನಿಮಾ ಪ್ರದರ್ಶನ ನಿರ್ಬಂಧದ ಆದೇಶಕ್ಕೆ ಹೈಕೋರ್ಟ್ ತಡೆ.txt ADDED
@@ -0,0 +1,8 @@
 
 
 
 
 
 
 
 
 
1
+ ಬೆಂಗಳೂರು: ಕೃತಿಚೌರ್ಯದ ಆರೋಪದಡಿ, ಬಾಲಿವುಡ್ ನಟ ಅಜಯ್ ದೇವಗನ್ ಪ್ರಧಾನ ಭೂಮಿಕೆಯಲ್ಲಿರುವ "ಮೈದಾನ್" ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಿದ್ದ ಮೈಸೂರು ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
2
+ ಇದರಿಂದ ಸಿನಿಮಾ ಬಿಡುಗಡೆಗೆ ಇದ್ದ ವಿಘ್ನ ನಿವಾರಣೆಯಾದಂತಾಗಿದೆ.
3
+ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಶೇಷ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಪುರಸ್ಕರಿಸಿದೆ.
4
+ ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಸಜನ್ ಪೂವಯ್ಯ, “ಚಿತ್ರದ ನಿರ್ಮಾಣ ಕಾರ್ಯ 2019ರಲ್ಲೇ ಆರಂಭವಾಗಿತ್ತು. ಆದರೆ, ಕೋವಿಡ್ ಪರಿಣಾಮ ವಿಳಂಬವಾಗಿತ್ತು. ಆದರೆ, ಈಗ ಪ್ರತಿಬಂಧಕ ಆದೇಶ ನೀಡಿರುವ ಕಾರಣ, ಜಗತ್ತಿನಾದ್ಯಂತ ಮತ್ತು ಒಟಿಟಿ ವೇದಿಕೆಗಳಲ್ಲಿ "ಮೈದಾನ್" ಸಿನಿಮಾ ಬಿಡುಗಡೆಯಾಗಲು ತೊಡಕುಂಟಾಗಿದೆ. ಅರ್ಜಿದಾರರಿಗೆ ಅಪಾರ ಹಾನಿಯಾಗಿದೆ” ಎಂದರು.
5
+ ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತು. ಪ್ರತಿವಾದಿ ಸಿ.ಆರ್.ಅನಿಲ್ ಕುಮಾರ್ ಮತ್ತು ಇತರರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು.
6
+ ಪ್ರಕರಣವೇನು?: ಭಾರತೀಯ ಫುಟ್ಬಾಲ್‌ಗೆ ಸಂಬಂಧಿಸಿದಂತೆ ನಾನು ಬರೆದಿದ್ದ ಕಥೆಯ ಮೂಲ ಸಂಭಾಷಣೆ ಮತ್ತು ಚಿತ್ರಕಥೆ ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ" ಎಂದು ಆರೋಪಿಸಿ ಅನಿಲ್ ಕುಮಾರ್ ಮೈಸೂರು ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದ್ದರು.
7
+ ಈ ದಾವೆ ವಿಚಾರಣೆ ನಡೆಸಿದ್ದ, ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ ಅವರು, ಮೈದಾನ್ ಚಿತ್ರವನ್ನು ಯಾವುದೇ ಭಾಷೆ ಅಥವಾ ಒಟಿಟಿ, ಎಲೆಕ್ಟ್ರಾನಿಕ್ಸ್ ಮತ್ತು ಮ್ಯಾಗ್ನೆಟಿಕ್ ರೂಪದಲ್ಲಿ ಬಿಡುಗಡೆ ಮಾಡಲು ನಿರ್ಬಂಧಿಸಲಾಗಿದೆ" ಎಂದು ಇದೇ 8ರಂದು ಆದೇಶಿಸಿದ್ದರು.
8
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಮೈಸೂರು ಚಲೋ' ಸಮಾರೋಪ ಇಂದು ಮುಖ್ಯಮಂತ್ರಿ ತವರಲ್ಲಿ ವಿಪಕ್ಷಗಳ ರಣಕಹಳೆಗೆ ಸಜ್ಜು.txt ADDED
@@ -0,0 +1,7 @@
 
 
 
 
 
 
 
 
1
+ ಮೈಸೂರು: ಬಿಜೆಪಿ–ಜೆಡಿಎಸ್‌ನ ‘ಮೈಸೂರು ಚಲೋ’ ಪಾದಯಾತ್ರೆಯು ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು, ಮುಖ್ಯಮಂತ್ರಿ ತವರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ರಣಕಹಳೆಗೆ ವೇದಿಕೆ ಸಜ್ಜಾಗಿದೆ.
2
+ ಶುಕ್ರವಾರ ಕಾಂಗ್ರೆಸ್ ಸರ್ಕಾರ ಶಕ್ತಿ ಪ್ರದರ್ಶನ ನಡೆಸಿದ ಇಲ್ಲಿನ ಮಹಾರಾಜ ಕಾಲೇಜು ಮೈದಾನದ ವೇದಿಕೆಯಲ್ಲೇ ಶನಿವಾರ ಬಿಜೆಪಿ–ಜೆಡಿಎಸ್ ಪಾದಯಾತ್ರೆಯ ಸಮಾರೋಪ ಸಮಾವೇಶವೂ ನಡೆಯಲಿದೆ. ಮುಖ್ಯಮಂತ್ರಿ, ಸಚಿವರ ವಾಗ್ದಾಳಿಗೆ ಅಲ್ಲಿಯೇ ಉತ್ತರ ನೀಡಲು ವಿರೋಧ ಪಕ್ಷಗಳ ನಾಯಕರು ಸಜ್ಜಾಗಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಮೂಲಕ ಹೋರಾಟ ಸಮಾಪ್ತಿಗೊಳಿಸುವ ಉತ್ಸಾಹದಲ್ಲಿದ್ದಾರೆ. ಇದು ಮತ್ತೊಂದು ಸುತ್ತಿನ ಮಾತಿನ ಸಮರಕ್ಕೂ ಸಾಕ್ಷಿಯಾಗಲಿದೆ.
3
+ ಆಗಸ್ಟ್‌ 3ರಂದು ಬೆಂಗಳೂರಿನ ಕೆಂಗೇರಿ ಸಮೀಪ ಆರಂಭಗೊಂಡ ಪಾದಯಾತ್ರೆಯು ಏಳು ದಿನಗಳ ಕಾಲ ನಡೆದಿದೆ. 140 ಕಿ.ಮೀ.ಗೂ ಹೆಚ್ಚು ದೂರ ಹೆಜ್ಜೆ ಹಾಕಿರುವ ನಾಯಕರು, ದಣವು ಮರೆತು ಸರ್ಕಾರವನ್ನು ಹಣಿಯುವ ತಂತ್ರ ರೂಪಿಸುತ್ತಿದ್ದಾರೆ. ಆರಂಭದಲ್ಲಿ, ಪಾದಯಾತ್ರೆಯೂ ತಮಗೂ ಸಂಬಂಧವೇ ಇಲ್ಲ ಎಂದು ಮುನಿಸು ತೋರಿದ್ದ ಜೆಡಿಎಸ್ ನಾಯಕರು ನಂತರ, ಬಿಜೆಪಿ ಹೈಕಮಾಂಡ್‌ಗೆ ತಲೆಬಾಗಿ ಹೆಜ್ಜೆ ಇಟ್ಟಿದ್ದಾರೆ. ಆದರೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮುನಿಸು ಮುಂದುವರಿದಿದೆ.
4
+ ಆಷಾಢದ ತಂಗಾಳಿಯು ಪಾದಯಾತ್ರಿಗರ ದಣಿವನ್ನು ತಣಿಸಿದ್ದು, ಇದೀಗ ಶ್ರಾವಣದ ಹೊಸ ಗಾಳಿ ಜೊತೆಗೆ ರಾಜ್ಯದಲ್ಲಿ ಹೊಸ ಸರ್ಕಾರವೂ ಬರಲಿ ಎಂಬ ಎಂಬ ಬೇಡಿಕೆ ಮುಂದಿಟ್ಟು ಹೋರಾಟ ಸಮಾರೋಪಗೊಳ್ಳುತ್ತಿದೆ. ತಿಂಗಳುಗಳ ಹಿಂದಷ್ಟೇ ಲೋಕಸಭೆ ಚುನಾವಣೆ ಕಂಡಿರುವ ಜನರಿಗೆ ವಿಪಕ್ಷಗಳ ಈ ಯಾತ್ರೆಯು ಮತ್ತೆ ಚುನಾವಣೆಯನ್ನು ನೆನಪಿಗೆ ತಂದಿದೆ. ಬೆಂಗಳೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಶಕ್ತಿ ಪ್ರದರ್ಶನ ತೋರಿರುವ ಪಾದಯಾತ್ರೆಯ ಉದ್ದಕ್ಕೂ ಬರೀ ಸರ್ಕಾರದ ವಿರುದ್ಧದ ವಾಗ್ದಾಳಿಯೇ ಸದ್ದು ಮಾಡಿದೆ. ಮುಡಾ ಹಗರಣದ ವಿಚಾರವೇ ಇಡೀ ಯಾತ್ರೆಯನ್ನು ಆವರಿಸಿದೆ.
5
+ ವಿಪಕ್ಷ ನಾಯಕ ಆರ್. ಅಶೋಕ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ವರ್ಚಸ್ಸು ವೃದ್ಧಿಗೆ ದಾರಿಯಾಗಿದೆ. ಹಳೇ ಮೈಸೂರು ಭಾಗದಲ್ಲಿ ಈ ಮೂಲಕ ಜೆಡಿಎಸ್‌ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸಿದ್ದರೆ, ಬಿಜೆಪಿಯು ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ.
6
+ ಶನಿವಾರದ ಸಮಾವೇಶದಲ್ಲಿ ‘ಮೈತ್ರಿ‘ ನಾಯಕರ ದಂಡೇ ಭಾಗವಹಿಸಲಿದೆ. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಮೈಸೂರಿನ ನೆರೆ–ಹೊರೆಯ ಜಿಲ್ಲೆಗಳ ಲಕ್ಷಕ್ಕೂ ಅಧಿಕ ಮಂದಿಯನ್ನು ಕರೆ ತರಲಾಗುತ್ತಿದೆ. 
7
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಮೋದಿ ವರ್ಸಸ್‌ ಖರ್ಗೆ' ಪರಿಣಾಮ ಬೀರಲಿದೆ ಸತೀಶ ಜಾರಕಿಹೊಳಿ.txt ADDED
@@ -0,0 +1,6 @@
 
 
 
 
 
 
 
1
+ ಬೆಂಗಳೂರು: ‘ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿರುವ ನಾಯಕ ಸಿಕ್ಕಿರಲಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸರಿಸಮ ನಾಯಕರಾಗಿ ಬಿಂಬಿತರಾಗಲಿದ್ದಾರೆ. ಮೋದಿ ವರ್ಸಸ್‌ ಖರ್ಗೆ ಎಂಬುದು ಖಂಡಿತ ಪರಿಣಾಮ ಬೀರಲಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
2
+ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‌‘ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸದಸ್ಯರು ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.
3
+ ‘ಖರ್ಗೆ ದಲಿತ ನಾಯಕ ಎನ್ನುವುದು ಮಾತ್ರವಲ್ಲ, ಅನುಭವದ ಆಧಾರದಲ್ಲಿಯೂ ಅವರ ಹೆಸರು ಮುನ್ನೆಲೆಗೆ ಬಂದಿದೆ. ದಲಿತ ನಾಯಕ ಎಂಬ ಲಾಭನಷ್ಟ ನಂತರದ್ದು, ಅದಕ್ಕೂ ಮೊದಲು ಖರ್ಗೆ ಒಬ್ಬ ಒಳ್ಳೆಯ ಸಂಸದೀಯ ಪಟು’ ಎಂದು ಬಣ್ಣಿಸಿದರು.
4
+ ‘ಖರ್ಗೆ ಮತ್ತೊಮ್ಮೆ ಲೋಕಸಭೆ ಪ್ರವೇಶಿಸಬೇಕೆಂಬ ಆಸೆ ನಮಗೂ ಇದೆ. ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಮಗೆ ಎಲ್ಲೂ ಹೇಳಿಲ್ಲ. ದೇಶ ಇಡೀ ಓಡಾಡಿ ಪಕ್ಷ ಕಟ್ಟುತ್ತಿದ್ದಾರೆ. ಖರ್ಗೆಯವರು ಮಾಡಿದ ಕೆಲಸಗಳು ಈಗ ಜನರಿಗೆ ತಿಳಿಯುತ್ತಿವೆ’ ಎಂದರು.
5
+ ಸಚಿವರು ಸಹಿ ಹಾಕಿದ್ದರಲ್ಲಿ ತಪ್ಪಿಲ್ಲ: ಜಾತಿ ಗಣತಿ ವರದಿ ವಿರೋಧಿಸಿ ಸಚಿವರು ಮನವಿ ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಚಿವರು ಸಹಿ ಹಾಕಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರ ಸಮುದಾಯದ ಪರವಾಗಿ ಸಚಿವರು ನಿಲ್ಲಬೇಕಾಗುತ್ತದೆ. ಯಾವ ಸಚಿವರೂ ಜಾತಿ ಗಣತಿಗೆ ವಿರೋಧ ಮಾಡುತ್ತಿಲ್ಲ. ಈಗಿನ ವರದಿಯಲ್ಲಿ ಲೋಪ ಇದೆ ಎನ್ನುತ್ತಿದ್ದಾರೆ. ವರದಿ ಸ್ವೀಕರಿಸಿದ ಬಳಿಕ ಚರ್ಚೆಯಾಗಲಿ. ಲೋಪ ಸರಿಮಾಡಲು ಅವಕಾಶವಿದೆ’ ಎಂದರು. 
6
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಯಡಿಯೂರಪ್ಪ ಬಂಧನ ಬೇಡ' ಹಿಂದಿನ ಮಧ್ಯಂತರ ಆದೇಶ ವಿಸ್ತರಿಸಿದ ಹೈಕೋರ್ಟ್.txt ADDED
@@ -0,0 +1,5 @@
 
 
 
 
 
 
1
+ ಬೆಂಗಳೂರು: ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಬಾರದು ಮತ್ತು ವಿಚಾರಣೆಗೆ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿದೆ’ ಎಂಬ ಈ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ.
2
+ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು ಶುಕ್ರವಾರ ವಿಚಾರಣೆ ನಡೆಸಿದರು. ಇದೇ 29ರಿಂದ ಹೈಕೋರ್ಟ್‌ನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣಾ ನ್ಯಾಯಪೀಠದ ರೋಸ್ಟರ್‌ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಪ್ರಕರಣವನ್ನು ಮುಂದೂಡಿ ಆದೇಶಿಸಿದರು.
3
+ ‘ನನ್ನ ಮಗಳ ಮೇಲೆ ಅತ್ಯಾಚಾರ ನಡೆದಿದೆ, ನನಗೆ ನ್ಯಾಯ ಕೊಡಿಸಿ‘ ಎಂದು ಯಡಿಯೂರಪ್ಪ ಬಳಿ ಹೋಗಿದ್ದ 53 ವರ್ಷದ ಮಹಿಳೆಯೊಬ್ಬರು; ‘ಯಡಿಯೂರಪ್ಪ ಅವರು ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ 2024ರ ಮಾರ್ಚ್‌ 14ರಂದು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ  ದೂರು ನೀಡಿದ್ದರು.
4
+ ಇದರನ್ವಯ ಪೊಲೀಸರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ–2012ರ ಕಲಂ 8 ಮತ್ತು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 354(ಎ) ಅಡಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದರು. 
5
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಯುವ ನಿಧಿ' ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ.txt ADDED
@@ -0,0 +1,4 @@
 
 
 
 
 
1
+ ಶಿವಮೊಗ್ಗ: ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
2
+ ರಾಜ್ಯದ ವಿವಿಧೆಡೆಯಿಂದ ಬಂದಿದ್ದ 15 ಮಂದಿ ಯುವ ಜನರಿಗೆ ಸಾಂಕೇತಿಕವಾಗಿ ನಿರುದ್ಯೋಗ ಭತ್ಯೆಯ ಚೆಕ್ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ, ಮಧು ಬಂಗಾರಪ್ಪ, ಬಿ.ನಾಗೇಂದ್ರ, ಮಂಕಾಳ್ ವೈದ್ಯ ಹಾಜರಿದ್ದರು.
3
+ ಈ ವೇಳೆ ಮಾತನಾಡಿದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಯುವನಿಧಿ ಅಡಿ ಈಗ 70 ಸಾವಿರ ವಿದ್ಯಾರ್ಥಿಗಳ ನೋಂದಣಿ ಆಗಿದೆ. ಇದರ ಲಾಭ ಪಡೆಯಿರಿ ಎಂದರು. ನಿರುದ್ಯೋಗಿಗಳಿಗೆ ಹಣ ಕೊಡುವುದು ಮಾತ್ರವಲ್ಲ. ಅಭ್ಯರ್ಥಿಗಳ ಇಷ್ಟದ ಕೆಲಸಕ್ಕೆ ತರಬೇತಿ ಕೊಡಿಸಲಾಗುವುದು. ನಿರುದ್ಯೋಗ ದೊಡ್ಡ ಸಮಸ್ಯೆ. ನಿರಾಶರಾಗಬೇಡಿ. ಹಣದ ಜೊತೆ ಕೌಶಲ್ಯ ಕೊಟ್ಟು ದೇಶ-ವಿದೇಶಗಳಲ್ಲಿ ಉದ್ಯೋಗಾವಕಾಶ ಕೊಡಿಸುವ ಕೆಲಸ ಮಾಡಲಿದ್ದೇವೆ. ಯುವಕರ ಭವಿಷ್ಯ ನಿರ್ಮಾಣ ಮಾಡಲಿದ್ದೇವೆ ಎಂದರು.
4
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ರಾಜಭವನ ವಿರುದ್ಧ ‘ಸರ್ಕಾರಿ’ ಹೋರಾಟ'.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಬೆಂಗಳೂರು: ತಮ್ಮ ಮುಂದೆ ಬಾಕಿ ಇರುವ ಇತರ ಪ್ರಕರಣಗಳಲ್ಲೂ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಿ ಇದೇ 31ರಂದು ರಾಜಭವನ ಚಲೋ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ.
2
+ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುವ ಹಂತದಲ್ಲಿ ಎದಿರೇಟು ನೀಡಿದ್ದ ಸರ್ಕಾರ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷವು, ರಾಜಭವನದ ವಿರುದ್ಧ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಅಣಿಯಾಗಿದೆ. 
3
+ ‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ಶಶಿಕಲಾ ಜೊಲ್ಲೆ ಮತ್ತು ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿಯೂ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಬೇಕು’ ಎಂದು ಮನವಿ ಮಾಡಲು 31ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿಯಿಂದ ರಾಜಭವನಕ್ಕೆ ಹೋಗುತ್ತೇವೆ. ಮುಖ್ಯಮಂತ್ರಿ, ಎಲ್ಲ ಸಚಿವರು, ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರು ಭಾಗವಹಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
4
+ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಶಿವಕುಮಾರ್, ‘ಕುಮಾರಸ್ವಾಮಿ ವಿರುದ್ಧದ ಗಣಿಗಾರಿಕೆಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿದ ಪ್ರಕರಣದಲ್ಲಿ ಲೋಕಾಯುಕ್ತ 10 ವರ್ಷ ತನಿಖೆ ನಡೆಸಿ ವಿಚಾರಣೆಗೆ ಅನುಮತಿ ಕೋರಿದ್ದರೂ ರಾಜ್ಯಪಾಲರು ಕೊಟ್ಟಿಲ್ಲ. ಕುಮಾರಸ್ವಾಮಿ ಅವರು ಎಂದಿಗೂ ನಕಲಿ ಕೆಲಸ ಮಾಡುವುದಿಲ್ಲ, ಕೇವಲ ಅಸಲಿ ಕೆಲಸ ಮಾಡುವವರು’ ಎಂದು ವ್ಯಂಗ್ಯವಾಡಿದರು.
5
+ ‘ಬೇರೆ ನಾಯಕರ ವಿರುದ್ಧ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ರಾಜ್ಯಪಾಲರು ನೀಡಿಲ್ಲ. ಆದರೆ, ಯಾವುದೇ ಪ್ರಾಥಮಿಕ ತನಿಖೆ ನಡೆಯದಿದ್ದರೂ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ಈ ವಿಚಾರ ಸದ್ಯ ನ್ಯಾಯಾಲಯದಲ್ಲಿದೆ. ಹೀಗಾಗಿ, ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’ ಎಂದರು.
6
+ ‘ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರಿಂದ ನ್ಯಾಯ ನಿರೀಕ್ಷಿಸಿ ಮತ್ತೆ ಮನವಿ ಸಲ್ಲಿಸುತ್ತೀರಾ’ ಎಂದು ಕೇಳಿದ ಪ್ರಶ್ನೆಗೆ, ‘ತಮ್ಮಿಂದ ಅನ್ಯಾಯ ಆಗಬಾರದು ಎಂಬ ಬುದ್ಧಿಯನ್ನು ಭಗವಂತ ರಾಜ್ಯಪಾಲರಿಗೆ ಕರುಣಿಸಬಹುದು. ಆ ಮೂಲಕ, ತಾವು ಕೊಟ್ಟಿರುವ ಅನುಮತಿಯನ್ನು ಅವರು ಹಿಂಪಡೆಯಬಹುದೆಂದು ನಂಬಿದ್ದೇವೆ’ ಎಂದರು.
7
+ ‘ಗಣಿಗಾರಿಕೆಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿದ ಪ್ರಕರಣದಲ್ಲಿ ನಾನು ಯಾರಿಗೂ ಶಿಫಾರಸು ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ, ನಿಮ್ಮ ಸಹಿಯನ್ನು ಬೇರೆಯವರು ನಕಲು ಮಾಡಿದ್ದರೆ ಯಾಕಪ್ಪ ದೂರು ನೀಡಿಲ್ಲ? ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರ ಸಹಿ ನಕಲು ಮಾಡಿದವರ ಮತ್ತು ನಕಲು ಸಹಿ ಆಧಾರದಲ್ಲಿ ��ಣಿಗಾರಿಕೆಗೆ ಜಮೀನು ಮಂಜೂರು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬಹುದಲ್ಲವೇ’ ಎಂದು ಕುಮಾರಸ್ವಾಮಿ ಅವರನ್ನು ಶಿವಕುಮಾರ್‌ ಪ್ರಶ್ನಿಸಿದರು.
8
+ ‘ಗಣಿಗಾರಿಕೆಗೆ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಜಮೀನು ಮಂಜೂರು ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಕುಮಾರಸ್ವಾಮಿ ಜಾಮೀನು ಅರ್ಜಿ ಹಾಕಿಕೊಳ್ಳುತ್ತಾರೆ. ಪ್ರಮಾಣಪತ್ರದಲ್ಲಿ ಅವರು ಈ ಜಮೀನನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಮಂಜೂರು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲೇ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣದ ತನಿಖೆ ಬಾಕಿಯಿದೆ ಎಂದೂ ಒಪ್ಪಿಕೊಂಡಿದ್ದಾರೆ. ‌ನಿಮ್ಮ ಸಹಿ ಅಲ್ಲದಿದ್ದರೆ, ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಆ ಆದೇಶವನ್ನು ನೀವೇ ನೀಡಿರುವುದಾಗಿ ಒಪ್ಪಿಕೊಂಡಿರುವುದು ಏಕೆ’ ಎಂದೂ ಕೇಳಿದರು.
9
+ ‘ನಿಮ್ಮ ಸಹಿ ಅಲ್ಲದಿದ್ದರೆ ಈಗಲಾದರೂ ದೂರು ನೀಡಿ. ನೀವು ದೊಡ್ಡ ಸರ್ಕಾರದ ಭಾಗವಾಗಿದ್ದೀರಿ. ಆದರೂ, ಯಾಕೆ ದೂರು ನೀಡುತ್ತಿಲ್ಲ’ ಎಂದೂ ಪ್ರಶ್ನಿಸಿದರು.
10
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ರಾಮ್‌ಸರ್‌' ಪಟ್ಟಿಗೆ ಅಂಕಸಮುದ್ರ ತಾಣ, ಮಾಗಡಿ ಕೆರೆ, ಅಘನಾಶಿನಿ ಅಳಿವೆ....txt ADDED
@@ -0,0 +1,8 @@
 
 
 
 
 
 
 
 
 
1
+ ನವದೆಹಲಿ: ಕರ್ನಾಟಕದ ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಗದಗ ಜಿಲ್ಲೆಯ ಮಾಗಡಿ ಕೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿಮುಖಜ ಪ್ರದೇಶ (ಅಳಿವೆ) ಸೇರಿದಂತೆ ದೇಶದ ಐದು ಜೌಗು ಪ್ರದೇಶಗಳು ’ರಾಮ್‌ಸರ್’ ಪಟ್ಟಿಗೆ ಸೇರ್ಪಡೆಯಾಗಿವೆ.
2
+ ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಬುಧವಾರ ಈ ಮಾಹಿತಿಯನ್ನು ಹಂಚಿಕೊಂಡಿದೆ.
3
+ ಜೌಗುಪ್ರದೇಶಗಳನ್ನು ಉಳಿಸಲು 1971ರ ಫೆಬ್ರುವರಿ 2ರಂದು ಇರಾನ್‌ನ ಕ್ಯಾಸ್ಪಿಯನ್‌ ಸಮುದ್ರತೀರದ ‘ರಾಮ್‌ಸರ್‌’ನಲ್ಲಿ ಪ್ರಥಮ ಬಾರಿಗೆ ಒಪ್ಪಂದ ಏರ್ಪಟ್ಟಿತ್ತು. ಆ ಒಪ್ಪಂದದ ಬಳಿಕ, ನೈಸರ್ಗಿಕವಾಗಿ ರೂಪುಗೊಂಡ ಜೌಗು ಪ್ರದೇಶಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಲಾಗುತ್ತಿದ್ದು, ಅಂತಹ ಪ್ರದೇಶಗಳನ್ನು ‘ರಾಮ್‌ಸರ್ ತಾಣ’ಗಳೆಂದು ಗುರುತಿಸಲಾಗುತ್ತದೆ. 
4
+ ರಾಜ್ಯದ ಮೂರೂ ಜೌಗು ಪ್ರದೇಶಗಳನ್ನು ರಾಮ್‌ಸರ್ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಕಳೆದ ವರ್ಷ ಶಿಫಾರಸು ಮಾಡಿತ್ತು. ಈಗ ಆ ಮಾನ್ಯತೆ ಸಿಕ್ಕಿದೆ. ದೇಶದಲ್ಲಿನ ‘ರಾಮ್‌ಸರ್ ತಾಣ’ಗಳ ಸಂಖ್ಯೆ 80ಕ್ಕೆ ಏರಿದೆ. ರಂಗನತಿಟ್ಟು ಪಕ್ಷಿಧಾಮವನ್ನು 2022ರ ಆಗಸ್ಟ್‌ನಲ್ಲಿ ಈ ಪಟ್ಟಿಗೆ ಸೇರಿಸಲಾಗಿತ್ತು. 
5
+ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಪ್ರದೇಶಕ್ಕೆ ಶತಮಾನದ ಹಿನ್ನೆಲೆ ಇದೆ. ಅಂಕಸಮುದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಈ ತಾಣವು 244 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಇಲ್ಲಿ 210 ಜಾತಿಯ ಸಸ್ಯಗಳು, 8 ಜಾತಿಯ ಸಸ್ತನಿಗಳು, 25 ಜಾತಿಯ ಸರೀಸೃಪಗಳು, 240 ಜಾತಿಯ ಪಕ್ಷಿಗಳು, 41 ಜಾತಿಯ ಮೀನುಗಳು, 3 ಜಾತಿಯ ಕಪ್ಪೆಗಳು, 27 ಜಾತಿಯ ಚಿಟ್ಟೆಗಳು ಇವೆ. 
6
+ 4,801 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಅಘನಾಶಿನಿ ಅಳಿವೆಯು ಅಘನಾಶಿನಿ ನದಿಯು ಅರಬ್ಬೀ ಸಮುದ್ರದೊಂದಿಗೆ ಸೇರುವ ಸ್ಥಳದಲ್ಲಿ ರೂಪುಗೊಂಡಿದೆ. ಈ ಪ್ರದೇಶದಲ್ಲಿ ಮೀನುಗಾರಿಕೆ, ಕೃಷಿ, ಏಡಿಗಳ ಸಂಗ್ರಹ, ಸಿಗಡಿ ಸಾಕಣೆ, ಸಾಂಪ್ರದಾಯಿಕ ಮೀನು ಸಾಕಣೆ ನಡೆಯುತ್ತಿದ್ದು, ಸುಮಾರು 7,500 ಕುಟುಂಬಗಳ ಜೀವನೋಪಾಯಕ್ಕೆ ಈ ಚಟುವಟಿಕೆಗಳು ನೆರವಾಗಿವೆ. 
7
+ ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶವು 50 ಹೆಕ್ಟೇರ್‌ನಲ್ಲಿ ಹರಡಿದೆ. ಇದು 166 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಚಳಿಗಾಲದಲ್ಲಿ ಇಲ್ಲಿಗೆ 8 ಸಾವಿರ ಪಕ್ಷಿಗಳು ಬರುತ್ತವೆ.  
8
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ರೇರಾ' ಅಧ್ಯಕ್ಷ ಹುದ್ದೆ ಶೀಘ್ರ ಭರ್ತಿ ಹೈಕೋರ್ಟ್‌ಗೆ ಸರ್ಕಾರದ ಹೇಳಿಕೆ.txt ADDED
@@ -0,0 +1,6 @@
 
 
 
 
 
 
 
1
+ ಬೆಂಗಳೂರು: ‘ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ರೇರಾ) ಮೇಲ್ಮನವಿ ನ್ಯಾಯಮಂಡಳಿಗೆ ಮುಂದಿನ ಮೂರು ವಾರಗಳಲ್ಲಿ ಅಧ್ಯಕ್ಷ ಮತ್ತು ಸದಸ್ಯರನ್ನು ಭರ್ತಿ ಮಾಡಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
2
+ ‘ರೇರಾ ಮೇಲ್ಮನವಿ ನ್ಯಾಯಮಂಡಳಿಗೆ ಮುಖ್ಯಸ್ಥರನ್ನು ನೇಮಿಸಲು ನಿರ್ದೇಶಿಸಬೇಕು’ ಎಂದು ಕೋರಿ ಮ್ಯಾಥ್ಯೂ ಥಾಮಸ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
3
+ ವಿಚಾರಣೆ ವೇಳೆ ಅಡ್ವೊಕೇಟ್‌​ ಜನರಲ್​ ಕೆ.ಶಶಿಕಿರಣ್​ ಶೆಟ್ಟಿ ಅವರು, ‘ರೇರಾದ ಒಬ್ಬ ಸದಸ್ಯ 2024ರ ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಸದಸ್ಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ತಿಳಿಸಿದರು.
4
+ ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ರೇರಾದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯಲ್ಲಿ ವಿಳಂಬ ಮಾಡಬಾರದು. ಸದಸ್ಯರ ನಿವೃತ್ತಿ ನಂತರ ತಕ್ಷಣವೇ ಅಧಿಕಾರ ವಹಿಸಿಕೊಳ್ಳುವಂತಿರಬೇಕು’ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
5
+ ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ, ‘ರಾಜ್ಯ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡದೇ ಇರುವ ಕಾರಣ ನ್ಯಾಯಮಂಡಳಿ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಹೈಕೋರ್ಟ್‌ನಲ್ಲಿ ಬಾಕಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
6
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ' 2024 ಪ್ರಶಸ್ತಿ ಪ್ರಕಟ.txt ADDED
@@ -0,0 +1,8 @@
 
 
 
 
 
 
 
 
 
1
+ ಬೆಂಗಳೂರು: 'ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024' ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದೆ.
2
+ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮವಾಗಿ ಒದಗಿಸಿರುವ ಕಂದಾಯ ಅಧಿಕಾರಿಗಳ ಶ್ರೇಷ್ಠ ಸೇವೆಯನ್ನು ಗುರುತಿಸಿ ಜಿಲ್ಲಾಧಿಕಾರಿಗಳಿಗೆ ಸಹಾಯಕ ಆಯುಕ್ತರುಗಳಿಗೆ, ತಹಶೀಲ್ದಾರಗಳಿಗೆ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.
3
+ ಸೆಪ್ಟೆಂಬರ್ 27ರಂದು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ನಡೆಯಲಿರುವ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಅಭಿನಂದನಾ ಸಭೆಯಲ್ಲಿ 'ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024' ಪ್ರಶಸ್ತಿ ವಿತರಣೆ ನಡೆಯಲಿದೆ.
4
+ ಈ ಕೆಳಕಂಡ ಅಧಿಕಾರಿಗಳನ್ನು 'ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
5
+ ಕಂದಾಯ ಇಲಾಖೆಯ 2023-24 ನೇ ಸಾಲಿನ ಅತ್ಯುತ್ತಮ ಕಂದಾಯ ಅಧಿಕಾರಿಗಳ ಪಟ್ಟಿ:
6
+ ಗ್ರಾಮ ಆಡಳಿತ ಅಧಿಕಾರಿಗಳು:
7
+ ಕಂದಾಯ ಆಯುಕ್ತಾಲಯ
8
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ವಿಶೇಷಾತಿಥ್ಯ' ಬಹಿರಂಗಕ್ಕೆ ದರ್ಶನ್ ಆತ್ಮೀಯತೆಗಾಗಿ ರೌಡಿ ಗುಂಪುಗಳ ಪೈಪೋಟಿ ಕಾರಣ.txt ADDED
@@ -0,0 +1,8 @@
 
 
 
 
 
 
 
 
 
1
+ ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ದರ್ಶನ್‌ ಅವರಿಗೆ ವಿಶೇಷ ಆತಿಥ್ಯ ಹಾಗೂ ನಟನ ಜತೆಗೆ ಆತ್ಮೀಯತೆ ಬೆಳೆಸುವ ವಿಚಾರಕ್ಕೆ ಎರಡು ರೌಡಿ ಗುಂಪುಗಳ ಮಧ್ಯೆ ಉಂಟಾದ ಗಲಾಟೆಯಿಂದ ‘ರೌಂಡ್‌ ಟೇಬಲ್ ಪಾರ್ಟಿ’, ಬ್ಯಾರಕ್‌ ಒಳಗಿರುವ ಫೋಟೊಗಳು ಬಹಿರಂಗಗೊಂಡಿವೆ ಎಂಬುದು ಗೊತ್ತಾಗಿದೆ.
2
+ ಬೇರೆ ಬೇರೆ ಪ್ರಕರಣಗಳಲ್ಲಿ ಜೈಲಿನಲ್ಲಿರುವ ರೌಡಿಗಳಾದ ಬೇಕರಿ ರಘು ಹಾಗೂ ವಿಲ್ಸನ್‌ ಗಾರ್ಡನ್‌ ನಾಗ ಮಧ್ಯೆ ಉಂಟಾದ ಗಲಾಟೆಯಿಂದ ದರ್ಶನಾತಿಥ್ಯದ ಫೋಟೊಗಳು ಹೊರಬಂದಿವೆ ಎನ್ನಲಾಗಿದೆ.
3
+ ‘ಸೈಕಲ್‌ ರವಿಯ ಬಲಗೈ ಬಂಟ ಬೇಕರಿ ರಘು ಪರಿಚಯ ಮೊದಲೇ ದರ್ಶನ್‌ಗಿತ್ತು. ಆದರೆ, ವಿಲ್ಸನ್‌ ಗಾರ್ಡನ್‌ ನಾಗ ಪರಿಚಯ ಇರಲಿಲ್ಲ. ದರ್ಶನ್‌ ಪರಪ್ಪನ ಅಗ್ರಹಾರ ಸೇರಿದ ಬಳಿಕ ರಘು ಉಸ್ತುವಾರಿಯಲ್ಲಿ ವಿಶೇಷ ಆತಿಥ್ಯ ದೊರೆಯುತ್ತಿತ್ತು. ರಘು ತನ್ನ ಪರಿಚಯಸ್ಥರಿಂದ ನಟನಿಗೆ ಕೆಲವು ಸೌಲಭ್ಯಗಳನ್ನು ಒದಗಿಸುತ್ತಿದ್ದ. ದಿನ ಕಳೆದಂತೆ ದರ್ಶನ್‌ ಅವರು ರಘುವಿನಿಂದ ದೂರವಾದರು ಎನ್ನಲಾಗಿದೆ.
4
+ ವಿಲ್ಸನ್‌ ಗಾರ್ಡನ್‌ ನಾಗನ ಸ್ನೇಹ ಬೆಳೆಸಿದ್ದರು. ನಂತರ, ನಾಗನೇ ದರ್ಶನ್‌ಗೆ ಬೇಕಾದ ಸೌಲಭ್ಯ ಕಲ್ಪಿಸುತ್ತಿದ್ದ. ಜೈಲಿನ ಒಳಗೆ ಇಬ್ಬರೂ ತಮ್ಮ ಸಹಚರರ ಜತೆಗೆ ‘ರೌಂಡ್‌ ಟೇಬಲ್ ಪಾರ್ಟಿ’ ನಡೆಸುತ್ತಿದ್ದರು. ಇದು ರಘುಗೆ ಸಿಟ್ಟು ತರಿಸಿತ್ತು. ಇದೇ ವಿಚಾರಕ್ಕೆ ಒಂದು ರೌಡಿ ಗುಂಪು ಫೋಟೊ ತೆಗೆದು ಹೊರಗಿದ್ದ ವ್ಯಕ್ತಿಯೊಬ್ಬರಿಗೆ ಕಳುಹಿಸಿತ್ತು. ಈ ಬಗ್ಗೆಯೂ ಪೊಲೀಸ್‌ ತನಿಖೆ ಆರಂಭವಾಗಿದೆ.
5
+ ನಾಗನಿಗೆ ಒಂದು ಬ್ಯಾರಕ್‌ನಿಂದ ಮತ್ತೊಂದು ಬ್ಯಾರಕ್‌ಗೆ ಹೋಗಲು ಜೈಲಿನ ಅಧಿಕಾರಿಗಳೇ ಅನುಮತಿ ನೀಡಿದ್ದರು. ಆಗಾಗ್ಗೆ ದರ್ಶನ್‌ ಬ್ಯಾರಕ್‌ಗೂ ಹೋಗುತ್ತಿದ್ದ’ ಎಂದು ಮೂಲಗಳು ಹೇಳಿವೆ.
6
+ ಫೋಟೊ ತೆಗೆದಿದ್ದ ವೇಲುಗೆ ಥಳಿತ?
7
+ ‘ದರ್ಶನ್, ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳ ಸೀನ ಹಾಗೂ ದರ್ಶನ್‌ ವ್ಯವಸ್ಥಾಪಕ ನಾಗರಾಜ್‌ ಅವರು ಸಿಗರೇಟ್‌ ಸೇದುತ್ತಾ ಕುರ್ಚಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿರುವ ಫೋಟೊ ತೆಗೆದಿದ್ದ ರೌಡಿ ವೇಲುಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ‘ಫೋಟೊ ತೆಗೆದು ನೀನೇ ಮಾಧ್ಯಮಕ್ಕೆ ಕಳುಹಿಸಿದ್ದೀಯಾ’ ಎಂದು ಆಕ್ರೋಶಗೊಂಡ ನಾಗನ ಕಡೆಯವರು ಥಳಿಸಿದ್ದಾರೆ’ ಎಂಬ ಮಾಹಿತಿ ಹರಿದಾಡುತ್ತಿದೆ.
8
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಶಾರ್ಪ್‌ ಶೂಟರ್‌’ ಕೂಡ ವನ್ಯಜೀವಿ ಮಂಡಳಿ ಸದಸ್ಯ ಅರಣ್ಯ ಅಧಿಕಾರಿಗಳಿಂದಲೇ ಆಕ್ಷೇಪ.txt ADDED
@@ -0,0 +1,7 @@
 
 
 
 
 
 
 
 
1
+ ಬೆಂಗಳೂರು: ಅರಣ್ಯಭೂಮಿ ಒತ್ತುವರಿ ಮಾಡಿದ ಪ್ರಕರಣದ ಆರೋಪ ಎದುರಿಸುತ್ತಿರುವ ಮತ್ತು ವನ್ಯಜೀವಿಗಳ ಶಾರ್ಪ್‌ ಶೂಟರ್‌ ಆಗಿರುವ ಗ್ಯಾನ್‌ಚಂದ್ ಸುಶೀಲ್ ಅವರನ್ನು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
2
+ ರಾಜ್ಯದ ಅರಣ್ಯದ ಸಂಪತ್ತು ಮತ್ತು ವನ್ಯಜೀವಿ ಸಂಕುಲವನ್ನು ಉಳಿಸಿ, ಬೆಳೆಸಲು ಸರ್ಕಾರಕ್ಕೆ ಸಲಹೆ– ಸೂಚನೆಗಳನ್ನು ನೀಡಬೇಕಾದ ಜಾಗದಲ್ಲಿ ‘ಕುರಿಗಳನ್ನು ಕಾಯಲು ತೋಳ’ವನ್ನು ನೇಮಿಸಿದ ಹಾಗೆ ಆಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
3
+ ವನ್ಯಜೀವಿ ಮಂಡಳಿಗೆ ಇತ್ತೀಚೆಗಷ್ಟೇ ಸದಸ್ಯರನ್ನು ನೇಮಕ ಮಾಡಲಾಗಿತ್ತು. ಈ ಪಟ್ಟಿಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಸಚಿವರು ಕೊಟ್ಟ ಹೆಸರುಗಳೂ ಸೇರ್ಪಡೆ ಆಗಲಿಲ್ಲ. ನೇರ ಮುಖ್ಯಮಂತ್ರಿ ಕಚೇರಿಯಿಂದಲೇ ಪಟ್ಟಿಯನ್ನು ಸಿದ್ಧಪಡಿಸಿ ಒಪ್ಪಿಗೆ ಪಡೆಯಲಾಗಿದೆ. ಆ ಪೈಕಿ ಗ್ಯಾನ್‌ಚಂದ್ ಸುಶೀಲ್‌ ಹೆಸರು ಕೂಡಾ ಒಂದು ಎಂದು ಅವರು ಹೇಳಿದರು.
4
+ ‘ಅರಣ್ಯ ಇಲಾಖೆಯ ಕೋರಿಕೆ ಮೇರೆಗೆ ಸುಶೀಲ್ ಅವರು ಅರಣ್ಯಗಳಲ್ಲಿ ಮಾನವ ಭಕ್ಷಕ ಹುಲಿ, ಚಿರತೆಗಳನ್ನು ಕೊಂದಿದ್ದಾರೆ. ಆ ಕ್ಷೇತ್ರದಲ್ಲಿ ಅವರಿಗೆ ಪರಿಣತಿ ಇರುವುದರಿಂದ ಆ ಕೆಲಸಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಹಾಗೆಂದ ಮಾತ್ರಕ್ಕೆ ವನ್ಯಜೀವಿ ಮಂಡಳಿಗೇ ಪ್ರವೇಶ ನೀಡಬೇಕೆ’ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ.
5
+ 2009 ರಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್‌ ಅವರ ಮೇಲೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲು ಮಾಡಿತ್ತು ಮತ್ತು ಒತ್ತುವರಿ ಮಾಡಿದ ಭೂಮಿಯನ್ನು ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಶೀಲ್ ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರು. ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೆಳಹಂತದ ಅರಣ್ಯ ಅಧಿಕಾರಿಗಳಿಗೆ ಅಧಿಕಾರವಿಲ್ಲ. ಹೀಗಾಗಿ, ಎಫ್‌ಐಆರ್‌ ರದ್ದು ಮಾಡಬೇಕು ಎಂದು ರಿಟ್‌ ಅರ್ಜಿಯಲ್ಲಿ ಕೋರಿದ್ದರು.
6
+ ರಿಟ್‌ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಅರಣ್ಯ ಕಾಯ್ದೆಯ ಸೆಕ್ಷನ್‌2(6) ರಲ್ಲಿ ‘ಅರಣ್ಯ ಅಧಿಕಾರಿಗಳು’ ಯಾರು ಎಂಬುದನ್ನು  ಸ್ಪಷ್ಟವಾಗಿ ತಿಳಿಸಿದೆ. ಅರಣ್ಯವಲಯ ಅಧಿಕಾರಿ, ಅರಣ್ಯಾಧಿಕಾರಿ, ಅರಣ್ಯ ಗಾರ್ಡ್‌ ಮತ್ತು ಅರಣ್ಯ ವಾಚರ್‌ ಕೂಡ ‘ಅರಣ್ಯ ಅಧಿಕಾರಿ’ ವ್ಯಾಪ್ತಿಗೆ ಬರುತ್ತಾರೆ. ಇವರು ಎಫ್‌ಐಆರ್ ದಾಖಲು ಮಾಡಲು ಅಧಿಕಾರ ಹೊಂದಿದ್ದಾರೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿತ್ತು.
7
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಸಾಲರಾಮಯ್ಯನ ಸೋಗಲಾಡಿ' ಬಜೆಟ್ ವಿರೋಧ ಪಕ್ಷದ ನಾಯಕ ಆರ್‌. ಅಶೋಕ.txt ADDED
@@ -0,0 +1,9 @@
 
 
 
 
 
 
 
 
 
 
1
+ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್. ಬಜೆಟ್ ಬಗೆಗಿನ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದು, ಇದು‌‌ 'ಸಾಲರಾಮಯ್ಯನ ಸೋಗಲಾಡಿ' ಬಜೆಟ್ ಆಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದ್ದಾರೆ.
2
+ ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಬಜೆಟ್ ತಯಾರಿಕೆ ಎನ್ನುವುದು ಗಂಭೀರವಾದ ಪವಿತ್ರ ಸಾಂವಿಧಾನಿಕ ಕರ್ತವ್ಯ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ನೋಡಿದರೆ ಇದೊಂದು ‘ಅಡ್ಡಕಸುಬಿ' ಬಜೆಟ್‌ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ' ಎಂದು ದೂರಿದ್ದಾರೆ.
3
+ ‘ಸಾಧನೆಯ ಬಲದಿಂದಾಗಲಿ, ಅಭಿವೃದ್ಧಿ ಕೆಲಸಗಳಿಂದಾಗಲಿ ಲೋಕಸಭೆ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ತಿಳಿದಿರುವ ಸಿಎಂ ಸಿದ್ದರಾಮಯ್ಯ ‌ಅವರು ಬಜೆಟ್ ಮಂಡನೆಯ ಪವಿತ್ರ ಸಾಂವಿಧಾನಿಕ ಕರ್ತವ್ಯವನ್ನ ಚುನಾವಣಾ ಭಾಷಣದಂತೆ ದುರ್ಬಳಕೆ ಮಾಡಿಕೊಂಡು ಸಂವಿಧಾನಕ್ಕೆ ಮತ್ತು ಮತ ನೀಡಿ ಅಧಿಕಾರ ಕೊಟ್ಟ ಕನ್ನಡಿಗರಿಗೆ ಅಪಮಾನ ಎಸಗಿದ್ದಾರೆ'.
4
+ ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿ ಮಾಡಿದ ಅತಿದೊಡ್ಡ ಸಾಧನೆ ಎಂದರೆ ಒಂದು ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ₹44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೇರಿದ್ದು. ಆ ಭಾಗ್ಯ ಈ ಭಾಗ್ಯ ಎಂದು ಎಂದು ರಾಜ್ಯದ ಜನತೆಯ ಮೇಲೆ ಸಾಲ ಭಾಗ್ಯ ಹೊರಿಸಿ ಹಳಿ ತಪ್ಪಿಸಿದ್ದ ರಾಜ್ಯದ ವಿತ್ತೀಯ ಶಿಸ್ತನ್ನ ಬಿಜೆಪಿ ಸರ್ಕಾರ ಕೋವಿಡ್ ಸಂಕಷ್ಟದ ಹೊರತಾಗಿಯೂ ಸರಿದಾರಿಗೆ ತಂದಿತ್ತು.
5
+ ಆದರೆ ಈಗ ತಮ್ಮ 2ನೇ ಅವಧಿಯಲ್ಲೂ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಸಲು ಹೊರಟಿದ್ದಾರೆ. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು' ಎಂಬುದು ಈ ಸರ್ಕಾರದಲ್ಲಿ 'ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ' ಎಂಬಂತಾಗಿದೆ.
6
+ ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್ ಎಂದು ಅಶೋಕ್ ಹೇಳಿದ್ದಾರೆ.
7
+ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಅಂಶಗಳೇ ಇಲ್ಲ. ಇದನ್ನು ಖಂಡಿಸಿ, ಸದನ ಬಹಿಷ್ಕರಿಸಿ, ವಿಧಾನ ಸೌಧದ ಎದುರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಪ್ರತಿಭಟನೆ ನಡೆಸಿದರು.
8
+ ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಎರಡೂ ಪಕ್ಷಗಳ ಉಭಯ ಸದನಗಳ ಸದಸ್ಯರು ಉಪಸ್ಥಿತರಿದ್ದರು.
9
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಸಾವರ್ಕರ್‌' ಗಾಯನಕ್ಕೆ ವಿದ್ಯಾರ್ಥಿನಿಯರು ಪ್ರಾಂಶುಪಾಲರ ವಿರುದ್ಧ ವರದಿ ಸಲ್ಲಿಕೆ.txt ADDED
@@ -0,0 +1,12 @@
 
 
 
 
 
 
 
 
 
 
 
 
 
1
+ ಹಾವೇರಿ: ನಗರದ ಇಜಾರಿಲಕಮಾಪುರದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರನ್ನು ‘ವೀರ ಸಾವರ್ಕರ್‌ ಸಂಸ್ಮರಣೆ’ ಖಾಸಗಿ ಕಾರ್ಯಕ್ರಮದ ಸಮೂಹಗಾಯನ ತರಬೇತಿಗೆ ಕಳುಹಿಸಿದ್ದ ಪ್ರಾಂಶುಪಾಲ ಕೆ.ಕೃಷ್ಣಪ್ಪ ವಿರುದ್ಧ ಶಿಸ್ತುಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ.
2
+ ಡಿ.12ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಮತ್ತು ಹಾವೇರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್‌ ಅವರು ಕಾಲೇಜಿಗೆ ಭೇಟಿ ನೀಡಿದ ಸಂದರ್ಭ, ಹಾಜರಾತಿ ಅತ್ಯಂತ ಕಡಿಮೆ ಇರುವ ಬಗ್ಗೆ ಪ್ರಶ್ನಿಸಿದಾಗ, ಸುಮಾರು 95 ವಿದ್ಯಾರ್ಥಿನಿಯರು ‘ವೀರ ಸಾವರ್ಕರ್‌ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿರುವ ಸಮೂಹ ಗಾಯನದ ತರಬೇತಿಗೆ ಹೋಗಿರುವುದಾಗಿ ಉಪನ್ಯಾಸಕರು ಮಾಹಿತಿ ನೀಡಿದ್ದರು.
3
+ ವರದಿ ಸಲ್ಲಿಸಿ:
4
+ ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇಲಾಖೆಗೆ ವರದಿ ಸಲ್ಲಿಸಲು ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದ್ದರು.
5
+ ‘ಪ್ರಾಂಶುಪಾಲ ಕೆ.ಕೃಷ್ಣಪ್ಪ ಅವರು ಇಲಾಖೆಯಿಂದ ಆಯೋಜಿಸುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಖಾಸಗಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಲು ಅನುಮತಿ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
6
+ ಹಾವೇರಿ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಪುತ್ರ ಕೆ.ಇ. ಕಾಂತೇಶ್‌ ಅವರ ಮುಖಂಡತ್ವದಲ್ಲಿ ಡಿ.17ರಂದು ಆಯೋಜಿದ್ದ ‘ವೀರ ಸಾವರ್ಕರ್‌ ಸಂಸ್ಮರಣೆ’ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಮೂಹ ಗಾಯನ ಪ್ರಸ್ತುತಪಡಿಸಿದ್ದರು. ಅದರಲ್ಲಿ ಇಜಾರಿಲಕಮಾಪುರದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಕೂಡ ಇದ್ದರು ಎನ್ನಲಾಗಿದೆ.
7
+ 2021ರಲ್ಲಿ ತುಮಕೂರು ಜಿಲ್ಲೆ ತಾವರೆಕೆರೆ ತಾಲ್ಲೂಕು ಸೀಗೆಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಪ್ಪ ಅವರು ಶಿಸ್ತುಕ್ರಮದ ಇಲಾಖೆ ವಿಚಾರಣೆ ಬಾಕಿ ಇದ್ದರೂ, ವಿಚಾರಣೆ ಬಾಕಿ ಇಲ್ಲವೆಂದು ತಪ್ಪು ಮಾಹಿತಿ ನೀಡಿ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.
8
+ ಈ ಹಿನ್ನೆಲೆಯಲ್ಲಿ ಕೆ.ಕೃಷ್ಣಪ್ಪ ಅವರಿಗೆ ಪ್ರಾಂಶುಪಾಲ ಹುದ್ದೆಗೆ ಬಡ್ತಿ ನೀಡಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2023ರ ಸೆ.29ರಂದು ಆದೇಶ ನೀಡಿತ್ತು.
9
+ 2023ರ ನ.20ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಇಲಾಖೆಯ ಆದೇಶವನ್ನು ಜಾರಿಗೊಳಿಸಿ ಸ್ವೀಕೃತಿ ಪತ್ರವನ್ನು ನಿರ್ದೇಶನಾಲಯಕ್ಕೆ ಸಲ್ಲಿಸಲು ಜ್ಞಾಪನ ಪತ್ರ ಹೊರಡಿಸಿದ್ದರು. ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಹಾಗೂ ಇಜಾರಿಲಕಮಾಪುರ ಕಾಲೇಜಿನ ಪ್ರಭಾರವನ್ನು ಹಿರಿಯ ಉಪನ್ಯಾಸಕರಿಗೆ ನೀಡಲು ಸೂಚಿಸಿದ್ದರು.
10
+ ಡಿ.17ರವರೆಗೂ ಇಜಾರಿಲಕಮಾಪುರದ ಕಾಲೇಜಿನಲ್ಲೇ ಪ್ರಾಂಶುಪಾಲರಾಗಿ ಮುಂದುವರಿದಿದ್ದ ಕೆ.ಕೃಷ್ಣಪ್ಪ ಅವರು ಡಿ.18ರಂದು ಪ್ರಾಚಾರ್ಯರ ಹುದ್ದೆಯಿಂದ ಬಿಡುಗಡೆ ಹೊಂದಿದ್ದಾರೆ.
11
+ ‘ವೀರ ಸಾವರ್ಕರ್‌ ಸಂಸ್ಮರಣೆ’ ಕಾರ್ಯಕ್ರಮದ ಸಮೂಹ ಗಾಯನದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ, ಈ ಬಗ್ಗೆ ಇಲಾಖೆಗೆ ವರದಿ ಸಲ್ಲಿಸಿದ ವೇಳೆಯಲ್ಲೇ ಕೃಷ್ಣಪ್ಪ ಅವರು ಹಿಂಬಡ್ತಿ ಪಡೆದಿರುವುದು ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
12
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/'ಸಿಂಹ' ಸೈಡ್ ಸರಿಸಿ BJP ಟಿಕೆಟ್ ಗಿಟ್ಟಿಸಿದ ಸ್ಟೈಲಿಶ್ ಯದುವೀರ್‌ ಹಿನ್ನೆಲೆ ಏನು.txt ADDED
@@ -0,0 +1,4 @@
 
 
 
 
 
1
+ ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸಕ್ರಿಯವಾಗಿದ್ದಾರೆ. ‘ಫೇಸ್‌ಬುಕ್‌’, ‘ಎಕ್ಸ್‌’ನಲ್ಲಿ ಅಪಾರ ‘ಫಾಲೋವರ್‌’ಗಳನ್ನು ಹೊಂದಿದ್ದಾರೆ.
2
+ ಫೇಸ್‌ಬುಕ್‌ ಖಾತೆಯಲ್ಲಿ ತಮ್ಮ ಅಭಿಪ್ರಾಯ, ಪಾಲ್ಗೊಳ್ಳುವ ಕಾರ್ಯಕ್ರಮಗಳ ಫೋಟೊಗಳು, ಅರಮನೆಯಲ್ಲಿನ ವಿಶೇಷಗಳು, ಚಟುವಟಿಕೆಗಳು ಮೊದಲಾದವುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
3
+ ಹೊಸ ಟ್ರೆಂಡಿಂಗ್ ಹಾಗೂ ಸ್ಟೈಲ್ ಅಳವಡಿಕೆಯಲ್ಲಿ ಸದಾ ಮುಂದು. ಬ್ರಾಂಡೆಂಡ್ ಬಟ್ಟೆಗಳು, ದುಬಾರಿ ಕನ್ನಡಕ, ವಾಚ್‌ಗಳನ್ನು ಬಳಸುತ್ತಾರೆ. ರಾಜವಂಶದವರು ಧರಿಸುವ ಕಿವಿಓಲೆಯನ್ನು ಹಾಕುವುದು ವಿಶೇಷ. ದಸರಾ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ, ಗಂಭೀರವದನರಾಗಿ ರತ್ನಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸುತ್ತಾರೆ. ರೇಸ್ ಹಾಗೂ ಗಾಲ್ಫ್‌ನಲ್ಲೂ ಅವರಿಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ಟರ್ಫ್ ಕ್ಲಬ್‌ಗಳಿಂದ ಆಯೋಜಿಸಲಾಗುವ ಡರ್ಬಿ ವೀಕ್ಷಿಸಲು ಸ್ಟೈಲಿಶ್ ಆಗಿ ಪಾಲ್ಗೊಳ್ಳುತ್ತಾರೆ. ಅವರನ್ನು ಇದೀಗ, ಬಿಜೆಪಿ ಟಿಕೆಟ್‌ ಹುಡುಕಿಕೊಂಡು ಬಂದಿದೆ.
4
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/1.09 ಕೋಟಿ ಪಹಣಿಗೆ ಆಧಾರ್ ಲಿಂಕ್ ಹಲವು ಜಿಲ್ಲೆಗಳಲ್ಲಿ ರೈತರ ನಿರಾಸಕ್ತಿ.txt ADDED
@@ -0,0 +1,39 @@
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1
+ ಹಾವೇರಿ: ಆಸ್ತಿ ಅಕ್ರಮ ನೋಂದಣಿ ತಡೆಗೆ ರಾಜ್ಯ ಸರ್ಕಾರ ‘ನನ್ನ ಆಧಾರ್‌ದೊಂದಿಗೆ ನನ್ನ ಆಸ್ತಿ ಸುಭದ್ರ’ ಅಭಿಯಾನ ಆರಂಭಿಸಿದೆ. ರಾಜ್ಯದ 4.03 ಕೋಟಿ ಆಸ್ತಿಗಳ ಪೈಕಿ 1.09 ಕೋಟಿ ಆಸ್ತಿ ಪಹಣಿಗೆ ಮಾತ್ರ ಆಧಾರ್ ಜೋಡಣೆ ಆಗಿದೆ. ನಿಗದಿತ ಗುರಿಯಲ್ಲಿ ಈವರೆಗೆ ಶೇ 39.82ರಷ್ಟು ಸಾಧನೆ ಮಾಡಲು ಮಾತ್ರ ಸಾಧ್ಯವಾಗಿದೆ.
2
+ ‘ಬೆಳೆ ಪರಿಹಾರ ಮತ್ತು ಸರ್ಕಾರದ ಇತರೆ ಸೌಲಭ್ಯ ಸಿಗುವುದಿಲ್ಲ’ ಎಂಬ ಭಾವನೆಯಲ್ಲಿ ರೈತರು ತಮ್ಮ ಆಸ್ತಿಗಳ ಪಹಣಿಗೆ (ಉತಾರ್ ಅಥವಾ ಆರ್‌ಟಿಸಿ) ಆಧಾರ್ ಜೋಡಣೆ ಮಾಡಲು ನಿರಾಸಕ್ತಿ ಹೊಂದಿದ್ದಾರೆ.
3
+ ರಾಜ್ಯದಲ್ಲಿ ಅತಿ ಹೆಚ್ಚು ಪಹಣಿಗಳಿಗೆ ಆಧಾರ್ ಜೋಡಣೆ ಮಾಡಿರುವ ಜಿಲ್ಲೆಗಳ ಪೈಕಿ ಕೋಲಾರ (ಶೇ 68.50) ಮೊದಲನೇ ಸ್ಥಾನದಲ್ಲಿದೆ. ವಿಜಯನಗರ (ಶೇ 68.37) ಮತ್ತು ದಾವಣಗೆರೆ (ಶೇ 68.04) ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಉಡುಪಿ (ಶೇ 18.77) ಕೊನೆ ಸ್ಥಾನದಲ್ಲಿದೆ.
4
+ ‘ರಾಜ್ಯದಲ್ಲಿ 4.03 ಕೋಟಿ ಆಸ್ತಿಗಳಿಗೆ ಪಹಣಿ ಇದೆ. ರೈತರು, ಪಹಣಿಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ. ಕಂದಾಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುವುದರ ಜೊತೆಗೆ ಗ್ರಾಮ ಲೆಕ್ಕಾಧಿಕಾರಿಗಳು ಟ್ಯಾಬ್‌ಗಳ ಸಹಿತ ರೈತರ ಬಳಿ ತೆರಳಿ ಆಧಾರ್ ಜೋಡಣೆ ಮಾಡುತ್ತಿದ್ದಾರೆ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
5
+ ‘ಪಹಣಿ ಮುಂದಿಟ್ಟುಕೊಂಡು ಯಾರದ್ದೋ ಆಸ್ತಿ, ಬೇರೆ ಯಾರೋ ನೋಂದಣಿ ಮಾಡಿಕೊಳ್ಳುತ್ತಿದ್ದ ಪ್ರಕರಣಗಳು ಹೆಚ್ಚಿದ್ದವು. ಕೃಷಿ ಜಮೀನು ಇಲ್ಲದವರು ಯಾರದ್ದೋ ಪಹಣಿ ಬಳಸಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದ ಪ್ರಕರಣಗಳು ಇದ್ದವು. ಇದೇ ಕಾರಣಕ್ಕೆ, ಪಹಣಿಗೆ ಆಧಾರ್ ಜೋಡಿಸಲಾಗುತ್ತಿದೆ. ಆಧಾರ್ ಜೋಡಣೆಯಾದರೆ, ಆಸ್ತಿ ಅಕ್ರಮ ನೋಂದಣಿಗೆ ಕಡಿವಾಣ ಬೀಳಲಿದೆ’ ಎಂದು ಅವರು ಹೇಳಿದರು.
6
+ ಜಿಲ್ಲಾವಾರು ಸಾಧನೆ ಪಟ್ಟಿ
7
+ ಜಿಲ್ಲೆ;ಒಟ್ಟು ಪಹಣಿ (ಲಕ್ಷಗಳಲ್ಲಿ);ಆಧಾರ್ ಜೋಡಣೆಯಾದ ಪಹಣಿ(ಲಕ್ಷಗಳಲ್ಲಿ)
8
+ ಕೋಲಾರ; 10.02; 4.23
9
+ ವಿಜಯನಗರ; 6.34; 3.11
10
+ ದಾವಣಗೆರೆ; 8.27; 4.41
11
+ ಬಳ್ಳಾರಿ; 5.13; 2.58
12
+ ಧಾರವಾಡ; 10.76; 3.25
13
+ ಯಾದಗಿರಿ; 5.78; 2.80
14
+ ಚಿಕ್ಕಬಳ್ಳಾಪುರ; 8.89; 3.46
15
+ ಗದಗ; 7.36; 3.03
16
+ ಹಾವೇರಿ; 12.61; 4.33
17
+ ಚಿಕ್ಕಮಗಳೂರು; 8.41; 3.42
18
+ ಚಾಮರಾಜನಗರ; 6.46; 2.37
19
+ ಬೀದರ್; 5.83; 2.14
20
+ ತುಮಕೂರು; 25.79; 8.38
21
+ ಬೆಂಗಳೂರು ನಗರ; 6.36; 48 ಸಾವಿರ
22
+ ಕಲಬುರ್ಗಿ; 8.68; 3.10
23
+ ಚಿತ್ರದುರ್ಗ; 10.08; 3.47
24
+ ಶಿವಮೊಗ್ಗ; 7.99; 2.48
25
+ ಉತ್ತರ ಕನ್ನಡ; 20.88; 6.89
26
+ ಕೊಡಗು; 8.61; 1.62
27
+ ರಾಯಚೂರು; 8.16; 2.58
28
+ ದಕ್ಷಿಣ ಕನ್ನಡ; 28.55; 2.73
29
+ ಹಾಸನ; 19.03; 5.65
30
+ ಕೊಪ್ಪಳ; 5.97; 1.79
31
+ ರಾಮನಗರ; 9.59; 2.41
32
+ ಬಾಗಲಕೋಟೆ; 12.70; 3.58
33
+ ಮೈಸೂರು; 16.69; 4.06
34
+ ಬೆಂಗಳೂರು ಗ್ರಾಮಾಂತರ; 7.10; 1.47
35
+ ವಿಜಯಪುರ; 14.91; 3.45
36
+ ಮಂಡ್ಯ; 21.92; 5.93
37
+ ಬೆಳಗಾವಿ; 46.06; 7.78
38
+ ಉಡುಪಿ; 28.11; 2.80
39
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/1.29 ಲಕ್ಷ ಮನೆ ಪೂರ್ಣಗೊಳಿಸಲು ಆರ್ಥಿಕ ನೆರವು ಸಿದ್ದರಾಮಯ್ಯ.txt ADDED
@@ -0,0 +1,8 @@
 
 
 
 
 
 
 
 
 
1
+ ಬೆಂಗಳೂರು: ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ‘ಸರ್ವರಿಗೂ ಸೂರು’ ಯೋಜನೆಯಡಿ ಬಡ ಕುಟುಂಬಗಳಿಗೆ ನಿರ್ಮಿಸುತ್ತಿರುವ 1,29,457 ಮನೆಗಳಿಗೆ ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸಿ ಹಂತ– ಹಂತವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.
2
+ ಗೃಹ ಕಚೇರಿ ಕೃಷ್ಣಾದಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನೆ ಬುಧವಾರ ನಡೆಯಿತು.
3
+ ನಿರ್ಮಾಣ‌ದ ವಿವಿಧ ಹಂತದಲ್ಲಿರುವ 1,29,457 ಮನೆಗಳಿಗೆ ಎಷ್ಟು ಹಣ ಬೇಕಾಗಬಹುದು. ಈ ವರ್ಷ ಗರಿಷ್ಠ ಎಷ್ಟು ಹಣ, ಮುಂದಿನ ವರ್ಷ ಎಷ್ಟು ಹಣ ಕೊಡಲು ಸಾಧ್ಯವಿದೆ ಎಂದು ಪರಿಶೀಲಿಸುವಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. ಅಲ್ಲದೆ, ಫಲಾನುಭವಿಗಳಿಂದ ₹1 ಲಕ್ಷ ಕಡ್ಡಾಯವಾಗಿ ಪಡೆಯಬೇಕು ಎಂದೂ ನಿರ್ದೇಶನ ನೀಡಿದರು. 
4
+ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಎರಡನೇ ಹಂತದಲ್ಲಿ 39,966 ಮನೆ ಹಂಚಿಕೆಗೆ ಸಿದ್ಧವಿದೆ. ಅದಕ್ಕೆ ₹862 ಕೋಟಿ ಅಗತ್ಯವಿದೆ. ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಮೊದಲ ಹಂತದಲ್ಲಿ ಹಂಚಿಕೆಗೆ 11,406 ಮನೆ ಸಿದ್ಧವಿದ್ದು, ಅದಕ್ಕೆ ₹1,879 ಕೋಟಿ ಅಗತ್ಯವಿದೆ. ಈ ಮನೆಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು. 
5
+ ಏನಿದು ಯೋಜನೆ: ‘ಸರ್ವರಿಗೂ ಸೂರು’ ಯೋಜನೆಯಡಿಯಲ್ಲಿ 2013ರಿಂದ 2023‌ರವರೆಗೆ ಮಂಜೂರು ಮಾಡಿದ್ದ ವಸತಿ ಯೋಜನೆಯಡಿ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿಸಲು ಸಾಧ್ಯವಾಗದೆ 2.32 ಲಕ್ಷ ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಈ ವಿಷಯವನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟ ಸಚಿವರು, ಪ್ರತಿ ಕುಟುಂಬದ ಫಲಾನುಭವಿಯ ವಂತಿಗೆ ₹4 ಲಕ್ಷವನ್ನು ಸರ್ಕಾರವೇ ಭರಿಸುವ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದರು.
6
+ ಈ ಹಿಂದೆಯೇ ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಫಲಾನುಭವಿಯ ವಂತಿಗೆ ಸರ್ಕಾರದಿಂದಲೇ ಭರಿಸಲು ಅನುಮತಿ ಸಿಕ್ಕಿತ್ತು. ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗೂ ಇದನ್ನು ಅನ್ವಯಿಸಲು ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ನೀಡಿದರು.
7
+ ಸಭೆಯಲ್ಲಿ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕವಿತಾ ಮಣ್ಣಿಕೇರಿ, ಸುಶೀಲಮ್ಮ ಇದ್ದರು.
8
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/1.50 ಕೋಟಿ ಸದಸ್ಯತ್ವವೆಂದು ಬಿಜೆಪಿಯಿಂದ ಪುಂಗಿ ರಮೇಶ್ ಬಾಬು.txt ADDED
@@ -0,0 +1,4 @@
 
 
 
 
 
1
+ ಬೆಂಗಳೂರು: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1.40 ಕೋಟಿ ಮತಗಳನ್ನು ಪಡೆದಿರುವ ಬಿಜೆಪಿ, 1.50 ಕೋಟಿ ಸದಸ್ಯತ್ವ ಅಭಿಯಾನದ ಪುಂಗಿ ಊದುತ್ತಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.
2
+ ‘ಬಿ.ವೈ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಮೂರು ಗುಂಪುಗಳು ಸೃಷ್ಟಿಯಾಗಿವೆ. ವಿಜಯೇಂದ್ರ ಅವರ ವಿರೋಧಿ ಗುಂಪು ತಮ್ಮನ್ನು ತಾವು ಬಿಜೆಪಿಯಲ್ಲಿ ಜಗನ್ನಾಥ ಭವನದ ಗುಂಪೆಂದು ಗುರುತಿಸಿಕೊಂಡು, ವಿಜಯೇಂದ್ರ ಗುಂಪನ್ನು ಬಾಲಭವನದ ಗುಂಪೆಂದು ಅಪಹಾಸ್ಯ ಮಾಡುತ್ತಿದೆ’ ಎಂದು ಕುಟುಕಿದ್ದಾರೆ.
3
+ ‘ಪಕ್ಷದಲ್ಲಿನ ಗುಂಪುಗಾರಿಕೆ ನಿಭಾಯಿಸಲು ವಿಫಲರಾಗಿರುವ ವಿಜಯೇಂದ್ರ ಅವರು ಪಕ್ಷದ ಸದಸ್ಯತ್ವ ಅಭಿಯಾನದ ನಾಟಕಕ್ಕೆ ಚಾಲನೆ ನೀಡಿದ್ದಾರೆ. ಕೇವಲ ಮೂರು ದಿನಗಳಲ್ಲಿ ಒಂದು ಕೋಟಿ ಸದಸ್ಯತ್ವ ಮಾಡಿರುವುದಾಗಿ ಡಂಗುರ ಸಾರುತ್ತಿರುವ ಅವರು, ರಾಜಕೀಯ ನಿವೃತ್ತಿ ಪಡೆದಿರುವ ತಮ್ಮ ಪಕ್ಷದ ಹಿರಿಯ ಚೇತನಗಳನ್ನು ಸದಸ್ಯತ್ವದ ಹೆಸರಿನಲ್ಲಿ ಕಾಡುವುದನ್ನು ನಿಲ್ಲಿಸಲಿ’ ಎಂದಿದ್ದಾರೆ.
4
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/1.80 ಲಕ್ಷ ಕ್ಯುಸೆಕ್‌ ನೀರು ಹೊರಬಿದ್ದರೂ ಆತಂಕ ಇಲ್ಲ ವಿಜಯನಗರ ಜಿಲ್ಲಾಧಿಕಾರಿ.txt ADDED
@@ -0,0 +1,4 @@
 
 
 
 
 
1
+ ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಿಂದ ಸದ್ಯ 29 ಗೇಟ್‌ಗಳಿಂದ 90 ಸಾವಿರದಿಂದ 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ಬೆಳಿಗ್ಗೆ 11ರ ಬಳಿಕ ಎಲ್ಲಾ ಗೇಟ್‌ಗಳನ್ನು ತೆರೆದು ನದಿಗೆ 1.50 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡುವ ಬಗ್ಗೆ ತುಂಗಭದ್ರಾ ಮಂಡಳಿ ಚಿಂತನೆ ನಡೆಸಿದೆ.
2
+ ಇದಕ್ಕೆ ಪೂರಕವಾಗಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿಕೆ ಬಿಡುಗಡೆ ಮಾಡಿದ್ದು, 2 ಲಕ್ಷ ಕ್ಯುಸೆಕ್‌ನಷ್ಟು ನೀರು ಬಿಟ್ಟರೂ ನದಿ ಪಾತ್ರದ ಜನರು ಆತಂಕಪಡಬೇಕಿಲ್ಲ ಎಂದು ಹೇಳಿದ್ದಾರೆ.
3
+ ’ಕೆಲವು ದಿನಗಳ ಹಿಂದೆ 1.80 ಲಕ್ಷ ಕ್ಯುಸೆಗ್‌ಗಿಂತ ಅಧಿಕ ನೀರನ್ನು ನದಿಗೆ ಹರಿಸಲಾಗಿತ್ತು. ಆಗಲೂ ಏನೂ ತೊಂದರೆ ಆಗಿರಲಿಲ್ಲ. ಈಗಲೂ ಜನ ಭಯಗೊಳ್ಳಬಾರದು. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಮತ್ತು ಬದಲಿ ಗೇಟ್ ಅಳವಡಿಕೆ ತುರ್ತಾಗಿ ಆಗಬೇಕಿರುವುದರಿಂದ ನೀರು ಹೊರಬಿಡುವುದು ಅನಿವಾರ್ಯ. ಜನರು ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
4
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/10 ಪಾಲಿಕೆ ನೌಕರರಿಂದ ಸೆ.5ರಿಂದ ಕೆಲಸ ಸ್ಥಗಿತ ಸರ್ಕಾರಕ್ಕೆ ಎಚ್ಚರಿಕೆ.txt ADDED
@@ -0,0 +1,6 @@
 
 
 
 
 
 
 
1
+ ಬೆಂಗಳೂರು: ರಾಜ್ಯ ಸರ್ಕಾರ 10 ಮಹಾನಗರ ಪಾಲಿಕೆಗಳ ನೌಕರರ ಬೇಡಿಕೆ ಈಡೇರಿಸದಿದ್ದರೆ ಸೆಪ್ಟೆಂಬರ್‌ 5ರಿಂದ ಕೆಲಸ ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ತೀರ್ಮಾನಿಸಿದೆ.
2
+ ಮಂಗಳವಾರ ನಡೆದ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನೌಕರರ ಬೇಡಿಕೆಗಳ ಈಡೇರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೆಪ್ಟೆಂಬರ್‌ 4ರವರೆಗೆ ಗಡುವು ನೀಡಲಾಗಿದೆ. ಅಲ್ಲಿಯವರೆಗೆ ಬೇಡಿಕೆ ಈಡೇರದಿದ್ದರೆ ಕೆಲಸ ಸ್ಥಗಿತ, ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ತಿಳಿಸಿದರು.
3
+ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಪಾಲಿಕೆ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವಿ.ವೆಂಕಟರಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ಸಂಚಾಲಕ ಪ್ರಹ್ಲಾದ್ ಕುಲಕರ್ಣಿ ನೇತೃತ್ವದಲ್ಲಿ ಸಭೆ ನಡೆಯಿತು.
4
+ ಷಡಾಕ್ಷರಿ ಮಾತನಾಡಿ, ಪಾಲಿಕೆ ನೌಕರರ ಸಂಘದ ಹೋರಾಟಕ್ಕೆ ತನ್ನ ಸಂಘವು ಸಂಪೂರ್ಣ ಬೆಂಬಲ ನೀಡುತ್ತದೆ. ಸಚಿವರು, ಇಲಾಖೆಗೆ ಮನವಿ ಸಲ್ಲಿಸಿದರೂ ಸ್ಪಂದಿಸಲಿಲ್ಲ. ಸರ್ಕಾರ ನೌಕರರನ್ನು ಗೌರವಯುತ ನಡೆಸಿಕೊಳ್ಳಬೇಕು’ ಎಂದರು.
5
+ ಬೇಡಿಕೆಗಳೇನು?: ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮತ್ತು ಪಾಲಿಕೆ ಅಧಿಕಾರಿ/ನೌಕರರಿಗೂ ಸಹ ಕೆ.ಜಿ.ಐ.ಡಿ. ಮತ್ತು ಜಿ.ಪಿ.ಎಫ್ ಸೌಲಭ್ಯವನ್ನು ಜಾರಿಗೆ ಮಾಡಬೇಕು. ಎರವಲು ಸೇವೆ ಅಧಿಕಾರಿ ಮತ್ತು ನೌಕರರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿ ಮತ್ತು ಖಾಲಿ ಇರುವ ಎಲ್ಲಾ ವೃಂದದ ಮುಂಬಡ್ತಿಗಳನ್ನು ನೀಡಬೇಕು.
6
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/10 ಮ.ನ.ಪಾ.ಗಳಲ್ಲಿ ₹2 ಸಾವಿರ ಕೋಟಿ ಕಾಮಗಾರಿ ಸಚಿವ ಸಂಪುಟ ಒಪ್ಪಿಗೆ.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯಡಿ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಹಂತ–2ರಡಿ ₹2 ಸಾವಿರ ಕೋಟಿ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
2
+ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
3
+ ₹2 ಸಾವಿರ ಕೋಟಿ ಯೋಜನಾ ಅಂದಾಜಿನಲ್ಲಿ ರಾಜ್ಯ ಸರ್ಕಾರದ ಪಾಲಿನ ಶೇ 7.5 ರಷ್ಟು ಮೊತ್ತ ಅಂದರೆ ₹ 150 ಕೋಟಿ, ಮಹಾನಗರ ಪಾಲಿಕೆಯ ಸ್ವಂತ ಸಂಪನ್ಮೂಲದಿಂದ ಶೇ 7.5 ರಷ್ಟು ಮೊತ್ತ ₹ 150 ಕೋಟಿ ಹಾಗೂ ಯುಐಡಿಎಫ್‌ನಿಂದ ಸಾಲದ ರೂಪದಲ್ಲಿ ಶೇ 85ರಷ್ಟು ಮೊತ್ತ ₹ 17,00 ಕೋಟಿಯಲ್ಲಿ 2024–25 ನೇ ಸಾಲಿನಿಂದ 2026–27ನೇ ಸಾಲಿನವರೆಗೆ ಮೂರು ವರ್ಷಗಳ ಅವಧಿಯಲ್ಲಿ ಪೌರಾಡಳಿತ ನಿರ್ದೇಶನಾಲಯದಿಂದ ರಾಜ್ಯ ಮಟ್ಟದಲ್ಲಿ ಟೆಂಡರ್‌ ಕರೆದು ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ ಎಂದರು.
4
+ ಪಂಚಾಯತ್ ರಾಜ್‌ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸಲು ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗ ಮಾಡಿರುವ ಶಿಫಾರಸು ಕೈಬಿಡಲು ಸಂಪುಟ ಒಪ್ಪಿಗೆ ನೀಡಿದೆ. ಹಾಲಿ ವ್ಯವಸ್ಥೆಯೇ ಮುಂದುವರೆಯಲಿದೆ.
5
+ ಕೆಜಿಐಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ 2018ರಿಂದ 2020 ದ್ವೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ₹80ರಂತೆ ಲಾಭಾಂಶ ಘೋಷಿಸಲು ಮತ್ತು 2020– 2022 ರ ಅವಧಿಯಲ್ಲಿ ಅವಧಿಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರಕ್ಕೆ ₹80ರಂತೆ ಮಧ್ಯಂತರ ಲಾಭಾಂಶ ಘೋಷಿಸಲು ಒಪ್ಪಿಗೆ
6
+ 563 ನಗರ ಆರೋಗ್ಯ ಕ್ಷೇಮ ಕೇಂದ್ರಗಳಿಗೆ ಪ್ರಯೋಗಾಲಯಗಳನ್ನು ಬಲಪಡಿಸಲು ಅವಶ್ಯವಿರುವ ಔಷಧಿಗಳು, ಉಪಕರಣಗಳನ್ನು ₹53.66 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ.
7
+ ಆನೆಕಲ್‌, ಶಿರಹಟ್ಟಿ, ನೆಲಮಂಗಲ, ಶಿರಹಟ್ಟಿ, ಶೃಂಗೇರಿ, ಯಳಂದೂರು ತಾಲ್ಲೂಕುಗಳಲ್ಲಿ ತಲಾ 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ನಬಾರ್ಡ್‌ ನೆರವಿನಡಿ ₹256.15 ಕೋಟಿ ಭರಿಸಲು ತೀರ್ಮಾನ.
8
+ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆ ಕೇಂದ್ರಗಳನ್ನಾಗಿ ಮಾಡಲು ಅನುಮತಿ.
9
+ ಗಣಿ ಬಾಧಿತ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಮಗ್ರ ಪರಿಸರ ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಸ್ಥಾಪಿಸಲು ಅನುಮೋದನೆ.
10
+ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ರೈತರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 2024–25ನೇ ಹಂಗಾಮಿನಿಂದ 30 ವರ್ಷ ಖಾಸಗಿಯವರಿಗೆ ಗುತ್ತಿಗೆ ನೀಡಲು ಒಪ್ಪಿಗೆ.
11
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/10 ವರ್ಷಕ್ಕೊಮ್ಮೆ ಖಾಸಗಿ ಶಾಲಾ ಮಾನ್ಯತೆ ನವೀಕರಣ.txt ADDED
@@ -0,0 +1,5 @@
 
 
 
 
 
 
1
+ ಬೆಂಗಳೂರು: ಖಾಸಗಿ ಶಾಲೆಗಳ ಮಾನ್ಯತೆಯನ್ನು 10 ವರ್ಷಗಳಿಗೆ ಒಮ್ಮೆ ನವೀಕರಿಸಲು ಅವಕಾಶ ನೀಡಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2
+ ಶಾಲೆ ನಡೆಸಲು ಒಮ್ಮೆ ಅನುಮತಿ ಪಡೆದ ಶಾಲೆಗಳು 10 ವರ್ಷಗಳ ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ನಿಯಮಗಳನ್ನು ಪಾಲಿಸುವ ಶಾಲೆಗಳು ಶಾಶ್ವತ ಮಾನ್ಯತೆಯನ್ನೂ ಪಡೆಯಬಹುದು ಎಂದು ಆದೇಶದಲ್ಲಿ ವಿವರಿಸಲಾಗಿದೆ. 
3
+ ರಾಜ್ಯದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೂ ಮೊದಲು ಇದ್ದಂತೆ ಮಾನ್ಯತೆ ನವೀಕರಣಕ್ಕೆ ಅವಕಾಶ ನೀಡಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿತ್ತು. ಕೆಲ ಸಂಘಟನೆಗಳು ಸರ್ಕಾರದ ಕ್ರಮದ ವಿರುದ್ಧ ಕೋರ್ಟ್‌ ಮೊರೆಹೋಗಿದ್ದವು.
4
+ ಹಿಂದೆ 15 ವರ್ಷಗಳಿಗೆ ಒಮ್ಮೆ ಮಾನ್ಯತೆ ನವೀಕರಣಕ್ಕೆ ಅವಕಾಶ ಇತ್ತು.  2018ರ ನಂತರ ಮಾನ್ಯತೆ ನವೀಕರಣ ಅವಧಿಯನ್ನು ಐದು ವರ್ಷಗಳಿಗೆ ಇಳಿಸಲಾಗಿತ್ತು. 
5
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/10 ಸಂಘ-ಸಂಸ್ಥೆಗಳಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ.txt ADDED
@@ -0,0 +1,4 @@
 
 
 
 
 
1
+ ಬೆಂಗಳೂರು: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುವರ್ಣ ವರ್ಷದ ನೆನಪಿಗಾಗಿ ಕನ್ನಡ, ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ 10 ಸಂಘ-ಸಂಸ್ಥೆಗಳಿಗೆ ಈ ವರ್ಷ ಹೆಚ್ಚುವರಿಯಾಗಿ ಪ್ರಶಸ್ತಿ ನೀಡಲು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಮಾನಿಸಿದೆ.
2
+ ಗುರುವಾರ ನಡೆದ ಆಯ್ಕೆ ಸಮಿತಿ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಪ್ರತಿವರ್ಷ ಹೆಚ್ಚಳವಾಗುವ ಜತೆಗೆ, ಲಾಬಿಗಳಿಂದಾಗಿ ಪ್ರಶಸ್ತಿ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕಲು ಏಕೀಕರಣವಾಗಿ ಎಷ್ಟು ವರ್ಷಗಳಾಗುತ್ತದೋ ಅಷ್ಟು ಪ್ರಶಸ್ತಿಗಳನ್ನು ಆಯಾ ವರ್ಷ ನೀಡಲು ಹಿಂದೆ ನಮ್ಮ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು. ಅದರಂತೆಯೇ ಈ ವರ್ಷ 68 ಪ್ರಶಸ್ತಿ ನೀಡಲಾಗುತ್ತಿದೆ. ಜತೆಗೆ, ಸಂಘ-ಸಂಸ್ಥೆಗಳಿಗೆ ಹೆಚ್ಚುವರಿ 10 ಪ್ರಶಸ್ತಿ ನೀಡಲಾಗುವುದು’ ಎಂದರು.
3
+ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಸಚಿವರಾದ ಜಿ. ಪರಮೇಶ್ವರ, ಎಚ್.ಸಿ.ಮಹದೇವಪ್ಪ, ಆಯ್ಕೆ ಸಮಿತಿ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ, ಎಚ್‌.ಎಲ್‌.ಪುಷ್ಪಾ, ವೀರಣ್ಣ ದಂಡೆ,  ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ.ಚಿಕ್ಕಣ್ಣ, ಪಿಂಡಿಪಾಪನಹಳ್ಳಿ ವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್‌, ವಿಠಲ್‌ ಐ.ಬೆಣಗಿ, ಸಣ್ಣರಾಮ, ವೆಂಕಟರಾಮಯ್ಯ, ಎಂ.ಎಸ್‌.ಮೂರ್ತಿ, ಗೀತಾ ಶಿವಮೊಗ್ಗ,  ಜಯದೇವಿ ಜಂಗಮ ಶೆಟ್ಟಿ, ಐರೋಡಿ ಗೋವಿಂದಪ್ಪ, ಸಾಧುಕೋಕಿಲ, ಸುಕನ್ಯಾ ಪ್ರಭಾಕರ್‌, ಫ‌ಯಾಜ್‌ ಖಾನ್‌, ಹೃಷಿಕೇಶ್‌ ಬಹದ್ದೂರ್‌ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್‌.ನರಸಿಂಹರಾಜು, ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಶೈಲೇಶ್‌ಚಂದ್ರ ಗುಪ್ತ, ಜೆ. ಲೋಕೇಶ್‌ ಉಪಸ್ಥಿತರಿದ್ದರು.
4
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/10 ಸಂಘ-ಸಂಸ್ಥೆಗಳಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ.txt ADDED
@@ -0,0 +1,4 @@
 
 
 
 
 
1
+ ಬೆಂಗಳೂರು: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುವರ್ಣ ವರ್ಷದ ನೆನಪಿಗಾಗಿ ಕನ್ನಡ, ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ 10 ಸಂಘ-ಸಂಸ್ಥೆಗಳಿಗೆ ಈ ವರ್ಷ ಹೆಚ್ಚುವರಿಯಾಗಿ ಪ್ರಶಸ್ತಿ ನೀಡಲು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಮಾನಿಸಿದೆ.
2
+ ಗುರುವಾರ ನಡೆದ ಆಯ್ಕೆ ಸಮಿತಿ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚಳವಾಗುವ ಜತೆಗೆ, ಲಾಬಿಗಳಿಂದಾಗಿ ಪ್ರಶಸ್ತಿ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕಲು ಏಕೀಕರಣವಾಗಿ ಎಷ್ಟು ವರ್ಷಗಳಾಗುತ್ತದೋ ಅಷ್ಟು ಪ್ರಶಸ್ತಿಗಳನ್ನು ಆಯಾ ವರ್ಷ ನೀಡಲು ಹಿಂದೆ ನಮ್ಮ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು. ಅದರಂತೆಯೇ ಈ ವರ್ಷ 68 ಪ್ರಶಸ್ತಿ ನೀಡಲಾಗುತ್ತಿದೆ. ಜತೆಗೆ, ಸಂಘ-ಸಂಸ್ಥೆಗಳಿಗೆ ಹೆಚ್ಚುವರಿ 10 ಪ್ರಶಸ್ತಿ ನೀಡಲಾಗುವುದು’ ಎಂದು ಹೇಳಿದರು.
3
+ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಸಚಿವರಾದ ಜಿ.ಪರಮೇಶ್ವರ, ಎಚ್.ಸಿ.ಮಹದೇವಪ್ಪ, ಆಯ್ಕೆ ಸಮಿತಿ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ, ಎಚ್‌.ಎಲ್‌.ಪುಷ್ಪಾ, ವೀರಣ್ಣ ದಂಡೆ,  ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ.ಚಿಕ್ಕಣ್ಣ, ಪಿಂಡಿಪಾಪನಹಳ್ಳಿ ವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್‌, ವಿಠಲ್‌ ಐ.ಬೆಣಗಿ, ಸಣ್ಣರಾಮ, ವೆಂಕಟರಾಮಯ್ಯ, ಎಂ.ಎಸ್‌.ಮೂರ್ತಿ, ಗೀತಾ ಶಿವಮೊಗ್ಗ,  ಜಯದೇವಿ ಜಂಗಮ ಶೆಟ್ಟಿ, ಐರೋಡಿ ಗೋವಿಂದಪ್ಪ, ಸಾಧುಕೋಕಿಲ, ಸುಕನ್ಯಾ ಪ್ರಭಾಕರ್‌, ಫ‌ಯಾಜ್‌ ಖಾನ್‌, ಹೃಷಿಕೇಶ್‌ ಬಹದ್ದೂರ್‌ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್‌.ನರಸಿಂಹರಾಜು, ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಶೈಲೇಶ್‌ಚಂದ್ರ ಗುಪ್ತ, ಜೆ.ಲೋಕೇಶ್‌ ಉಪಸ್ಥಿತರಿದ್ದರು.
4
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/10 ಸಾವಿರ ಮರಗಳ ಸರದಾರ ರಾಯಚೂರಿನ ಈ ಈರಣ್ಣ.txt ADDED
@@ -0,0 +1,2 @@
 
 
 
1
+ ರಾಯಚೂರು ಎಂಬ ಉರಿಬಿಸಿಲ ಊರನ್ನು ಮಲೆನಾಡನ್ನಾಗಿಸುವ ಕನಸು ಈ ಈರಣ್ಣ ಕೋಸಗಿ ಅವರದ್ದು. ರಾಯಚೂರಿನ ನೇತಾಜಿ ನಗರದಲ್ಲಿರುವ ಇವರು, ಪ್ರತಿ ದಿನ ಎರಡು ತಾಸುಗಳನ್ನು ನಗರವನ್ನು ಹಸಿರನ್ನಾಗಿಸಲು ಮೀಸಲಿಡುತ್ತಾರೆ. ತಮ್ಮ ಮನೆಯ ಹಿಂದೆಯೇ ನರ್ಸರಿ ಮಾಡಿಕೊಂಡಿರುವ ಈರಣ್ಣ, ಅದರ ಸಸಿಗಳನ್ನು ರಾಯಚೂರಿನ ವಿವಿಧೆಡೆ ನೆಟ್ಟು ಬರುತ್ತಾರೆ. ಯಾವುದೇ ಪ್ರಚಾರ, ಫಲಾಪೇಕ್ಷೆಯಿಲ್ಲದೆ 2006ರಿಂದ ಈ ಕಾಯಕದಲ್ಲಿ ನಿರತರಾಗಿರುವ ಈರಣ್ಣ, ಈವರೆಗೆ ನೆಟ್ಟಿರುವ ಸಸಿ, ಬೆಳೆಸಿರುವ ಮರಗಳ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ! ಆರ್ಥಿಕವಾಗಿ ಬಡತನದಲ್ಲಿರುವ ಈ ಈರಣ್ಣ, ಪರಿಸರದ ವಿಷಯದಲ್ಲಿ ಮತ್ತು ಸ್ವಭಾವದಲ್ಲಿ ಹೃದಯ ಶ್ರೀಮಂತ.
2
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/10 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಸಚಿವ ಮಧು ಬಂಗಾರಪ್ಪ.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಕಲಬುರಗಿ: ‘ರಾಜ್ಯದಲ್ಲಿ ಈಗಾಗಲೇ 14 ಸಾವಿರ ಶಿಕ್ಷಕರ ನೇಮಕಾತಿಯಾಗಿದ್ದು, ಶೀಘ್ರವೇ ಮತ್ತೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಅನುಮೋದನೆ ದೊರೆತ ತಕ್ಷಣ ನೇಮಕ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
2
+ ನಗರದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಚೇರಿಯಲ್ಲಿ ಶುಕ್ರವಾರ ಅಕ್ಷರ ಆವಿಷ್ಕಾರ ಅಭಿಯಾನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ 43,100 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಸಿಕ ₹ 10 ಸಾವಿರ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ₹ 10,200 ವೇತನ ನೀಡಲಾಗುತ್ತಿದೆ. ಹಂತಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು‘ ಎಂದರು. 
3
+ ‘ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಾದ್ಯಂತ 500 ಪಬ್ಲಿಕ್ ಶಾಲೆಗಳನ್ನು ಹೊಸದಾಗಿ ಆರಂಭಿಸಲು ತೀರ್ಮಾನಿಸಲಾಗಿದ್ದು, ಅದರಲ್ಲಿ 137 ಪಬ್ಲಿಕ್ ಶಾಲೆಗಳು ಕಲ್ಯಾಣ ಕರ್ನಾಟಕದಲ್ಲಿಯೇ ಆರಂಭವಾಗಲಿವೆ‘ ಎಂದು 
4
+ ‘ಪಕ್ಷಭೇದ ಇಲ್ಲದೇ ಪ್ರತಿಯೊಬ್ಬ ಶಾಸಕರ ವ್ಯಾಪ್ತಿಯಲ್ಲಿ ಸರಾಸರಿ ನಾಲ್ಕು ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಅಲ್ಲದೇ, ಈ ಶಾಲೆಗಳಲ್ಲಿ ದ್ವಿಭಾಷಾ ಕಲಿಕಾ ಮಾಧ್ಯಮ ಇರಲಿದೆ. ಇದರಿಂದಾಗಿ ಮಕ್ಕಳು ಎಲ್‌ಕೆಜಿಯಿಂದ ಪಿಯುಸಿವರೆಗೆ 14 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕಲಿಯಲು ಅವಕಾಶವಾಗಲಿದೆ‘ ಎಂದರು.
5
+ ‘ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣಕ ತೆಗೆದಿರಿಸಬೇಕಾದ ಒತ್ತಡದ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಇಲಾಖೆಗೆ ₹ 44,400 ಕೋಟಿ ಹಣವನ್ನು ಬಜೆಟ್‌ನಲ್ಲಿ ಒದಗಿಸಿದ್ದಾರೆ. ಕಳೆದ ಬಜೆಟ್‌ನಲ್ಲಿ ಇಲಾಖೆಗೆ ₹ 37,400 ಕೋಟಿ ಬಂದಿತ್ತು. ಹೆಚ್ಚುವರಿ ಹಣ ಸಿಕ್ಕಿದ್ದರಿಂದ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಉತ್ತಮಪಡಿಸಲಾಗುವುದು’ ಎಂದು ಹೇಳಿದರು.
6
+ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಉತ್ತಮ ತರಬೇತಿ ಹೊಂದಿರುವ, ಮೆರಿಟ್ ಆಧಾರದ ಮೇಲೆ ನೇಮಕಗೊಂಡ ಶಿಕ್ಷಕರು ಇರುವುದು ಸರ್ಕಾರಿ ಶಾಲೆಯಲ್ಲಿಯೇ. ಅವರಿಗೆ ಇರುವ ಇತರೆ ಕೆಲಸದ ಹೊರೆಯನ್ನು ತಗ್ಗಿಸಿ ಪಾಠ, ಪ್ರವಚನಕ್ಕೆ ಹೆಚ್ಚಿನ ಸಮಯ ನೀಡಲಾಗುವುದು‘ ಎಂದರು.
7
+ ‘ಸರ್ಕಾರಿ ಶಾಲೆಗಳಿದ್ದರೂ ಇಲ್ಲಿಯವರೆಗೆ ವಿದ್ಯುತ್ ಬಿಲ್ ಪಾವತಿ ಮಾಡಬೇಕಿದ್ದುದರಿಂದ ಕಂಪ್ಯೂಟರ್, ಸ್ಮಾರ್ಟ್‌ಕ್ಲಾಸ್‌ಗಳನ್ನು ಬಳಸಿದರೆ ಹೆಚ್ಚು ವಿದ್ಯುತ್ ಬರಲಿದೆ ಎಂಬ ಭೀತಿಯಿಂದ ಕೆಲವೆಡೆ ಬಳಕೆ ಮಾಡಿರಲಿಲ್ಲ. ವಿದ್ಯುತ್ ಬಿಲ್ ಮನ್ನಾ ಮಾಡಿದ್ದರಿಂದ ಶಾಲೆಗಳಲ್ಲಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್‌ಗಳ ಬಳಕೆ ಹೆಚ್ಚಲಿದೆ‘ ಎಂದು ಮಧು ಬಂಗಾರಪ್ಪ ತಿಳಿಸಿದರು.
8
+ ಶಾಸಕ ಎಂ.ವೈ. ಪಾಟೀಲ, ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ. ಸುಂದರೇಶಬಾಬು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಆಯುಕ್ತ ಆಕಾಶ್ ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಭಾಗವಹಿಸಿದ್ದರು.
9
+ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುವುದು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಕೆಕೆಆರ್‌ಡಿಬಿಯು ತನ್ನ ಅನುದಾನದ ಶೇ 25ರಷ್ಟು ಅನುದಾನವನ್ನು ಮೀಸಲಿಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ₹ 2610 ಕೋಟಿಯಲ್ಲಿ ಶಿಕ್ಷಣಕ್ಕೆ ₹ 652 ಕೋಟಿ ವಿನಿಯೋಗಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ತಿಳಿಸಿದರು.
10
+ ಮಂಡಳಿ ಕಲ್ಯಾಣ ಕರ್ನಾಟಕದಲ್ಲಿ 2618 ಶಿಕ್ಷಕರಿಗೆ ವೇತನ ನೀಡುತ್ತಿದ್ದು, ಇದರಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೇ ಇಲ್ಲವಾಗಿದೆ. ಈ ಭಾಗದಲ್ಲಿ 9249 ಸರ್ಕಾರಿ ಶಾಲೆಗಳಿದ್ದು, ಪ್ರತಿ ವರ್ಷ 50 ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
11
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
Prajavani/1000 ಎಕರೆಯಲ್ಲಿ ‘ಕೆಎಚ್ಐಆರ್‌ ಸಿಟಿ’ ಎಂ.ಬಿ.ಪಾಟೀಲ.txt ADDED
@@ -0,0 +1,7 @@
 
 
 
 
 
 
 
 
1
+ ಬೆಂಗಳೂರು: ಸಂಶೋಧನೆ, ಜ್ಞಾನದ ಅನ್ವೇಷಣೆಗೆ ಆದ್ಯತೆ ನೀಡುವ, ಆರೋಗ್ಯ ಸೇವೆ, ನವೋದ್ಯಮಗಳಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ ನಗರದ ಹೊರವಲಯದ 1,000ಕ್ಕೂ ಹೆಚ್ಚು ಎಕರೆಯಲ್ಲಿ ‘ಕೆಎಚ್ಐಆರ್‌ ( ಜ್ಞಾನ, ಆರೋಗ್ಯ, ನಾವೀನ್ಯ ಮತ್ತು ಸಂಶೋಧನೆ) ಸಿಟಿ’ ನಿರ್ಮಾಣವಾಗಲಿದೆ.
2
+ ಕೆಎಚ್ಐಆರ್ (KHIR - Knowledge, Health, Innovation and Research) ಸಿಟಿಯ ವಿನ್ಯಾಸ ಹಾಗೂ ರೂಪುರೇಷೆಯ ಕುರಿತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್‌(ಬಿಸಿಜಿ) ಸಿದ್ಧಪಡಿಸಿರುವ ಪ‍್ರಾತ್ಯಕ್ಷಿಕೆಯನ್ನು  ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಗುರುವಾರ ವೀಕ್ಷಿಸಿದರು. ಬಳಿಕ, ಅಧಿಕಾರಿಗಳು ಮತ್ತು ನಗರ ನಿರ್ಮಾಣ ತಜ್ಞರ ಜತೆ ಮೊದಲ ಹಂತದ ಸಮಾಲೋಚನೆ ನಡೆಸಿದರು.
3
+ ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ, 'ಕೆಎಚ್ಐಆರ್ ಸಿಟಿಯಲ್ಲಿ ಸಂಶೋಧನೆ, ನಾವೀನ್ಯ ಮತ್ತು ಮೂಲ ಮಾದರಿಗಳ ಅಭಿವೃದ್ಧಿಗೆ ಒತ್ತು ಕೊಡಲಾಗುವುದು. ಇಲ್ಲಿ ತಯಾರಿಕಾ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಮೊದಲ ಹಂತದಲ್ಲಿ ಒಟ್ಟು 1,000 ಎಕರೆಯಲ್ಲಿ ಈ ಸಿಟಿ ನಿರ್ಮಾಣವಾಗಲಿದೆ. ತಲಾ 200-300 ಎಕರೆಗಳಂತೆ ಹಂತಹಂತವಾಗಿ ಅಭಿವೃದ್ಧಿಪಡಿಸಬೇಕು ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ' ಎಂದರು.
4
+ ‘ಕೆಎಚ್ಐಆರ್ ಸಿಟಿ ಸಂಪೂರ್ಣವಾಗಿ ಖಾಸಗಿ ಉದ್ದಿಮೆಗಳ ಹೂಡಿಕೆಯಿಂದ ಆಗಲಿದೆ. ಸರ್ಕಾರವು ಇದಕ್ಕೆ ಭೂಮಿಯನ್ನು ಒದಗಿಸಲಿದೆ. ನಗರದಿಂದ ಒಂದು ಗಂಟೆ ಪ್ರಯಾಣದಲ್ಲಿ ತಲುಪುವಂತೆ ಈ ಸಿಟಿ ಇರಬೇಕು ಎನ್ನುವ ಸಲಹೆ ಬಂದಿದೆ’ ಎಂದರು. 
5
+ ಈ ಸಿಟಿಯ ಶೇ 15ರಷ್ಟು ಜಾಗದಲ್ಲಿ ಸಂಶೋಧನಾ ವಿ.ವಿ.ಗಳು, ಶೈಕ್ಷಣಿಕ ಸಂಸ್ಥೆಗಳು, ಶೇ 15ರಷ್ಟು ಪ್ರದೇಶದಲ್ಲಿ ಆರೋಗ್ಯಸೇವಾ ಉದ್ದಿಮೆಗಳು, ಶೇ 20ರಷ್ಟು ಜಾಗದಲ್ಲಿ ನಾನಾ ಉದ್ಯಮಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಕಾರ್ಪೊರೇಟ್ ಕಚೇರಿಗಳು ಮತ್ತು ಶೇ 10ರಷ್ಟು ಜಾಗದಲ್ಲಿ ನವೋದ್ಯಮಗಳು, ಶೇ 20ರಷ್ಟು ಜಾಗದಲ್ಲಿ ವಸತಿ ಸಮುಚ್ಚಯಗಳು, ಶೇ 15ರಷ್ಟು ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳು ಮತ್ತು ಶೇ 5ರಷ್ಟು ಜಾಗದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ನಾಗರಿಕ ಸೇವಾಕೇಂದ್ರಗಳು ತಲೆ ಎತ್ತಲಿವೆ ಎಂದರು.
6
+ ಬೋಸ್ಟನ್‌ ಕನ್ಸಲ್ಟೆನ್ಸಿ ಗ್ರೂಪ್‌ನ ಹಿರಿಯ ಸಲಹೆಗಾರ ರಾಂಚ್ ಕಿಮ್ಬಾಲ್, ಮೂಲಸೌಕರ್ಯ ವಿಭಾಗದ ಮುಖ್ಯಸ್ಥ ಸುರೇಶ್ ಸುಬುಧಿ ಮತ್ತು ಅಭಿವೃದ್ಧಿ ತಜ್ಞ ಅದಿಲ್ ಇಕ್ರಂ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು. 
7
+ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.